ವಿಭಾಗದ ಪರಿಚಯ
ಹೈದ್ರಾಬಾದ್ ಕರ್ನಾಟಕದ ಹಿಂದುಳಿದ ಪ್ರದೇಶವಾದ ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನಲ್ಲಿ ಕನ್ನಡ ವಿಶ್ವವಿದ್ಯಾಲಯ ಹಂಪಿ, ವಿಸ್ತರಣಾ ಕೇಂದ್ರವನ್ನು ೨೦೧೭-೧೮ರ ಶೈಕ್ಷಣಿಕ ವರ್ಷದಲ್ಲಿ ಸ್ಥಾಪಿತವಾಗಿದೆ. ಈ ಭಾಗದ ಹಿಂದುಳಿದ ಮತ್ತು ಬಡ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಒದಗಿಸುವ ಮತ್ತು ಸಂಶೋಧನೆಗೆ ಅನುಕೂಲ ಮಾಡಿಕೊಡುವ ಉದ್ದೇಶವನ್ನು ಈ ವಿಸ್ತರಣಾ ಕೇಂದ್ರವು ಹೊಂದಿದೆ. ಇಲ್ಲಿ ಎಂ.ಎ.ಪಿಎಚ್.ಡಿ. ಕನ್ನಡ ಸಾಹಿತ್ಯ ಸಂಯೋಜಿತ ಪದವಿ ಮತ್ತು ಎಂ.ಎ.ಪಿಎಚ್.ಡಿ. ಗ್ರಾಮೀಣ ಅಭಿವೃದ್ಧಿ ಸಂಯೋಜಿತ ಪದವಿ ಹಾಗೂ ಬಿ.ಮ್ಯೂಜಿಕ್ ಸ್ನಾತಕ ಪದವಿಗಳು ಪ್ರಾರಂಭಗೊಂಡಿವೆ. ಈ ಮೂರು ವಿಭಾಗಗಳು ಕಾರ್ಯ ನಿರ್ವಹಿಸುತ್ತಿವೆ. ಹೈದ್ರಾಬಾದ್ ಕರ್ನಾಟಕವು ಹಿಂದುಳಿದ ಪ್ರದೇಶವೆಂಬ ಹಣೆಪಟ್ಟಿಯನ್ನು ಹೋಗಲಾಡಿಸಿ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಹಾಗೂ ಸಾಹಿತ್ಯಿಕ ಪ್ರಗತಿಯನ್ನು ಸಾಧಿಸುವುದೇ ಈ ವಿಸ್ತರಣಾ ಕೇಂದ್ರದ ಪ್ರಮುಖ ಗುರಿಯಾಗಿದೆ. ಈ ಭಾಗದ ಅಭಿವೃದ್ಧಿ ಹಾಗೂ ಜನರ ಜೀವನಮಟ್ಟ ಮತ್ತು ಸಾಂಸ್ಕೃತಿಕ ಸುಧಾರಣೆಗಳನ್ನು ಪರಿಚಯಿಸುವುದು ಈ ಕೇಂದ್ರ ಸ್ಥಾಪನೆಯ ಪ್ರಮುಖ ಉದ್ದೇಶವಾಗಿದೆ. ದೇವದುರ್ಗ ತಾಲ್ಲೂಕು ವ್ಯಾಪ್ತಿಯಲ್ಲಿ ಪ್ರಸ್ತುತ ಕೇಂದ್ರದ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಸಕ್ರೀಯವಾಗಿ, ಅಧ್ಯಯನ ಹಾಗೂ ಸಂಶೋಧನೆಯಲ್ಲಿ ತೊಡಗಿಸಿಕೊಳ್ಳುವ ಬಹು ಮಹತ್ವದ ಆಶಯ ಹೊಂದಿದೆ. ಇದು ಈ ಕೇಂದ್ರ ಸ್ಥಾಪನೆಯ ಪ್ರಮುಖ ಕಾರ್ಯಸೂಚಿಗಳಲ್ಲಿ ಒಂದಾಗಿದೆ.
ಈ ನಿಟ್ಟಿನಲ್ಲಿ ಈ ಮೂರು ವಿಭಾಗಗಳು ಕಾರ್ಯನಿರ್ವಹಿಸುತ್ತಿವೆ. ಈ ಕೇಂದ್ರದಲ್ಲಿ ಒಟ್ಟು ೫೫ ವಿದ್ಯಾರ್ಥಿಗಳು ಅಧ್ಯಯನದಲ್ಲಿ ತೊಡಗಿರುವರು. ಇನ್ನು ಮುಂದೆ ಹೆಚ್ಚು ಹೆಚ್ಚು ವಿದ್ಯಾರ್ಥಿಗಳನ್ನು ಅಧ್ಯಯನಕ್ಕೆ ತೊಡಗಲು ಅನುಕೂಲ ಮಾಡಿಕೊಡಲಾಗುವುದು.
ಗುರಿ(ಮಿಶನ್)
➣ ಕನ್ನಡ ವಿಶ್ವವಿದ್ಯಾಲಯ ಹಂಪಿ, ದೇವದುರ್ಗ ವಿಸ್ತರಣಾ ಕೇಂದ್ರವು ವಿಶ್ವವಿದ್ಯಾಲಯದ ನಿಗದಿತ ಪಠ್ಯಬೋಧನೆಯನ್ನು ವ್ಯವಸ್ಥಿತವಾಗಿ ಮಾಡುವುದಲ್ಲದೇ ಈ ಭಾಗದ ಕನ್ನಡಿಗರ ಬದುಕು, ಹೋರಾಟದ ಹಾದಿ ಹಾಗೂ ಸಮಾಜಿಕ, ಸಾಂಸ್ಕೃತಿಕ ಅಧ್ಯಯನಗಳ ಸ್ವರೂಪ ಹಾಗೂ ನೆಲೆ-ಬೆಲೆಗಳನ್ನು ಹುಡುಕುವುದು ಪ್ರಮುಖ ಧ್ಯೇಯವಾಗಿದೆ.
ವಿಭಾಗದ ಪ್ರಮುಖ ಶೈಕ್ಷಣಿಕ ಕಾರ್ಯಕ್ರಮಗಳು
* ಎಂ.ಎ., ಪಿಎಚ್.ಡಿ. ಕನ್ನಡ ಸಾಹಿತ್ಯ ಸಂಯೋಜಿತ ಪದವಿ
* ಎಂ.ಎ.ಪಿಎಚ್.ಡಿ. ಗ್ರಾಮೀಣ ಅಭಿವೃದ್ಧಿ ಸಂಯೋಜಿತ ಪದವಿ
* ಬಿ.ಮ್ಯೂಜಿಕ್ ಸ್ನಾತಕ ಪದವಿ
* ಕನ್ನಡ ಸಾಹಿತ್ಯದಲ್ಲಿ ಪಿಎಚ್.ಡಿ. ಅಧ್ಯಯನ
* ಗ್ರಾಮೀಣ ಅಭಿವೃದ್ಧಿಯಲ್ಲಿ ಪಿಎಚ್.ಡಿ. ಅಧ್ಯಯನ
ವಿಭಾಗದ ಪ್ರೊಫೈಲ್
ವಿದ್ಯಾರ್ಥಿಗಳ ವಿವರಗಳು
೧. ವಿಭಾಗದ ಪಿಎಚ್.ಡಿ., ಎಂ.ಫಿಲ್, ಎಂ.ಎ,ಪಿಎಚ್.ಡಿ, ಸಾಮಾಜಿಕ ವರ್ಗವಾರು ವಿದ್ಯಾರ್ಥಿಗಳ ಸಂಖ್ಯೆ
೨. NETJRF, NFSC, NFST, NFOBC, NF Disability ಇತ್ಯಾದಿ ಫೆಲೋಶಿಪ್ ಪಡೆಯುವ ವಿದ್ಯಾರ್ಥಿಗಳ ವಿವರಗಳು
೩. ಹಳೆಯ ವಿದ್ಯಾರ್ಥಿಗಳ ಸಂಘ
ವಿಭಾಗದ ಪ್ರಮುಖ ಕೊಡುಗೆಗಳು
ವಿಭಾಗದ ಚಟುವಟಿಕೆಗಳು
೧. ವಿಭಾಗವು ಆಯೋಜಿಸಿದ ಕಾರ್ಯಾಗಾರ/ಕಮ್ಮಟಗಳ ವಿವರಗಳು/ವಿಚಾರ ಸಂಕಿರಣ/ದತ್ತಿ ಉಪನ್ಯಾಸ
೪.ಇತರೇ ಚಟುವಟಿಕೆಗಳು
ಪ್ರಮುಖ ಪುಸ್ತಕಗಳು
ವಿಭಾಗದ ಸಂಶೋಧನೆ
೧. ವಿಭಾಗದಲ್ಲಿ ಕೈಗೊಂಡ ಪ್ರಮುಖ ಸಂಶೋಧನಾ ಯೋಜನೆಗಳು
೨. ಪಿಎಚ್.ಡಿ. ಮತ್ತು ಎಂ.ಫಿಲ್ ವಿಷಯಗಳು
ಅಧ್ಯಾಪಕರ ವಿವರಗಳು
ಚಿತ್ರಸಂಪುಟ(ವಿಭಾಗವು ಆಯೋಜಿಸಿದ ಪ್ರಮುಖ ಕಾರ್ಯಕ್ರಮಗಳು)
ಸಂಪರ್ಕ
ಡಾ. ಶಾಂತಪ್ಪ
ಸಹಾಯಕ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು
ಕನ್ನಡ ವಿಶ್ವವಿದ್ಯಾಲಯ ವಿಸ್ತರಣಾ ಕೇಂದ್ರ
ದೇವದುರ್ಗ
ಮೊಬೈಲ್: ೯೬೧೧೨೨೦೪೨೫
ಇಮೇಲ್ ವಿಳಾಸ : devadurga2017@gmail.com