kannada-translation-studies











ವಿಭಾಗದ ಪರಿಚಯ

ಬೆಳಗಾವಿಯ ಭರತೇಶ ಶಿಕ್ಷಣ ಸಂಸ್ಥೆಯ ಸಹಯೋಗದಲ್ಲಿ ೨೦೧೮ರಲ್ಲಿ ಡಾ.ಆ.ನೇ.ಉಪಾಧ್ಯೆ ವಿಸ್ತರಣ ಕೇಂದ್ರ ಸ್ಥಾಪನೆಯಾಯಿತು. ಡಾ.ಆದಿನಾಥ ನೇಮಿನಾಥ ಉಪಾಧ್ಯೆ ಅವರು ಅಂತರಾಷ್ಟ್ರೀಯ ಮಟ್ಟದ ವಿದ್ವಾಂಸರು. ಆಧುನಿಕ ಪೂರ್ವ ಕರ್ನಾಟಕ ಸಂಸ್ಕೃತಿಯ ಅದರಲ್ಲಿಯೂ ಜೈನ ಸಾಹಿತ್ಯ ಮತ್ತು ಸಂಸ್ಕೃತಿಯ ಅಧ್ಯಯನದ ಸಾಧ್ಯತೆಗಳನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಚುರ ಪಡಿಸಿದವರಲ್ಲಿ ಉಪಾಧ್ಯೆ ಅವರು ಪ್ರಮುಖರು. ಶ್ರೀಯುತರು ಬೆಳಗಾವಿ ಜಿಲ್ಲೆಯವರು ಎಂಬುದು ಹೆಮ್ಮೆ ಮತ್ತು ಅಭಿಮಾನದ ವಿಷಯವಾಗಿದೆ. ಅವರ ಹೆಸರಿನಲ್ಲಿ ಕನ್ನಡ ವಿಶ್ವವಿದ್ಯಾಲಯವು ಅಧ್ಯಯನ ಕೇಂದ್ರವನ್ನು ಸ್ಥಾಪಿಸಿರುವುದು ಕನ್ನಡ ವಿದ್ವತ್ ಕ್ಷೇತ್ರಕ್ಕೆ ಗೌರವದ ವಿಷಯವಾಗಿದೆ. ಈ ಕೇಂದ್ರ ಸ್ಥಾಪಿಸುವಲ್ಲಿ ಕನ್ನಡ ನಾಡಿನ ಪ್ರಖ್ಯಾತ ಕವಿಗಳು, ಸಂಸ್ಕೃತಿ ಚಿಂತಕರು, ಚುಟುಕು ಸಾಹಿತ್ಯದಲ್ಲಿ ತಮ್ಮದೇ ಆದ ಛಾಪು ಮೂಡಿಸಿದವರು ನಿವೃತ್ತ ನ್ಯಾಯಾಧೀಶರು ಆದ ಡಾ.ಜಿನದತ್ತ ದೇಸಾಯಿ ಅವರ ಪಾತ್ರ ತುಂಬ ಮಹತ್ವದ್ದು. ಶ್ರೀಯುತರು ಆಗಿನ ಕುಲಪತಿಗಳಾದ ಡಾ.ಮಲ್ಲಿಕಾ ಘಂಟಿ ಅವರ ಜೊತೆಗೆ ಹಲವು ಸುತ್ತಿನ ಮಾತುಕತೆ ನಡೆಸಿ ಕೇಂದ್ರವನ್ನು ಬೆಳಗಾವಿಯಲ್ಲಿ ಸ್ಥಾಪಿಸಿದರು. ಕೇಂದ್ರ ಸ್ಥಾಪನೆಗೆ ಡಾ.ಜಿನದತ್ತ ದೇಸಾಯಿ ಅವರ ಒತ್ತಾಸೆಯೇ, ಆಸಕ್ತಿಯೇ ಕಾರಣವಾಗಿದೆ. ಶ್ರೀಯುತರು ಕೇಂದ್ರಕ್ಕೆ ಸಲಹೆ ಮತ್ತು ಮಾರ್ಗದರ್ಶನ ಮಾಡುತ್ತ ಬಂದಿದ್ದಾರೆ. ಈಗಿನ ಕುಲಪತಿಗಳಾದ ಡಾ.ಸ.ಚಿ.ರಮೇಶ ಅವರು ಕೇಂದ್ರದ ಬೆಳವಣಿಗೆಗೆ ವಿಶೇಷ ಮುತುವರ್ಜಿ ವಹಿಸಿಕೊಂಡು ಹಲವಾರು ವಿಚಾರ ಸಂಕಿರಣ ಮತ್ತು ಶಿಬಿರಗಳಿಗೆ ಪ್ರೊತ್ಸಾಹ ಕೊಡುತ್ತಿದ್ದಾರೆ. ಪ್ರಾಚೀನ ಕನ್ನಡ ಸಾಹಿತ್ಯ, ಸಂಸ್ಕೃತಿ, ಪ್ರಾಚೀನ ಶಾಸ್ತ್ರ ಸಾಹಿತ್ಯ, ಜೈನಸಾಹಿತ್ಯ ಮತ್ತು ಸಂಸ್ಕೃತಿಯ ಅಧ್ಯಯನ ಮತ್ತು ಸಂಶೋಧನೆ ಈ ಕೇಂದ್ರದ ಉದ್ದೇಶವಾಗಿದೆ. ಗಡಿನಾಡಿನ ಕನ್ನಡ ಸಮಸ್ಯೆಗಳ ಸ್ವರೂಪ ಮತ್ತು ಪರಿಹಾರ ಕುರಿತು ಭಾಷಾಯೋಜನೆ ಮತ್ತು ಭಾಷಾನೀತಿ ರೂಪಿಸುವುದು, ಅದಕ್ಕೆ ಸಂಬಂಧಿಸಿದಂತೆ ವಿಚಾರಸಂಕಿರಣ, ಸಂವಾದ ಹಾಗೂ ಕಮ್ಮಟಗಳನ್ನು ಏರ್ಪಡಿಸಲಾಗುತ್ತಿದೆ. ಕನ್ನಡ ಎಂ.ಎ.ಸ್ನಾತಕ್ಕೊತ್ತರ ಕೋರ್ಸ್ ಮತ್ತು ಪಿಎಚ್.ಡಿ ಅಧ್ಯಯನಕ್ಕೆ ಈ ಕೇಂದ್ರದಲ್ಲಿ ಅವಕಾಶವಿದೆ.

ವಿಭಾಗದ ದೂರದೃಷ್ಟಿ ಮತ್ತು ಉದ್ದೇಶ :
➣ ಕರ್ನಾಟಕದ ಗಡಿಭಾಗದಲ್ಲಿ ಕನ್ನಡ ಪರ ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದು.
➣ ಕನ್ನಡ ಭಾಷಾಭಿವೃದ್ಧಿಗೆ ಯೋಜನೆಗಳನ್ನು ರೂಪಿಸುವುದು.
➣ ಪ್ರಾದೇಶಿಕ ಭಾಷೆಗಳ ನಿಘಂಟುಗಳನ್ನು ರಚಿಸುವುದು.
➣ ಗಡಿಭಾಗದಲ್ಲಿ ಕನ್ನಡದ ಬೆಳವಣಿಗೆಗೆ ಭಾಷಾ ಯೋಜನೆಗಳನ್ನು ರೂಪಿಸುವುದು
➣ ಕನ್ನಡ ಸಾಹಿತ್ಯದ ಚಾರಿತ್ರಿಕ ಬೆಳವಣಿಗೆಗಳನ್ನು ಗುರುತಿಸುವುದು.
➣ ಗಡಿಭಾಗದ ಸ್ಥಳನಾಮಗಳ ಅಧ್ಯಯನ ಕೈಕೊಳ್ಳುವುದು.
➣ ಪ್ರಾಚೀನ ಕನ್ನಡ ಸಾಹಿತ್ಯ, ಸಂಸ್ಕೃತಿ, ಪ್ರಾಚೀನ ಶಾಸ್ತ್ರಸಾಹಿತ್ಯ, ಜೈನಸಾಹಿತ್ಯ ಮತ್ತು ಸಂಸ್ಕೃತಿಯ ಅಧ್ಯಯನ ಮತ್ತು ಸಂಶೋಧನೆಗಳನ್ನು ಆಯೋಜಿಸುವುದು ಕೇಂದ್ರದ ಉದ್ದೇಶವಾಗಿದೆ. ಗಡಿನಾಡಿನ ಕನ್ನಡದ
ಸಮಸ್ಯೆಗಳ ಸ್ವರೂಪ ಮತ್ತು ಪರಿಹಾರ ಕುರಿತು ಭಾಷಾಯೋಜನೆ ಮತ್ತು ಭಾಷಾನೀತಿ ರೂಪಿಸುವುದು, ಅದಕ್ಕೆ ಸಂಬಂಧಿಸಿದಂತೆ ವಿಚಾರಸಂಕಿರಣ, ಸಂವಾದ, ಕಮ್ಮಟ ಹಾಗೂ ಶಿಬಿರಗಳನ್ನು ಏರ್ಪಡಿಸಲಾಗುತ್ತಿದೆ

ವಿಭಾಗದ ಅನನ್ಯತೆ :
೧. ಗಡಿಭಾಗದಲ್ಲಿ ಕನ್ನಡದ ಬೆಳವಣಿಗೆಗೆ ಭಾಷಾ ಯೋಜನೆಗಳನ್ನು ರೂಪಿಸುವುದು
೨. ಕನ್ನಡ ಸಾಹಿತ್ಯದ ಚಾರಿತ್ರಿಕ ಬೆಳವಣಿಗೆಗಳನ್ನು ಗುರುತಿಸುವುದು.
೩. ಗಡಿಭಾಗದ ಸ್ಥಳನಾಮಗಳ ಅಧ್ಯಯನ ಕೈಕೊಳ್ಳುವುದು.

ವಿಭಾಗದ ಪ್ರಮುಖ ಶೈಕ್ಷಣಿಕ ಕಾರ್ಯಕ್ರಮಗಳು (ಪಿಎಚ್.ಡಿ, ಎಂಫಿಲ್, ಇತ್ಯಾದಿ)

* ಎಂ.ಎ.ಪಿಎಚ್.ಡಿ ಕನ್ನಡ ಸಾಹಿತ್ಯ (೨೦೧೮-೧೯)
* ಎಂ.ಎ.ಪಿಎಚ್.ಡಿ ಚರಿತ್ರೆ (೨೦೧೮-೧೯)
* ಎಂ.ಎ. ಕನ್ನಡ ಸಾಹಿತ್ಯ (೨೦೨೧ ರಿಂದ)
* ಪಿಎಚ್.ಡಿ ಕನ್ನಡ ಸಾಹಿತ್ಯ (೨೦೧೮ ರಿಂದ)

ಕೇಂದ್ರದ ಸಲಹಾ ಮಂಡಳಿ :
೧. ಡಾ.ಜಿನದತ್ತ ದೇಸಾಯಿ – ಅಧ್ಯಕ್ಷರು
೨. ಡಾ.ಅನುಪಮ ಉತ್ನಾಳ – ಸದಸ್ಯರು
೩. ಡಾ.ಪಿ.ಜಿ.ಕೆಂಪ್ಪಣ್ಣವರ – ಸದಸ್ಯರು
೪. ಶ್ರೀ ಸಿದ್ದಾರೂಢ ರಾಘುನವರ – ಸದಸ್ಯರು
೫. ಡಾ.ಎ.ಆರ್.ರೊಟ್ಟಿ – ಸದಸ್ಯರು

ವಿಭಾಗದ ಪ್ರೊಫೈಲ್

ವಿದ್ಯಾರ್ಥಿಗಳ ವಿವರಗಳು

೧. ವಿಭಾಗದ ಪಿಎಚ್.ಡಿ., ಎಂ.ಫಿಲ್, ಎಂ.ಎ,ಪಿಎಚ್.ಡಿ, ಸಾಮಾಜಿಕ ವರ್ಗವಾರು ವಿದ್ಯಾರ್ಥಿಗಳ ಸಂಖ್ಯೆ

೨. NETJRF, NFSC, NFST, NFOBC, NF Disability ಇತ್ಯಾದಿ ಫೆಲೋಶಿಪ್‌ ಪಡೆಯುವ ವಿದ್ಯಾರ್ಥಿಗಳ ವಿವರಗಳು

೩. ಹಳೆಯ ವಿದ್ಯಾರ್ಥಿಗಳ ಸಂಘ

ವಿಭಾಗದ ಪ್ರಮುಖ ಕೊಡುಗೆಗಳು

➣ ಪ್ರಾಚೀನ ಕನ್ನಡ ಸಾಹಿತ್ಯಕ್ಕೆ ಸಂಬಂಧಿಸಿದಂತೆ ವಿಚಾರ ಸಂಕಿರಣಗಳನ್ನು ಏರ್ಪಡಿಸುವುದು.
➣ ಕನ್ನಡ ಸಾಹಿತ್ಯಕ್ಕೆ ಸಂಬಂಧಿಸಿದಂತೆ ವಿಶೇಷ ಉಪನ್ಯಾಸಗಳನ್ನು ಏರ್ಪಡಿಸುವುದು.
➣ ಗಡಿಭಾಗದಲ್ಲಿ ಕನ್ನಡ ಭಾಷೆಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಶಿಬಿರಗಳನ್ನು ಸಂಯೋಜಿಸುವುದು.

ವಿಭಾಗದ ಚಟುವಟಿಕೆಗಳು

ವಿಭಾಗವು ಆಯೋಜಿಸಿದ ಕಾರ್ಯಾಗಾರ/ಕಮ್ಮಟಗಳ ವಿವರಗಳು/ವಿಚಾರ ಸಂಕಿರಣ/ದತ್ತಿ ಉಪನ್ಯಾಸ

ವಿಶೇಷ ಉಪನ್ಯಾಸ :

ಕ್ರ.ಸಂ ವಿಷಯ ದಿನಾಂಕ ಸ್ಥಳ
ಯಶೋಧರ ಚರಿತೆ ಸಾಂಸ್ಕೃತಿಕ ವಿವೇಚನೆ ೧೯.೦೬.೨೦೨೦ ಭರತೇಶ ಶಿಕ್ಷಣ ಸಂಸ್ಥೆ, ಬೆಳಗಾವಿ
ಪಂಪಭಾರತ ಮರು ಓದು ೨೫.೧೦.೨೦೨೧ ಭರತೇಶ ಶಿಕ್ಷಣ ಸಂಸ್ಥೆ, ಬೆಳಗಾವಿ
ಮಿರ್ಜಿ ಅಣ್ಣಾರಾಯರ ಸಾಹಿತ್ಯ ಸಾಧನೆ ೨೫.೦೩.೨೦೨೨ ಭರತೇಶ ಶಿಕ್ಷಣ ಸಂಸ್ಥೆ, ಬೆಳಗಾವಿ

ವಿಚಾರ ಸಂಕಿರಣಗಳು :

ಕ್ರ.ಸಂ ವಿಷಯ ದಿನಾಂಕ ಸ್ಥಳ
ಅಖಿಲ ಕರ್ನಾಟಕ ೧೫ನೇ ಹಸ್ತಪ್ರತಿ ಸಮ್ಮೇಳನ ೧೩ ಮತ್ತು ೧೪ ಅಕ್ಟೋಬರ್ ೨೦೧೮ ಬೆಳಗಾವಿ
ಕನ್ನಡ ಸಾಹಿತ್ಯಕ್ಕೆ ಎಂ.ಚಿದಾನಂದಮೂರ್ತಿ ಕೊಡುಗೆ ಡಿಸೆಂಬರ್ ೯, ೨೦೧೮ ಕರ್ನಾಟಕ ಸಂಘ, ಶಿವಮೊಗ್ಗ
ಕನ್ನಡ ಸಂಶೋಧನೆ ಆರ್.ಸಿ.ಹಿರೇಮಠರ ಕೊಡುಗೆ ೧ ಮಾರ್ಚ್ ೨೦೨೧ ಕರ್ನಾಟಕ ಸಾಹಿತ್ಯ ಅಕಾಡೆಮಿ ಸಹಯೋಗ ಧಾರವಾಡ

ಪ್ರಮುಖ ಪುಸ್ತಕಗಳು

ಪ್ರಕಟಿತ ಪುಸ್ತಕಗಳು :

೧. ಕನ್ನಡ ಗ್ರಂಥಸಂಪಾದನೆ ಚರಿತ್ರೆ ೨೦೧೮
೨. ಕನ್ನಡ ನಿಘಂಟು ಶಾಸ್ತ್ರ ೨೦೧೯
೩. ಹರಿಹರನ ಸರಳ ಬಸವರಾಜದೇವರ ರಗಳೆ ೨೦೨೦

ಲೇಖನಗಳು :
೧. ಕವಿರಾಜಮಾರ್ಗ : ಆವೃತ್ತಿಗಳು ಪರಿಶೀಲನೆ
೨. ಛಂದೋಂಬುಧಿ : ಆವೃತ್ತಿಗಳು ಪರಿಶೀಲನೆ
3. ಮಾಧವಲಂಕಾರ : ಒಂದು ವಿವೇಚ

ವಿಭಾಗದ ಸಂಶೋಧನೆ

೧. ವಿಭಾಗದಲ್ಲಿ ಕೈಗೊಂಡ ಪ್ರಮುಖ ಸಂಶೋಧನಾ ಯೋಜನೆಗಳು

ಕೇಂದ್ರದಲ್ಲಿ ಎಂ.ಎ, ಎಂ.ಎ.ಪಿಎಚ್.ಡಿ, ಪಿಎಚ್.ಡಿ ಕನ್ನಡ ಸಾಹಿತ್ಯ ಮತ್ತು ಚರಿತ್ರೆ ವಿದ್ಯಾರ್ಥಿಗಳು ತಮ್ಮ ವ್ಯಾಸಂಗವನ್ನು ಮುಂದುವರೆಸಿದ್ದಾರೆ. ಅವರ ಸಂಶೋಧನೆಗೆ ಬೇಕಾದಂತಹ ಎಲ್ಲ ಶೈಕ್ಷಣಿಕ ಪರಿಸರವನ್ನು, ಪರಿಕರಗಳನ್ನು ಭರತೇಶ ಶಿಕ್ಷಣ ಸಂಸ್ಥೆ ಕಲ್ಪಿಸಿಕೊಟ್ಟಿದೆ. ಉದಾಹರಣೆ: ಕಲಿಕಾ ಸಾಮಗ್ರಿಗಳು, ಗ್ರಂಥಾಲಯ ಮುಂತಾದವು.

ಅಧ್ಯಾಪಕರ ವಿವರಗಳು

ಡಾ. ಎಸ್. ಎಸ್. ಅಂಗಡಿ
ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರು
ಮೊಬೈಲ್: ೯೯೪೫೫೯೮೨೨೪
ಇಮೇಲ್ :
ವಿದ್ಯಾರ್ಹತೆ: ಎಂ.ಎ.,ಪಿಎಚ್.ಡಿ.

ಸಂಪರ್ಕ

ಡಾ. ಎಸ್. ಎಸ್. ಅಂಗಡಿ
ಸಹಾಯಕ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು
ಡಾ.ಆ. ನೇ. ಉಪಾಧ್ಯೆ ವಿಸ್ತರಣ ಕೇಂದ್ರ
ಕನ್ನಡ ವಿಶ್ವವಿದ್ಯಾಲಯ
ಭರತೇಶ ಶಿಕ್ಷಣ ಸಂಸ್ಥೆ ಬೆಳಗಾವಿ-೫೯೦ ೦೨೦
ಮೊಬೈಲ್‌: ೯೯೪೫೫೯೮೨೨೪ ಇಮೇಲ್:belagavicenter@gmail.com