ಮಹಿಳಾ ಅಧ್ಯಯನ ಕೇಂದ್ರ(ಯುಜಿಸಿ ಪ್ರಾಯೋಜಿತ)

ಭಾಷಾಂತರ ಕೇಂದ್ರ

ಕೇಂದ್ರದ ಉದ್ದೇಶ
ಕನ್ನಡ ಮತ್ತು ಇತರ ಭಾಷೆಗಳಿಂದ ಪ್ರಮುಖ ಕೃತಿಗಳ ಪರಸ್ಪರಾನುವಾದಗಳನ್ನು ಮಾಡಿಸುವುದು ಮತ್ತು ಅಂತಹ ಪೂರಕ ಭಾಷಾಂತರಗಳ ಕೆಲಸಗಳನ್ನು ಪ್ರೋತ್ಸಾಹಿಸುವುದು

ಕೇಂದ್ರದ ಕೆಲಸಗಳು
೧. ಕನ್ನಡದ ಆಯ್ದ ಅಭಿಜಾತ ಕೃತಿಗಳನ್ನು ಇತರೆ ಭಾಷೆಗಳ ಹಾಗೆಯೇ ಇತರೆ ಭಾಷೆಗಳಿಂದ ಕನ್ನಡಕ್ಕೂ ಭಾಷಾಂತರ ಮಾಡಿಸುವುದು.
೨. ಸಮಕಾಲೀನ ಕನ್ನಡದ ಧೋರಣೆ ಮತ್ತು ಪ್ರವೃತ್ತಿಗಳನ್ನು ಪ್ರಕಟಪಡಿಸುವ ಕೃತಿಗಳನ್ನು ಇತರೆ ಭಾಷೆಗಳಿಗೆ ಭಾಷಾಂತರ ಮಾಡಿಸುವುದು. ಹಾಗೆಯೇ ಇತರೆ ಭಾಷೆಗಳಿಂದ ಕನ್ನಡದ ಅಗತ್ಯಕ್ಕೆ ಅನುಗುಣವಾಗಿ ಭಾಷಾಂತರಗಳನ್ನು ರೂಪಿಸುವುದು.
೩. ಕನ್ನಡದ ಅಭಿಜಾತ ಮತ್ತು ಸಮಕಾಲೀನ ಪ್ರಮುಖ ಬರಹಗಾರರ ಬಗೆಗೆ ವಾಚಿಕೆಗಳನ್ನು (ಮುಖ್ಯವಾಗಿ ಇಂಗ್ಲಿಶ್ ಭಾಷೆಯಲ್ಲಿ) ಸಿದ್ಧಪಡಿಸುವುದು. ಇತರೆ ಭಾಷಾ ಲೇಖಕರ ಬಗೆಗೂ ವಾಚಿಕೆಗಳನ್ನು ಕನ್ನಡದಲ್ಲಿ ರೂಪಿಸುವುದು.
೪. ಕನ್ನಡದ ಸಂಶೋಧನೆಗಳನ್ನು ಇತರೆ ಭಾಷೆಗಳಿಗೆ ಹಾಗೆಯೇ ಇತರೆ ಭಾಷೆಗಳ ಪ್ರಮುಖ ಎನಿಸುವ ಸಂಶೋಧನಾ ಕೃತಿಗಳನ್ನು ಕನ್ನಡಕ್ಕೆ ಭಾಷಾಂತರ ಮಾಡಿಸುವುದು

ಯೋಜನೆಗಳ ಸ್ವರೂಪ
೧. ಮುಖ್ಯವಾಗಿ ಕನ್ನಡವನ್ನು ಇಂಗ್ಲಿಶ್ ಭಾಷೆಯಲ್ಲಿ ಪರಿಚಯಿಸುವ ಕೆಲಸ ಅಗತ್ಯವಾಗಿ ಆಗಬೇಕಾಗಿದೆ. ಈ ನೆಲೆಯಲ್ಲಿ ಯೋಜನೆಗಳನ್ನು ರೂಪಿಸಿ ನಿರ್ವಹಿಸಲು ಅನುವಾದಕರನ್ನು ಕೋರುವುದು.
೨. ಇತರೆ ಭಾರತೀಯ ಭಾಷೆಗಳಿಂದ ಕನ್ನಡಕ್ಕೆ ಹಾಗೂ ಕನ್ನಡದಿಂದ ಇತರೆ ಭಾರತೀಯ ಭಾಷೆಗಳಿಗೆ ಭಾಷಾಂತರ ಯೋಜನೆಗಳನ್ನು ರೂಪಿಸುವಾಗ ಆಯಾ ಭಾಷೆಗಳ ಸಂದರ್ಭದಲ್ಲಿ ಅಕಾಡೆಮಿಗಳ/ಪ್ರಕಟಣೆಗೆ ಒಪ್ಪಂದ ಮಾಡಿಕೊಳ್ಳುವುದು.
೩. ಇತರೆ ಭಾಷೆಗಳಿಗೆ ಭಾಷಾಂತರವನ್ನು ರೂಪಿಸುವ ಸಂದರ್ಭದಲ್ಲಿ ಆಯಾ ಭಾಷೆಯ ವಿದ್ವಾಂಸರನ್ನು ಕೇಂದ್ರಕ್ಕೆ ಆಹ್ವಾನಿಸಿ ನಿರ್ದಿಷ್ಟ ಕೃತಿಗಳ ಭಾಷಾಂತರವನ್ನು ಮಾಡುವಂತೆ ಯೋಜನೆಗಳನ್ನು ರೂಪಿಸುವುದು.
೪. ಕಮ್ಮಟಗಳನ್ನು ಏರ್ಪಡಿಸಿ ಭಾಷಾಂತರ ಕೃತಿಗಳನ್ನು ರೂಪಿಸುವುದು.

ಭಾಷಾಂತರ ಕೇಂದ್ರದ ಪ್ರಕಟಣೆಗಳು
1. The Singers (Vachanas of 12th Century)
2. Golden Flock (Raama Dhanya Charite and Other works of Kanakadasa)
3. Strings and Cymbals (Selections from Kannada Oral Epics)
4. Selected Poems of Kuvempu
5. Classical Kannada Poetry and Prose: A Reader (Selections: Halmidi edict, 5th Century to Janna, 13th Century Translation)
6. Female Creativity and Vachana Literature
7. Song of Garati
8. ತೆಲುಗು ಸಾಹಿತ್ಯ ಚರಿತ್ರೆ
9. Medieval Kannada Literature: A Reader
10. Reprovincializing Knowledge

ಸಂಪರ್ಕ

ಡಾ. ಮೋಹನ ಕುಂಟಾರ
ನಿರ್ದೇಶಕರು, ಭಾಷಾಂತರ ಕೇಂದ್ರ
ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರು
ಭಾಷಾಂತರ ಅಧ್ಯಯನ ವಿಭಾಗ,
ಕನ್ನಡ ವಿಶ್ವವಿದ್ಯಾಲಯ, ಹಂಪಿ
ಮೊಬೈಲ್: 94489 97450
ಇಮೇಲ್ : mohanakuntar@gmail.com

ಜೈನ ಸಂಸ್ಕೃತಿ ಸಾಹಿತ್ಯ ಅಧ್ಯಯನ ಕೇಂದ್ರ

ಪರಿಚಯ
ಕನ್ನಡ ವಿಶ್ವವಿದ್ಯಾಲಯದಲ್ಲಿ ಜೈನ ಸಾಹಿತ್ಯ, ಸಂಸ್ಕೃತಿ ಅಧ್ಯಯನ ಕೇಂದ್ರವನ್ನು ೧೬ ಜೂನ್ ೨೦೧೬ರಂದು ಸ್ಥಾಪಿಸಲಾಗಿದೆ. ಈ ಕೇಂದ್ರವು ಹಲವಾರು ಉಪಯುಕ್ತ ಕಾರ್ಯಕ್ರಮವನ್ನು ಮಾಡಿದೆ. ಕೆಲವು ಉಪಯುಕ್ತ ಜೈನ ಸಮಾಜಕ್ಕೆ ಸಂಬಂಧಿಸಿದ ಪುಸ್ತಕಗಳು ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಂಗದಿಂದ ಪ್ರಕಟಣೆಗೊಂಡಿವೆ.

ದೂರದೃಷ್ಟಿ ಮತ್ತು ಧ್ಯೇಯ
ಕನ್ನಡ ವಿಶ್ವವಿದ್ಯಾಲಯದಲ್ಲಿ ಜೈನ ಸಾಹಿತ್ಯ, ಸಂಸ್ಕೃತಿ ಅಧ್ಯಯನ ಕೇಂದ್ರವು ಪ್ರಮುಖವಾಗಿ ಕರ್ನಾಟಕ ಜೈನ, ಶಾಸನ ಸಂಪುಟಗಳನ್ನು ಹೊರತರುವ ನಿಮಿತ್ತಿನಲ್ಲಿ ಈ ಕೇಂದ್ರ ಸ್ಥಾಪನೆಗೊಂಡಿದೆ. ಈ ಕೇಂದ್ರದ ಪ್ರಮುಖವಾದ ಧ್ಯೇಯವು ಕೂಡ ಈ ಪುಸ್ತಕಗಳನ್ನು ಕೇಂದ್ರೀಕರಿಸಿದೆ.

ಅನನ್ಯತೆ
ಕನ್ನಡ ವಿಶ್ವವಿದ್ಯಾಲಯದಲ್ಲಿ ಜೈನ ಸಾಹಿತ್ಯ, ಸಂಸ್ಕೃತಿ ಅಧ್ಯಯನ ಕೇಂದ್ರವು ಹಲವಾರು ಹಿರಿಯ ಜೈನ ವಿದ್ವಾಂಸರನ್ನು, ಬುದ್ದಿ ಜೀವಿಗಳನ್ನು, ಹಿರಿಯ ಸಾಹಿತಿಗಳಾಗಿರುವಂತ ನಾಡೋಜ ಡಾ.ಹಂಪ ನಾಗರಾಜಯ್ಯ, ನಾಡೋಜ ಕಮಲಾ ಹಂಪನಾ, ಡಾ.ಎಂ.ಎ.ಜಯಚಂದ್ರ, ಡಾ.ಎಸ್.ಪಿ.ಪದ್ಮಪ್ರಸಾದ್, ಡಾ.ಶಾಂತಿನಾಥ ದಿಬ್ಬದ ಮುಂತಾದ ಗಣ್ಯರಿಂದ ಈ ಕೇಂದ್ರವು ತನ್ನದೆ ಆದ ಅನನ್ಯತೆಯನ್ನು ಪಡೆದುಕೊಂಡಿದೆ.

ವಿಭಾಗದ ಪ್ರೊಫೈಲ್‌

ಪ್ರಮುಖ ಕಾರ್ಯಕ್ರಮಗಳು (ಪಿಎಚ್. ಡಿ. ಎಂ.ಎ.ಪಿಎಚ್.ಡಿ, ಡಿಪ್ಲೊಮಾ ಇತ್ಯಾದಿ)
ಕನ್ನಡ ವಿಶ್ವವಿದ್ಯಾಲಯದಲ್ಲಿ ಜೈನ ಸಾಹಿತ್ಯ, ಸಂಸ್ಕೃತಿ ಅಧ್ಯಯನ ಕೇಂದ್ರವು ಕೇವಲ ಕರ್ನಾಟಕ ಜೈನ, ಶಾಸನ ಸಂಪುಟಗಳನ್ನು ಹೊರತರುವ ಕೆಲಸಕ್ಕೆ ಮಾತ್ರ ಸೀಮಿತವಾಗಿದೆ. ಇದೊಂದು ವಿಭಾಗವಲ್ಲ. ಇದೊಂದು ಕೇಂದ್ರವಾಗಿರುವುದರಿಂದ ಪುಸ್ತಕಗಳ ಪ್ರಕಟಣೆ ಮತ್ತು ವಿಚಾರ ಸಂಕಿರಣಗಳಿಗೆ ಸೀಮಿತವಾಗಿದೆ.

ಪ್ರಮುಖ ಕಾರ್ಯಕ್ರಮಗಳು (ಪಿಎಚ್. ಡಿ. ಎಂ.ಎ.ಪಿಎಚ್.ಡಿ, ಡಿಪ್ಲೊಮಾ ಇತ್ಯಾದಿ)
ಕನ್ನಡ ವಿಶ್ವವಿದ್ಯಾಲಯದಲ್ಲಿ ಜೈನ ಸಾಹಿತ್ಯ, ಸಂಸ್ಕೃತಿ ಅಧ್ಯಯನ ಕೇಂದ್ರವು ತನ್ನದೇ ಆದ ಕೊಡುಗೆಯನ್ನು ನೀಡಿದೆ. ಈ ಕೇಂದ್ರವು ಕರ್ನಾಟಕ ಜೈನ, ಶಾಸನ ಸಂಪುಟಗಳನ್ನು ಹೊರತರುವ ಗುರುತರವಾದ ಕೊಡುಗೆಗೆ ಕೈ ಹಾಕಿದೆ. ಈಗಾಗಲೇ ಕನ್ನಡದಲ್ಲಿ ೫ ಕರ್ನಾಟಕ ಜೈನ ಶಾಸನ ಸಂಪುಟಗಳು ಹೊರ ಬಂದಿವೆ. ಹಾಗೆಯೇ ಹಿಂದಿ ಭಾಷೆಯಲ್ಲಿ ೨ ಸಂಪುಟಗಳು ಹೊರಬಂದಿವೆ. ಇಂಗ್ಲಿಷ್ ಭಾಷೆಯಲ್ಲಿ ೫ ಸಂಪುಟಗಳ ಬದಲು ೨ ಸಂಪುಟಗಳನ್ನು ಸಭೆಯ ಅನುಮತಿ ಮೇರೆಗೆ ಹೊರತರುವ ಪ್ರಯತ್ನವನ್ನು ಮಾಡಲಾಗಿದೆ.

ಪ್ರಮುಖ ಕೊಡುಗೆಗಳು
ಕನ್ನಡ ವಿಶ್ವವಿದ್ಯಾಲಯದಲ್ಲಿ ಜೈನ ಸಾಹಿತ್ಯ, ಸಂಸ್ಕೃತಿ ಅಧ್ಯಯನ ಕೇಂದ್ರವು ತನ್ನದೇ ಆದ ಕೊಡುಗೆಯನ್ನು ನೀಡಿದೆ. ಈ ಕೇಂದ್ರವು ಕರ್ನಾಟಕ ಜೈನ, ಶಾಸನ ಸಂಪುಟಗಳನ್ನು ಹೊರತರುವ ಗುರುತರವಾದ ಕೊಡುಗೆಗೆ ಕೈ ಹಾಕಿದೆ. ಈಗಾಗಲೇ ಕನ್ನಡದಲ್ಲಿ ೫ ಕರ್ನಾಟಕ ಜೈನ ಶಾಸನ ಸಂಪುಟಗಳು ಹೊರ ಬಂದಿವೆ. ಹಾಗೆಯೇ ಹಿಂದಿ ಭಾಷೆಯಲ್ಲಿ ೨ ಸಂಪುಟಗಳು ಹೊರಬಂದಿವೆ. ಇಂಗ್ಲಿಷ್ ಭಾಷೆಯಲ್ಲಿ ೫ ಸಂಪುಟಗಳ ಬದಲು ೨ ಸಂಪುಟಗಳನ್ನು ಸಭೆಯ ಅನುಮತಿ ಮೇರೆಗೆ ಹೊರತರುವ ಪ್ರಯತ್ನವನ್ನು ಮಾಡಲಾಗಿದೆ.

ವಿಭಾಗವು ಸಂಯೋಜಿಸಿದ ಕಾರ್ಯಾಗಾರ/ವಿಚಾರ ಸಂಕಿರಣಗಳು/ಕಮ್ಮಟಗಳು/ವಿಶೇಷ ಉಪನ್ಯಾಸಗಳು/ದತ್ತಿ ಉಪನ್ಯಾಸಗಳು

೧. ಕನ್ನಡ-ಪ್ರಾಕೃತ: ಪರಂಪರೆ ಮತ್ತು ಪ್ರಭಾವ ಎಂಬ ಅಂತ ರಾಷ್ಟ್ರಮಟ್ಟದ ವಿಚಾರ ಸಂಕಿರಣವನ್ನು ದಿನಾಂಕ ೮,೯ ಮತ್ತು ೧೦ ಡಿಸೆಂಬರ್ ೨೦೧೬ರಂದು ಕನ್ನಡ ವಿಶ್ವವಿದ್ಯಾಲಯದಲ್ಲಿ ಆಯೋಜಿಸಲಾಗಿದೆ.
೨. ಜೈನ ಧರ್ಮ: ಶಿಷ್ಟ ಮತ್ತು ಜಾನಪದ ಸಂಸ್ಕೃತಿ ಎಂಬ ರಾಷ್ಟ್ರ ಮಟ್ಟದ ವಿಚಾರ ಸಂಕಿರಣವನ್ನು ೧೨, ೧೩ ಫೆಬ್ರವರಿ ೨೦೨೦ ಶೇಷಾದ್ರಿಪುರಂ ಕಾಮರ್ಸ್ ಕಾಲೇಜು, ಬೆಂಗಳೂರಿನಲ್ಲಿ ಆಯೋಜಿಸಲಾಗಿದೆ.
೩. ಜೈನ ಧರ್ಮದಲ್ಲಿ ಲೌಕಿಕ ಮತ್ತು ಅಲೌಕಿಕ ಬದುಕಿನ ಪರಿಕಲ್ಪನೆ ಎಂಬ ರಾಷ್ಟ್ರ ಮಟ್ಟದ ವಿಚಾರ ಸಂಕಿರಣವನ್ನು ೫, ೬ ಮಾರ್ಚ್ ೨೦೨೧, ಅಕಾಡೆಮಿ ಆಫ್ ಬಿಸಿನೆಸ್ ಸ್ಟಡೀ ಸೆಂಟರ್, ಕೆಂಗೇರಿ ಉಪನಗರ ಬೆಂಗಳೂರಿನಲ್ಲಿ ಆಯೋಜಿಸಲಾಗಿದೆ.
೪. ಜೈನ ಧರ್ಮ: ಅಹಿಂಸೆಯ ಪರಿಕಲ್ಪನೆಗಳು ಎಂಬ ರಾಷ್ಟ್ರ ಮಟ್ಟದ ವಿಚಾರ ಸಂಕಿರಣವನ್ನು ೨,೩ ಆಗಸ್ಟ್ ೨೦೨೨, ಶೇಷಾದ್ರಿಪುರಂ ಇಸ್ಟಿಸ್ಟೂಟ್ ಆಫ್ ಕಾಮರ್ಸ್ ಅಂಡ್ ಮೇನೇಜ್ಮೆಂಟ್, ಶೇಷಾದ್ರಿಪುರಂ, ಬೆಂಗಳೂರಿನಲ್ಲಿ ಆಯೋಜಿಸಲಾಗಿದೆ.
೫. ಜೈನ ಧರ್ಮ: ಸಮಾಜಮುಖಿ ಚಿಂತನೆಗಳು ಎಂಬ ರಾಷ್ಟ್ರ ಮಟ್ಟದ ವಿಚಾರ ಸಂಕಿರಣವನ್ನು ೧೨,೧೩ ಸೆಪ್ಟೆಂಬರ್ ೨೦೨೨, ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಮಹಿಳಾ ಮಹಾವಿದ್ಯಾಲಯ, ಮೈಸೂರುನಲ್ಲಿ ಆಯೋಜಸಲಾಗಿದೆ.
೬. ಜೈನ ಸಂಸ್ಕೃತಿ ಮತ್ತು ಮಹಿಳೆ ಎಂಬ ರಾಷ್ಟ್ರ ಮಟ್ಟದ ವಿಚಾರ ಸಂಕಿರಣವನ್ನು ೨೩,೨೪ ಜನವರಿ ೨೦೨೩ರಂದು ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರ, ಸಿಂಧನೂರಿನಲ್ಲಿ ಆಯೋಜಿಸಲಾಗಿದೆ.

ವಿಭಾಗವು ಪ್ರಕಟಿಸಿದ ಪುಸ್ತಕ ಹಾಗೂ ಸಂಶೋಧನಾ ಲೇಖನಗಳ ವಿವರ(ಐಎಸ್‌ಬಿಎನ್/ಐಎಸ್‌ಎಸ್‌ಎನ್ ಇತ್ಯಾದಿ)
೧. ಕರ್ನಾಟಕ ಜೈನ ಶಾಸನ ಸಂಪುಟಗಳು-೫ (ಕನ್ನಡ ಭಾಷೇಯಲ್ಲಿ)
೨. ಕರ್ನಾಟಕ ಜೈನ ಶಾಸನ ಸಂಪುಟಗಳು-೨ (ಹಿಂದಿ ಭಾಷೇಯಲ್ಲಿ)
೩. ಕರ್ನಾಟಕ ಜೈನ ಶಾಸನ ಸಂಪುಟಗಳು-೧ (ಹಿಂದಿ ಭಾಷೆಯಲ್ಲಿ,
ಪ್ರಕಟಣೆಯ ಹಂತದಲ್ಲಿದೆ)
೪. ದೇವರಡ್ಡಿ ಹದ್ಲಿ, ಬಂಧುವರ್ಮ ಮತ್ತು ಅವನ ಕೃತಿಗಳು
೫. ಡಾ.ಎಸ್.ಡಿ.ಶೆಟ್ಟಿ, ಕವಿನಾಗಚಂದ್ರ ಮತ್ತು ಅವನ ಕೃತಿಗಳು
೬. ಡಾ.ಎಸ್.ವಿ.ಸುಜಾತ, ರತ್ನಾಕರವರ್ಣಿ ಮತ್ತು ಅವನ ಕೃತಿಗಳು
೭. ಡಾ.ಪಂಡಿತ ಕೆ.ರಾಠೋಡ, ಪೊನ್ನ ಮತ್ತು ಅವನ ಕೃತಿಗಳು
೮. ಡಾ.ತಮಿಳ್ಸೆಲ್ವಿ, ನಯಸೇನ ಮತ್ತು ಅವನ ಧರ್ಮಾಮೃತ
೯. ಡಾ.ಎಸ್.ಶಿವಣ್ಣ ಬೆಳವಾಡಿ, ರನ್ನ ಮತ್ತು ಅವನ ಕೃತಿಗಳು
೧೦. ಡಾ.ಶಾಂತಿನಾಥ ದಿಬ್ಬದ, ಮಹಾಕವಿ ಪಂಪ ಮತ್ತು ಅವನ ಕೃತಿಗಳು
೧೧. ಡಾ.ಕೆ.ರವೀಂದ್ರನಾಥ, ಜೈನ ಠೀಕಾ ಸಾಹಿತ್ಯ
೧೨. ಡಾ.ಎ.ಪಿ.ಪದ್ಮಪ್ರಸಾದ್(ಸಂ), ಪ್ರಾಕೃತ-ಕನ್ನಡ ಪರಂಪರೆ ಮತ್ತು ಪ್ರಭಾವ
೧೩. ಡಾ.ಎನ್.ಚಿನ್ನಸ್ವಾಮಿ ಸೋಸಲೆ(ಸಂ), ಜೈನ ಧರ್ಮದಲ್ಲಿ ಯಕ್ಷ-ಯಕ್ಷಿಯರು, ಪ್ರೇರಣೆ ಮತ್ತು ಪರಿಕಲ್ಪನೆ
೧೪. ನಾಡೋಜ ಡಾ.ಹಂಪ ನಾಗರಾಜಯ್ಯ(ಸಂ) ಜೈನ ಕಥಾ ಕೋಶ

ಸಂಪರ್ಕ

ಡಾ. ತಾರೀಹಳ್ಳಿ ಹನುಮಂತಪ್ಪ
ನಿರ್ದೇಶಕರು, ಜೈನ ಸಂಸ್ಕೃತಿ ಅಧ್ಯಯಯನ ಕೇಂದ್ರ
ಮಾನವಶಾಸ್ತ್ರ ವಿಭಾಗ
ಕನ್ನಡ ವಿಶ್ವವಿದ್ಯಾಲಯ, ಹಂಪಿ
ವಿದ್ಯಾರಣ್ಯ- ೫೮೩೨೭೬
ಮೊಬೈಲ್: ೯೪೪೯೬೩೦೬೦೬
ಇಮೇಲ್ ವಿಳಾಸ : drtarihalli@gmail.com

ಚೆಲುವ ಕನ್ನಡ ಸಮುದಾಯ ಬಾನುಲಿ ಮತ್ತು ಚೆಲುವ ಕನ್ನಡ ವಾಹಿನಿ ಕೇಂದ್ರಗಳು

ಪರಿಚಯ

ಕನ್ನಡ ವಿಶ್ವವಿದ್ಯಾಲಯವು ಕಳೆದ ೩೦ ವರ್ಷಗಳಿಂದ ಅಧ್ಯಯನ, ಅಧ್ಯಾಪನ ಮತ್ತು ಪ್ರಕಟಣೆಯ ಮೂಲಕ ನಾಡು, ನುಡಿ, ಚರಿತ್ರೆ, ಸಂಸ್ಕೃತಿಯ ಸಂಶೋಧನೆಯ ಕಾರ್ಯದಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದೆ. ಇದೀಗ ಒಂದು ಹೆಜ್ಜೆ ಮುಂದೆ ಹೋಗಿ, ಹೊಸ ಕಾಲಘಟ್ಟಕ್ಕೆ ತಕ್ಕಂತೆ ವಿಶ್ವವಿದ್ಯಾಲಯವು ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲು ಮುಂದಾಗಿದೆ. ಈ ಹಿನ್ನೆಲೆಯಲ್ಲಿ ವಿಶ್ವವಿದ್ಯಾಲಯವು ಚೆಲುವ ಕನ್ನಡ ಸಮುದಾಯ ಬಾನುಲಿ ಮತ್ತು ಚೆಲುವ ಕನ್ನಡ ವಾಹಿನಿ ಎಂಬ ವಿನೂತನ ಕೇಂದ್ರಗಳನ್ನು ಸ್ಥಾಪಿಸಿದೆ. ಇವು ಕಲ್ಯಾಣ ಕರ್ನಾಟಕದಲ್ಲಿಯೇ ಅತ್ಯಾಧುನಿಕ ತಂತ್ರಜ್ಞಾನವನ್ನು ಒಳಗೊಂಡ ಸುಸಜ್ಜಿತ ಪ್ರಸರಣ ಕೇಂದ್ರಗಳಾಗಿವೆ. ಈ ಕೇಂದ್ರಗಳ ಮೂಲಕ ಅಧ್ಯಯನ ಮತ್ತು ಅಧ್ಯಾಪನಗಳ ಪ್ರಸಾರ ಮತ್ತು ಪ್ರಚಾರ ಕಾರ್ಯದಲ್ಲಿ ತನ್ನನ್ನು ತೊಡಗಿಸಿಕೊಳ್ಳುತ್ತಿದೆ.
ಮಾತೆಂಬುದು ಜ್ಯೋರ್ತಿಲಿಂಗ ಎಂಬುದು ಕನ್ನಡ ವಿಶ್ವವಿದ್ಯಾಲಯದ ಧ್ಯೇಯ ವಾಕ್ಯವಾಗಿದೆ. ಚೆಲುವ ಕನ್ನಡ ಸಮುದಾಯ ಬಾನುಲಿಯು ಎಫ್.ಎಂ ಕಂಪನಾಂಕ ೮೯.೬ ಮೆಗಾಹರ್ಟ್ಸ್‌ನಲ್ಲಿ ಸುಮಾರು ೩೫ ಕಿ.ಮೀ ವ್ಯಾಪ್ತಿಯನ್ನು ಹೊಂದಿದ್ದು, ಕನ್ನಡ ನಾಡಿನ ಸಮುದಾಯದ ಉನ್ನತಿ ಹಾಗೂ ಕನ್ನಡ ವಿಶ್ವವಿದ್ಯಾಲಯದ ಧ್ಯೇಯೋದ್ದೇಶಗಳನ್ನು ಪಸರಿಸುವ ಕಾರ್ಯದಲ್ಲಿ ನಿರತವಾಗಿದೆ. ಪ್ರಸ್ತುತ ಸಮುದಾಯ ಬಾನುಲಿಯು ವಿಶ್ವವಿದ್ಯಾಲಯದ ವಿದ್ವಾಂಸರು, ವಿದ್ಯಾರ್ಥಿಗಳು ಮತ್ತು ಸ್ಥಳೀಯ ಪ್ರತಿಭೆಗಳನ್ನು ಅನಾವರಣಗೊಳಿಸುವ ಮಹತ್ವದ ವೇದಿಕೆಯೂ ಅಗಿದೆ. ಜೊತೆಗೆ ಮಕ್ಕಳು, ಮಹಿಳೆಯರು ಮತ್ತು ಯುವಜನರಿಗಾಗಿ ವೈವಿಧ್ಯಮಯ ಕಾರ್ಯಕ್ರಮಗಳನ್ನು ಬಿತ್ತರಿಸುವ ಜವಾಬ್ದಾರಿಯನ್ನೂ ಹೊಂದಿದೆ.
ಚೆಲುವ ಕನ್ನಡ ವಾಹಿನಿ ಕೇಂದ್ರವು ಆಧುನಿಕ ತಂತ್ರಜ್ಞಾನವುಳ್ಳ ಉಪಕರಣಗಳನ್ನು ಹೊಂದಿದ್ದು, ಕನ್ನಡ ವಿಶ್ವವಿದ್ಯಾಲಯವು ಆರಂಭಿಸಲಿರುವ ವಿವಿಧ ಆನ್ಲೈನ್ ಕೋರ್ಸ್‌ಗಳಿಗೆ ಅತ್ಯುತ್ತಮ ವೇದಿಕೆಯಾಗಲಿದೆ. ಇವುಗಳ ಮೂಲಕ ಕೇಂದ್ರ ಸರ್ಕಾರವು ಇತ್ತೀಚೆಗೆ ಅನುಷ್ಟಾನಗೊಳಿಸಿರುವ ಮೂಕ್ಸ್ ವೇದಿಕೆಯ ಮೂಲಕ ಕನ್ನಡ ನಾಡು, ನುಡಿ, ಇತಿಹಾಸ, ಕಲೆ, ಸಾಹಿತ್ಯ, ಜಾನಪದ, ಸಂಸ್ಕೃತಿ ಹಾಗೂ ಮಾಹಿತಿ, ಶಿಕ್ಷಣ, ಮನರಂಜನೆಗೆ ಸಂಬಂಧಿಸಿದ ಜ್ಞಾನ ಪರಂಪರೆಯನ್ನು ಆಸಕ್ತರಿಗೆ ತಲುಪಿಸುವ ಮಹತ್ವಾಕಾಂಕ್ಷೆಯ ಯೋಜನೆಗಳನ್ನು ಹೊಂದಿದೆ. ಕನ್ನಡ ವಿಶ್ವವಿದ್ಯಾಲಯದ ಈ ಕೇಂದ್ರಗಳ ಮೂಲಕ ಜ್ಞಾನ ಪಸರಿಸುವುದರ ಜೊತೆಗೆ ವಿವಿಧ ವಿಷಯಗಳಲ್ಲಿ ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೊಮಾ, ಸರ್ಟಿಫಿಕೆಟ್ ಕೋರ್ಸ್, ವೃತ್ತಿ ಮತ್ತು ಕೌಶಲ್ಯಾಧಾರಿತ ಕೋರ್ಸ್‌ಗಳನ್ನು ಆನ್ಲೈನ್ ಮೂಲಕ ನೀಡುವ ಧ್ಯೇಯೋದ್ದೇಶವನ್ನು ಹೊಂದಿದೆ.
ಅಲ್ಲದೆ ಈ ಎರಡು ಕೇಂದ್ರಗಳು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ವಿದ್ಯಾರ್ಥಿಗಳಿಗೆ ಪ್ರಯೋಗಶಾಲೆಯಾಗಿಯೂ ಆಗಿ ಕಾರ್ಯ ನಿರ್ವಹಿಸುತ್ತಿರುವುದು ಗಮನಾರ್ಹ ಸಂಗತಿ.

ಚೆಲುವ ಕನ್ನಡ ವಾಹಿನಿ
ಚೆಲುವ ಕನ್ನಡ ವಾಹಿನಿ ಕೇಂದ್ರವು ಆಧುನಿಕ ತಂತ್ರಜ್ಞಾನವುಳ್ಳ ಉಪಕರಣಗಳನ್ನು ಹೊಂದಿದ್ದು, ಕನ್ನಡ ವಿಶ್ವವಿದ್ಯಾಲಯವು ಆರಂಭಿಸಲಿರುವ ವಿವಿಧ ಆನ್ಲೈನ್ ಕೋರ್ಸ್‌ಗಳಿಗೆ ಅತ್ಯುತ್ತಮ ವೇದಿಕೆಯಾಗಲಿದೆ. ಇವುಗಳ ಮೂಲಕ ಕೇಂದ್ರ ಸರ್ಕಾರವು ಇತ್ತೀಚೆಗೆ ಅನುಷ್ಟಾನಗೊಳಿಸಿರುವ ಮೂಕ್ಸ್ ವೇದಿಕೆಯ ಮೂಲಕ ಕನ್ನಡ ನಾಡು, ನುಡಿ, ಇತಿಹಾಸ, ಕಲೆ, ಸಾಹಿತ್ಯ, ಜಾನಪದ, ಸಂಸ್ಕೃತಿ ಹಾಗೂ ಮಾಹಿತಿ, ಶಿಕ್ಷಣ, ಮನರಂಜನೆಗೆ ಸಂಬಂಧಿಸಿದ ಜ್ಞಾನ ಪರಂಪರೆಯನ್ನು ಆಸಕ್ತರಿಗೆ ತಲುಪಿಸುವ ಮಹತ್ವಾಕಾಂಕ್ಷೆಯ ಯೋಜನೆಗಳನ್ನು ಹೊಂದಿದೆ. ಕನ್ನಡ ವಿಶ್ವವಿದ್ಯಾಲಯದ ಈ ಕೇಂದ್ರಗಳ ಮೂಲಕ ಜ್ಞಾನ ಪಸರಿಸುವುದರ ಜೊತೆಗೆ ವಿವಿಧ ವಿಷಯಗಳಲ್ಲಿ ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೊಮಾ, ಸರ್ಟಿಫಿಕೆಟ್ ಕೋರ್ಸ್, ವೃತ್ತಿ ಮತ್ತು ಕೌಶಲ್ಯಾಧಾರಿತ ಕೋರ್ಸ್‌ಗಳನ್ನು ಆನ್ಲೈನ್ ಮೂಲಕ ನೀಡುವ ಧ್ಯೇಯೋದ್ದೇಶವನ್ನು ಹೊಂದಿದೆ.

ಸಂಪರ್ಕ

ಡಾ. ಎಸ್.ವೈ. ಸೋಮಶೇಖರ
ನಿರ್ದೇಶಕರು, ಚೆಲುವ ಕನ್ನಡ ಸಮುದಾಯ ಬಾನುಲಿ ಕೇಂದ್ರ
ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರು
ಪ್ರಾಚೀನ ಇತಿಹಾಸ ಮತ್ತ ಪುರಾತತ್ವ ಅಧ್ಯಯನ ವಿಭಾಗ
ಕನ್ನಡ ವಿಶ್ವವಿದ್ಯಾಲಯ, ಹಂಪಿ
ಮೊಬೈಲ್: ೯೪೮೦೩೯೫೮೦೦
ಇಮೇಲ್ : sysshekhar@gmail.com