ವಿಭಾಗದ ಪರಿಚಯ

1996ರಲ್ಲಿ ಆರಂಭವಾದ ಹಸ್ತಪ್ರತಿಶಾಶ್ತ್ರ ವಿಭಾಗ ಕರ್ನಾಟಕದಲ್ಲಿ ಹಸ್ತಪ್ರತಿ ಅಧ್ಯಯನಕ್ಕಾಗಿ ಪ್ರತ್ಯೇಕ ವಿಭಾಗವಾಗಿ ಅಸ್ತಿತ್ವಕ್ಕೆ ಬಂದಿರುವುದು ಕನ್ನಡ ವಿಶ್ವವಿದ್ಯಾಲಯದಲ್ಲಿ ಮಾತ್ರ. ಹಸ್ತಪ್ರತಿ ಸಂಗ್ರಹ, ಸಂಪಾದನೆ, ಹೊಸ ರೀತಿಯ ಅಧ್ಯಯನ ಮತ್ತು ಪ್ರಕಟಣೆಗಳನ್ನು ಕೈಗೆತ್ತಿಕೊಂಡಿರುವುದು ಈ ವಿಭಾಗದ ಕಾರ್ಯಟುವಟಿಕೆಯಾಗಿದೆ.
ಆಧುನಿಕ ಪೂರ್ವ ಕರ್ನಾಟಕದ ಸಾಂಸ್ಕೃತಿಕ ವಿದ್ಯಮಾನಗಳನ್ನು ತಿಳಿದುಕೊಳ್ಳುವಲ್ಲಿ ಹಸ್ತಪ್ರತಿಗಳು ಪ್ರಮುಖ ಆಕರಗಳಾಗಿವೆ. ಇಂಥ ಆಕರ ಸಾಮಗ್ರಿಗಳ ಅಧ್ಯಯನವನ್ನು ಕಳೆದ ದಕಗಳಿಂದ ವಿಭಾಗವು ನಡೆಸುತ್ತಾ ಬಂದಿದೆ. ಕ್ಷೇತ್ರಕಾರ್ಯ, ವಿಚಾರಸಂಕಿರಣ, ತರಬೇತಿ ಶಿಬಿರ, ಅಖಿಲ ಕರ್ನಾಟಕ ಹಸ್ತಪ್ರತಿ ಸಮ್ಮೇಳನ ಮುಂತಾದ ರಚನಾತ್ಮಕ ಚಟುವಟಿಕೆಗಳನ್ನು ವಿಭಾಗ ಹಮ್ಮಿಕೊಂಡಿದೆ. ಈಗಾಗಲೇ 4 ಸಾವಿರಕ್ಕೂ ಹೆಚ್ಚು ಹಸ್ತಪ್ರತಿಗಳನ್ನು ಸಂಗ್ರಹಿಸಿರುವ ವಿಭಾಗವು 400 ಕಟ್ಟುಗಳಂತೆ 5 ಹಸ್ತಪ್ರತಿ ಸೂಚಿ ಸಂಪುಟಗಳನ್ನು ಪ್ರಕಟಿಸಿದೆ. ಹಸ್ತಪ್ರತಿ ಭಂಡಾರದಲ್ಲಿ ಕನ್ನಡದ ಜೊತೆಗೆ ತೆಲುಗು, ತಮಿಳು, ಸಂಸ್ಕೃತ, ಮರಾಠಿ, ಮಲೆಯಾಳಿ ಹಸ್ತಪ್ರತಿಗಳು ಇವೆ.
ವಿಭಾಗದ ಯೋಜನೆಗಳು :
ಹಸ್ತಪ್ರತಿಶಾಸ್ತ್ರ ವಿಭಾಗದ ಪ್ರಾಧ್ಯಾಪಕರು 1. ವೈಯಕ್ತಿಕ 2. ಸಾಂಸ್ಥಿಕ ಎಂದು ಎರಡು ರೀತಿಯ ಯೋಜನೆಯನ್ನು ಹಾಕಿಕೊಳ್ಳುತ್ತಾರೆ. ಜಿಲ್ಲಾವಾರು ಹಸ್ತಪ್ರತಿ ಸರ್ವೇಕ್ಷಣೆ, ಸಂಗ್ರಹ, ಸೂಚೀ ರಚನೆ – ಇದು ವಿಭಾಗದ ಸಾಂಸ್ಥಿಕ ಯೋಜನೆ. ಇನ್ನು ಪ್ರತಿಯೊಬ್ಬ ಪ್ರಾಧ್ಯಾಪಕರು ಯೊಜನೆಯನ್ನು ವೈಯಕ್ತಿಕವಾಗಿ ತೆಗೆದುಕೊಂಡು ಪೂರೈಸುವುದು. ಈಗಾಗಲೇ ಒಂದು ಅಂದಾಜಿನ ಪ್ರಕಾರ ವಿಭಾಗದಲ್ಲಿ 35 ವೈಯಕ್ತಿಕ ಯೋಜನೆಗಳು ಆಗಿರುತ್ತವೆ.
ಪುಸ್ತಕ ಪ್ರಕಟಣೆ :
ಪ್ರಾಧ್ಯಾಪಕರ ವೈಯಕ್ತಿಕ ಯೋಜನೆ, ಹಸ್ತಪ್ರತಿ ಭಂಡಾರದಲ್ಲಿಯ ಅಪ್ರಕಟಿತ ಹಸ್ತಪ್ರತಿಗಳನ್ನು ಪ್ರಕಟಿಸುವ ಹಿನ್ನೆಲೆಯಲ್ಲಿ ಈಗಾಗಲೇ 35ಕ್ಕೂ ಹೆಚ್ಚು ಮಹತ್ವದ ಕೃತಿಗಳು ಪ್ರಕಟಿತವಾಗಿವೆ. ಕನ್ನಡ ದಾಖಲು ಸಾಹಿತ್ಯ, ಬಸವಯುಗದ ವಚನೇತರ ಸಾಹಿತ್ಯ, ಎಮ್ಮೆ ಬಸವನ ಕಾಲಜ್ಞಾನ ಸಾಹಿತ್ಯ, ಹಳೆಯ ಲಾವಣಿಗಳು, ಹಸ್ತಪ್ರತಿಗಳು ಭಾಷಿಕ ಅಧ್ಯಯನ, ಸ್ವರವಚನ ತರಂಗಗಳಂಥ ಕೃತಿಗಳು ಬೆಳಕನ್ನು ಕಂಡಿವೆ.
ವಿಚಾರ ಸಂಕಿರಣ ಗ ಕಾರ್ಯಾಗಾರ – ಸಮ್ಮೇಳನಗಳು :
ವಿಭಾಗವು ಶೈಕ್ಷಣಿಕ ಯೋಜನೆಗಳ ಜೊತೆಗೆ ಹಸ್ತಪ್ರತಿಗಳ ಬಗ್ಗೆ ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ಅಭಿರುಚಿ ಮೂಡಿಸಲು “ಹಸ್ತಪ್ರತಿ ತರಬೇತಿ ಮತ್ತು ಜಾಗೃತಿ ಶಿಬಿರ”, ಕನ್ನಡ ಅಧ್ಯ್ಯಾಪಕರಿಗೆ ಹಳಗನ್ನಡ ಸಾಹಿತ್ಯ ಅಧ್ಯಯನ ಆಸಕ್ತಿಗಾಗಿ “ಹಳಗನ್ನಡ ಬೋಧನ ತರಬೇತಿ ಶಿಬಿರ”; ಈ ಕ್ಷೇತ್ರದಲ್ಲಿ ದುಡಿಯುತ್ತಿರುವ ವಿದ್ವಾಂಸರನ್ನು, ವಿಷಯ ವೈವಿದ್ಯತೆಯನ್ನು ಪರಿಚಯಿಸುವ ಸಲುವಾಗಿ “ಅಖಿಲ ಕರ್ನಾಟಕ ಹಸ್ತಪ್ರತಿ ಸಮ್ಮೇಳನ”ಗಳನ್ನು ವಿಭಾಗವು ಆಯೋಜಿಸಿಕೊಂಡು ಬರುತ್ತಿದೆ. “ಹಸ್ತಪ್ರತಿ ಅಧ್ಯಯನ” ಹೆಸರಿನ ನಿಯತಕಾಲಿಕೆಗಳನ್ನು ವಿಭಾಗವು ಹೊರಡಿಸುತ್ತದೆ. ಹಸ್ತಪ್ರತಿಗಳಂಥ ಐತಿಹಾಸಿಕ ರಾಷ್ಟ್ರೀಯ ಸಂಪತ್ತುಗಳ ಸಂರಕ್ಷಣೆಗಾಗಿ ಪ್ರತಿ ವರ್ಷ “ಐತಿಹಾಸಿಕ ಪರಂಪರೆ ಉಳಿಸಿ” ಸಪ್ತಾಹವನ್ನು ಆಚರಿಸಲಾಗುತ್ತದೆ.

ದೃಷ್ಟಿಕೋನ(ವಿಶನ್)

ಗುರಿ(ಮಿಶನ್)

ವಿಭಾಗದ ಶೈಕ್ಷಣಿಕ ಕಾರ್ಯಕ್ರಮಗಳು

ವಿಭಾಗದ ಪ್ರೊಫೈಲ್

ವಿದ್ಯಾರ್ಥಿಗಳ ವಿವರಗಳು

೧.ವಿಭಾಗದ ಪಿಎಚ್.ಡಿ., ಎಂ.ಫಿಲ್, ಎಂ.ಎ,ಪಿಎಚ್.ಡಿ, ಸಾಮಾಜಿಕ ವರ್ಗವಾರು ವಿದ್ಯಾರ್ಥಿಗಳ ಸಂಖ್ಯೆ

೨. NETJRF, NFSC, NFST, NFOBC, NF Disability ಇತ್ಯಾದಿ ಫೆಲೋಶಿಪ್‌ ಪಡೆಯುವ ವಿದ್ಯಾರ್ಥಿಗಳ ವಿವರಗಳು

೩. ಹಳೆಯ ವಿದ್ಯಾರ್ಥಿಗಳ ಸಂಘ

ವಿಭಾಗದ ಪ್ರಮುಖ ಕೊಡುಗೆಗಳು

ವಿಭಾಗದ ಚಟುವಟಿಕೆಗಳು

೧. ವಿಭಾಗವು ಆಯೋಜಿಸಿದ ಕಾರ್ಯಾಗಾರ/ಕಮ್ಮಟಗಳ ವಿವರಗಳು/ವಿಚಾರ ಸಂಕಿರಣ/ದತ್ತಿ ಉಪನ್ಯಾಸ

೨. Alumni Meet

೩.MOU ವಿವರ

೪.ಇತರೇ ಚಟುವಟಿಕೆಗಳು

ವಿಭಾಗದಿಂದ ಪ್ರಕಟಗೊಂಡ ಪ್ರಮುಖ ಪುಸ್ತಕಗಳು

ವಿಭಾಗದ ಸಂಶೋಧನೆ

೧. ವಿಭಾಗದಲ್ಲಿ ಕೈಗೊಂಡ ಪ್ರಮುಖ ಸಂಶೋಧನಾ ಯೋಜನೆಗಳು

೨. ಪಿಎಚ್.ಡಿ. ಮತ್ತು ಎಂ.ಫಿಲ್‌ ವಿಷಯಗಳು

ಅಧ್ಯಾಪಕರ ವಿವರಗಳು

John

ಡಾ. ವೀರೇಶ ಬಡಿಗೇರ
ಪ್ರಾಧ್ಯಾಪಕರು
ಮೊಬೈಲ್ : ೯೪೪೮೮೪೫೭೮೯
ಇಮೇಲ್: vsbadiger172@gmail.com
ವಿದ್ಯಾರ್ಹತೆ: ಎಂ.ಎ., ಪಿಎಚ್.ಡಿ.

ಡಾ. ಎಫ್.ಟಿ. ಹಳ್ಳಿಕೇರಿ
ಪ್ರಾಧ್ಯಾಪಕರು
ಮೊಬೈಲ್: ೯೮೮೮೧ ೮೪೦೨೨
ಇಮೇಲ್: hallikerift@gmail.com
ವಿದ್ಯಾರ್ಹತೆ:ಎಂ.ಎ.,ಎಂ.ಫಿಲ್,ಎಚ್.ಡಿ.

ಡಾ ಎಸ್. ಎಸ್. ಅಂಗಡಿ
ಪ್ರಾಧ್ಯಾಪಕರು
ಮೊಬೈಲ್: ೯೯೪೫೫೯೮೨೨೪
ಇಮೇಲ್ :
ವಿದ್ಯಾರ್ಹತೆ: ಎಂ.ಎ.,ಪಿಎಚ್.ಡಿ.
govardhana

ಡಾ. ಎಸ್.ಆರ್.ಚನ್ನವೀರಪ್ಪ
ಪ್ರಾಧ್ಯಾಪಕರು
ಮೊಬೈಲ್:೯೪೮೦೭೨೮೪೦೯
ಇಮೇಲ್: srchannaveerappa@gmail.com
ವಿದ್ಯಾರ್ಹತೆ :ಎಂ.ಎ.,ಪಿಎಚ್.ಡಿ.

ಸಂಪರ್ಕ


ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು
ಹಸ್ತಪ್ರತಿ ಅಧ್ಯಯನ ವಿಭಾಗ
ಕನ್ನಡ ವಿಶ್ವವಿದ್ಯಾಲಯ, ಹಂಪಿ
ವಿದ್ಯಾರಣ್ಯ- ೫೮೩೨೭೬
ಮೊಬೈಲ್:
ಇಮೇಲ್ ವಿಳಾಸ :/strong>