ಪುರಾಂದರದಾಸ ಅಧ್ಯಯನ ಪೀಠ

ಕರ್ನಾಟಕದ ಸಾಂಸ್ಕೃತಿಕ ಇತಿಹಾಸದಲ್ಲಿ ದಾಸ ಸಾಹಿತ್ಯದ ಸ್ಥಾನ ವಿಶಿಷ್ಠವಾದದ್ದು. ಸಾವಿರಾರು ವರ್ಷಗಳಿಂದ ಭಾರತದಲ್ಲಿ ಅವಿರತವಾಗಿ ಹರಿದು ಬಂದ ಜೀವನ ಮೌಲ್ಯಗಳನ್ನು ಜನಸಾಮಾನ್ಯರ ಆಡುಭಾಷೆಯಲ್ಲಿ ಮುಟ್ಟಿಸಿ, ಲೌಕಿಕ ವಿಡಂಬನೆಯ ಮೂಲಕ ಅವರ ಸಾಂಸ್ಕೃತಿಕ ವಿಕಾಸವನ್ನು ಯಶಸ್ವಿಯಾಗಿ ಸಾದಿಸಿದವರು, ಹರಿದಾಸರು. ಹರಿದಾಸರಲ್ಲಿ ಕನ್ನಡಿಗರ ಮನಸ್ಸನ್ನು ಸೋರೆಗೊಂಡವರಲ್ಲಿ ಪುರಂದರದಾಸರು ಅಗ್ರಗಣ್ಯರು, ಅಗ್ರಮಾನ್ಯರು. ಅವರ ಕೀರ್ತನೆ, ಸುಳಾದಿ, ಉಗಾಭೋಗ ಮುಂತಾದ ಅವರ ಸಾಹಿತ್ಯ ಪ್ರಕಾರಗಳನ್ನು ಬಹುಶಿಸ್ತೀಯ ಅಧ್ಯಯನಕ್ಕೆ ಅಳವಡಿಸುವ ಉದ್ದೇಶದಿಂದ ಹಂಪಿ, ಕನ್ನಡ ವಿಶ್ವವಿದ್ಯಾಲಯದಲ್ಲಿ ‘ಪುರಂದರದಾಸ ಅಧ್ಯಯನ ಪೀಠ’ ಸ್ಥಾಪನೆಯಾಗಿದೆ. ಅವರ ಸಾಹಿತ್ಯ ಸಂಸ್ಕೃತಿಯ ತಲಸ್ಪರ್ಶಿಯ ಹಾಗೂ ಬಹುಶಿಸ್ತೀಯ ನೆಲೆಗಳ ಅಧ್ಯಯನ ಮಾಡುವುದರ ಜೊತೆಗೆ ಜಾಗತಿಕ ಮಟ್ಟದಲ್ಲಿ ಪುರಂದರದಾಸರ ಸಾಹಿತ್ಯದ ಶ್ರೇಷ್ಠತೆಯನ್ನು ತಿಳಿಸುವುದು ಈ ಪೀಠದ ಮುಖ್ಯ ಉದ್ದೇಶವಾಗಿದೆ.
ಪುರಂದರದಾಸರ ಕೀರ್ತನೆಗಳು ಗೇಯ ಗುಣುಳ್ಳ, ನೃತ್ಯಕ್ಕೆ ಅಳವಡುವ, ಛಂದೋಬದ್ದವಾದ ಜನತೆಯ ಮಧ್ಯದಲ್ಲಿಯೇ ಸಂದರ್ಭಾನುಸಾರ ಹುಟ್ಟಿದ ಅವರ ಸಾಹಿತ್ಯ ತುಂಬ ವೈಶಿಷ್ಠ್ಯವಾದದ್ದು. ಈ ದೃಷ್ಟಿಯಿಂದ ಹರಿದಾಸ ಸಾಹಿತ್ಯ ಕ್ಷೇತ್ರದಲ್ಲಿ ಅವರಿಗೆ ವಿಶಿಷ್ಠ ಸ್ಥಾನವಿದೆ. ಸಾಹಿತ್ಯ, ಸಂಗೀತ ಮತ್ತು ಸಾಮಾಜಿಕ ಕ್ಷೇತ್ರಕ್ಕೆ ಪುರಂದರದಾಸರ ಕೊಡುಗೆ ಗಣನೀಯವಾಗಿದೆ. ಅದನ್ನು ತಿಳಿಸುವುದು ಈ ಪೀಠದ ವೈಶಿಷ್ಠ್ಯವಾಗಿದೆ. ಈ ಪೀಠದಲ್ಲಿ ಪ್ರತಿ ವರ್ಷ ಪುರಂದರ ಸಾಹಿತ್ಯವನ್ನು ಕುರಿತು ಶಿಬಿರ, ವಿಚಾರ ಸಂಕಿರಣ, ವಿಶೇಷ ಉಪನ್ಯಾಸ, ಕಮ್ಮಟ, ಕಾರ್ಯಾಗಾರ ಏರ್ಪಡಿಸುತ್ತದೆ. ಪುರಂದರ ಸಾಹಿತ್ಯವನ್ನು ಕುರಿತು ಸಂಶೋಧನೆ ಕೈಗೊಳುತ್ತದೆ. ಅಷ್ಟೇ ಅಲ್ಲದೆ ಕರ್ನಾಟಕ ಸಂಗೀತ ಪಿತಾಮಹರಾದ ಪುರಂದರದಾಸರ ಕೀರ್ತನೆಗಳನ್ನು ನೃತ್ಯ ಮತ್ತು ರೂಪಕಗಳ ಮೂಲಕ ಪ್ರದರ್ಶಿಸುವುದು ಈ ಪೀಠದ ಅನನ್ಯತೆಯಾಗಿದೆ. ಪುರಂದರದಾಸರ ಸಾಹಿತ್ಯವನ್ನು ಇಂಗ್ಲೀಷ ಭಾಷೆಯೂ ಸೇರಿದಂತೆ ಅನ್ಯಭಾಷೆಗಳಿಗೆ ಅನುವಾದಿಸುವುದು, ಹೊಸ ಅಧ್ಯಯನದ ಸಾಧ್ಯತೆಗಳ ಹಿನ್ನೆಲೆಯಲ್ಲಿ ಅವರ ಸಾಹಿತ್ಯಕ್ಕೆ ಸಾಂಸ್ಕೃತಿಕವಾಗಿ ಮುಖಾಮುಖಿಯಾಗುವುದು ಈ ಪೀಠದ ಮುಂದಿನ ಯೋಜನೆಗಳಾಗಿವೆ. ಅಷ್ಟೇ ಅಲ್ಲದೆ ಪುರಂದರದಾಸರ ಸಾಹಿತ್ಯವನ್ನು ಕುರಿತು ವಿಶೇಷ ಅಧ್ಯಯನಕ್ಕೆ ಈ ಪೀಠದಲ್ಲಿ ಅವಕಾಶವಿದೆ.

ಸಂಪರ್ಕ
ಡಾ. ಎಸ್.ಆರ್‌ ಚನ್ನವೀರಪ್ಪ
ಪ್ರಾಧ್ಯಾಪಕರು ಮತ್ತು ಸಂಚಾಲಕರು

ದಲಿತ ಅಧ್ಯಯನ ಪೀಠ

೧. ಪರಿಚಯ :
ಅಸ್ಪೃಶ್ಯರೆಂದು ಗುರುತಿಸಲ್ಪಟ್ಟ ಜಾತಿಗಳನ್ನು ಒಳಗೊಂಡಂತೆ ಅಷ್ಟೇ ಪ್ರಮಾಣದ ಅಪಮಾನ ಮತ್ತು ತುಳಿತಕ್ಕೆ ಒಳಪಟ್ಟ‌ ಶೋಷಿತ ಸಮುದಾಯಗಳ ದ್ವನಿಯಾಗಿ ಮೇ ೨೬, ೧೯೯೫ ರಂದು ದಲಿತ ಅಧ್ಯಯನ ಪೀಠವು ಸ್ಥಾಪನೆಯಾಯಿತು. ಪ್ರಾರಂಭದಲ್ಲಿ ೧೦ ಲಕ್ಷಶಾಶ್ವತ ಅನುದಾನವನ್ನು ನೀಡಿ ಅದರಿಂದ ಆಕರಣೆಯಾದ ಬಡ್ಡಿ ಹಣದಿಂದ ಪೀಠದ ಅಧ್ಯಯನ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರಲಾಗಿದೆ. ಅಂಚಿನ ಸಮುದಾಯಗಳ ಕುರಿತಾದ ಅನೇಕ ಅಧ್ಯಯನಗಳನ್ನು ಸಹ ಪೀಠವು ನಡೆಸಿದೆ. ಜಾಗತೀಕರಣ ಸಂದರ್ಭದಲ್ಲಿ ದಲಿತರು ಅನುಭಸುತ್ತಿರುವ ಸಮಸ್ಯೆಗಳತ್ತ ಸಹ ಪೀಠವು ಗಮನಹರಿಸಿದೆ.

೨. ಉದ್ದೇಶಗಳು:
ಅ. ದಲಿತ ಜಾತಿಗಳ ಸಂಸ್ಕೃತಿ ಪರಂಪರೆ ಕಲೆ ಸಾಹಿತ್ಯ ಇವುಗಳ ಅಧ್ಯಯನ ಸಂಶೋಧನೆ, ಪ್ರಕಟನೆ ಮತ್ತುದಾಖಲಾತಿ,
೨. ವಿಚಾರಸಂಕಿರಣ ಮತ್ತು ವಿಶೇಷ ಉಪನ್ಯಾಸಗಳನ್ನುಏರ್ಪಡಿಸುವುದು
ಇ. ದಲಿತ ವರ್ಗದವರ ಬಹುಮುಖ ಸಮಸ್ಯೆಗಳಸ ಮೀಕ್ಷೆ, ಮೌಲ್ಯೀಕರಣ ಮತ್ತು ಅಧ್ಯಯನ ಯೋಜನೆಗಳನ್ನು ಕೈಗೊಳ್ಳುವುದು.
ಈ. ದಲಿತ ಸಂಬಂಧಿಯಾದ ಅತ್ಯುತ್ತಮ ಇತರ ಭಾಷೆಯ ಗ್ರಂಥಗಳನ್ನು ಪೀಠದವತಿಯಿಂದ ಅನುವಾದಿಸಿ ಪ್ರಕಟಿಸುವುದು.
ಉ. ಕನ್ನಡದಲ್ಲಿ ಸಮಾನತೆಗೆ ಪೂರಕವಾದ ಜ್ಞಾನ ಸಾಮಾಗ್ರಿಗಳನ್ನು ಮುನ್ನಲೆಗೆ ತರುವುದು ಮತ್ತು ಸೃಷ್ಟಿಸುವುದು.
ಊ. ಸಮಾಜದ ಪ್ರತಿ ಮನುಷ್ಯನಲ್ಲಿಯೂ ತಾನು ಸಮಾನನು ಎಂಬ ಭಾವನೆ ಬೆಳಸಿ ಆ ಮೂಲಕ ಸಾಮಾಜಿಕ ಸಮಾನತೆ ಸಾಧಿಸುವುದು.
ಋ. ಸಂದರ್ಶಕ ಪ್ರಾಧ್ಯಾಪಕರನ್ನುಆಮಂತ್ರಿಸುವುದು, ಇವರು ದಲಿತ ಸಾಹಿತ್ಯ ಸಂಬಂಧಿತ ವಿಷಯ ದ ಬಗೆಗೆ ಕನಿಷ್ಟ ಆರುತಿಂಗಳೊಳಗೆ ಒಂದು ಯೋಜನೆಯನ್ನು ಪೂರ್ತಿಗೊಳಿಸಿ ಕನ್ನಡ ವಿಶ್ವವಿದ್ಯಾಲಯಕ್ಕೆ ಒಪ್ಪಿಸ ತಕ್ಕದು. ಇದರ ಪ್ರಕಟಣೆ ಕೂಡ ದಲಿತ ಅಧ್ಯಯನ ಪೀಠಕ್ಕೆ ಸಂಬಂಧಿಸಿದೆ. ಆದರೆ ಈ ಪ್ರಕಟನೆಗೆ ಪರಿಶೀಲನಾ ಸಮಿತಿಯ ಅನುಮತಿ ಅಗತ್ಯ.

೩. ಕಾರ್ಯಚಟುವಟಿಕೆಗಳು :
ಸರ್ಕಾರ ನೀಡಿದ ೧೦ ಲಕ್ಷ ರೂ ಇಡುಗಂಟಿನಲ್ಲಿ ದಲಿತ ಅಧ್ಯಯನ ಪೀಠವು ಹಲವಾರು ಕಾಯಕ್ರಮಗಳನ್ನು ಮತ್ತು ಅಧ್ಯಯನಗಳನ್ನು ಯಶಸ್ವಿಯಾಗಿ ಪೂರೈಸಿದೆ. ದಲಿತರ ಆಚರಣೆ, ಸಂಸ್ಕೃತಿ, ಪುರಾಣಕತೆ, ಐತಿಹ್ಯ, ಕಾವ್ಯ ಮತ್ತು ಚರಿತ್ರೆಗೆ ಸಂಬಂಧ ಪಟ್ಟಂತೆ ವಿಶಿಷ್ಟವಾಗಿ ವಿವಿಧ ಕೆಳಜಾತಿಗಳ ಬಗ್ಗೆ ಪುಸ್ತಕಗಳನ್ನು ಪೀಠದವತಿಯಿಂದ ಹೊರತರಲಾಗಿದೆ. ಹೀಗೆ ಕರ್ನಾಟಕ ಅಲೆಮಾರಿ ಕೋಶ, ದೇಶಿ ಸಂಸ್ಕೃತಿ ಮಾಲೆ ಇತ್ಯಾದಿ ಸರಣಿ ಪುಸ್ತಕ ಮಾಲಿಕೆಗಳ ಮುಖಾಂತಸಾಹಿತ್ಯಕ‌ ಕೊಡುಗೆ ನೀಡಿದೆ.ದಲಿತ ಸಂಸ್ಕೃತಿ ಮಾಲೆಯ ಮುಖಾಂತರ ಮಹತ್ತರ ಪುಸ್ತಕಗಳನ್ನುಪ್ರಕಟಿಸಲಾಗಿದೆ. ಅವುಗಳಲ್ಲಿ ಎಸ್. ಎಸ್. ಹಿರೇಮಠ ರʼದಲಿತ ಸಂಸ್ಕೃತಿʼ, ಮೊಗಳ್ಳಿ ಗಣೇಶ ಅವರ ದಲಿತರು ಮತ್ತು ಜಾಗತೀಕರಣ, ದಲಿತಕಥನ, ದಲಿತ ಮಹಿಳಾ ಕಥನ, ಪಿ. ಮಹದೇವಯ್ಯನವ ರದಲಿತರು : ಭಾಷೆ, ಸಮಾಜಮತ್ತುಸಂಸ್ಕೃತಿ, ದಲಿತರು ಮತ್ತು ಪ್ರಜ್ಞೆಯ ರಾಜಕಾರಣ ಪುಸ್ತಕಗಳು ಮುಖ್ಯವಾದವು.ದಲಿತ ವಾರ್ಷಿಕ ಸಂಚಿಕೆಗಳನ್ನು ಹೊರತರಲಾಗಿದೆ. ಮೂಲಕ ದಲಿತ ಅಧ್ಯಯನ ಪೀಠದ ಸಂಚಾಲಕರಾಗಿ ಡಾ. ಮಲ್ಲೇಪುರಂಜಿ. ವೆಂಕಟೇಶ, ಡಾ. ಮೊಗಳ್ಳಿ ಗಣೇಶ, ಡಾ. ತಾರಿಹಳ್ಳಿಹನುಮಂತಪ್ಪ, ಪ್ರೊ. ಎ. ವೆಂಕಟೇಶ, ಡಾ. ಪಿ. ಮಹದೇವಯ್ಯ, ಡಾ. ಸಿದ್ದಗಂಗಮ್ಮ, ಡಾ. ಅಮರೇಶ ನುಗಡೋಣಿಯವರ ತರುವಾಯು ಸದ್ಯ ಡಾ. ಚಿನ್ಯನಸ್ವವಾಮಿ ಸೋಸಲೆಯವರು ಪೀಠವನ್ನುಮುನ್ನಡೆಸುತ್ತಿದ್ದಾರೆ.

ಸಮ್ಮೇಳನಗಳು / ದತ್ತಿ ಉಪನ್ಯಾಸಗಳು/ಸೆಮಿನಾರ್‌ಗಳು ಇತ್ಯಾದಿ ವಿವರಗಳು
ಸಂಚಾಲಕರ ವಿವರಗಳು
ಡಾ. ಚಿನ್ನಸ್ವಾಮಿ ಎನ್‌. ಸೋಸಲೆ
ಪ್ರಾಧ್ಯಾಪಕರು ಹಾಗೂ ಸಂಚಾಲಕರು
ಚರಿತ್ರೆ ವಿಭಾಗ
ಕನ್ನಡ ವಿಶ್ವವಿದ್ಯಾಲಯ, ಹಂಪಿ
ವಿದ್ಯಾರಣ್ಯ – 583276
ಇಮೇಲ್ಐಡಿ:

13.ಪೀಠದ ಮುಂದಿನ ಯೋಜನೆಗಳು.
ಅ. ದಲಿತ ಸಾಹಿತ್ಯ ಕುರಿತಾದ ಸಂಶೋಧನಾ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರವನ್ನು ಸ್ಥಾಪಿಸುವುದು.
ಆ. ತಳಸಮುದಾಯಗಳ ಕುರಿತಾಗಿ ಕೆಲಸ ಮಾಡುವ ಇತರ ಸಂಸ್ಥೆಗಳೊಂದಿಗೆ ಸೇರಿ ವಿಚಾರ ಸಂಕಿರಣ, ಉಪನ್ಯಾಸಗಳನ್ನು ನೆರವೇರಿಸುವುದು.
ಇ. ದಲಿತ ಸಾಧಕರ ಕುರಿತಾಗಿ ಸಾಕ್ಷ್ಯಚಿತ್ರ ನಿರ್ಮಿಸುವುದು

ಹೈದ್ರಾಬಾದ್‌ ಕರ್ನಾಟಕ ಪ್ರದೇಶಾಭಿವೃದ್ಧಿ ಅಧ್ಯಯನ ಪೀಠ

ಪರಿಚಯ
ಕನ್ನಡ ವಿಶ್ವವಿದ್ಯಾಲಯದ ಅಭಿವೃದ್ಧಿ ಅಧ್ಯಯನ ವಿಭಾಗದಲ್ಲಿ ಹೈದ್ರಾಬಾದ್-ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಹೈ.ಕ.ಪ್ರ.ಅ.ಮಂ.)ಯು ಹೈದ್ರಾಬಾದ್-ಕರ್ನಾಟಕ ಅಭಿವೃದ್ಧಿ ಅಧ್ಯಯನ ಪೀಠ (ಹೈ.ಕ.ಅ.ಅ.ಪೀ.)ವನ್ನು ಸ್ಥಾಪಿಸಿದೆ. ಹೈದ್ರಾಬಾದ್-ಕರ್ನಾಟಕ ಪ್ರದೇಶದ ಅಭಿವೃದ್ಧಿಗೆ ಕಂಕಣಬದ್ಧವಾಗಿರುವ ಮಂಡಳಿಯ ಪೀಠವನ್ನು ಸ್ಥಾಪಿಸಿ ಒಂದು ಶ್ಲಾಘನೀಯ ಕಾರ್ಯವನ್ನು ಮಾಡಿದೆ. ಹೈದ್ರಾಬಾದ್-ಕರ್ನಾಟಕ ಪ್ರದೇಶವು ರಾಜ್ಯದ ಉಳಿದೆಲ್ಲ ಪ್ರದೇಶಗಳಿಗಿಂತ ಅಭಿವೃದ್ಧಿಯಲ್ಲಿ ಹಿಂದುಳಿದಿರುವುದು ರಹಸ್ಯವಾದ ಸಂಗತಿಯೇನಲ್ಲ. ಆದರೆ ಈ ಹಿಂದುಳಿದಿರುವಿಕೆಯ ಮೂಲಕ ಕಾರಣ ಮೀಮಾಂಸೆಯು ಮಾತ್ರ ಗೂಢವಾಗಿ ಉಳಿದುಬಿಟ್ಟಿದೆ. ಈ ಹಿಂದುಳಿದಿರುವಿಕೆಯನ್ನು ಪರಿಹರಿಸಲು ಅಗತ್ಯವಾದ ಕಾರ್ಯ ಯೋಜನೆಯಗಳು ಸ್ಪಷ್ಟ ರೂಪವನ್ನು ಪಡೆದುಕೊಂಡಿಲ್ಲ. ಹಿಂದುಳಿದಿರುವಿಕೆಯ ಮೂಲದ ಕಾರಣ ಮೀಮಾಂಸೆಯನ್ನು ಅನುಸಂದಾನಕ್ಕೆ ಒಳಪಡಿಸಿದಾಗ ಮಾತ್ರ ಪರಿಹಾರ ಕ್ರಮಗಳಿಗೆಖಚಿತ ರೂಪ ಬರುತ್ತದೆ. ಈ ಕಾರಣ ಮೀಮಾಂಸೆಯನ್ನು ಕುರಿತಂತೆ ಅಧ್ಯಯನ ನಡೆಸುವುದಕ್ಕಾಗಿ ಹೈ.ಕ.ಪ್ರ.ಅ.ಮಂ.ಯು ಕನ್ನಡ ವಿಶ್ವವಿದ್ಯಾಲಯದಲ್ಲಿ ಕೈ.ಕ.ಅ.ಅ.ಪೀ.ವನ್ನು ಸ್ಥಾಪಿಸಿದೆ. ಹೈದ್ರಾಬಾದ್-ಕರ್ನಾಟಕ ಪ್ರದೇಶದಲ್ಲಿ ನೆಲೆಗೊಂಡಿರುವ ಕನ್ನಡ ವಿಶ್ವವಿದ್ಯಾಯದಲ್ಲಿ ಪೀಠವು ಅಸ್ತಿತ್ವಕ್ಕೆ ಬಂದಿರುವುದು ಅತ್ಯಂತ ಸೂಕ್ತ ಸಂಗತಿಯಾಗಿದೆ.
ಧ್ಯೇಯ ಮತ್ತು ದೂರದೃಷ್ಟಿ ಕೇಂದ್ರವು ಅಭಿವೃದ್ಧಿಯನ್ನು ಅದರಲ್ಲೂ ಮುಖ್ಯವಾಗಿ ಗ್ರಾಮೀಣ ಅಭಿವೃದ್ಧಿಯ ವಿವಿಧ ಮುಖಗಳನ್ನು ಕುರಿತಂತೆ ಅಂತರ್‌ಶಿಸ್ತೀಯ ಅಧ್ಯಯನಗಳನ್ನು ನಡೆಸುವುದು. ವಿದ್ವಾಂಸರಿಗೆ ಅಭಿವೃದ್ಧಿ ಅನುಷ್ಠಾನದಲ್ಲಿ ತೊಡಗಿರುವವರಿಗೆ, ಸಾಮಾಜಿಕ ಕಾರ್ಯಕರ್ತರಿಗೆ, ಸ್ಥಳೀಯ ಜನ ಪ್ರತಿನಿಧಿಗಳಿಗೆ ಹಾಗೂ ಅಭಿವೃದ್ಧಿ ಆಡಳಿತಗಾರರಿಗೆ ತರಬೇತಿ ನೀಡುವುದು, ವಿಚಾರ ಸಂಕಿರಣಗಳನ್ನು ಸಂಘಟಿಸುವುದು ಕಾರ್ಯಗಾರಗಳನ್ನು ಆಯೋಜಿಸುವುದು. ಅಭಿವೃದ್ಧಿಗೆ ಸಂಬಂಧಿಸಿದ ಗ್ರಂಥಗಳನ್ನು, ನಿಯತಕಾಲಿಕೆಗಳನ್ನು ಪ್ರಕಟಿಸುವುದು ಹಾಗೂ ವಿವಿಧ ಮಾಧ್ಯಮಗಳ ಮೂಲಕ ಮಾಹಿತಿಯನ್ನು ಜನರಿಗೆ ಒದಗಿಸುವುದು. ಪದವಿ ಡಿಪ್ಲೊಮಾ, ಸರ್ಟಿಪಿಕೇಟೆ ಮುಂತಾದ ಶೈಕ್ಷಣಿಕ ಕಾರ್ಯಕ್ರಮಗಳನ್ನು ಸಂಘಟಿಸುವುದು

ಅನನ್ಯತೆ
ಈ ಪೀಠವು ನಾಡಿನ ಅತ್ಯಂತ ಹಿಂದುಳಿದಿರುವ ಪ್ರದೇಶದಲ್ಲಿ ನೆಲೆಗೊಂಡಿದೆ. ಇದೊಂದು ಬಹುಶಿಸ್ತೀಯ ಕೇಂದ್ರವಾಗಿದೆ. ಸಮಾಜದ ಅತ್ಯಂತ ನಿಕೃಷ್ಟೀಕರಣಕ್ಕೆ ಒಳಗಾದ ಜನವರ್ಗಗಳ ಅಭಿವೃದ್ಧಿ ಅಧ್ಯಯನಕ್ಕೆ ಪೀಠವು ಆದ್ಯತೆ ನೀಡುತ್ತದೆ. ವಿಸ್ತರಣಾ ಚಟುವಟಿಕೆಗಳಿಗೆ ಕೇಂದ್ರದಲ್ಲಿ ಅವಕಾಶ ಒದಗಿಸಲಾಗಿದೆ. ನಾಡಿನ ಪ್ರಸಿದ್ಧ ಅಧ್ಯಯನ ಕೇಂದ್ರಗಳೊಂದಿಗೆ ಈ ಕೇಂದ್ರವು ಸಂಪರ್ಕ ಇಟ್ಟುಕೊಂಡು ಸಹಭಾಗಿತ್ವದಲ್ಲಿ ಕೆಲಸ ಮಾಡಲು ಹಾಗೂ ತನ್ನ ವಿಚಾರಗಳನ್ನು ಹಂಚಿಕೊಳ್ಳಲು ಬಯಸುತ್ತದೆ.
ಪ್ರಮುಖ ಕೊಡುಗೆಗಳು ಹೈದ್ರಾಬಾದ್-ಕರ್ನಾಟಕ ಪ್ರದೇಶ ಅಭಿವೃದ್ಧಿ ಪೀಠದ ಅಡಿಯಲ್ಲಿ ಪ್ರಾಪ್ತವಾಗಿರುವ ಹತ್ತು ಲಕ್ಷ ರೂಪಾಯಿಗಳನ್ನು ವಿಶ್ವವಿದ್ಯಾಲಯವು ಶಾಶ್ವತ ಇಡುಗಂಟಾಗಿ ಇಡುತ್ತದೆ. ಈ ಮೊತ್ತವನ್ನು ಕಟ್ಟಡ ನಿರ್ಮಾಣಕ್ಕಾಗಲಿ ಅಥವಾ ನೌಕರರನ್ನು ನೇಮಿಸಿಕೊಳ್ಳಲಿಕ್ಕಾಗಲಿ ಅಥವಾ ಸಂಬಳಕ್ಕಾಗಲಿ ಬಳಸುವುದಿಲ್ಲ. ಈ ಇಡುಗಂಟಿನಿಂದ ಬರುವ ವಾರ್ಷಿಕ ಉಪಲಬ್ದಿಯನ್ನು ವಿಶ್ವವಿದ್ಯಾಲಯದ ಅಭಿವೃದ್ಧಿ ಅಧ್ಯಯನ ವಿಭಾಗವು ಕೈಗೊಳ್ಳುವ ಅಧ್ಯಯನ, ಕಾರ್ಯಾಗಾರ, ತರಬೇತಿ ಕಾರ್ಯಕ್ರಮಗಳಿಗೆ ಉಪಯೋಗಿಸಲಾಗುವುದು. ಈ ಉಪಲಬ್ದಿಯನ್ನು ಹೇಗೆ ಬಳಸಿಕೊಳ್ಳಲಾಗುವುದು ಎಂಬುದರ ವಿವರವನ್ನು ಇಲ್ಲಿ ನೀಡಲಾಗಿದೆ. ಅಭಿವೃದ್ಧಿ ಕುರಿತ ಅಧ್ಯಯನಗಳು, ಅಭಿವೃದ್ಧಿ ಕುರಿತ ವಾರ್ಷಿಕ ವಿಚಾರ ಸಂಕಿರಣ, ತರಬೇತಿ ಕಾರ್ಯಾಗಾರಗಳನ್ನು ಈ ಮೂರು ಉಪಲಬ್ದಿಯ ಮುಖ್ಯ ನೆಲೆಗಳನ್ನು ಕಾರ್ಯರೂಪಕ್ಕೆ ತರಲಿ ಈ ಪೀಠವು ಕಾರ್ಯನಿರ್ವಹಿಸುತ್ತದೆ.
ಪೀಠದ ಕಾರ್ಯಾಗಾರ/ವಿಚಾರ ಸಂಕಿರಣ/ಕಮ್ಮಟ
ಹೈದ್ರಾಬಾದ್-ಕರ್ನಾಟಕ ಪ್ರದೇಶದಲ್ಲಿ ಸಾಮಾಜಿಕ ಅಭಿವೃದ್ಧಿಗೆ ಇರುವ ಸವಾಲುಗಳು ದಿನಾಂಕ:೦೩.೦೪.೨೦೧೯ ಒಂದು ದಿನದ ಕಾರ್ಯಗಾರ (ಮಂಟಪ ಸಭಾಂಗಣ, ಕನ್ನಡ ವಿ.ವಿ. ಹಂಪಿ) ರಾಷ್ಟ್ರೀಯ ಮತದಾನ ದಿನಾಚರಣೆ ಪ್ರಯುಕ್ತ ಮತದಾರರ ಜಾಗೃತಿ ಕಾರ್ಯಕ್ರಮ ದಿನಾಂಕ:೦೫.೦೧.೨೦೨೩ (ಭುವನವಿಜಯ, ಕನ್ನಡ ವಿ.ವಿ. ಹಂಪಿ)
ಉತ್ತಮ ಚಟುವಟಿಕೆಗಳು ಅಭಿವೃದ್ಧಿ ಗತಿಶೀಲತೆ ಕುರಿತಂತೆ ಅಧ್ಯಯನಗಳು ಅಭಿವೃದ್ಧಿಯ ವಿವಿಧ ಮುಖಗಳನ್ನು ಕುರಿತಂತೆ ವಾರ್ಷಿಕ ವಿಚಾರ ಸಂಕಿರಣಗಳು ತರಬೇತಿ ಶಿಬಿರಗಳು, ಕಾರ್ಯಗಾರಗಳು
ಭವಿಷ್ಯದ ಯೋಜನೆಗಳು ಹೈದ್ರಾಬಾದ್-ಕರ್ನಾಟಕ ಹಿಂದುಳಿದ ಪ್ರದೇಶಗಳಲ್ಲಿನ ಬದುಕು, ದುಡಿಮೆ, ಲಿಂಗಸಂಬಂಧಗಳು, ವರ್ಗಸಂಬಂಧಗಳು, ಉದ್ಯೋಗ, ವಲಸೆ ಮುಂತಾದ ಸಂಗತಿಗಳು ತಳಮಟ್ಟ ಸಮುದಾಯದ ಸಮಸ್ಯೆಗಳ ಅಭಿವೃದ್ಧಿಗೆ ಪೂರಕವಾದ ಯೋಜನೆಯನ್ನು ಕೈಗೊಳ್ಳುವುದು

ಪ್ರಾಧ್ಯಾಪಕರ ವಿವರ
೧. ಡಾ. ಎ. ಶ್ರೀಧರ, ಪ್ರಾಧ್ಯಾಪಕರು, ಅಭಿವೃದ್ಧಿ ಅಧ್ಯಯನ ವಿಭಾಗ
೨. ಡಾ. ಎಚ್.ಡಿ. ಪ್ರಶಾಂತ್, ಪ್ರಾಧ್ಯಾಪಕರು, ಅಭಿವೃದ್ಧಿ ಅಧ್ಯಯನ ವಿಭಾಗ
೩. ಡಾ. ಜನಾರ್ದನ, ಪ್ರಾಧ್ಯಾಪಕರು, ಅಭಿವೃದ್ಧಿ ಅಧ್ಯಯನ ವಿಭಾಗ
೪. ಡಾ. ಎಸ್.ಎ. ಗೋವರ್ಧನ, ಸಹಾಯಕ ಪ್ರಾಧ್ಯಾಪಕರು, ಅಭಿವೃದ್ಧಿ ಅಧ್ಯಯನ ವಿಭಾಗ
೫. ಡಾ. ಕೆ. ಗೀತಮ್ಮ, ಸಹಾಯಕ ಪ್ರಾಧ್ಯಾಪಕರು/ಮುಖ್ಯಸ್ಥರು, ಅಭಿವೃದ್ಧಿ ಅಧ್ಯಯನ ವಿಭಾಗ

ಮುಖ್ಯಸ್ಥರ ಸಂಪರ್ಕ ವಿಳಾಸ
ಡಾ. ಕೆ. ಗೀತಮ್ಮ

ಸಹಾಯಕ ಪ್ರಾಧ್ಯಾಪಕರು ಹಾಗೂ ಸಂಚಾಲಕರು
ಅಭಿವೃದ್ಧಿ ಅಧ್ಯಯನ ವಿಭಾಗ
ಕನ್ನಡ ವಿಶ್ವವಿದ್ಯಾಲಯ, ಹಂಪಿ
ವಿದ್ಯಾರಣ್ಯ

ವಾಲ್ಮೀಕಿ ಅಧ್ಯಯನ ಪೀಠ

ಪೀಠದ ಪರಿಚಯ
ಶ್ರೀ ವಾಲ್ಮೀಕಿಯು ಬುಡಕಟ್ಟು ಸಮುದಾಯದ ಮಹಾನ್ ಪ್ರತಿಭೆ. ಬುಡಕಟ್ಟು ಸಮುದಾಯದಿಂದ ಬಂದ ವಾಲ್ಮೀಕಿಯು ರಾಮಾಯಣವನ್ನು ರಚಿಸಿದ ಮಹಾನ್‌ಕವಿ. ಮಹರ್ಷಿ ಶ್ರೀ ವಾಲ್ಮೀಕಿಯು ಭಾರತೀಯ ಮಹಾಕಾವ್ಯಗಳ ಆದಿಕವಿಯಾಗಿರುವುದು ಆಕಸ್ಮಿಕವಾಗಿಯಲ್ಲ. ಒಬ್ಬ ವ್ಯಾಧನ ಬದುಕು, ಹೋರಾಟದ ಸಂಕೇತವಾದ ವಾಲ್ಮೀಕಿ ರಾಮಾಯಣವು ಶ್ರೀ ವಾಲ್ಮೀಕಿಯನ್ನು ಅಜರಾಮರಗೊಳಿಸಿದಂತೆ, ರಾಮನನ್ನೂ ಶಾಶ್ವತವಾಗಿರಿಸಿದೆ.
ಸುಮಾರು ಎರಡು ಸಾವಿರ ವರ್ಷಗಳ ಹಿಂದೆ ರಚಿತವಾಗಿರಬಹುದಾದ ರಾಮಾಯಣ ಮಹಾಕಾವ್ಯವು ಬರೀ ರಾಮನ ಕಥೆಯನ್ನು ಹೇಳುವುದಿಲ್ಲ. ಬದಲಿಗೆ ಅನೇಕ ಲೋಕಪೂಜ್ಯರ ಕಥೆಗಳನ್ನು ಹೇಳುತ್ತದೆ. ಹೀಗಾಗಿ ಮೂಲ ವಾಲ್ಮೀಕಿ ರಾಮಾಯಣದ ಬಗ್ಗೆ ಅಧ್ಯಯನವನ್ನು ಮಾಡುವುದು ಅವಶ್ಯಕವಾಗಿದೆ. ಜೊತೆಗೆ ವಾಲ್ಮೀಕಿ ಸಮುದಾಯದ ಅಧ್ಯಯನವನ್ನು ಮಾಡುವುದರ ಮೂಲಕ ಅವರನ್ನು ಜಾಗೃತಗೊಳಿಸಬೇಕಾಗಿದೆ. ಈ ಹಿನ್ನಲೆಯಲ್ಲಿ ‘ವಾಲ್ಮೀಕಿ’ ಅವರ ಹೆಸರಿನಲ್ಲಿ ಅಧ್ಯಯನ ಪೀಠವನ್ನು ಕನ್ನಡ ವಿಶ್ವವಿದ್ಯಾಲಯವು ಸ್ಥಾಪಿಸಿದೆ. ಈ ಪೀಠವು ದಶಕಗಳಿಂದ ಹತ್ತು-ಹಲವು ಬೌದ್ಧಿಕ ಚಟುವಟಿಕೆಗಳ ಮೂಲಕ ಅತ್ಯಂತ ಕ್ರಿಯಾಶೀಲವಾಗಿದೆ. ಕನ್ನಡ ವಿಶ್ವವಿದ್ಯಾಲಯದ ಶೈಕ್ಷಣಿಕ ಸಂಶೋಧನೆಯ ಉದ್ದೇಶಗಳನ್ನು ಗಮನದಲ್ಲಿಟ್ಟುಕೊಂಡು ಈ ಪೀಠವು ಕಾರ್ಯೋನ್ಮುಖವಾಗಿದೆ.

ಪೀಠದ/ಕೇಂದ್ರದ ದೂರದೃಷ್ಟಿ
೧. ವಾಲ್ಮೀಕಿಯಂತಹ ಮಹಾನ್ ವ್ಯಕ್ತಿಯ ಜೀವನ ಮತ್ತು ಸಂದೇಶಗಳನ್ನು ಜನತೆಗೆ ತಿಳಿಸುವುದು.
೨. ಇಂಥವರ ಜೀವನದ ಆದರ್ಶಗಳನ್ನು ಸಮಾಜಕ್ಕೆ ಬಿತ್ತರಿಸುವುದು.
೩. ಸಮಕಾಲೀನ ಜಗತ್ತಿನ ಬಗೆಗೆ ಈ ಸಮುದಾಯಕ್ಕೆ ಜಾಗೃತಿಯನ್ನು ಮೂಡಿಸುವಲ್ಲಿ ಸಹಕರಿಸುವುದು.

ಪೀಠದ/ಕೇಂದ್ರದ ಧ್ಯೇಯ
೧. ಈ ಅಧ್ಯಯನ ಪೀಠದ ಮೂಲಕ ವಾಲ್ಮೀಕಿ ರಾಮಾಯಣವನ್ನು ಕನ್ನಡ ಜನಕ್ಕೆ ತಲುಪಿಸುವ ಕೆಲಸವನ್ನು ಕೈಗೊಳ್ಳಲಾಗುವುದು. ಜೊತೆಗೆ ಬೇರೆ ಬೇರೆ ರಾಮಾಯಣಗಳ ಪಠ್ಯಗಳ ಜೊತೆಗೆ ವಾಲ್ಮೀಕಿ
ರಾಮಾಯಣವನ್ನು ತೌಲನಿಕವಾಗಿ ಅಧ್ಯಯನ ಮಾಡುವುದು. ವಾಲ್ಮೀಕಿ ರಾಮಾಯಣ ಕಾವ್ಯವಾಗಿ, ಸಾಹಿತ್ಯಿಕವಾಗಿ ಎಷ್ಟು ಪ್ರಮುಖವಾಗಿದೆ ಎಂಬುದರ ಬಗೆಗೂ ಚರ್ಚಿಸುವುದು.
೨. ವಾಲ್ಮೀಕಿ ಸಮುದಾಯದ ಸಾಂಸ್ಕೃತಿಕ ಜೀವನದ ವಿವಿಧ ಮಗ್ಗುಲುಗಳನ್ನು ಅಧ್ಯಯನ ಮಾಡುವ ಯೋಜನೆಗಳನ್ನು ಕೈಗೆತ್ತಿಕೊಳ್ಳುವುದು.
೩. ವಾಲ್ಮೀಕಿ ಸಮುದಾಯಕ್ಕೆ ಸಮಕಾಲೀನ ಜಗತ್ತಿನ ಬಗೆಗೆ ಅರಿವು ಮೂಡಿಸುವ ಯೋಜನೆಗಳನ್ನು ರೂಪಿಸುವುದು.
೪. ವಾಲ್ಮೀಕಿ ಅಧ್ಯಯನ ಪೀಠದಿಂದ ಒಂದು ಪತ್ರಿಕೆಯನ್ನು ತರುವುದು.
೫. ವಾಲ್ಮೀಕಿ ಸಮುದಾಯದ ಜನಜಾಗೃತಿ ಮೇಳಗಳನ್ನು ಸಂಯೋಜಿಸುವುದು.
೬. ಪೀಠದಿಂದ ವಾಲ್ಮೀಕಿ ರಾಮಾಯಣ ಹಾಗೂ ವಾಲ್ಮೀಕಿ ಸಮುದಾಯದ ಬಗೆಗೆ ವಿಚಾರ ಸಂಕಿರಣ ಹಾಗೂ ಕಮ್ಮಟಗಳನ್ನು ಏರ್ಪಡಿಸಿ, ಬಂದ ಮಾಹಿತಿಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸುವುದು.

ಪೀಠದ/ಕೇಂದ್ರದಅನನ್ಯತೆ
ಈ ಪೀಠದ ಕಾರ್ಯಚಟುವಟಿಕೆಗಳನ್ನು ರೂಪಿಸಲು ಹಾಗೂ ಕಾರ್ಯರೂಪಕ್ಕೆ ತರುವಲ್ಲಿ ಮಾನ್ಯ ಕುಲಪತಿಗಳ ಅಧ್ಯಕ್ಷತೆಯಲ್ಲಿ ಇಬ್ಬರು ತಜ್ಞರನ್ನೊಳಗೊಂಡ ಸಲಹಾ ಸಮಿತಿ ಇರುತ್ತದೆ. ಸಂಚಾಲಕರು ಇದರ ಎಲ್ಲಾ ಕಾರ್ಯಚಟುವಟಿಕೆಗಳನ್ನು ಮಾನ್ಯ ಕುಲಪತಿಗಳ ಸಲಹೆಯಂತೆ ನಿರ್ವಹಿಸುತ್ತಾರೆ.
ಅಂತರರಾಷ್ಟ್ರೀಯ, ರಾಷ್ಟ್ರ ಹಾಗೂ ರಾಜ್ಯಮಟ್ಟದ ವಿಚಾರ ಸಂಕಿರಣ, ಕಾರ್ಯಾಗಾರ, ಕಮ್ಮಟ ಹಾಗೂ ವಿಶೇಷ ಉಪನ್ಯಾಸಗಳನ್ನು ನಡೆಸುವುದಲ್ಲದೆ, ವಾಲ್ಮೀಕಿ ಸಮುದಾಯಕ್ಕೆ ಸಂಬಂಧಿಸಿದಂತೆ ಮೌಲಿಕವಾದ ಕೃತಿಗಳನ್ನೂ ಪ್ರಕಟಿಸುವುದಾಗಿದೆ. ವಾಲ್ಮೀಕಿ ರಾಮಾಯಣದ ಸಂದೇಶಗಳನ್ನು ಮತ್ತು ಸಮುದಾಯದ ಐತಿಹಾಸಿಕ ಹಾಗೂ ಸಾಂಸ್ಕೃತಿಕ ಸಂಗತಿಗಳನ್ನು ಜನತೆಗೆ ತಲುಪಿಸುವುದರೊಂದಿಗೆ ಸಮಕಾಲೀನ ಜಗತ್ತನ್ನು ಪರಿಚಯಿಸುವುದಾಗಿದೆ.

ಪೀಠದ/ಕೇಂದ್ರದಪ್ರಮುಖ ಕಾರ್ಯಕ್ರಮಗಳು
೧. ಶ್ರೀ ಮಹರ್ಷಿ ವಾಲ್ಮೀಕಿಯ ಜೀವನ ವೃತ್ತಾಂತವನ್ನು ಸಂಶೋಧಿಸುವುದು.
೨. ವಾಲ್ಮೀಕಿ ರಾಮಾಯಣವನ್ನು ವಿವಿಧ ಆಯಾಮಗಳಲ್ಲಿ ನೋಡುವುದು/ಸಂಶೋಧಿಸುವುದು.
೩. ವಾಲ್ಮೀಕಿ ಜನಾಂಗದ ಚರಿತ್ರೆ ಮತ್ತು ಸಂಸ್ಕೃತಿಯನ್ನು ಸಂಶೋಧನೆಗೊಳಪಡಿಸುವುದು.
೪.ಈ ಮೇಲಿನ ವಿಷಯಗಳ ಕುರಿತಾಗಿ ಅಂತರರಾಷ್ಟಿçÃಯ, ರಾಷ್ಟಿçÃಯ, ರಾಜ್ಯ, ಪ್ರಾದೇಶಿಕ ಮತ್ತು ಸ್ಥಳೀಯ ವಿಚಾರ ಸಂಕಿರಣ, ಕಾರ್ಯಾಗಾರ ಮತ್ತು ಕಮ್ಮಟದಂತಹ ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದು.
೫. ವಾಲ್ಮೀಕಿ, ಈ ಜನಾಂಗದ ಅರಸುಮನೆತನಗಳು ಮತ್ತು ಈ ಜನಾಂಗದ ಮಹಾನ್ ಪುರುಷರ ಸಾಧನೆಗಳನ್ನು ದಾಖಲೀಕರಣ ಮಾಡುವುದು.

ಪೀಠ ಸಂಯೋಜಿಸಿದ ಸಮ್ಮೇಳನ/ ವಿಚಾರ ಸಂಕಿರಣ/ ಕಾರ್ಯಾಗಾರ/ ದತ್ತಿ ಉಪನ್ಯಾಸಗಳು

ಪೀಠದ ಉತ್ತಮ ಅಭ್ಯಾಸ:
೧. ಅಧ್ಯಯನ ಪೀಠವು ನಿರಂತರವಾಗಿ ವಾಲ್ಮೀಕಿ, ಈ ಸಮುದಾಯದ ಚರಿತ್ರೆ ಮತ್ತು ಸಂಸ್ಕೃತಿಯ ಕುರಿತಾಗಿ ಸಮ್ಮೇಳನ, ವಿಚಾರ ಸಂಕಿರಣ, ಕಾರ್ಯಾಗಾರ ಮತ್ತು ಉಪನ್ಯಾಸ ಕಾರ್ಯಕ್ರಮಗಳನ್ನು
ಹಮ್ಮಿಕೊಳ್ಳುವುದು.
೨. ನವಾಲ್ಮೀಕಿ ಸಮುದಾಯ, ಚರಿತ್ರೆ, ಸಂಸ್ಕೃತಿ ಮುಂತಾದವುಗಳ ಕುರಿತಾಗಿ ಪುಸ್ತಕಗಳನ್ನು ಪ್ರಕಟಿಸುವುದು.

ಪೀಠದ ಭವಿಷ್ಯದ ಯೋಜನೆಗಳು:
೧. ವಾಲ್ಮೀಕಿ ಮತ್ತು ವಾಲ್ಮೀಕಿ ರಾಮಾಯಣ, ವಾಲ್ಮೀಕಿ ಸಮುದಾಯದ ಕುರಿತಾದ ಸಂಶೋಧನೆಯನ್ನು ಕೈಗೊಳ್ಳುವುದು.
೨. ಈ ಮೇಲಿನ ವಿಷಯದ ಕುರಿತಾಗಿ ಗ್ರಂಥಾಲಯ ಮತ್ತು ಮಾಹಿತಿ ಸಂಗ್ರಹಿಸುವುದು.
೩. ಅಧ್ಯಯನ ಪೀಠವು ನಿರಂತರವಾಗಿ ವಾಲ್ಮೀಕಿ, ಈ ಸಮುದಾಯದ ಚರಿತ್ರೆ ಮತ್ತು ಸಂಸ್ಕೃತಿಯ ಕುರಿತಾಗಿ ಸಮ್ಮೇಳನ, ವಿಚಾರ ಸಂಕಿರಣ, ಕಾರ್ಯಾಗಾರ ಮತ್ತು ಉಪನ್ಯಾಸ ಕಾರ್ಯಕ್ರಮಗಳನ್ನು ವಿವಿಧ ಸಂಘ-
ಸಂಸ್ಥೆಗಳೊಂದಿಗೆ ನಡೆಸುವುದು.
೪. ವಾಲ್ಮೀಕಿ ಮತ್ತು ವಾಲ್ಮೀಕಿ ರಾಮಾಯಣ, ವಾಲ್ಮೀಕಿ ಸಮುದಾಯದ ಕುರಿತು ಆಳವಾಗಿ ಅಧ್ಯಯನ ಮಾಡಿದ ವಿದ್ವಾಂಸರಿAದ ಸಮ್ಮೇಳನ, ವಿಚಾರ ಸಂಕಿರಣ, ಕಾರ್ಯಾಗಾರ ಮತ್ತು ಉಪನ್ಯಾಸ
ಕಾರ್ಯಕ್ರಮಗಳನ್ನು ಸಂಘಟಿಸುವುದು.

ಮುಖ್ಯಸ್ಥರ ಸಂಪರ್ಕ ವಿಳಾಸ
ಡಾ. ಅಮರೇಶ ಯತಗಲ್‌

ಸಹ ಪ್ರಾಧ್ಯಾಪಕರು ಹಾಗೂ ಸಂಚಾಲಕರು
ಶಾಸನಶಾಸ್ತ್ರ ವಿಭಾಗ
ಕನ್ನಡ ವಿಶ್ವವಿದ್ಯಾಲಯ, ಹಂಪಿ
ವಿದ್ಯಾರಣ್ಯ

ನಾಡೋಜ ಡಾ. ರಾಜಕುಮಾರ ಅಧ್ಯಯನ ಪೀಠ

ಪರಿಚಯ

ಸಂಚಾಲಕರ ಸಂಪರ್ಕ ವಿಳಾಸ
ಡಾ. ಎ.ಎಸ್‌.ಪ್ರಭಾಕರ
ಪ್ರಾಧ್ಯಾಪಕರು ಹಾಗೂ ಸಂಚಾಲಕರು
ಬುಡಕಟ್ಟು ಅಧ್ಯಯನ ವಿಭಾಗ
ಕನ್ನಡ ವಿಶ್ವವಿದ್ಯಾಲಯ, ಹಂಪಿ
ವಿದ್ಯಾರಣ್ಯ

ದೇವರ ದಾಸಿಮಯ್ಯ ಅಧ್ಯಯನ ಪೀಠ

ಸಂಪರ್ಕ ವಿಳಾಸ
ಡಾ. ಗೋವಿಂದ

ಸಂಚಾಲಕರು,ದೇವರ ದಾಸಿಮಯ್ಯ ಅಧ್ಯಯನ ಪೀಠ
ಸಹಾಯಕ ಪ್ರಾಧ್ಯಾಪಕರು
ಕನ್ನಡ ಸಾಹಿತ್ಯ ಅಧ್ಯಯನ ವಿಭಾಗ
ಕನ್ನಡ ವಿಶ್ವವಿದ್ಯಾಲಯ, ಹಂಪಿ
ವಿದ್ಯಾರಣ್ಯ

ಹಾಲುಮತ ಅಧ್ಯಯನ ಪೀಠ

ಸಂಪರ್ಕ ವಿಳಾಸ
ಡಾ. ಎಫ್‌.ಟಿ.ಹಳ್ಳಿಕೇರಿ

ಸಂಚಾಲಕರು,ಹಾಲುಮತ ಅಧ್ಯಯನ ಪೀಠ
ಪ್ರಾಧ್ಯಾಪಕರು
ಹಸ್ತಪ್ರತಿ ವಿಭಾಗ
ಕನ್ನಡ ವಿಶ್ವವಿದ್ಯಾಲಯ, ಹಂಪಿ
ವಿದ್ಯಾರಣ್ಯ

ಒನಕೆ ಓಬವ್ವ ಅಧ್ಯಯನ ಪೀಠ

ಒನಕೆ ಓಬವ್ವ ಅಧ್ಯಯನ ಪೀಠದ ಚಿತ್ರಣ

ಕನ್ನಡ ವಿಶ್ವವಿದ್ಯಾಲಯವು ತನ್ನ ಶೈಕ್ಷಣಿಕ ಚಟುವಟಿಕೆಯ ಹರವನ್ನು ವಿಸ್ತರಿಸುವ ಕಾರ್ಯದಲ್ಲಿ ತೊಡಗಿ ಅನೇಕ ಅಧ್ಯಯನ ಪೀಠಗಳನ್ನು ಸ್ಥಾಪಿಸಿದೆ. ಅದರಲ್ಲಿ ಬಹಳ ಮುಖ್ಯವಾದುದು ಒನಕೆ ಓಬವ್ವ ಅಧ್ಯಯನ ಪೀಠ. ಈ ಪೀಠವು ಒನಕೆ ಓಬವ್ವನ ಅಧ್ಯಯನ ಮಾಡುವುದರ ಜೊತೆಗೆ ಚರಿತ್ರೆಯಲ್ಲಿ ಕಳೆದು ಹೋದ ದಮನಿತ ಮಹಿಳೆಯರ ಬಗೆಗಿನ ಮರು ಚಿಂತನೆ ಹಾಗೂ ಲಿಂಗ ಸಂಬಂಧಿ ಅಧ್ಯಯನಗಳನ್ನು ನಡೆಸುವ ಕಾಯಕದಲ್ಲಿ ತೊಡಗಿದೆ. ಮಹಿಳೆಯರ ಚರಿತ್ರೆ ಬಗೆಗೆ ಕಟ್ಟಿ ಕೊಡುವ ಕಾಯಕದ ಜೊತೆ ತಲಸ್ಪರ್ಶಿಯ ಲಿಂಗ ಸಂಬಂಧಿ ಆಯಾಮಗಳನ್ನು ಹುಡುಕುವ ಪ್ರಯತ್ನದಲ್ಲಿ ಹೆಜ್ಜೆಯಿರಿಸಿದೆ. ಈ ಹಿನ್ನೆಲೆಯಲ್ಲಿ ಮಹಿಳಾಮುಖಿ ಆಯಾಮಗಳ ಅಧ್ಯಯನ ಮಾಡುವ ಉದ್ದೇಶದಿಂದ ಒನಕೆ ಓಬವ್ವ ಅಧ್ಯಯನ ಪೀಠವನ್ನು ಪ್ರಾರಂಭಿಸಲಾಗಿದೆ.

ವಿಷನ್:
➣ ಪೀಠವು ಮಹಿಳೆಯರ ಚಾರಿತ್ರಿಕ ಕಥನವನ್ನು ಪುನರ್‌ಯೋಜಿಸುವ ಮತ್ತು ಮರುನಿರ್ಮಾಣ ಮಾಡುವ ಕಾಯಕದಲ್ಲಿ ನಿರವಾಗಿದೆ.
➣ ತಳಸ್ತರದ ಮಹಿಳೆಯರ ಸಾಧನೆಗಳ ಬಗೆಗಿನ ಕಥನಗಳನ್ನು ಪುರ್ನನಿರ್ಮಾಣಗೊಳಿಸುವುದು.

ಮಿಷನ್:
ಪೀಠದ ಅಧ್ಯಯನ ಯೋಜನೆಗಳ ಕಾರ್ಯಕ್ರಮಗಳು ಮುಖ್ಯವಾಗಿ
➣ ಒನಕೆ ಓಬವ್ವ ಶೌರ್ಯದ ಬಗೆಗೆ ಸಮಗ್ರವಾದ ಅಂದರೆ ಚಾರಿತ್ರಿಕ, ಸಾಮಾಜಿಕ, ಸಾಂಸ್ಕೃತಿಕ ಮತ್ತು ರಾಜಕೀಯ ನೆಲೆಗಳ ಅಧ್ಯಯನ ಮಾಡುವುದು.
➣ ಚರಿತ್ರೆಯಲ್ಲಿ ದಾಖಲಾಗದ ಮಹಿಳೆಯರ ಜೀವನ ಸಾಧನೆಗಳ ಕುರಿತು ಮಾಹಿತಿ ಸಂಗ್ರಹಣೆ ಮತ್ತು ಅಧ್ಯಯನ ನಡೆಸುವುದು.
➣ ಹಿಂದುಳಿದ ಹಾಗೂ ತಳಸ್ತರ ಮಹಿಳೆಯರ ಜೀವನ ಸಾಧನೆಗಳ ಕುರಿತು ಮಾಹಿತಿ ಸಂಗ್ರಹಣೆ ಮತ್ತು ಅಧ್ಯಯನ ನಡೆಸುವುದು.
➣ ಹಿಂದುಳಿದ ಸಮುದಾಯದ ಹೆಣ್ಣುಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡುವುದು.
➣ ಪ್ರತಿವರ್ಷ ಒಬ್ಬ ಹಿಂದುಳಿದ ಮಹಿಳೆಯನ್ನು ಆಕೆಯ ಸಾಧನೆಗಾಗಿ ಗೌರವಿಸುವುದು.
➣ ಒನಕೆ ಓಬವ್ವ ಹೆಸರಲ್ಲಿ ತಳಸ್ತರದ ಮಹಿಳೆಯರಿಗೆ ಜೀವನ ಕೌಶಲ್ಯ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದು.

ವಿಶಿಷ್ಟತೆ:
➣ ಒನಕೆ ಓಬವ್ವ ಅಧ್ಯಯನ ಪೀಠದ ಸ್ಥಾಪನೆಯನ್ನು ಕನ್ನಡ ವಿಶ್ವವಿದ್ಯಾಲಯದಲ್ಲಿ ಪ್ರಾರಂಭಿಸಲಾಗಿದೆ.
➣ ತಳಸ್ತರದ ಮಹಿಳೆಯರ ಚರಿತ್ರೆಯ ಕಟ್ಟುವಿಕ ಕಾರ್ಯಕ್ರಮ
➣ ತಳಸ್ತರದ ಮಹಿಳೆಯರ ಚರಿತ್ರೆ ನಿರ್ಮಾಣದ ಪುನರ್ ವಿಮರ್ಶೆ
➣ ಆರ್ಥಿಕ ಸಬಲೀಕರಣಕ್ಕಾಗಿ ತಳಸ್ತರದ ಮಹಿಳೆಯರಿಗೆ ಕೌಶಲ್ಯ ತರಬೇತಿ ನೀಡುವುದು.
➣ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡು ಮಹಿಳೆಯರ ಕಥsನಗಳ ನಿರ್ಮಾಣ
➣ ಸ್ವಾತಂತ್ರ್ಯ ಹೋರಾಟ ಹಾಗೂ ಹಕ್ಕುಗಳ ಬಗೆಗೆ ಹೋರಾಟ ಮಾಡಿದ ಮಹಿಳೆಯರ ಕಥನದ ಕುರಿತು ವೀಡಿಯೋ ದಾಖಲಾತಿ

ಪೀಠದ ಪ್ರಮುಖ ಕಾರ್ಯಕ್ರಮಗಳು ಮತ್ತು ಸಾಧನೆ
➣ ಲಿಂಗ ಸಂಬಂಧಗಳ ತಳಸ್ಪರ್ಶಿ ಅಧ್ಯಯನಕ್ಕೆ ಪೂರಕವಾದ ವಿಚಾರ ಸಂಕೀರ್ಣವನ್ನು ಆಯೋಜಿಸಿದ ನಂತರ ಅದಕ್ಕೆ ಸಂಬಂಧಿಸಿದ ಸಾಹಿತ್ಯ ಪುನರ್‌ವಿಮರ್ಶೆ ಮರುನಿರ್ಮಾಣ.
➣ ತಳಸ್ತರದ ಮಹಿಳೆಯರ ಸಾಧನೆಗಳು ಹಾಗೂ ಹೋರಾಟಗಾರರ ಕುರಿತು ವೀಡಿಯೋ ದಾಖಲಾತಿ.
➣ ಒನಕೆ ಓಬವ್ವನಿಗೆ ಸಂಬಂಧಿಸಿದಂತೆ ಪ್ರಚಲಿತದಲ್ಲಿರುವ ಜನಪದೀಯರ ಸಂಗತಿಗಳ ಪೋಷಣೆ.
➣ ಇದನ್ನು ನಾಡಿನಲ್ಲೆಡೆ ಪ್ರಸಾರಮಾಡುವ ಕಾರ್ಯವನ್ನು ಹಮ್ಮಿಕೊಂಡಿದೆ.

ಪೀಠವು ನಡೆಸಿದ ಕಾರ್ಯಕ್ರಮಗಳು
➣ಜಿ-೨೦ ಶೃಂಗ ಸಭೆಯ ವಿಶೇಷ ಉಪನ್ಯಾಸ ಕಾರ್ಯಕ್ರಮವು ದಿನಾಂಕ:೨೬.೦೬.೨೦೨೩ರಂದು ವಿಶ್ವವಿದ್ಯಾಲಯದ ಮಂಟಪ ಸಭಾಂಗಣದಲ್ಲಿ ಜರುಗಿತು. ಪೀಠವು ಆಯೋಜಿಸಿದ ಈ ಕಾರ್ಯಕ್ರಮದಲ್ಲಿ
ಡಾ.ಪಟಗುಂಡಿ ನಿವೃತ್ತ ರಾಜ್ಯಶಾಸ್ತ್ರ ಪ್ರಾಧ್ಯಾಪಕರು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ ಇವರು ವಿಶೇಷ ಉಪನ್ಯಾಸವನ್ನು ನೀಡಿರುತ್ತಾರೆ.
➣ ವಿಜಯ ಕರ್ನಾಟಕ ದಿನಪತ್ರಿಕೆಯವರು ಕನ್ನಡ ನುಡಿ ಎಂಬ ಕಾರ್ಯಕ್ರಮವನ್ನು ಮಂಟಪ ಸಭಾಂಗಣದಲ್ಲಿ ದಿನಾಂಕ:೨೦.೦೧.೨೦೨೩ ರಂದು ಆಯೋಜಿಸಿರುತ್ತಾರೆ.
➣ ದಿನಾಂಕ:೧೨.೦೧.೨೦೨೩ರಂದು ಕಂಬಾರರ ಕಾವ್ಯದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ಜರುಗಿತು. ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ, ಕಲಬುರಗಿ ಇಲ್ಲಿನ ಪ್ರಾಧ್ಯಾಪಕರಾದ
ಡಾ.ವಿಕ್ರಮ ವಿಸಾಜಿ ಇವರು ಉಪನ್ಯಾಸವನ್ನು ನಡೆಸಿಕೊಟ್ಟರು
➣ ಬಲ್ಲಿರೇನಯ್ಯ ಮಿತ್ರಮೇಳ ಬೆಳ್ಮಣ್ಣು, ಉಡುಪಿ ಜಿಲ್ಲೆ ಇವರು ಯಕ್ಷಗಾನ ಕಾರ್ಯಕ್ರಮವನ್ನು ದಿನಾಂಕ:೨೯.೦೭.೨೦೨೨ರಂದು ನಡೆಸಿಕೊಟ್ಟರು. ಪೀಠವು ಆಯೋಜಿಸಿದ ಈ ಕಾರ್ಯಕ್ರಮದಲ್ಲಿ
ವಿಶ್ವವಿದ್ಯಾಲಯದ ಅಧ್ಯಾಪಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
➣ ದಿನಾಂಕ:೨೬.೧೧.೨೦೨೨ರಂದು ಸಂವಿಧಾನ ಸಮರ್ಪಣಾ ದಿನವನ್ನು ನಡೆಸಿಕೊಡಲಾಯಿತು. ಮಂಗಳೂರು ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ಪ್ರಾಧ್ಯಾಪಕರಾದ ಡಾ.ಪಿ.ಎಲ್.ಧರ್ಮ ಅವರು ಉಪನ್ಯಾಸ
ನೀಡಿದರು.

ಸಂಚಾಲಕರು
ಡಾ.ಎ.ಶ್ರೀಧರ
ಪ್ರಾಧ್ಯಾಪಕರು
ಅಭಿವೃದ್ಧಿ ಅಧ್ಯಯನ ವಿಭಾಗ
ಕನ್ನಡ ವಿಶ್ವವಿದ್ಯಾಲಯ, ಹಂಪಿ

ಸಮಗ್ರದಾಸ ಸಾಹಿತ್ಯ ಅಧ್ಯಯನ ಪೀಠ

ಸಂಪರ್ಕ ವಿಳಾಸ
ಡಾ. ಶಿವಾನಂದ ವಿರಕ್ತಮಠ

ಸಂಚಾಲಕರು,ಸಮಗ್ರದಾಸ ಸಾಹಿತ್ಯ ಅಧ್ಯಯನ ಪೀಠ
ಪ್ರಾಧ್ಯಾಪಕರು
ಮಹಿಳಾ ಅಧ್ಯಯನ ವಿಭಾಗ
ಕನ್ನಡ ವಿಶ್ವವಿದ್ಯಾಲಯ, ಹಂಪಿ
ವಿದ್ಯಾರಣ್ಯ

ಶ್ರೀ ಅಭೇರಾಜ್‌ ಬಲ್ದೋಟ ಜೈನ ಸಂಸ್ಕೃತಿ ಅಧ್ಯಯನ ಪೀಠ

ಸಂಪರ್ಕ ವಿಳಾಸ
ಡಾ. ರಮೇಶನಾಯಕ

ಸಂಚಾಲಕರು,ಶ್ರೀ ಅಭೇರಾಜ್‌ ಬಲ್ದೋಟ ಜೈನ ಸಂಸ್ಕೃತಿ ಅಧ್ಯಯನ ಪೀಠ
ಪ್ರಾಧ್ಯಾಪಕರು
ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗ
ಕನ್ನಡ ವಿಶ್ವವಿದ್ಯಾಲಯ, ಹಂಪಿ
ವಿದ್ಯಾರಣ್ಯ