ಆಡಳಿತಾಂಗ – ಕನ್ನಡ ವಿಶ್ವವಿದ್ಯಾಲಯ
ಆಡಳಿತಾಂಗವು ವಿತ್ತವಿಭಾಗ, ಆಡಳಿತ ವಿಭಾಗ, ಅಭಿವೃದ್ಧಿ ವಿಭಾಗವೆಂಬ ಮೂರು ಶಾಖೆಗಳನ್ನು ಹೊಂದಿದೆ. ಇವುಗಳಲ್ಲಿ ವಿತ್ತವಿಭಾಗವು ಪ್ರಧಾನವಾಗಿ ರಾಜ್ಯ ಸರಕಾರದಿಂದ, ಪರ್ಯಾಯವಾಗಿ ಕೇಂದ್ರ ಸರಕಾರ, ವಿಶ್ವವಿದ್ಯಾಲಯ ಧನಸಹಾಯ ಆಯೋಗ , ಸಾಮಾಜಿಕ ವ್ಯಕ್ತಿ ಸಂಸ್ಥೆ ಹೀಗೆ ಸರ್ವಮೂಲಗಳಿಂದ ಹಣವನ್ನು ಸಂಗ್ರಹಿಸುವ ಮತ್ತು ಶಿಕ್ಷಣದ ಎಲ್ಲ ನೆಲೆಗಳೂ ಸಮನಾಗಿ ಬೆಳೆಯುವಂತೆ ಸರಿಯಾಗಿ ವಿನಿಯೋಗಿಸುವ ಹೊಣೆಯನ್ನು ನಿರ್ವಹಿಸುತ್ತಲಿದೆ. ಆಡಳಿತ ವಿಭಾಗವು ಸಿಬ್ಬಂದಿಗಳ ಸೇವಾವ್ಯವಸ್ಥೆ , ವೇತನ ಸಾದಿಲ್ವಾರು ಮೊದಲಾದ ಮುಖ್ಯ ಚಟುವಟಿಕೆಗಳನ್ನು ನಿಭಾಯಿಸುತ್ತಿದೆ.
ಅಭಿವೃದ್ಧಿ ವಿಭಾಗವು ಕಟ್ಟಡ, ರಸ್ತೆ, ನೀರು, ದೀಪ, ಉದ್ಯಾನ, ಅರಣ್ಯೀಕರಣ ಮೊದಲಾದ ಅಭಿವೃದ್ಧಿ ಕಾರ್ಯಗಳನ್ನು ನೋಡಿಕೊಳ್ಳುತ್ತಿದೆ. ಇದರ ಅಂಗವಾಗಿ ತಾಂತ್ರಿಕ ವಿಭಾಗ ಮತ್ತು ಉದ್ಯಾನ ವಿಭಾಗಗಳು ಶ್ರಮಿಸುತ್ತಿವೆ.