ವಿಭಾಗದ ಪರಿಚಯ
ಕನ್ನಡ ವಿಶ್ವವಿದ್ಯಾಲಯ ಕನ್ನಡ ನಾಡು, ನುಡಿ, ಸಂಸ್ಕೃತಿ ಕುರಿತು ಅಧ್ಯಯನ, ಅಧ್ಯಾಪನ, ಪ್ರಕಟಣೆ ಮೊದಲಾದ ಕಾರ್ಯಚಟುವಟಿಕೆಗಳಿಗಾಗಿ ಸ್ಥಾಪನೆಯಾದ ಪ್ರಮುಖ ವಿಶ್ವವಿದ್ಯಾಲಯ. ಜಗತ್ತಿನಲ್ಲಿ ಭಾಷೆಗಾಗಿಯೇ ಇರುವ ಏಕೈಕ ವಿಶ್ವವಿದ್ಯಾಲಯವೆಂಬ ಹೆಗ್ಗಳಿಕೆ ಹೊಂದಿದೆ. ಸಂಶೋಧನೆಯನ್ನೇ ಮುಖ್ಯವಾಗಿಸಿಕೊಂಡು ಅದನ್ನು ಸಾಕಾರಗೊಳಿಸಲು ಸ್ಥಾಪನೆಯಾದ ಈ ವಿಶ್ವವಿದ್ಯಾಲಯದಲ್ಲಿ ಅನೇಕ ವಿಭಾಗಗಳು ಕಾರ್ಯ ನಿರ್ವಹಿಸುತ್ತಿವೆ.
ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗವು ವಿಶ್ವವಿದ್ಯಾಲಯಕ್ಕೆ ಹೊಸ ಸೇರ್ಪಡೆಯಾಗಿದೆ. ಈ ವಿಭಾಗವು ಆರಂಭವಾಗುವುದಕ್ಕೂ ಮುನ್ನ ೨೦೧೬-೧೭ ರಲ್ಲಿ ಪತ್ರಿಕೋದ್ಯಮ ಸ್ನಾತಕೋತ್ತರ ಡಿಪ್ಲೊಮಾ ಮತ್ತು ೨೦೧೭-೧೮ರಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಸಂಚಾಲಕರ ನೇತೃತ್ವದಲ್ಲಿ ವಿಶ್ವವಿದ್ಯಾಲಯವು ಆರಂಭಿಸಿತು. ನಂತರ ತಾಂತ್ರಿಕ ಕಾರಣಗಳಿಂದ ೨೦೨೦ರಲ್ಲಿ ವಿಭಾಗವನ್ನು ಆರಂಭಿಸಿ, ಈ ವಿಭಾಗಕ್ಕೆ ಮುಖ್ಯಸ್ಥರನ್ನು ನೇಮಿಸಿತು. ಅಂದಿನಿಂದ ಈ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗಕ್ಕೆ ಮತ್ತು ಇಲ್ಲಿನ ಕೋರ್ಸ್‌ಗಳಿಗೆ ಒಂದು ಚೌಕಟ್ಟು ಲಭಿಸಿತು. ಪ್ರಸ್ತುತ ವಿಭಾಗವು ಎರಡು ವರ್ಷಗಳ ಎಂಎ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಸ್ನಾತಕೋತ್ತರ ಪದವಿ ಮತ್ತು ಒಂದು ವರ್ಷದ ಪಿಜಿ ಡಿಪ್ಲೊಮ ಪದವಿ ಮತ್ತು ಪಿಹೆಚ್‌ಡಿ ಪದವಿಗಳನ್ನು ನೀಡುತ್ತಿದೆ.
ಪತ್ರಿಕೋದ್ಯಮ ಮತ್ತು ಸಮೂಹ ಅಧ್ಯಯನವು ಸುದ್ದಿ ಬರವಣಿಗೆ ಮತ್ತು ಸಂಪಾದನೆ, ಜಾಹೀರಾತು, ಸಾರ್ವಜನಿಕ ಸಂಪರ್ಕ, ಮಾಧ್ಯಮ ನಿರ್ವಹಣೆ, ಅಭಿವೃದ್ಧಿ ಪತ್ರಿಕೋದ್ಯಮ ಪತ್ರಿಕೆಗಳನ್ನು ಮಾತ್ರವಲ್ಲದೆ ವಿದ್ಯುನ್ಮಾನ ಮಾಧ್ಯಮದಲ್ಲಿ ರೇಡಿಯೊ ಮತ್ತು ಟಿವಿ ಕಾರ್ಯಕ್ರಮಗಳ ನಿರ್ಮಾಣ, ಛಾಯಾಚಿತ್ರ ಪತ್ರಿಕೋದ್ಯಮ, ನವ ಮಾಧ್ಯಮದಂತಹ ವಿಶೇಷ ವಾದ ಪತ್ರಿಕೆಗಳನ್ನು ಒಳಗೊಂಡಿದೆ.
ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಕೋರ್ಸ್ ಒಂದು ವೃತ್ತಿಪರ ಕೋರ್ಸ್ ಆಗಿರುವುದರಿಂದ ವಿದ್ಯಾರ್ಥಿಗಳ ಪ್ರಾಯೋಗಿಕ ಕಲಿಕೆಗಾಗಿ ವಿದ್ಯಾರಣ್ಯ ವಾರ್ತೆ ಎಂಬ ಪ್ರಾಯೋಗಿಕ ಪಾಕ್ಷಿಕ ಪತ್ರಿಕೆಯನ್ನು ಪ್ರಕಟಿಸಲಾಗುವುದು. ಟಿ.ವಿ. ಕಾರ್ಯಕ್ರಮಗಳ ನಿರ್ಮಾಣ ಮತ್ತು ಪ್ರಸಾರಕ್ಕಾಗಿ KUH Media ಯುಟ್ಯೂಬ್ ಚಾನೆಲ್‌ನ್ನು ಪ್ರಸಾರ ಮಾಡಲಾಗುತ್ತದೆ.
ಈ ವಿಭಾಗವು ಆರಂಭವಾದಂದಿನಿಂದ ಸ್ನಾತಕೋತ್ತರ ಡಿಪ್ಲೊಮಾದ ಏಳು ಬ್ಯಾಚ್‌ಗಳು ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಐದು ಬ್ಯಾಚ್ ವಿದ್ಯಾರ್ಥಿಗಳು ಪದವಿಗಳನ್ನು ಪಡೆದಿದ್ದಾರೆ. ಇವರಲ್ಲಿ ಹೆಚ್ಚು ವಿದ್ಯಾರ್ಥಿಗಳು ಕರ್ನಾಟಕದ ಪ್ರತಿಷ್ಠಿತ ಮಾಧ್ಯಮ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವುದು ವಿಶ್ವವಿದ್ಯಾಲಯಕ್ಕೆ ಹೆಮ್ಮೆಯೇ ಸಂಗತಿ.
ಪತ್ರಿಕೋದ್ಯಮವು ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾಲ್ಕನೆಯ ಮುಖ್ಯ ಅಂಗವಾಗಿದೆ. ಇದನ್ನು ಬಲಪಡಿಸುವಲ್ಲಿ ಈ ವಿಭಾಗಗಳ ಪಾತ್ರ ಬಹು ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಲು ಹೆಜ್ಜೆ ಇಟ್ಟಿರುವ ನಮಗೆ ವಿಶ್ವವಿದ್ಯಾಲಯವು ಕರ್ನಾಟಕಲ್ಲಿ ಅದರಲ್ಲೂ ಕಲ್ಯಾಣ ಕರ್ನಾಟಕದ ಯಾವ ವಿಶ್ವವಿದ್ಯಾಲಯವೂ ಹೊಂದಿರದ ಸುಸಜ್ಜಿತ ಮತ್ತು ಅತ್ಯಾಧುನಿಕ ಸಮುದಾಯ ಬಾನುಲಿ ಕೇಂದ್ರ ಹಾಗೂ ಸ್ಟುಡಿಯೋಗಳನ್ನು ನಿರ್ಮಿಸಿಕೊಟ್ಟಿದೆ. ಆ ಕಾರ್ಯವನ್ನು ನಮ್ಮ ವಿಭಾಗಕ್ಕೆ ವಹಿಸಿರುವುದು ವಿಭಾಗದ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ. ನಮ್ಮ ವಿದ್ಯಾರ್ಥಿಗಳಿಗೆ ಮಾಧ್ಯಮ ಕ್ಷೇತ್ರದ ಎಲ್ಲ ವಲಯಗಳಲ್ಲೂ ಉತ್ತಮ ತರಬೇತಿಯನ್ನು ಅದರಲ್ಲೂ ಪ್ರಾಯೋಗಿಕ ತರಬೇತಿ ನೀಡಿ ಸಜ್ಜುಗೊಳಿಸಲು ಅನುಕೂಲವಾಗಲಿದೆ.
ದೃಷ್ಠಿಕೋನ
➣ ಪತ್ರಿಕೋದ್ಯಮವು ಪ್ರಜಾಪ್ರಭುತ್ವದ ನಾಲ್ಕನೇ ಅಂಗವೆಂದು ಗುರುತಿಸಿಕೊಂಡಿದೆ. ಪತ್ರಿಕೋದ್ಯಮ ವಿದ್ಯಾರ್ಥಿಗಳು ಧ್ವನಿಯಿಲ್ಲದವರ ಧ್ವನಿಯಾಗಿ ಕೆಲಸ ಮಾಡಲು ಮಾಧ್ಯಮ ರಂಗ ಅವಕಾಶ ಕಲ್ಪಸುತ್ತದೆ.
➣ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಅಧ್ಯಯನದ ಉದ್ದೇಶವು ವಿದ್ಯಾರ್ಥಿಗಳಿಗೆ ಯಶಸ್ವಿ ಪತ್ರಕರ್ತರಾಗಲು ಜ್ಞಾನ, ಕೌಶಲ್ಯ ಮತ್ತು ನೈತಿಕ ಅಡಿಪಾಯಗಳೊಂದಿಗೆ ಮಹತ್ವಕಾಂಕ್ಷಿ ಪತ್ರಕರ್ತರು
ಹಾಗೂ ಸಂವಹನ ವೃತ್ತಿಪರರನ್ನು ರೂಪಿಸುವುದು.
➣ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಕ್ಷೇತ್ರದಲ್ಲಿ ವಿಮರ್ಶಾತ್ಮಕ ಚಿಂತನೆ ಮತ್ತು ಸೃಜನಶೀಲತೆಯನ್ನು ಪ್ರೋತ್ಸಾಹಿಸಲು ಸಿದ್ಧಾಂತ ಮತ್ತು ಪ್ರಾಯೋಗಿಕ ತರಗತಿಗಳ ಮೂಲಕ ಒಂದು ನಿರ್ದಿಷ್ಟ
ವಿಷಯದಲ್ಲಿ ತಜ್ಞತೆಯನ್ನು ನೀಡುವುದು.
ಧ್ಯೇಯೊದ್ದೇಶಗಳು
➣ ವರದಿಗಾರಿಕೆ, ಸುದ್ದಿ ಸಂಪಾದನೆ, ಫೋಟೋಗ್ರಫಿ, ಪುಟವಿನ್ಯಾಸ ಮತ್ತು ಮಾಹಿತಿ ಪ್ರಸ್ತುತಿಯನ್ನು ಒಳಗೊಂಡಿರುವ ವ್ಯಾಪಕ ಶ್ರೇಣಿಯ ಪ್ರಾಯೋಗಿಕ ಕೌಶಲ್ಯಗಳ ಮೂಲಕ ವಿದ್ಯಾರ್ಥಿಗಳಿಗೆ ಶಿಕ್ಷಣ
ನೀಡುವುದು ಮತ್ತು ಅವರನ್ನು ವೃತ್ತಿಜೀವನಕ್ಕೆ ಸಿದ್ಧಪಡಿಸುವುದು.
➣ಮಾಧ್ಯಮ ಸಂಸ್ಥೆಗಳಿಗೆ ಅಗತ್ಯವಾದ ಮಾನವ ಸಂಪನ್ಮೂಲವನ್ನು ಅಭಿವೃದ್ಧಿಪಡಿಸುವುದು.
➣ ಈ ಸ್ನಾತಕೋತ್ತರ ಕಾರ್ಯಕ್ರಮವು ಜಾಗತೀಕರಣಗೊಂಡ ಜಗತ್ತಿನಲ್ಲಿ ಸಾಂಪ್ರದಾಯಿಕ ಮಾಧ್ಯಮ ಗಳೊಂದಿಗೆ ನವಮಾಧ್ಯಮಗಳನ್ನು ಬಲವಾದ ಹೆಜ್ಜೆಯೊಂದಿಗೆ ಪ್ರವೇಶಿಸಲು ವಿದ್ಯಾರ್ಥಿಗಳನ್ನು
ಸಿದ್ಧಪಡಿಸುವುದು.
➣ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಜ್ಞಾನ ಹೊಂದಿರುವ ಪದವೀಧರರನ್ನು ರೂಪಿಸುವುದು. ಮಾಧ್ಯಮ ಮತ್ತು ಸಂವಹನ ಕ್ಷೇತ್ರಗಳಲ್ಲಿ ನಾಯಕರಾಗಲು ಅವರನ್ನು ಸಿದ್ಧಪಡಿಸುವುದು
ಕಾರ್ಯಕ್ರಮದ ಉದ್ದೇಶವಾಗಿದೆ.
ವಿಭಾಗದ ಸೌಲಭ್ಯಗಳು:
* ಚೆಲುವ ಕನ್ನಡ ಸಮುದಾಯ ಬಾನುಲಿ
* ಚೆಲುವ ಕನ್ನಡ ಟೆಲಿವಿಷನ್ ಸ್ಟುಡಿಯೋ
* ಮಲ್ಟಿ ಮೀಡಿಯಾ ಲ್ಯಾಬ್.
* ಐಅಆ ಪ್ರೊಜೆಕ್ಟರ್.
* ಕಲರ್ ಪ್ರಿಂಟರ್.
* ಡಿಜಿಟಲ್ ಬೋರ್ಡ್ ಮತ್ತು ಸ್ಮಾರ್ಟ್ ಬೋರ್ಡ್‌ಗಳು
* ಅಧ್ಯಯನ ಮತ್ತು ಸಂಶೋಧನಾ ಕಾರ್ಯಗಳಿಗಾಗಿ ಪ್ರಮುಖ ಪ್ರಾದೇಶಿಕ ಮತ್ತು ರಾಷ್ಟ್ರೀಯ ದಿನಪತ್ರಿಕೆಗಳು ಮತ್ತು ನಿಯತಕಾಲಿಕೆಗಳನ್ನು ಹೊಂದಿರುವ ವಾಚನಾಲಯ
ವಿಭಾಗದ ಪ್ರಮುಖ ಶೈಕ್ಷಣಿಕ ಕಾರ್ಯಕ್ರಮಗಳು
* ಎಂ.ಎ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ
* ಸ್ನಾತಕೋತ್ತರ ಪತ್ರಿಕೋದ್ಯಮ ಡಿಪ್ಲೊಮ
* ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಪಿಎಚ್.ಡಿ ಅಧ್ಯಯನ
ವಿಭಾಗದ ಪ್ರೊಫೈಲ್
ವಿದ್ಯಾರ್ಥಿಗಳ ವಿವರಗಳು
೧. ಚರಿತ್ರೆ ವಿಭಾಗದ ಪಿಎಚ್.ಡಿ., ಎಂ.ಫಿಲ್, ಎಂ.ಎ,ಪಿಎಚ್.ಡಿ, ಸಾಮಾಜಿಕ ವರ್ಗವಾರು ವಿದ್ಯಾರ್ಥಿಗಳ ಸಂಖ್ಯೆ
೨. NETJRF, NFSC, NFST, NFOBC, NF Disability ಇತ್ಯಾದಿ ಫೆಲೋಶಿಪ್ ಪಡೆಯುವ ವಿದ್ಯಾರ್ಥಿಗಳ ವಿವರಗಳು
೩. ಹಳೆಯ ವಿದ್ಯಾರ್ಥಿಗಳ ಸಂಘ
ವಿಭಾಗದ ಪ್ರಮುಖ ಕೊಡುಗೆಗಳು
ವಿಭಾಗದ ಚಟುವಟಿಕೆಗಳು
೧. ವಿಭಾಗವು ಆಯೋಜಿಸಿದ ಕಾರ್ಯಾಗಾರ/ಕಮ್ಮಟಗಳ ವಿವರಗಳು/ವಿಚಾರ ಸಂಕಿರಣ/ದತ್ತಿ ಉಪನ್ಯಾಸ
>೨. Alumni Meet
೩.MOU ವಿವರ
ವಿಭಾಗದ ಕಾರ್ಯಚಟುವಟಿಕೆಗಳು
➣ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳಿಂದ ವಿದ್ಯಾರಣ್ಯ ವಾರ್ತೆ ಪ್ರಾಯೋಗಿಕ ಪತ್ರಿಕೆಯ ಪ್ರಕಟಣೆ.
➣ ವಿದ್ಯಾರಣ್ಯ ನ್ಯೂಸ್ ಯುಟ್ಯೂಬ್ ಚಾನೆಲ್ ಪ್ರಸಾರ.
➣ ವಿವಿಧ ವಿಷಯಗಳ ಕುರಿತು ಸಾಕ್ಷಚಿತ್ರಗಳ ನಿರ್ಮಾಣ
➣ ಚೆಲುವ ಕನ್ನಡ ಸಮುದಾಯ ಬಾನುಲಿ ಪ್ರಸಾರ
➣ ಚೆಲುವ ಕನ್ನಡ ವಾಹಿನಿ ಪ್ರಸಾರ
ಪ್ರಮುಖ ಪುಸ್ತಕಗಳು
ವಿಭಾಗದ ಸಂಶೋಧನೆ
೧. ವಿಭಾಗದಲ್ಲಿ ಕೈಗೊಂಡ ಪ್ರಮುಖ ಸಂಶೋಧನಾ ಯೋಜನೆಗಳು
೨. ಪಿಎಚ್.ಡಿ. ಮತ್ತು ಎಂ.ಫಿಲ್ ವಿಷಯಗಳು
ಅಧ್ಯಾಪಕರ ವಿವರಗಳು
ಸಂಪರ್ಕ
ಡಾ. ಎಸ್.ವೈ,ಸೋಮಶೇಖರ
ಸಂಚಾಲಕರು
ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗ
ಕನ್ನಡ ವಿಶ್ವವಿದ್ಯಾಲಯ, ಹಂಪಿ
ವಿದ್ಯಾರಣ್ಯ- ೫೮೩೨೭೬
ಮೊಬೈಲ್: ೯೪೪೯೯೮೦೯೭೬
ಇಮೇಲ್ ವಿಳಾಸ :