kannada-translation-studies











ವಿಭಾಗದ ಪರಿಚಯ

ಹಂಪಿಯ ಕನ್ನಡ ವಿಶ್ವವಿದ್ಯಾಲಯವು ೧೯೯೬ರಲ್ಲಿ ಉಳಿದ ವಿಭಾಗಗಳೊಂದಿಗೆ ದೃಶ್ಯಕಲಾ ವಿಭಾಗವನ್ನು ಪ್ರಾರಂಭಿಸಿತು. ಕ್ರಿಯಾತ್ಮಕ ಆದರ್ಶವು ಜೀವಂತ ಸಾಂಸ್ಕೃತಿಕ ಕೇಂದ್ರವಾಗಿ ರೂಪಿಸುವ ಮಹತ್ವದ ಉದ್ದೇಶವನ್ನು ಹೊಂದಿದ್ದು. ರಾಜ್ಯದಲ್ಲಿ ಇಂತಹದೊಂದು ವಿಶಿಷ್ಟ ಮಾದರಿ ವಿದ್ಯಾಲಯ ಇಲ್ಲದ್ದರಿಂದ ಇದನ್ನು ಸದೃಢವಾಗಿಸಲು ನಾವು ಬಹಳ ಮುತುವರ್ಜಿ ವಹಿಸಬೇಕಾಯಿತು. ದೃಶ್ಯಕಲಾ ವಿಭಾಗವು ವಿಶ್ವವಿದ್ಯಾಲಯದ ಅವಿಭಾಜ್ಯ ಅಂಗವಾಗಿದೆ. ಈ ವಿಭಾಗವು ಮುಖ್ಯವಾಗಿ ದೃಶ್ಯಕಲಾ ಸ್ನಾತಕ ಮತ್ತು ಸ್ನಾತಕೋತ್ತರ ಪದವಿ ಅಧ್ಯಯನ ವಿಭಾಗವನ್ನು ಪ್ರಾರಂಭಿಸಿದೆ. ೧೯೯೭ ರಲ್ಲಿ ಎಂ.ಫಿಲ್ ಮತ್ತು ಪಿಎಚ್.ಡಿ ಕೋರ್ಸ್‌ಗಳನ್ನು ಪರಿಚಯಿಸಿಲಾಯಿತು. ಪದವಿಧರ ವಿದ್ಯಾರ್ಥಿಗಳಿಗಾಗಿ ಎ.ಟಿ.ಸಿ., ಬಿ.ವಿಇಡಿ (ಕಲಾಶಿಕ್ಷಕ) ತರಬೇತಿಯನ್ನು ೨೦೦೪-೨೦೦೯ ರಲ್ಲಿ ಪ್ರಾರಂಭಿಸಿತು. ೨೦೦೩ ರಲ್ಲಿ ಮಾಸ್ಟರ್ ಆಫ್ ವಿಜುವಲ್ ಆರ್ಟ್‌ಗೆ ಅಧ್ಯಯನಕ್ಕೆ ಅವಕಾಶ ಮಾಡಿಕೊಡಲಾಯಿತು.
ಸಂಶೋಧನೆಗಳನ್ನು ಕೈಗೊಳ್ಳಲು ಬೋಧನೆಯನ್ನು ವೃತ್ತಿಪರವಾಗಿಸಲು ಈ ವಿಭಾಗಗಳನ್ನು ತೆರೆಯಲಾಯಿತು. ಇದರೊಂದಿಗೆ ಪಠ್ಯಕ್ರಮವನ್ನು ಆಗಾಗ್ಗೆ ಉನ್ನತೀಕರಿಸಲು ಅಧ್ಯಯನಾಂಗವೂ ಪ್ರಯತ್ನಿಸಿದೆ. ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಗಾಗಿ ಸೆಮಿನಾರ್, ಕಾರ್ಯಗಾರ, ಕಲಾಶಿಬಿರ, ಮತ್ತು ಪ್ರದರ್ಶನಗಳನ್ನು ಏರ್ಪಡಿಸಲಾಗಿದೆ. ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಪಡೆಯಲು ಕೋರ್ಸ್‌ಗಳೂ ಸಹಾಯಕವಾಗುತ್ತವೆ.
ದೃಶ್ಯಕಲಾ ವಿಭಾಗದ ಸೌಲಭ್ಯಗಳು
೧. ವಿಭಾಗದ ಮುಖ್ಯಸ್ಥರಿಗಾಗಿ ಸುಸಜ್ಜಿತ ಕೊಠಡಿ
೨. ಉಪನ್ಯಾಸಕರಿಗೆ ವೃಂದಕ್ಕೆ ಪ್ರತ್ಯೇಕ ಕೊಠಡಿ
೩. ಶಾಸ್ತ್ರಾಧ್ಯಯನ ಮತ್ತು ಪ್ರಾತ್ಯಕ್ಷಿಕೆಗಾಗಿ ಪ್ರತೇಕ ಕೊಠಡಿ
೪. ಪ್ರಾತ್ಯೆಕ್ಷಿಕೆ ವಿಶೇಷ ಕೊಠಡಿ
೫. ಸಭಾಂಗಣ
೬. ಕಂಪ್ಯೂಟರ್ ವಿಭಾಗ
೭. ಗ್ರಂಥಾಲಯ
೮. ಕಲಾ ಗ್ಯಾಲರಿ
೯. ಅ.ಶಾಶ್ವತ ಕಲಾ ಗ್ಯಾಲರಿ (ಕಲಾವಸ್ತು ಸಂಗರಾಹಲಯ)ವಿಭಾದ ಸಂಗ್ರಹಗಳು.
೧೦. ವೃತ್ತಾಕಾರದ ಪ್ರದರ್ಶನದ ಕಲಾ ಗ್ಯಾಲರಿ
೧೧. ಪೇಟಿಂಗ್‌ಗಾಗಿ ಸಂಗ್ರಹದ ಪ್ರತ್ಯೇಕ ಕೊಠಡಿ
೧೨. ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ಕೊಠಡಿ
೧೩. ವಿಶಾಲವಾದ ಹೊರಾಂಗಣ
೧೪. ಕಟ್ಟಡದ ಒಳಭಾಗ ಮತ್ತು ಹೊರ ಭಾಗದಲ್ಲಿ ಉದ್ಯಾನವನ

ನಮ್ಮ ವಿಶಿಷ್ಟತೆ
ಪ್ರಾಚೀನ ಮತ್ತು ಅರ್ವಾಚೀನ ಕಲಾ ಪದ್ಧತಿಯನ್ನು ಅಧ್ಯಯನ ಮಾಡುವುದು ಕಾರ್ಯಗಾರ, ಉಪನ್ಯಾಸ ಸಂಶೋಧನೆ ಮೂಲಕ ಜಗತ್ತಿನ ಉತ್ಕೃಷ್ಟ ಕಲೆಯನ್ನು ಆಸ್ವಾದಿಸಲು ಅವಕಾಶ ವಹಿಸುವುದು. ಟ್ಯುಟೋರಿಯಲ್, ಕಾರ್ಯಾಗಾರ, ಗೃಹಪಾಠ, ಕಿರು ಸಂಶೋಧನಾ ಬರಹ ಮುಖಾಂತರ ನಿರಂತರ ಮೌಲ್ಯಮಾಪನ ಮಾಡುವುದು.

ತುಲನಾತ್ಮಕ ಅಧ್ಯಯನ
ಶ್ರೇಷ್ಠ ಕಲಾವಿದರಿಗೆ ವೇದಿಕೆ ನಿರ್ಮಿಸುವುದು ಬಿ.ವಿ.ಎ., ಎಂ.ವಿ.ಎ., ಎಂ.ಫಿಲ್., ಪಿಹೆಚ್.ಡಿ., ಡಿ.ಲಿಟ್ ವಿದ್ಯಾರ್ಥಿಗಳನ್ನು ಬೋಧನೆ ಮತ್ತು ಸಂಶೋಧನೆಯಲ್ಲಿ ತೊಡಗಿಸುವುದು. ದೃಶ್ಯಕಲಾ ಗ್ರಂಥಗಳನ್ನು ಪ್ರಕಟಿಸುವುದು.
ದೃಶ್ಯಕಲೆಯ ವಿವಿಧ ಜ್ಞಾನವನ್ನು ಪ್ರಾಯೋಗಿಕ ಮತ್ತು ಸಿದ್ಧಾಂತದ ಅಡಿಯಲ್ಲಿ ಸಂಶೋಧನಾತ್ಮಕವಾಗಿ ಅಧ್ಯಯನ ನಡೆಸಿ ವಿಶ್ವವಿದ್ಯಾಲಯದ ದೇಯದಂತೆ ಹೊಸ ಜ್ಞಾನ ಶಾಖೆಯನ್ನು ಸೃಷ್ಠಿಸಲಾಗುವುದು.