ವಿಭಾಗದ ಪರಿಚಯ
ಈ ವಿಭಾಗವು ಆರಂಭದಲ್ಲಿ ವಿದೇಶಿ ಹಾಗೂ ಭಾರತೀಯ ಭಾಷೆಗಳ ವಿಭಾಗ ಎನ್ನುವ ಹೆಸರಿನಲ್ಲಿ ಕಾರ್ಯವನ್ನು ನಿರ್ವಹಿಸುತ್ತಿತ್ತು. ನಂತರ ೧೯೯೮-೯೯ರಲ್ಲಿ ವಿಭಾಗಕ್ಕೆ ದ್ರಾವಿಡ ಸಂಸ್ಕೃತಿ ಅಧ್ಯಯನ ವಿಭಾಗ ಎಂದು ಮರುನಾಮಕರಣ ಮಾಡಲಾಯಿತು. ಈ ವಿಭಾಗವು ದಕ್ಷಿಣ ಭಾರತೀಯ ಸಂಸ್ಕೃತಿ ಮತ್ತು ಕರ್ನಾಟಕ ಅಧ್ಯಯನ ಕ್ಷೇತ್ರದಲ್ಲಿ ಸಂಶೋಧನೆ ಮತ್ತು ಬೋಧನೆಯ ಕಾಯಕವನ್ನು ಕೈಗೊಂಡಿರುತ್ತದೆ. ಇತರ ರಾಜ್ಯಗಳೊಂದಿಗೆ ಸೌಹಾರ್ದಯುತ ಸಂಬಂಧಗಳ ಬೆಸೆಯುವಿಕೆಗಾಗಿ ಭಾಷೆ, ಧರ್ಮ ಹಾಗೂ ದಕ್ಷಿಣ ಭಾರತದ ಸಂಸ್ಕೃತಿಯ ಕುರಿತಾಗಿ ತೌಲನಿಕ ಸಂಶೋಧನೆಯನ್ನು ಕೈಗೊಂಡಿರುತ್ತದೆ. ಈ ವಿಭಾಗದ ಅಧ್ಯಯನ ವ್ಯಾಪ್ತಿಯು ದ್ರಾವಿಡ ಭಾಷಾಧ್ಯಯನ ಮತ್ತು ಸಂಸ್ಕೃತಿ, ದ್ರಾವಿಡ ಅಧ್ಯಯನ, ದಕ್ಷಿಣ ಭಾರತೀಯ ಅಧ್ಯಯನ ಮತ್ತು ಭಾರತಾಧ್ಯಯನ (ಇಂಡಾಲಜಿ) ಈ ಜ್ಞಾನಶಿಸ್ತುಗಳಲ್ಲಿ ವಿಭಾಗದ ಆಶಯ ರೂಪುಗೊಂಡಿದೆ.
ಈ ವಿಭಾಗದ ಪ್ರಮುಖ ಉದ್ದೇಶವು ಇನ್ನಿತರ ದಕ್ಷಿಣ ಭಾರತೀಯ ಭಾ?ಗಳೊಂದಿಗೆ ಸಂವಹನ ನಡೆಸುವುದಾಗಿದೆ. ಈ ಗುರಿ ಹಾಗೂ ಉದ್ದೇಶದ ಈಡೇರಿಕೆಗಾಗಿ, ಈ ವಿಭಾಗವು ತೌಲನಿಕ ಅಧ್ಯಯನ ಕುರಿತಾಗಿ ಕೋರ್ಸ್‌ಗಳನ್ನು ಆರಂಭಿಸಿದೆ. ಹಲವಾರು ಸಂಶೋಧನಾ ಯೋಜನೆಗಳನ್ನು ಕೈಗೊಂಡಿದ್ದು, ವಿಚಾರ ಸಂಕಿರಣ ಮತ್ತು ಕಮ್ಮಟಗಳ ಆಯೋಜನೆ ಹಾಗೂ ಬೋಧನೆಯಲ್ಲಿ ತೊಡಗಿಕೊಂಡಿದೆ. ಈ ವಿಭಾಗವು ದಕ್ಷಿಣ ಭಾರತದ ಕೆಲವು ಪ್ರಮುಖ ಶೈಕ್ಷಣಿಕ ಕೇಂದ್ರಗಳಲ್ಲಿ ವಿಚಾರಸಂಕಿರಣವನ್ನು ಆಯೋಜಿಸುತ್ತದೆ. ಈ ಕಾರ್ಯಕ್ರಮಗಳ ಆಯೋಜನೆಯ ಫಲವಾಗಿ ದಕ್ಷಿಣ ಭಾರತೀಯ ನಿಟ್ಟಿನಲ್ಲಿರುವ ಭಾಷೆ ಹಾಗೂ ಸಾಂಸ್ಕೃತಿಕ ತೊಡಕುಗಳ ನಿವಾರಣೆಗೆ ವಿಭಾಗಕ್ಕೆ ಸಹಕಾರಿಯಾಗಿರುತ್ತದೆ.
ವಿಭಾಗದಿಂದ ಕೈಗೊಂಡ ಯೋಜನೆಗಳ ಫಲವಾಗಿ ದ್ರಾವಿಡ ವಿಚಾರಗಳನ್ನು ಸ್ಪಷ್ಟವಾಗಿ ಹೊರಹೊಮ್ಮಲು ಸಹಕಾರಿಯಾಗಿರುತ್ತದೆ ಈ ವಿಭಾಗದ ವಿದ್ವಾಂಸರು ಸಂಪೂರ್ಣವಾಗಿ ಸಾಂಸ್ಕೃತಿಕ ಅಧ್ಯಯನಗಳಲ್ಲಿ ಹಾಗೂ ನಿಘಂಟುಗಳ ಸಂಪಾದನೆಯಲ್ಲಿ ತೊಡಗಿಕೊಂಡಿರುತ್ತಾರೆ. ಈ ವಿಭಾಗದಿಂದ ಹೊರಹೊಮ್ಮಿದ ಅತ್ಯಂತ ಗುಣಾತ್ಮಕ ಕಾರ್ಯವೆಂದರೆ ’ದ್ರಾವಿಡ ನಿಘಂಟು’ ಯೋಜನೆಯ ಪ್ರಕಟಣೆ. ದಕ್ಷಿಣ ಭಾರತದ ಸರ್ವಶ್ರೇ? ಸಂಸ್ಥೆಗಳ ಸಹಯೋಗದೊಂದಿಗೆ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಆಯೋಜಿಸುವ ಸಂಪ್ರದಾಯವನ್ನು ಈ ವಿಭಾಗವು ಹೊಂದಿದೆ. ಈ ವಿಭಾಗವು ಕನ್ನಡ ಎಂ.ಎ., ಪಿಎಚ್.ಡಿ.(ಸಂ) ಕೋರ್ಸ್ ಹಾಗೂ ಎಂ.ಫಿಲ್. ಕೋರ್ಸ್‌ಗಳನ್ನು ನಡೆಸಿಕೊಂಡು ಬರುತ್ತಿದೆ.
ಈ ವಿಭಾಗವು ’ದ್ರಾವಿಡ ಅಧ್ಯಯನ’ ಅರ್ಧವಾರ್ಷಿಕ ಪತ್ರಿಕೆಯನ್ನು ಪ್ರಕಟಿಸುತ್ತಿದೆ. ಪತ್ರಿಕೆಯು ಸುಪ್ರಸಿದ್ಧ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ವಿದ್ವಾಂಸರ ಲೇಖನವನ್ನು ಒಳಗೊಂಡಿರುತ್ತದೆ. ಈ ವಿಭಾಗದ ಪ್ರಾಧ್ಯಾಪಕರು ಹಾಗೂ ಅಧ್ಯಾಪಕರು ತಮಿಳು, ತೆಲುಗು, ಮಲಯಾಳಂ, ಕೊಡವ ಹಾಗೂ ಸಂಸ್ಕೃತ ಭಾ?ಗಳಲ್ಲಿ ಪರಿಣತಿ ಹೊಂದಿರುತ್ತಾರೆ. ವಿವಿಧ ಭಾಷಾಜ್ಞಾನ ಹೊಂದಿರುವ ಸದಸ್ಯರುಗಳ ಮೂಲಕ ಕರ್ನಾಟಕದಲ್ಲಿ ದಕ್ಷಿಣ ಭಾರತೀಯ ಅಧ್ಯಯನದ ಕೇಂದ್ರವಾಗಿ ಹೊರಹೊಮ್ಮಿದೆ.
ದೃಷ್ಟಿಕೋನ(ವಿಶನ್)
➣
ಗುರಿ(ಮಿಶನ್)
* ಕರ್ನಾಟಕ ಅಧ್ಯಯನವನ್ನು ವಿಶೇಷವಾಗಿ ದಕ್ಷಿಣ ಭಾರತೀಯ ಮಟ್ಟದಲ್ಲಿ ಹಾಗೂ ಸಾರ್ವತ್ರಿಕವಾಗಿ ದಕ್ಷಿಣ ಏಷ್ಯಾ ಮಟ್ಟದಲ್ಲಿ ಬೆಳೆಸುವುದು.
* ತೌಲನಿಕ ದಕ್ಷಿಣ ಭಾರತೀಯ ಅಧ್ಯಯನದಲ್ಲಿ ಉನ್ನತ ಸಂಸ್ಥೆಯ ಸ್ಥಾನ ಹೊಂದುವುದು.
* ಅಲಕಕ್ಷಿತ ದ್ರಾವಿಡ ಭಾಷೆಗಳ ಹಾಗೂ ಅವುಗಳ ಸಂಸ್ಕೃತಿಗಳ ಅಧ್ಯಯನವನ್ನು ಪ್ರೋತ್ಸಾಹಿಸುವುದು.
ಮಿಷನ್
* ವಿಭಾಗದ ಆಶಯವನ್ನು ತಲುಪುವ ನಿಟ್ಟಿನಲ್ಲಿ ಹಲವಾರು ಶೈಕ್ಷಣಿಕ ಚಟುವಟಿಕೆಗಳಾದ ಬೋಧನೆ, ಸಂಶೋಧನಾ ಯೋಜನೆಗಳನ್ನು ಕೈಗೊಳ್ಳುವುದು, ವಿಚಾರ ಸಂಕಿರಣಗಳ ಆಯೋಜನೆ, ಕಾರ್ಯಾಗಾರ ಹಾಗೂ
ವಿಶೇಷ ಉಪನ್ಯಾಸ ಕಾರ್ಯಕ್ರಮಗಳನ್ನು ಏರ್ಪಡಿಸುವುದು. ಸಂಶೋಧನಾ ಪತ್ರಿಕೆ ಪ್ರಕಟಣೆಯನ್ನು ಒಳಗೊಂಡಂತೆ ಇನ್ನಿತರ ಚಟುವಟಿಕೆಗಳನ್ನು ವೃದ್ಧಿಸುವುದು.
* ದಕ್ಷಿಣ ಭಾರತೀಯ ಅಧ್ಯಯನ / ದ್ರಾವಿಡ ಅಧ್ಯಯನದ ಕೇಂದ್ರವಾಗವುದು.
* ದ್ರಾವಿಡ / ದಕ್ಷಿಣ ಭಾರತೀಯ ಅಧ್ಯಯನಗಳ ಪರಿಣಿತರಿಗೆ ವೇದಿಕೆಯನ್ನು ಸೃಷ್ಟಿಸುವುದು.
* ಇತರ ದ್ರಾವಿಡ ಭಾಷಾ ಜ್ಞಾನವನ್ನು ಕನ್ನಡದಲ್ಲಿ ಒದಗಿಸುವುದು.
ವಿಭಾಗದ ಅನನ್ಯತೆ
ವಿವಿಧ ಹಂತದಲ್ಲಿ ಈ ವಿಭಾಗವು ದ್ರಾವಿಡ ಅಧ್ಯಯನ, ದಕ್ಷಿಣ ಭಾರತೀಯ ಅಧ್ಯಯನ, ತೌಲನಿಕ ದ್ರಾವಿಡ ಸಾಹಿತ್ಯ ಹಾಗೂ ತೌಲನಿಕ ದ್ರಾವಿಡ ಭಾಷಾಧ್ಯಯನ ಕೋರ್ಸ್‌ಗಳನ್ನು ನಡೆಸುತ್ತಿರುತ್ತದೆ. ಸ್ಥಳೀಯ ಹಾಗೂ ಪ್ರಾದೇಶಿಕ ಇತಿಹಾಸ ಹಾಗೂ ಸಂಸ್ಕೃತಿಯಲ್ಲಿ ವಿಷಯವನ್ನು ಕೇಂದ್ರೀಕರಿಸಲಾಗಿದೆ. ಜಾಗತಿಕ ಜ್ಞಾನ ಶಿಸ್ತಿಗೆ ಸ್ಥಳೀಯ/ದೇಸಿ ಮಹತ್ವದಲ್ಲಿ ಈ ವಿಭಾಗವು ಬಲವಾದ ನಂಬಿಕೆಯನ್ನು ಹೊಂದಿದೆ. ೧೯೯೪ ರಿಂದ ಈ ವಿಭಾಗವು ೪೦ ಸಂಶೋಧನಾ ಯೋಜನೆಗಳು ಹಾಗೂ ೨೦ ವಿಚಾರಗೋಷ್ಠಿಗಳನ್ನು ಆಯೋಜಿಸಿದೆ. ಇಲ್ಲಿಯವರೆಗೆ ’ದ್ರಾವಿಡ ಅಧ್ಯಯನ’ ಅರ್ಧವಾರ್ಷಿಕದ ೨೪ ಸಂಚಿಕೆಗಳು ಪ್ರಕಟಗೊಂಡಿರುತ್ತದೆ.
ವಿಭಾಗದ ವೈಶಿಷ್ಟ್ಯತೆ
೧. ಈ ವಿಭಾಗದ ಅಧ್ಯಾಪಕರು ಸಿಬ್ಬಂದಿಗಳು ದಕ್ಷಿಣ ಭಾರತದ ದ್ರಾವಿಡ ಭಾಷೆ, ಸಂಸ್ಕೃತಿಯಲ್ಲಿ ಪರಿಣತಿ ಹೊಂದಿರುತ್ತಾರೆ
೨. ಪ್ರತಿ ಮಂಗಳವಾರ ವಿಭಾಗದ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಖಾದಿ ಬಟ್ಟೆ ಧರಿಸುವುದು ರೂಢಿಯಲ್ಲಿದೆ.
೩. ವಿಭಾಗದ ೭೫% ಸಿಬ್ಬಂದಿಗಳು ಆಡಳಿತ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಪ್ರತಿನಿತ್ಯವೂ ಸಾರ್ವಜನಿಕ ಸಾರಿಗೆಯ ಉಪಯೋಗವನ್ನು ಪಡೆಯುತ್ತಿರುವುದರಿಂದ ವಿಶ್ವವಿದ್ಯಾಲಯದಲ್ಲಿ ಕಲುಷಿತರಹಿತ
ವಾತಾವರಣವಿರುತ್ತದೆ.
೪. ತೌಲನಿಕ ಆಯಾಮ ಹಾಗೂ ಬಹುಶಿಸ್ತಿಯ ಆಯಾಮದ ಶಿಸ್ತನ್ನು ಒಳಗೊಂಡಿದೆ.
ವಿಭಾಗದ ಪ್ರಮುಖ ಶೈಕ್ಷಣಿಕ ಕಾರ್ಯಕ್ರಮಗಳು
೧. ಎಂ.ಎ., ಪಿಎಚ್.ಡಿ. ಸಂಯೋಜಿತ ಕನ್ನಡ ಕೋರ್ಸ್‌ಗಳು
೨. ಎಂ.ಫಿಲ್. ದ್ರಾವಿಡ ಅಧ್ಯಯನ
೩. ಪಿಎಚ್.ಡಿ. ದ್ರಾವಿಡ ಅಧ್ಯಯನ
೪. ಸ್ನಾತಕೋತ್ತರ ಡಿಪ್ಲೊಮಾ – ತೌಲನಿಕ ದ್ರಾವಿಡ ಭಾಷಾಧ್ಯಯನ
ವಿಭಾಗದ ಪ್ರೊಫೈಲ್
ವಿದ್ಯಾರ್ಥಿಗಳ ವಿವರಗಳು
೧.ವಿಭಾಗದ ಪಿಎಚ್.ಡಿ., ಎಂ.ಫಿಲ್, ಎಂ.ಎ,ಪಿಎಚ್.ಡಿ, ಸಾಮಾಜಿಕ ವರ್ಗವಾರು ವಿದ್ಯಾರ್ಥಿಗಳ ಸಂಖ್ಯೆ
೨. NETJRF, NFSC, NFST, NFOBC, NF Disability ಇತ್ಯಾದಿ ಫೆಲೋಶಿಪ್ ಪಡೆಯುವ ವಿದ್ಯಾರ್ಥಿಗಳ ವಿವರಗಳು
೩. ಹಳೆಯ ವಿದ್ಯಾರ್ಥಿಗಳ ಸಂಘ
ವಿಭಾಗದ ಪ್ರಮುಖ ಕೊಡುಗೆಗಳು
➣ ಒಟ್ಟಾರೆ ದಕ್ಷಿಣ ಭಾರತೀಯ ಸಂಸ್ಕೃತಿಯ ವಿಮರ್ಶಾತ್ಮಕ ಮೌಲ್ಯಮಾಪನ ಮತ್ತು ಕರ್ನಾಟಕದ ನಿಟ್ಟಿನಲ್ಲಿ ಇದರ ಅನನ್ಯತೆಯನ್ನು ನಿರ್ಣಯಿಸುವುದು.
➣ ಪ್ರಮುಖ ದಕ್ಷಿಣ ಭಾರತೀಯ ಭಾಷೆಗಳ ಸಾಹಿತ್ಯ ಇತಿಹಾಸವನ್ನು ಕನ್ನಡದಲ್ಲಿ ಸೃಷ್ಟಿಸುವ ನಿಟ್ಟಿನಲ್ಲಿ ಕನ್ನಡ ಪರಿಣಿತರಿಗೆ ತೌಲನಿಕ ಆಯಾಮದಲ್ಲಿ ಅಧ್ಯಯನ ಮಾಡಲು ಕನ್ನಡ ಪರಿಣಿತರಿಗೆ ಅನುಕೂಲ ಮಾಡಿಕೊಡಲಾಗುತ್ತದೆ.
➣ ದ್ರಾವಿಡ ಪರಿಕಲ್ಪನೆಯ ಮರು ಅವಲೋಕನಕ್ಕಾಗಿ ಇದರ ಎಲ್ಲಾ ಅಂಶಗಳನ್ನು ಚರ್ಚಿಸುವ ನಿಟ್ಟಿನಲ್ಲಿ ಹೆಜ್ಜೆ ಹಾಕಿದೆ.
ವಿಭಾಗದ ಚಟುವಟಿಕೆಗಳು
೧. ವಿಭಾಗವು ಆಯೋಜಿಸಿದ ಕಾರ್ಯಾಗಾರ/ಕಮ್ಮಟಗಳ ವಿವರಗಳು/ವಿಚಾರ ಸಂಕಿರಣ/ದತ್ತಿ ಉಪನ್ಯಾಸ
೨. Alumni Meet
೩.MOU ವಿವರ
೪.ಇತರೇ ಚಟುವಟಿಕೆಗಳು
ಪ್ರಮುಖ ಪುಸ್ತಕಗಳು
ಅಧ್ಯಾಪಕರ ವಿವರಗಳು
ಸಂಪರ್ಕ
ಸಿ.ವೆಂಕಟೇಶ
ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು
ದ್ರಾವಿಡ ಸಂಸ್ಕೃತಿ ಅಧ್ಯಯನ ವಿಭಾಗ
ಕನ್ನಡ ವಿಶ್ವವಿದ್ಯಾಲಯ, ಹಂಪಿ
ವಿದ್ಯಾರಣ್ಯ- ೫೮೩೨೭೬
ಮೊಬೈಲ್: ೯೪೮೦೬೨೧೬೬೫
ಇಮೇಲ್ ವಿಳಾಸ : venkateshckuh@gmail.com