kannada-translation-studies











ವಿಭಾಗದ ಪರಿಚಯ

ಕನ್ನಡ ಭಾಷೆ ಮತ್ತು ಭಾಷಾ ಸಂಬಂಧಿತ ವಿಷಯಗಳನ್ನು ಸಂಶೋಧನೆ ಮತ್ತು ಅಧ್ಯಯನ ಮಾಡುವ ಉದ್ದೇಶದಿಂದ ಕನ್ನಡ ಭಾಷಾಧ್ಯಯನ ವಿಭಾಗವನ್ನು ರೂಪಿಸಲಾಗಿದೆ.
ಕನ್ನಡ ಭಾಷೆಯ ರಚನೆ ಮತ್ತು ಬಳಕೆಯ ಸ್ವರೂಪಗಳನ್ನು ಅವುಗಳ ಸಾಹಿತ್ಯಿಕ, ಸಾಮಾಜಿಕ, ಪಾದೇಶಿಕ ನೆಲೆಗಳಿಂದ ಅಧ್ಯಯನ ಮಾಡುವುದು, ಕನ್ನಡದ ಪ್ರಬೇಧಗಳನ್ನು ಸಂಗ್ರಹಿಸಿ ದಾಖಲಿಸುವುದು, ಬಳಕೆಯ ವಿವಿಧ ವಲಯಗಳಲ್ಲಿನ (ಆಡಳಿತ, ಶೈಕ್ಷಣಿಕ, ಇತರೆ) ಸಮಸ್ಯೆಗಳನ್ನು ಶೈಕ್ಷಣಿಕ ನೆಲೆಗಳಿಂದ ವಿಶ್ಲೇಷಿಸುವುದು ವಿಭಾಗದ ಮುಖ್ಯ ಕೆಲಸಗಳಾಗಿವೆ.
ವಿಭಾಗದ ಅಧ್ಯಾಪಕರು ತೊಡಗುವ ಸಾಂಸ್ಥಿಕ ಮತ್ತು ವೈಯಕ್ತಿಕ ಯೋಜನೆಗಳು, ವಿದ್ಯಾರ್ಥಿಗಳನ್ನು ಒಳಗೊಂಡ ಪಿಎಚ್.ಡಿ ಅಧ್ಯಯನದ ಕಾರ್ಯಕ್ರಮಗಳು ಅಧ್ಯಯನ ಸಂಶೋಧನೆಯ ಮುಖ್ಯ ಕಾರ್ಯಕ್ರಮಗಳಾಗಿವೆ. ಇದರೊಂದಿಗೆ ವಿಭಾಗವು ನಾಡಿನ ವಿದ್ವಾಂಸರನ್ನು ಒಳಗೊಂಡಂತೆ ಬೇರೆ ಬೇರೆ ವಲಯದ ತಜ್ಞರೊಂದಿಗೆ ನಡೆಸುವ ಸಂವಾದ, ವಿಶೇಷ ಉಪನ್ಯಾಸ, ವಿಚಾರ ಸಂಕಿರಣ, ಅಧ್ಯಾಪಕರು ವಿದ್ಯಾರ್ಥಿಗಳಿಗಾಗಿ ನಡೆಸುವ ಶೈಕ್ಷಣಿಕ ಕಾರ್ಯಾಗಾರಗಳ ಮೂಲಕ ವಿಭಾಗದ ಧ್ಯೇಯ ಉದ್ದೆಶಗಳನ್ನು ಸಾಕಾರಗೊಳಿಸುವಲ್ಲಿ ಕಾರ್ಯನಿರತವಾಗಿದೆ.

ವಿಭಾಗದ ಧ್ಯೇಯ
➣ ಕನ್ನಡ ಕಲಿಕೆ, ಬೋಧನೆ, ಹಾಗೂ ಸಮೂಹ ಮಾಧ್ಯಮಗಳಲ್ಲಿ ತಲೆದೋರುವ ಕನ್ನಡ ಬಳಕೆ ಸಮಸ್ಯೆಗಳನ್ನು ಗುರುತಿಸಿ ಸಲಹೆಗಳನ್ನು ನೀಡುವುದು.
➣ ಕನ್ನಡ ಬೋದಿಸುವವರು ಹಾಗೂ ಕನ್ನಡ ಕಲಿಕೆಯಲ್ಲಿ ಆಸಕ್ತಿಯುಳ್ಳವರಿಗೆ ಕನ್ನಡ ನುಡಿಯ ಚರಿತ್ರೆ, ಅದರ ರಚನೆ, ಬಳಕೆ ಹಾಗೂ ಬದಲಾವಣೆ ಕುರಿತು ತಿಳುವಳಿಕೆ ಮೂಡಿಸುವುದು.
➣ ಕನ್ನಡ ಭಾಷೆಯ ರಚನೆ ಮತ್ತು ಬಳಕೆ ಕುರಿತು ಅಧ್ಯಯನ ಮಾಡುವುದು
➣ ಕರ್ನಾಟಕದಲ್ಲಿರುವ ಕನ್ನಡೇತರ ಭಾಷೆಗಳನ್ನು ಕುರಿತು ಅಧ್ಯಯನ ಮಾಡುವುದು.

ವಿಭಾಗದ ದೂರದೃಷಿ
➣ ಕನ್ನಡ ದತ್ತ ಕಣಜ ರೂಪಿಸುವುದು.
➣ ಕನ್ನಡ ಭಾಷಾಧ್ಯಯದ ಮೂಲಕ ಆಧುನಿಕ ಯುಗದ ಎಲ್ಲ ವಲಂಯಗಳ ಬಳಕೆಗೆ ಅನ್ವಯವಾಗುವಂತೆ ಜ್ಞಾನವನ್ನು ಸೃಷ್ಟಿಸುವುದು.
➣ ಜಾಗತಿಕ ಮತ್ತು ಭಾರತೀಯ ಸಂದರ್ಭದಲ್ಲಿ ಕನ್ನಡಕ್ಕೆ ಎದುರಾಗುವ ಸವಾಲುಗಳನ್ನು ನಿವಾರಿಸಲು ಅಗತ್ಯ ಶೈಕ್ಷಣಿಕ ವಲಯಗಳನ್ನು ರೂಪಿಸುವುದು.

ವಿಭಾಗದ ಅನ್ಯತೆ
ಕನ್ನಡ ಭಾಷಾಧ್ಯಯನ ವಿಭಾಗವು ಕನ್ನಡ ಭಾಷೆಯ ಮತ್ತು ಕರ್ನಾಟಕದಲ್ಲಿರುವ ಇತರೆ ಭಾಷೆಗಳ ಕುರಿತು ವೈಜ್ಞಾನಿಕವಾಗಿ ಅಧ್ಯಯನ ಮಾಡುತ್ತದೆ.
ಕರ್ನಾಟಕದಲ್ಲಿ ಇದೊಂದು ವಿಶಿಷ್ಟವಾದ ಶೈಕ್ಷಣಿಕ ಅಧ್ಯಯನ ವಿಭಾಗವಾಗಿದ್ದು, ವಿಶೇಷವಾಗಿ ಕನ್ನಡ ಭಾಷಾವಿಜ್ಞಾನ ಮತ್ತು ಕರ್ನಾಟಕದಲ್ಲಿರುವ ಇತರ ಭಾಷೆಗಳ ವೈಜ್ಞಾನಿಕ ಅಧ್ಯಯನ ಮಾಡುವ ವಿಭಾಗವಾಗಿದೆ. ಸಾಂಪ್ರದಾಯಿಕ ವಿಶ್ವವಿದ್ಯಾಲಯಗಳಿಗಿಂತ ಅಧ್ಯಯನ ವಿಧಾನಕ್ಕಿಂತ ಮತ್ತು ಭಾಷೆಗಳನ್ನು ಅಧ್ಯಯನಕ್ಕೆ ಒಳಪಡಿಸುವ ತಾತ್ವಿಕ ದೃಷ್ಠಿಕೋನವು ಭಿನ್ನವಾಗಿದೆ. ಸಂಶೋಧನೆಯ ಜೊತೆಗೆ ಈ ಕ್ಷೇತ್ರದಲ್ಲಿ ಪ್ರಾಯೋಗಿಕ ಅಧ್ಯಯನಗಳನ್ನು ನಡೆಸಲು ಬೇಕಾದ ಮಾನವ ಸಂಪನ್ಮೂಲವನ್ನು ಸೃಷಿಸುವಲ್ಲಿ ಯಶಸ್ವಿಯಾಗಿದೆ. ಈ ಪ್ರಕ್ರಿಯೆಯಲ್ಲಿ ಕನ್ನಡ ಭಾಷಾಧ್ಯಯನದ ವಿದ್ಯಾರ್ಥಿಗಳು ಅಲ್ಲದೆ ಕನ್ನಡ ಶಿಕ್ಷಕರು ಮತ್ತು ಇತರೆ ಅಧ್ಯಯನ ಆಸಕ್ತರನ್ನು ಒಳಗೊಂಡಿದೆ

ವಿಭಾಗದ ಪ್ರಮುಖ ಶೈಕ್ಷಣಿಕ ಕಾರ್ಯಕ್ರಮಗಳು

೧. ಭಾಷಾಧ್ಯಯನದಲ್ಲಿ ಪಿಎಚ್.ಡಿ
೨. ಎಂಎ.ಪಿಎಚ್.ಡಿ ಸಂಯೋಜಿತ ಪದವಿ

ನಡೆಸುತ್ತಿರುವ ಕೋರ್ಸ್‌ಗಳು
೧. ಮೊದಲನೇ ಸೆಮಿಸ್ಟರ್ – ಕನ್ನಡ ಭಾಷೆ ಮತ್ತು ಭಾಷಾಧ್ಯಯನದ ವಿಧಾನಗಳು
೨. ಎರಡನೇ ಸೆಮಿಸ್ಟರ್ – ಭಾಷೆ ಮತ್ತು ಭಾಷಾ ಶಾಸ್ತ್ರ
೩. ಪಿಜಿ ಡಿಪ್ಲೋಮಾ -ಕನ್ನಡ ಭಾಷಾಧ್ಯಯನ

ವಿಭಾಗದ ಪ್ರೊಫೈಲ್

ವಿದ್ಯಾರ್ಥಿಗಳ ವಿವರಗಳು

೧. ಚರಿತ್ರೆ ವಿಭಾಗದ ಪಿಎಚ್.ಡಿ., ಎಂ.ಫಿಲ್, ಎಂ.ಎ,ಪಿಎಚ್.ಡಿ, ಸಾಮಾಜಿಕ ವರ್ಗವಾರು ವಿದ್ಯಾರ್ಥಿಗಳ ಸಂಖ್ಯೆ

೨. NETJRF, NFSC, NFST, NFOBC, NF Disability ಇತ್ಯಾದಿ ಫೆಲೋಶಿಪ್‌ ಪಡೆಯುವ ವಿದ್ಯಾರ್ಥಿಗಳ ವಿವರಗಳು

೩. ಹಳೆಯ ವಿದ್ಯಾರ್ಥಿಗಳ ಸಂಘ

ವಿಭಾಗದ ಪ್ರಮುಖ ಕೊಡುಗೆಗಳು

➣ ಕನ್ನಡ ಪದಕೋಶದ ಭಾಗವಾಗಿದ್ದ ಕನ್ನಡ ಜ್ಞಾನ ಪರಂಪರೆಯ ಘಟಕಗಳಾಗಿದ್ದ ಕೃಷಿ ಮತ್ತು ಇತರೆ ವೃತ್ತಿಗಳ ಪದಕೋಶಗಳನ್ನು ಸಂಗ್ರಹಿಸಿ ಪ್ರಕಟಿಸಲಾಗಿದೆ.
➣ ಕನ್ನಡ ಪ್ರಾದೇಶಿಕ ವೈವಿಧ್ಯತೆಗಳನ್ನು ಪದಕೋಶ ಮತ್ತು ರಚನೆಗಳಿಗೆ ಸಂಬಂಧಿಸಿ ಪ್ರಯೋಗ ಸಹಿತವಾಗಿ ದಾಖಲಿಸಿ ಜಾಲತಾಣದಲ್ಲಿ ಹೆಚ್ಚನ ಅಧ್ಯಯನಗಳಿಗೆ ಆಕರವಾಗಿ ರೂಪಿಸಿ ಇರಿಸಲಾಗಿದೆ.
➣ ಕನ್ನಡದಲ್ಲಿ ಭಾಷೆಗೆ ಸಂಬಂಧಿಸಿದ ಜಾಗತಿಕ ಜ್ಞಾನವನ್ನು ದೊರೆಯುವಂತೆ ಭಾಷೆಯ ವಿಶ್ವಕೋಶವನ್ನು ಸಂಕಲಿಸಿ ಪ್ರಕಟಿಸಲಾಗಿದೆ.
➣ ಕನ್ನಡದ ಪದಕೋಶದಲ್ಲಿ ದಿನದಿನವೂ ನಡೆಯುತ್ತಿರುವ ಬದಲಾವಣೆ ಬೆಳವಣಿಗೆಯ ಪ್ರಕ್ರಿಯೆಗಳನ್ನು ಲಿಖಿತ ಮತ್ತು ದೃಶ್ಯ ಮಾಧ್ಯಮದ ಬಳಕೆಗಳನ್ನು ಆಧರಿಸಿ ದಾಖಲಿಸಲಾಗಿದೆ.
➣ ಕನ್ನಡ ಭಾಷೆಯ ರಚನೆ ಕುರಿತ ಪಾರಂಪರಿಕ ವ್ಯಾಕರಣಗಳಿಗಿಂತ ಭಿನ್ನವಾಗಿ ಕನ್ನಡದ ನೆಲೆಯಿಂದಲೆ ಕನ್ನಡವನ್ನು, ಕನ್ನಡದ ರಚನೆಯನ್ನು ನೋಡಲು ಬೇಕಾದ ತಾತ್ವಿಕ ನೆಲೆಗಟ್ಟನ್ನು ಕಾರ‍್ಯಗಾರ, ವಿಚಾರ ಸಂಕಿರಣಗಳ ಮೂಲಕ ನಿರ್ವಹಿಸಲಾಗಿದೆ.
➣.ಕನ್ನಡದ ಶೈಕ್ಷಣಿಕ, ಆಡಳಿತಾತ್ಮಕ, ಇತರೆ ಬಳಕೆ ವಲಯಗಳ ಸಮಸ್ಯೆ ಸವಾಲುಗಳನ್ನು ಅಧ್ಯಯದ ಚೌಕಟ್ಟಿನಲ್ಲಿರಿಸಿ ವಿಶ್ಲೇಷಿಸುವ ಪ್ರಯತ್ನ ಮಾಡಲಾಗಿದೆ.

ಕನ್ನಡ ಭಾ‍ಷಾ ಪ್ರಬೇಧ

ವಿಭಾಗದ ಚಟುವಟಿಕೆಗಳು

೧. ವಾರದ ಮಾತು ಕಾರ್ಯಕ್ರಮ

೨. ವಿಭಾಗವು ಆಯೋಜಿಸಿದ ಕಾರ್ಯಾಗಾರ/ಕಮ್ಮಟಗಳ ವಿವರಗಳು/ವಿಚಾರ ಸಂಕಿರಣ/ದತ್ತಿ ಉಪನ್ಯಾಸ

೩. Alumni Meet

೪.MOU ವಿವರ

೪.ಇತರೇ ಚಟುವಟಿಕೆಗಳು

ಪ್ರಮುಖ ಪುಸ್ತಕಗಳು

ವಿಭಾಗದ ಸಂಶೋಧನೆ

೧. ವಿಭಾಗದಲ್ಲಿ ಕೈಗೊಂಡ ಪ್ರಮುಖ ಸಂಶೋಧನಾ ಯೋಜನೆಗಳು

೨. ಪಿಎಚ್.ಡಿ. ಮತ್ತು ಎಂ.ಫಿಲ್‌ ವಿಷಯಗಳು

ಅಧ್ಯಾಪಕರ ವಿವರಗಳು

ಡಾ. ಅಶೋಕಕುಮಾರ
ಪ್ರಾಧ್ಯಾಪಕರು
ಮೊಬೈಲ್: 94485 80103
ಇಮೇಲ್: ranjere1@gmail.com
ವಿದ್ಯಾರ್ಹತೆ:ಎಂ.ಎ., ಎಂ.ಫಿಲ್, ಪಿ.ಎಚ್.ಡಿ.
John

ಡಾ. ಪಿ. ಮಹಾದೇವಯ್ಯ
ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರು
ಮೊಬೈಲ್: ೯೪೮೦೪೦೯೧೫೬
ಇಮೇಲ್ : pmahadevaiah@gmail.com
ವಿದ್ಯಾರ್ಹತೆ: ಎಂ.ಎ., ಪಿಎಚ್.ಡಿ.

 

ನಿವೃತ್ತ ಪ್ರಾಧ್ಯಾಪಕರು
೧. ಡಾ. ಕೆ.ವಿ.ನಾರಾಯಣ
೨. ಡಾ. ಸಾಂಬಾಮೂರ್ತಿ
೨. ಡಾ. ಡಿ. ಪಾಂಡುರಂಗಬಾಬು

ಸಂಪರ್ಕ

ಡಾ. ಪಿ. ಮಹಾದೇವಯ್ಯ
ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು
ಚರಿತ್ರೆ ವಿಭಾಗ
ಕನ್ನಡ ವಿಶ್ವವಿದ್ಯಾಲಯ, ಹಂಪಿ
ವಿದ್ಯಾರಣ್ಯ- ೫೮೩೨೭೬
ಮೊಬೈಲ್: ೯೪೮೦೪೦೯೧೫೬
ಇಮೇಲ್ ವಿಳಾಸ : pmahadevaiah@gmail.com