kannada-translation-studies











ವಿಭಾಗದ ಪರಿಚಯ

೧೯೯೫ ರಲ್ಲಿ ಶಾಸನಶಾಸ್ತ್ರ ವಿಭಾಗವು ಕನ್ನಡ ವಿಶ್ವವಿದ್ಯಾಲಯದಲ್ಲಿ ಸ್ಥಾಪನೆಯಾದ ನಂತರ, ಈ ವಿಭಾಗವು ಕರ್ನಾಟಕದ ಪ್ರತಿ ಗ್ರಾಮಗಳ ಸಮೀಕ್ಷೆಯನ್ನು ನಡೆಸಿ, ಆ ಗ್ರಾಮಗಳಲ್ಲಿ ಕಂಡುಬರುವ ಶಾಸನಗಳ ಸಮೀಕ್ಷೆಯನ್ನು ಮಾಡಿ, ಸಂಗ್ರಹಿಸಿ ಅವುಗಳನ್ನು ಸಂಪಾದಿಸಿ ಸಂಪುಟಗಳಲ್ಲಿ ಪ್ರಕಟಿಸುವ ಮುಖ್ಯ ಜವಾಬ್ದಾರಿಯನ್ನು ವಹಿಸಿಕೊಂಡಿದೆ. ಜೊತೆಗೆ ವಿಭಾಗವು ಪಿಎಚ್.ಡಿ., ಮತ್ತು ಎಪಿಗ್ರಫಿಯಲ್ಲಿ ಪಿಜಿ ಡಿಪ್ಲೊಮಾ ಬೋಧನಾ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಈಗಾಗಲೇ ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳ ಶಾಸನ ಸಂಪುಟಗಳ ಪ್ರಕಟಣೆಗಳನ್ನು ಹೊರತಂದಿದೆ. ಮತ್ತು ಇತರ ನೆರೆಯ ರಾಜ್ಯಗಳಲ್ಲಿರುವ ಕನ್ನಡ ಶಾಸನಗಳನ್ನು ಸಂಗ್ರಹಿಸಿ ಸಂಪುಟಗಳಲ್ಲಿ ಪ್ರಕಟಿಸಿದೆ. ಇತರ ಉಳಿದ ಜಿಲ್ಲೆಗಳ ಶಾಸನಗಳ ಸಂಪುಟಗಳನ್ನು ಹೊರತರುವಲ್ಲಿ ಸಕ್ರಿಯವಾಗಿದೆ. ವಿಭಾಗವು ಶಾಸನ ಮತ್ತು ಇತಿಹಾಸಕ್ಕೆ ಸಂಬಂಧಿಸಿದ ವಿವಿಧ ವಿಷಯಗಳ ಕುರಿತು ಅನೇಕ ರಾಷ್ಟ್ರೀಯ ವಿಚಾರ ಸಂಕಿರಣಗಳನ್ನು ನಡೆಸಿದೆ. ಶಾಸನ ಹಾಗೂ ಐತಿಹಾಸಿಕ ಸ್ಮಾರಕಗಳ ಬಗ್ಗೆ ಜಾಗೃತಿ ಮೂಡಿಸಲು ವಿವಿಧೆಡೆ ವಿಶೇಷ ಉಪನ್ಯಾಸ ಮಾಲಿಕೆಗಳನ್ನೂ ನಡೆಸುತ್ತಿದೆ.

ದೂರದೃಷ್ಟಿ
➣ ಕನ್ನಡ/ಕರ್ನಾಟಕವನ್ನು ಅರಿತುಕೊಳ್ಳಲು ಎಲ್ಲ ಶಾಸನಗಳ ಭಂಡಾರದ ಅವಶ್ಯಕತೆಯನ್ನು ಪೂರೈಸುವುದು.
➣ ಶಾಸನಗಳ ಭಾಷೆ ಮತ್ತು ಲಿಪಿಗಳನ್ನು ಓದುವ ಕೌಶಲ್ಯವನ್ನು ಕಲಿಸುವುದು.
➣ ಶಾಸನೋಕ್ತ ಇತಿಹಾಸಶಾಸ್ತ್ರವನ್ನು ವಸ್ತುನಿಷ್ಠವಾಗಿ ರಚಿಸುವುದು.
➣ ಶಾಸನಗಳಲ್ಲಿಯ ರಾಜಕೀಯ, ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ, ಆರ್ಥಿಕ, ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಇತಿಹಾಸವನ್ನು ರಚಿಸುವುದು.

ಧ್ಯೇಯೋದ್ದೇಶಗಳು
➣ ಜಿಲ್ಲಾವಾರು ಶಾಸನಗಳನ್ನು ಮತ್ತು ನೆರೆಹೊರೆ ರಾಜ್ಯಗಳಲ್ಲಿರುವ ಕನ್ನಡ ಶಾಸನಗಳನ್ನು ಪ್ರಕಟಿಸುವ ಮೂಲಕ ಅವುಗಳನ್ನು ಸಂಪುಟಗಳ
ರೂಪದಲ್ಲಿ ಹೊರತರುವುದು.
➣ ಕರ್ನಾಟಕ ಮತ್ತು ಇತರ ಸ್ಥಳಗಳಲ್ಲಿರುವ ಶಾಸನಗಳ ಕುರಿತು ಕಲಿಸುವುದಲ್ಲದೇ, ಅವುಗಳನ್ನು ರಕ್ಷಿಸುವ, ಓದುವ ಮತ್ತು ವಿಶ್ಲೇಷಿಸುವ
ತರಬೇತಿಯನ್ನು ನೀಡುವುದು.
➣ ಶಾಸನಗಳನ್ನು ಮಾಹಿತಿ ಮೂಲಗಳನ್ನಾಗಿ ಬಳಸಿ, ಇತಿಹಾಸವನ್ನು ರಚಿಸುವ ಯೋಜನೆಗಳನ್ನು ಹಮ್ಮಿಕೊಳ್ಳುವುದು.
➣ ತ್ವರಿತವಾಗಿ ಗುರುತಿಸಲು ಸಾಧ್ಯವಾಗುವ ರೀತಿಯಲ್ಲಿ ತಂತ್ರಾಂಶ ರೂಪಗಳಿಗೆ ಶಾಸನಗಳನ್ನು ಒಳಪಡಿಸುವುದು.

ವಿಭಾಗದ ಅನನ್ಯತೆ
ಉತ್ತರ ಕರ್ನಾಟಕದ ಹಳ್ಳಿಗಳಲಿದ್ದ ಆರರಿಂದ ಎಂಟು ಸಾವಿರ ಶಾಸನಗಳನ್ನು ಶಾಸನಶಾಸ್ತ್ರ ವಿಭಾಗವು ಪ್ರಕಟಿಸಿರುತ್ತದೆ. ಈಗಾಗಲೆ ವಿಭಾಗವು ಬಳ್ಳಾರಿ, ಕೊಪ್ಪಳ, ರಾಯಚೂರು, ಬೀದರ, ಬಾಗಲಕೋಟೆ, ವಿಜಯಪುರ ಜಿಲ್ಲೆಗಳ ಶಾಸನಗಳನ್ನು ಪ್ರಕಟಿಸಿದೆ ಹಾಗೂ ವಿಶೇ?ವಾಗಿ ಹಂಪಿ ಕುರಿತು ಸಂಪುಟವನ್ನು ಹೊರತಂದಿದೆ. ಅಲ್ಲದೆ ಆಂಧ್ರಪ್ರದೇಶ, ತಮಿಳನಾಡು, ಮಹಾರಾಷ್ಟ್ರ ರಾಜ್ಯಗಳಲ್ಲಿಯ ಕನ್ನಡ ಶಾಸನಗಳನ್ನೂ ಪ್ರಕಟಿಸಿದೆ. ಜೊತೆಗೆ ಗದಗ, ಧಾರವಾಡ, ಉಡುಪಿ, ಯಾದಗಿರಿ, ಬೆಳಗಾವಿ ಮತ್ತು ಹಾವೇರಿ ಜಿಲ್ಲೆಗಳ ಶಾಸನ ಸಂಪುಟಗಳು ಪ್ರಗತಿಯ ಹಂತದಲ್ಲಿವೆ.

ವಿಭಾಗದ ಒಳ್ಳೆಯ ಅಭ್ಯಾಸಗಳು
ಗ್ರಾಮಗಳಲ್ಲಿಯ ಶಾಸನಗಳನ್ನು ಶೋಧಿಸುವುದು.
ಶಾಸನ ಸಂಪುಟಗಳನ್ನು ಪ್ರಕಟಿಸುವುದು.
ಹಳೆ ಶಾಸನಗಳನ್ನು ಸಂರಕ್ಷಿಸುವ ಮತ್ತು ಓದುವ ಕಲೆಯನ್ನು ಹೊಸ ತಲೆಮಾರಿನ ಸಂಶೋಧಕರಿಗೆ ಕಲಿಸುವುದು.

ವಿಭಾಗದ ಭವಿಷ್ಯದ ಯೋಜನೆಗಳು
ಇಂಗ್ಲಿಷ್ ಮತ್ತು ಆಧುನಿಕ ಕನ್ನಡದಲ್ಲಿ ಶಾಸನಗಳ ಅನುವಾದವನ್ನು ಆನ್‌ಲೈನ್ ತಂತ್ರಾಂಶ ರೂಪದಲ್ಲಿ ಸಿದ್ದಪಡಿಸುವುದು.
ಸಂಶೋಧನೆಗೆ ಲಭ್ಯವಾಗದ ಕರ್ನಾಟಕ ಶಾಸನಗಳನ್ನು ಗುರುತಿಸುವುದು ಹಾಗೂ ಅಪೂರ್ಣವಿರುವ ಶಾಸನ ಸಂಪುಟಗಳನ್ನು ಪೂರ್ಣ ಮಾಡುವುದು.

ವಿಭಾಗದ ಶೈಕ್ಷಣಿಕ ಕಾರ್ಯಕ್ರಮಗಳು ಹಾಗು ಕೋರ್ಸ್‌ಗಳು

* ಶಾಸನಶಾಸ್ತ್ರದಲ್ಲಿ ಪಿಎಚ್.ಡಿ. (ಕೋರ್ಸ್ ಕೋಡ್‌ PH1ES)
* ಶಾಸನಶಾಸ್ತ್ರದಲ್ಲಿ ಎಂ.ಫಿಲ್ (ಕೋರ್ಸ್ ಕೋಡ್‌ MP2ES)
* ಪಿ. ಜಿ. ಡಿಪ್ಲೋಮಾ ಕೋರ್ಸ್ (ಕೋರ್ಸ್ ಕೋಡ್‌ DP5ES)

ಪಠ್ಯಕ್ರಮ

ವಿಭಾಗದ ಪ್ರೊಫೈಲ್

ವಿದ್ಯಾರ್ಥಿಗಳ ವಿವರಗಳು

೧. ಶಾಸನಶಾಸ್ತ್ರ ವಿಭಾಗದ ಪಿಎಚ್.ಡಿ., ಎಂ.ಫಿಲ್, ಎಂ.ಎ,ಪಿಎಚ್.ಡಿ, ಸಾಮಾಜಿಕ ವರ್ಗವಾರು ವಿದ್ಯಾರ್ಥಿಗಳ ಸಂಖ್ಯೆ

೨. NETJRF, NFSC, NFST, NFOBC, NF Disability ಇತ್ಯಾದಿ ಫೆಲೋಶಿಪ್‌ ಪಡೆಯುವ ವಿದ್ಯಾರ್ಥಿಗಳ ವಿವರಗಳು

೩. ಹಳೆಯ ವಿದ್ಯಾರ್ಥಿಗಳ ಸಂಘ

ವಿಭಾಗದ ಪ್ರಮುಖ ಕೊಡುಗೆಗಳು

➣ ರಾಜ್ಯವಾರು ಮತ್ತು ಜಿಲ್ಲಾವಾರು ಗ್ರಾಮಗಳ ಸಮೀಕ್ಷೆಯನ್ನು ಕೈಕೊಂಡು ನವಶೋಧಿತ ಶಿಲಾಶಾಸನಗಳನ್ನು ಸಂಗ್ರಹಿಸಿ ಶಾಸನಗಳ ಸಂಪುಟಗಳನ್ನು ಪ್ರಕಟಿಸುವ ಹಾಗೂ ಪರಿಷ್ಕರೀಸುವ ಗುರಿಯನ್ನು ವಿಭಾಗವು ಹೊಂದಿದೆ.
➣ ಇತರ ಇತಿಹಾಸಕಾರರಿಗೆ ಮಾಹಿತಿ ಮೂಲ ಒದಗಿಸಲು ಮತ್ತು ಈ ಕ್ಷೇತ್ರದಲ್ಲಿ ಹೊಸ ಸಂಶೋಧಕರಿಗೆ ತರಬೇತಿ ಮತ್ತು ಮಾರ್ಗದರ್ಶನವನ್ನು ನೀಡಲಾಗುವುದು.

ವಿಭಾಗದ ಚಟುವಟಿಕೆಗಳು

೧. ವಿಭಾಗವು ಆಯೋಜಿಸಿದ ಕಾರ್ಯಾಗಾರ/ಕಮ್ಮಟಗಳ ವಿವರಗಳು/ವಿಚಾರ ಸಂಕಿರಣ/ದತ್ತಿ ಉಪನ್ಯಾಸ

೨. Alumni Meet

೩.MOU ವಿವರ

೪.ಇತರೇ ಚಟುವಟಿಕೆಗಳು

ಪ್ರಶಸ್ತಿಗಳು/ಗೌರವ ಪುರಸ್ಕಾರಗಳು (ಸಿಬ್ಬಂದಿ ಮತ್ತು ವಿದ್ಯಾರ್ಥಿಗಳಿಗೆ)
೧. ಸುರಪುರದ ಸ್ವಾತಂತ್ರ್ಯ ಸೇನಾನಿ ನಾಲ್ವಡಿ ವೆಂಕಟಪ್ಪ ನಾಯಕ ಪ್ರಶಸ್ತಿ (ಸಂಶೋಧನಾ ಕ್ಷೇತ್ರ- ಚಾರಿತ್ರಿಕ ಸುರಪುರ-ಅಧ್ಯಯನಾತ್ಮಕ ನೋಟಗಳು ಕೃತಿಗೆ) ಬಲವಂತ ಬಹರಿ ಬಹದ್ದೂರ ಸಂಸ್ಥಾನ,
ಸುರಪುರ, ಯಾದಗಿರಿ ಜಿಲ್ಲೆ, ೨೦೨೦.
೨. ಉತ್ತಮ ಸಂಶೋಧಕ ರಾಷ್ಟ್ರೀಯ ಪ್ರಶಸ್ತಿ (ಸಂಶೋಧನಾ ಕ್ಷೇತ್ರ), ಬಹುಜನ ಸಾಹಿತ್ಯ ಅಕಾಡೆಮಿ, ಹೈದ್ರಾಬಾದ್, ತೆಲಂಗಾಣ ರಾಜ್ಯ, ೨೦೨೧.
೩. ಪುಸ್ತಕ ಸೊಗಸು ಬಹಮಾನ ಪ್ರಶಸ್ತಿ, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು, ೨೦೨೧.
೪. ನಾಯಕಶ್ರೀ ಪ್ರಶಸ್ತಿ, ಕರ್ನಾಟಕ ಇತಿಹಾಸ ಅಕಾದೆಮಿ (ರಿ.), ಬೆಂಗಳೂರು, ೨೦೨೨.
೫. ಶಿವಶ್ರೀ ಪ್ರಶಸ್ತಿ, ನ್ಯಾಯಮೂರ್ತಿ ಡಾ. ಶಿವರಾಜ ವಿ. ಪಾಟೀಲ ಪ್ರತಿಷ್ಠಾನ (ರಿ.), ರಾಯಚೂರು, ೨೦೨೨.
೬. ಶ್ರೀಸಿದ್ಧ ಸಾಹಿತ್ಯ ಪುರಸ್ಕಾರ, ಶ್ರೀಸಿದ್ಧಸಂಪದ ಚಾರಿಟೇಬಲ್ ಟ್ರಸ್ಟ್, ಯಾದಗಿರಿ ಜಿಲ್ಲೆ, ೨೦೨೨.
೭. ಡಾ. ಎಚ್.ಎನ್. ಪ್ರಶಸ್ತಿ, ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು, ಬೆಂಗಳೂರು, ೨೦೨೨.
೮. ಬೆಳ್ಳಿ ಸಂಭ್ರಮ ಪುಸ್ತಕ ಪ್ರಶಸ್ತಿ, ದಲಿತ ಸಾಹಿತ್ಯ ಪರಿಷತ್ತು (ರಿ.) ರಾಜ್ಯ ಘಟಕ, ಗದಗ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು, ೨೦೨೩

ಪ್ರಮುಖ ಪುಸ್ತಕಗಳು

ಅಧ್ಯಾಪಕರ ವಿವರಗಳು

John

ಅಮರೇಶ ಯತಗಲ್
ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು
ಮೊಬೈಲ್ : ೯೪೪೮೫೭೧೫೬೩
ಇಮೇಲ್ : doctoramareshyatagal@gmail.com
ವಿದ್ಯಾರ್ಹತೆ: ಎಂ.ಎ.,ಎಂ.ಎಡ್., ಪಿಎಚ್.ಡಿ.

 

ನಿವೃತ್ತ ಪ್ರಾಧ್ಯಾಪಕರು
೧. ಡಾ.ಕೆ.ಜಿ. ಭಟ್‌ಸೂರಿ
೨. ಡಾ. ಕಲವೀರ ಮನ್ವಾಚಾರ್

ಸಂಪರ್ಕ

ಡಾ. ಅಮರೇಶ ಯತಗಲ್
ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು
ಶಾಸನಶಾಸ್ತ್ರ ವಿಭಾಗ
ಕನ್ನಡ ವಿಶ್ವವಿದ್ಯಾಲಯ, ಹಂಪಿ
ವಿದ್ಯಾರಣ್ಯ – ೫೮೩೨೭೬
ಮೊಬೈಲ್: ೯೪೪೮೫೭೧೫೬೩
ಇಮೇಲ್ ವಿಳಾಸ : doctoramareshyatagal@gmail.com