ವಿಭಾಗದ ಪರಿಚಯ
ಕನ್ನಡ ವಿಶ್ವವಿದ್ಯಾಲಯದಲ್ಲಿ ಮಾನವಶಾಸ್ತ್ರ ವಿಭಾಗವನ್ನು ೨೦೦೫ರಲ್ಲಿ ಸ್ಥಾಪಿಸಲಾಗಿದೆ. ಮಾನವಶಾಸ್ತ್ರವು ಎಲ್ಲ ವಿಷಯಗಳ ತಾಯಿ ಇದ್ದಂತೆ. ಉದಾ: ಜಾನಪದ, ಸಮಾಜಶಾಸ್ತ್ರ, ಚರಿತ್ರೆ, ಬುಡಕಟ್ಟು, ಪುರಾತತ್ವ, ಕನ್ನಡ, ಅಭಿವೃದ್ಧಿ ಇತ್ಯಾದಿ ವಿಷಯಗಳ ಮೂಲ ಎಂದರೆ ಮಾನವಶಾಸ್ತ್ರ. ಹಾಗಾಗಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಮಾನವಶಾಸ್ತ್ರ ವಿಭಾಗವನ್ನು ಸ್ಥಾಪಿಸಿದ್ದು ಸಾರ್ಥಕವಾದ ಕೆಲಸ ಎನ್ನಬಹುದಾಗಿದೆ. ಏಕೆಂದರೆ ಕುಲಶಾಸ್ತ್ರೀಯ ಅಧ್ಯಯನ ಮಾಡಲು ಮಾನವಶಾಸ್ತ್ರದ ಮೊರೆ ಹೋಗಬೇಕಾಗುತ್ತದೆ. ಈಗಾಗಲೇ ಕರ್ನಾಟಕದ ಬೇರೆ ಬೇರೆ ವಿಶ್ವವಿದ್ಯಾಲಯಗಳಲ್ಲಿ ಮಾನವಶಾಸ್ತ್ರ ವಿಭಾಗಗಳನ್ನು ಸ್ಥಾಪಿಸಲಾಗಿದೆ. ಹಾಗಾಗಿ ಮಾನವಶಾಸ್ತ್ರ, ಸಮಾಜಶಾಸ್ತ್ರೀಯ, ಸಮಾಜಶಾಸ್ತ್ರದ ಬಗ್ಗೆ ಎಂ.ಫಿಲ್ ಮತ್ತು ಪಿಎಚ್.ಡಿ. ಸಂಶೋಧನೆ ಮಾಡುವ ವಿದ್ಯಾರ್ಥಿಗಳಿಗೆ ಈ ವಿಭಾಗ ನೆರವಾಗಲಿದೆ. ಹಲವಾರು ಉತ್ತಮ ಕೆಲಸಗಳು ಈ ವಿಭಾಗದಿಂದ ನಡೆದಿವೆ..
ದೃಷ್ಟಿಕೋನ(ವಿಶನ್)
➣ ಮಾನವಶಾಸ್ತ್ರ ವಿಭಾಗದ ದೂರದೃಷ್ಟಿ ಮತತು ಧ್ಯೇಯವೆಂದರೆ “ಮಾನವ ವಿಶ್ವಕೋಶ”ದಂತ ಬೃಹತ್ ಗ್ರಂಥವನ್ನು ಹೊರತರುವುದಾಗಿದೆ. ಈಗಾಗಲೇ ಈ ಬಗ್ಗೆ ನಾಲ್ಕಾರು ಸಭೆಗಳಾಗಿವೆ. ನುರಿತ ಹಿರಿಯ ವಿದ್ವಾಂಸರು ಪಾಲ್ಗೊಂಡು ಸಲಹೆ-ಸೂಚನೆಗಳನ್ನು ನೀಡಿದ್ದಾರೆ.
ಅನನ್ಯತೆ
➣ ಕನ್ನಡ ವಿಶ್ವವಿದ್ಯಾಲಯದಲ್ಲಿ ಮಾನವಶಾಸ್ತ್ರ ವಿಭಾಗವು ಹಲವಾರು ಹಿರಿಯ ಮಾನವಶಾಸ್ತ್ರ ವಿದ್ವಾಂಸರ ಮೆಚ್ಚುಗೆಗೆ ಪಾತ್ರವಾಗಿದೆ. ವಿಚಾರ ಸಂಕಿರಣಗಳನ್ನು ಹಮ್ಮಿಕೊಳ್ಳುವುದರ ಮೂಲಕ ಬೇರೆ, ಬೇರೆ ಮಾನವಶಾಸ್ತ್ರಜ್ಞರ ಬಾಂಧವ್ಯದಿಂದ ಕನ್ನಡ ವಿಶ್ವವಿದ್ಯಾಲಯದ ಮಾನವಶಾಸ್ತ್ರ ವಿಭಾಗವು ತನ್ನದೇ ಆದ ಅನನ್ಯತೆಯನ್ನು ಪಡೆದುಕೊಂಡಿದೆ.
ವಿಭಾಗದ ಶೈಕ್ಷಣಿಕ ಕಾರ್ಯಕ್ರಮಗಳು
ಕನ್ನಡ ವಿಶ್ವವಿದ್ಯಾಲಯದ ಮಾನವಶಾಸ್ತ್ರ ವಿಭಾಗವು ಪಿಎಚ್.ಡಿ. ಸಂಶೋಧನಾರ್ಥಿಗಳಿಗೆ ಅವಕಾಶವನ್ನು ಮಾಡಿಕೊಟ್ಟಿದೆ. ಈಗಾಗಲೇ ಹಲವಾರು ವಿದ್ಯಾರ್ಥಿಗಳು ಪಿಎಚ್.ಡಿ. ಪದವಿಯನ್ನು ಪಡೆದುಕೊಂಡಿದ್ದಾರೆ. ಅದೇ ರೀತಿ ಮಾನವಶಾಸ್ತ್ರ ಡಿಪ್ಲೊಮಾ ಕೋರ್ಸ್ ಮೂಲಕ ಹಲವಾರು ವಿದ್ಯಾರ್ಥಿಗಳು ಮಾನವಶಾಸ್ತ್ರ ಡಿಪ್ಲೊಮಾ ಮೂಲಕ ತೇರ್ಗಡೆ ಹೊಂದಿದ್ದಾರೆ.
೧. ಮಾನವಶಾಸ್ತ್ರದಲ್ಲಿ ಪಿಎಚ್.ಡಿ.
೨. ಮಾನವಶಾಸ್ತ್ರದಲ್ಲಿ ಡಿಪ್ಲೊಮಾ
ವಿಭಾಗದ ಪ್ರೊಫೈಲ್
ವಿದ್ಯಾರ್ಥಿಗಳ ವಿವರಗಳು
I) ಮಾನವಶಾಸ್ತ್ರ ವಿಭಾಗದ ಪಿಎಚ್.ಡಿ., ಎಂ.ಫಿಲ್, ಎಂ.ಎ,ಪಿಎಚ್.ಡಿ, ಸಾಮಾಜಿಕ ವರ್ಗವಾರು ವಿದ್ಯಾರ್ಥಿಗಳ ಸಂಖ್ಯೆ
೧. ಉಷಾ ಜಿ, ಪಿಎಚ್.ಡಿ. ವಿಷಯ : “ಚಿತ್ರದುರ್ಗ ಮುರುಘಾಮಠದ ಸಮಾಜಮುಖಿ ಕಾರ್ಯಗಳು ಒಂದು ಅಧ್ಯಯನ”, ೨ಎ, ಬಾಹ್ಯ ವಿದ್ಯಾರ್ಥಿನಿ
೨. ಮಹೇಶ ಕೆ.ಎಂ., ಪಿಎಚ್.ಡಿ. ವಿಷಯ : “ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಕೊಡುಗೆಗಳು ಒಂದು ಅಧ್ಯಯನ”, ೩ಎ, ಬಾಹ್ಯ ವಿದ್ಯಾರ್ಥಿನಿ
II) NETJRF, NFSC, NFST, NFOBC, NF Disability ಇತ್ಯಾದಿ ಫೆಲೋಶಿಪ್ ಪಡೆಯುವ ವಿದ್ಯಾರ್ಥಿಗಳ ವಿವರಗಳು
III) ಹಳೆಯ ವಿದ್ಯಾರ್ಥಿಗಳ ಸಂಘ
ವಿಭಾಗದ ಪ್ರಮುಖ ಕೊಡುಗೆಗಳು
➣ ಮಾನವಶಾಸ್ತ್ರ ವಿಭಾಗದಿಂದ “ಮಾನವ ವಿಶ್ವಕೋಶ” ಹೊರ ತುರುವುದು. ಈಗಾಗಲೇ ಇದಕ್ಕೆ ಸಂಬಂಧಿಸಿದಂತೆ ಸಭೆಗಳು ನಡೆಯುತ್ತಿವೆ. ಅಲ್ಲದೇ ಹಲವಾರು ವಿದ್ಯಾರ್ಥಿಗಳು ಎಂ.ಫಿಲ್ ಮತ್ತು ಪಿಎಚ್.ಡಿ. ಮಾನವಶಾಸ್ತ್ರದ ಡಿಪ್ಲೊಮಾ ಪದವಿಯನ್ನು ಪಡೆದಿರುತ್ತಾರೆ. ಇನ್ನು ಕೆಲವು ವಿದ್ಯಾರ್ಥಿಗಳು ಪಿಎಚ್.ಡಿ. ಸಂಶೋಧನೆಯಲ್ಲಿ ನಿರತರಾಗಿದ್ದಾರೆ. ಮಾನವಶಾಸ್ತ್ರ ವಿಭಾಗದಿಂದ ರಾಜ್ಯ ಮತ್ತು ರಾಷ್ಟ್ರೀಯ ವಿಚಾರ ಸಂಕಿರಣಗಳು ನಡೆದಿವೆ. ಈ ವಿಭಾಗದಿಂದ ಅಂಡಮಾನ್-ನಿಕೋಬಾರ್ನಲ್ಲಿ ಕೂಡ ರಾಷ್ಟ್ರಮಟ್ಟದ ವಿಚಾರ ಸಂಕಿರಣವನ್ನು ಸಂಘಟಿಸಲಾಗಿದೆ. ಕೆಲವು ಕುಲಶಾಸ್ತ್ರೀಯ ಅಧ್ಯಯನಗಳು ಕೂಡ ನಡೆದಿವೆ. ಇವು ಮಾನವಶಾಸ್ತ್ರ ವಿಭಾಗದ ಪ್ರಮುಖವಾದ ಕೊಡುಗೆಗಳಾಗಿವೆ..
ವಿಭಾಗದ ಚಟುವಟಿಕೆಗಳು
೧. ವಿಭಾಗವು ಆಯೋಜಿಸಿದ ಕಾರ್ಯಾಗಾರ/ಕಮ್ಮಟಗಳ ವಿವರಗಳು/ವಿಚಾರ ಸಂಕಿರಣ/ದತ್ತಿ ಉಪನ್ಯಾಸ
೨. Alumni Meet
೩.MOU ವಿವರ
೪.ಇತರೇ ಚಟುವಟಿಕೆಗಳು
ಪ್ರಮುಖ ಪುಸ್ತಕಗಳು
“ಮಾನವ ವಿಶ್ವಕೋಶ” ಪ್ರಕಟಣೆಯ ಹಂತದಲ್ಲಿದೆ
ವಿಭಾಗದ ಸಂಶೋಧನೆ
೧. ವಿಭಾಗದಲ್ಲಿ ಕೈಗೊಂಡ ಪ್ರಮುಖ ಸಂಶೋಧನಾ ಯೋಜನೆಗಳು
ಸಾಂಸ್ಥಿಕ ಯೋಜನೆ
– ಮಾನವ ವಿಶ್ವಕೋಶ ಪ್ರಕಟಣೆಯ ಹಂತದಲ್ಲಿದೆ.
ಡಾ.ತಾರಿಹಳ್ಳಿ ಹನುಮಂತಪ್ಪ ಅವರ ವೈಯಕ್ತಿಕ ಯೋಜನೆಗಳು
• ಅವ್ವಣೆವ್ವ ಕಾವ್ಯ
• ಹೊಸೂರಮ್ಮ
• ಕರ್ನಾಟಕದ ಬುಡಕಟ್ಟು ಸಮುದಾಯಗಳು
• ಮಾನವ ಮತ್ತು ಸಾಂಸ್ಕೃತಿಕ ಪಲ್ಲಟಗಳು
• ನಾಯಕರ ಮಹಾಸಂಸ್ಥಾನ, ಸುರಪುರ
• ಕನಕಗಿರಿ ನಾಯಕರು
• ಕಮಲಾಪುರ ಬೇಡ ನಾಯಕರ ಸಾಮಾಜಿಕ ಮತ್ತು ಸಾಂಸ್ಕೃತಿಕ ಬದಲಾವಣೆಗಳು
• ಹೈದ್ರಾಬಾದ್ ಕರ್ನಾಟಕದ ಕೃಷಿ ಆಚರಣೆಗಳು
• ಕರ್ನಾಟಕದ ಉಗ್ರ ಆಚರಣೆಗಳು
– ಈ ಎಲ್ಲಾ ಪುಸ್ತಕಗಳು ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿಯಿಂದ ಪ್ರಕಟಗೊಂಡಿವೆ
• ವಾಲ್ಮೀಕಿ ಸಂಪದ – ಶ್ರೀ ವಾಲ್ಮೀಕಿ ಮಹಾಸಂಸ್ಥಾನ, ರಾಜನಹಳ್ಳಿ ಹರಿಹರ ತಾಲೂಕು (ಸಂಪಾದಕರು: ಡಾ.ಮಂಜುನಾಥ ಬೇವಿನಕಟ್ಟಿ ಮತ್ತು ಡಾ.ತಾರಿಹಳ್ಳಿ ಹನುಮಂತಪ್ಪ)
ಡಾ.ಎಲ್.ಶ್ರೀನಿವಾಸ ಅವರ ವೈಯಕ್ತಿಕ ಯೋಜನೆಗಳು
• ಹಂಪಿ ಪರಿಸರದ ಆದಿಮಾನವ ನೆಲೆಗಳು
• ಕರ್ನಾಟಕ ರಾಜ್ಯ ಗಂಗಾಮತ ಹಾಗೂ ಅದರ ಉಪಜಾತಿಗಳ ಕುಲಶಾಸ್ತ್ರೀಯ ಅಧ್ಯಯನ
• ತೋಡ ಆದಿವಾಸಿಗಳು
• ಕರ್ನಾಟಕದ ಗಂಗಾಮತ ಹಾಗೂ ಅದರ ಪರ್ಯಾಯ ಪದ ಸಮುದಾಯಗಳ ಕುಲಶಾಸ್ತ್ರೀಯ ಅಧ್ಯಯನ
• ಕರ್ನಾಟಕದ ಕೋಟೆಗಾರ ಸಮಾಜ ಮತ್ತು ಸಂಸ್ಕೃತಿ
• ಕರ್ನಾಟಕದ ಹಂದಿಗೊಲ್ಲ ಹಾಗೂ ಹಂದಿಚಿಕ್ಕ ಪರ್ಯಾಯ ಪದ ಸಮುದಾಯಗಳ ಕುಲಶಾಸ್ತ್ರೀಯ ಅಧ್ಯಯನ.
• ಕರ್ನಾಟಕದ ಪ್ರಾಚೀನ ಬುಡಕಟ್ಟು ಸಮುದಾಯಗಳ ಸಮಸ್ಯೆಗಳು.
• ಕರ್ನಾಟಕದ ಪಿಚ್ಚುಗುಂಟ್ಲು, ಹೆಳವ ಸಮುದಾಯದ ಕುಲಶಾಸ್ತ್ರೀಯ ಅಧ್ಯಯನ
• ಮಾನವಶಾಸ್ತ್ರದ ಮೂಲಾಂಶಗಳು
• ಕರ್ನಾಟಕ ರಾಜ್ಯ ಸವಿತಾ ಸಮಾಜದ ಕುಲಶಾಸ್ತ್ರೀಯ ಅಧ್ಯಯನ
ಅಧ್ಯಾಪಕರ ವಿವರಗಳು
ಸಂಪರ್ಕ
ಡಾ. ತಾರಿಹಳ್ಳಿ ಹನುಮಂತಪ್ಪ
ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರು
ಮಾನವಶಾಸ್ತ್ರ ವಿಭಾಗ
ಕನ್ನಡ ವಿಶ್ವವಿದ್ಯಾಲಯ, ಹಂಪಿ
ವಿದ್ಯಾರಣ್ಯ- ೫೮೩೨೭೬
ಮೊಬೈಲ್: ೯೪೪೯೬೩೦೬೦೬
ಇಮೇಲ್ ವಿಳಾಸ : drtarihalli@gmail.com