ವಿಭಾಗದ ಪರಿಚಯ
ಕನ್ನಡ ವಿಶ್ವವಿದ್ಯಾಲಯದಲ್ಲಿ ನಾಟಕ ವಿಭಾಗವನ್ನು ನವೆಂಬರ್ ೨೦೧೬ರಲ್ಲಿ ಸ್ಥಾಪಿಸಲಾಯಿತು. ಕಾರಣವೇನೆಂದರೆ ಬಳ್ಳಾರಿ ಜಿಲ್ಲೆ ದೊಡ್ಡಾಟ, ನಾಟಕ, ಬಯಲಾಟ ಇತ್ಯಾದಿ ಕಲೆಗಳಿಗೆ ಹೆಸರುವಾಸಿಯಾದ ಜಿಲ್ಲೆಯಾಗಿರುವುದರಿಂದ ಈ ಜಿಲ್ಲೆಯಲ್ಲಿ ಕನ್ನಡ ವಿಶ್ವವಿದ್ಯಾಲಯ ಬರುವುದರಿಂದ ಈ ವಿಭಾಗವನ್ನು ಸ್ಥಾಪಿಸಲಾಗಿದೆ. ಈಗ ಬಳ್ಳಾರಿ ಜಿಲ್ಲೆಯಿಂದ ಪ್ರತ್ಯೇಕವಾಗಿ ವಿಜಯನಗರ ಜಿಲ್ಲೆ ಅಸ್ತಿತ್ವಕ್ಕೆ ಬಂದಿದೆ. ಕನ್ನಡ ವಿಶ್ವವಿದ್ಯಾಲಯದ ನಾಟಕ ವಿಭಾಗದಿಂದ ಹಲವಾರು ನಾಟಕಗಳನ್ನು ಪ್ರಯೋಗ ಮಾಡುವುದರ ಮೂಲಕ, ವಿಚಾರ ಸಂಕಿರಣಗಳನ್ನು ಹಮ್ಮಿಕೊಳ್ಳುವುದರ ಮೂಲಕ, ಯೋಜನೆಗಳನ್ನು ಹಮ್ಮಿಕೊಳ್ಳುವುದರ ಮೂಲಕ ಈ ವಿಭಾಗವನ್ನು ಕಟ್ಟಲಾಗಿದೆ.
ದೂರದೃಷ್ಟಿ ಮತ್ತು ಧ್ಯೇಯ
➣ ಕನ್ನಡ ವಿಶ್ವವಿದ್ಯಾಲಯದಲ್ಲಿ ನಾಟಕ ವಿಭಾಗ ಇರುವುದರಿಂದ ಹವ್ಯಾಸಿ ಕಲಾವಿದರಿಂದ ಹಲವಾರು ನಾಟಕಗಳನ್ನು ಪ್ರಯೋಗಿಸಲಾಗಿದೆ.
➣ ಹಾಗೆಯೇ ಪ್ರತಿ ವರ್ಷ ನಿನಾಸಂ ಅವರ ತಿರುಗಾಟದಿಂದ ಅವರಿಂದಲೂ ಕೂಡ ನಾಟಕಗಳನ್ನು ಪ್ರಯೋಗಿಸಲಾಗಿದೆ. ದೊಡ್ಡಾಟ, ಬಯಲಾಟ ನಾಟಕಕ್ಕೆ ಮಾತ್ರ ಹೆಚ್ಚಿನ ಒತ್ತನ್ನು ನೀಡಲಾಗಿದೆ.
ಅನನ್ಯತೆ
➣ ಕನ್ನಡ ವಿಶ್ವವಿದ್ಯಾಲಯದಲ್ಲಿ ನಾಟಕ ವಿಭಾಗವನ್ನು ಸ್ಥಾಪನೆ ಮಾಡುವುದರ ಮೂಲಕ ಹಲವಾರು ನಾಟಕ ಕಲಾವಿದರು ರಂಗಕಲಾವಿದರು, ಹವ್ಯಾಸಿ ನಾಟಕ ಕಲಾವಿದರು ಬಂದು ಹೋಗುವ ಒಂದು ಸಂಬಂಧ
ಈ ನಾಟಕ ವಿಭಾಗದಿಂದ ತನ್ನದೇ ಆದಂತ ಅನನ್ಯತೆಯನ್ನು ಪಡೆದುಕೊಂಡಿದೆ.
ವಿಭಾಗದ ಪ್ರಮುಖ ಶೈಕ್ಷಣಿಕ ಕಾರ್ಯಕ್ರಮಗಳು
ವಿಭಾಗದ ಪ್ರೊಫೈಲ್
ವಿದ್ಯಾರ್ಥಿಗಳ ವಿವರಗಳು
ವಿಭಾಗದ ಪ್ರಮುಖ ಕೊಡುಗೆಗಳು
➣ ನೀನಾಸಂ ಅವರಿಂದ ತಿರುಗಾಟ ನಾಟಕದ ಪ್ರಯುಕ್ತ ಪ್ರತಿವರ್ಷ ಎರಡು ನಾಟಕಗಳು ಕನ್ನಡ ವಿಶ್ವವಿದ್ಯಾಲಯದಲ್ಲಿ ಜರುಗುತ್ತಿವೆ.
➣ ಬೀದಿ ನಾಟಕ ಪ್ರದರ್ಶನಗಳು ಕೂಡ ನಡೆಸಲಾಗಿದೆ.
➣ ವಿಶ್ವರಂಗ ದಿನಾಚರಣೆಯನ್ನು ಕನ್ನಡ ವಿಶ್ವವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದೆ.
➣ ಪ್ರತಿ ಬೆಳದಿಂಗಳ ಹುಣ್ಣಿಮೆಯಲ್ಲಿ ತಿಂಗಳ ಹುಣ್ಣಿಮೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
➣ ಪ್ರಮಖವಾಗಿ ಗೊಂದಲಿಗರ ತಂಡದಿಂದ ತಿಂಗಳ ಹುಣ್ಣಿಮೆ ಕಾರ್ಯಕ್ರಮವನ್ನು ನಡೆಸಲಾಗಿದೆ.
➣ ನಾಟಕ ವಿಭಾಗದಿಂದ ಬಯಲಾಟೋತ್ಸವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
➣ ನಾಟಕ ವಿಭಾಗದಿಂದ ಹಲವಾರು ನಾಟಕ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗದೆ
ವಿಭಾಗದ ಚಟುವಟಿಕೆಗಳು
೧. ವಿಭಾಗವು ಆಯೋಜಿಸಿದ ಕಾರ್ಯಾಗಾರ/ಕಮ್ಮಟಗಳ ವಿವರಗಳು/ವಿಚಾರ ಸಂಕಿರಣ/ದತ್ತಿ ಉಪನ್ಯಾಸ
➣ ಕನ್ನಡ ವಿಶ್ವವಿದ್ಯಾಲಯದ ನಾಟಕ ವಿಭಾಗದಿಂದ ಸೂಫಿ ಪರಂಪರೆ ರಾಷ್ಟ್ರಮಟ್ಟದ ವಿಚಾರ ಸಂಕಿರಣವನ್ನು ೨೪-೩-೨೦೧೭ರಲ್ಲಿ ಕನ್ನಡ ವಿಶ್ವವಿದ್ಯಾಲಯದ ಭುವನ ವಿಜಯದಲ್ಲಿ ಹಮ್ಮಿಕೊಳ್ಳಲಾಗಿದೆ.
➣ ಬಯಲಾಟೋತ್ಸವ ವಿಚಾರ ಸಂಕಿರಣವನ್ನು ೧೯-೭-೨೦೧೭ರಲ್ಲಿ ಹಮ್ಮಿಕೊಳ್ಳಲಾಗಿದೆ.
೨. Alumni Meet
೩.MOU ವಿವರ
೪.ಇತರೇ ಚಟುವಟಿಕೆಗಳು
ಪ್ರಮುಖ ಪುಸ್ತಕಗಳು
ವಿಭಾಗದ ಸಂಶೋಧನೆ
ಅಧ್ಯಾಪಕರ ವಿವರಗಳು
ಸಂಪರ್ಕ
ಡಾ.ವೀರೇಶ ಬಡಿಗೇರ
ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು
ನಾಟಕ ವಿಭಾಗ
ಕನ್ನಡ ವಿಶ್ವವಿದ್ಯಾಲಯ, ಹಂಪಿ
ವಿದ್ಯಾರಣ್ಯ- ೫೮೩೨೭೬
ಮೊಬೈಲ್: ೯೪೪೮೮೪೫೭೮೯
ಇಮೇಲ್ ವಿಳಾಸ : vsbadiger172@gmail.com