kannada-translation-studies











ವಿಭಾಗದ ಪರಿಚಯ

ಕನ್ನಡ ವಿಶ್ವವಿದ್ಯಾಲಯದಲ್ಲಿ ನಾಟಕ ವಿಭಾಗವನ್ನು ನವೆಂಬರ್ ೨೦೧೬ರಲ್ಲಿ ಸ್ಥಾಪಿಸಲಾಯಿತು. ಕಾರಣವೇನೆಂದರೆ ಬಳ್ಳಾರಿ ಜಿಲ್ಲೆ ದೊಡ್ಡಾಟ, ನಾಟಕ, ಬಯಲಾಟ ಇತ್ಯಾದಿ ಕಲೆಗಳಿಗೆ ಹೆಸರುವಾಸಿಯಾದ ಜಿಲ್ಲೆಯಾಗಿರುವುದರಿಂದ ಈ ಜಿಲ್ಲೆಯಲ್ಲಿ ಕನ್ನಡ ವಿಶ್ವವಿದ್ಯಾಲಯ ಬರುವುದರಿಂದ ಈ ವಿಭಾಗವನ್ನು ಸ್ಥಾಪಿಸಲಾಗಿದೆ. ಈಗ ಬಳ್ಳಾರಿ ಜಿಲ್ಲೆಯಿಂದ ಪ್ರತ್ಯೇಕವಾಗಿ ವಿಜಯನಗರ ಜಿಲ್ಲೆ ಅಸ್ತಿತ್ವಕ್ಕೆ ಬಂದಿದೆ. ಕನ್ನಡ ವಿಶ್ವವಿದ್ಯಾಲಯದ ನಾಟಕ ವಿಭಾಗದಿಂದ ಹಲವಾರು ನಾಟಕಗಳನ್ನು ಪ್ರಯೋಗ ಮಾಡುವುದರ ಮೂಲಕ, ವಿಚಾರ ಸಂಕಿರಣಗಳನ್ನು ಹಮ್ಮಿಕೊಳ್ಳುವುದರ ಮೂಲಕ, ಯೋಜನೆಗಳನ್ನು ಹಮ್ಮಿಕೊಳ್ಳುವುದರ ಮೂಲಕ ಈ ವಿಭಾಗವನ್ನು ಕಟ್ಟಲಾಗಿದೆ.
ದೂರದೃಷ್ಟಿ ಮತ್ತು ಧ್ಯೇಯ
➣ ಕನ್ನಡ ವಿಶ್ವವಿದ್ಯಾಲಯದಲ್ಲಿ ನಾಟಕ ವಿಭಾಗ ಇರುವುದರಿಂದ ಹವ್ಯಾಸಿ ಕಲಾವಿದರಿಂದ ಹಲವಾರು ನಾಟಕಗಳನ್ನು ಪ್ರಯೋಗಿಸಲಾಗಿದೆ.
➣ ಹಾಗೆಯೇ ಪ್ರತಿ ವರ್ಷ ನಿನಾಸಂ ಅವರ ತಿರುಗಾಟದಿಂದ ಅವರಿಂದಲೂ ಕೂಡ ನಾಟಕಗಳನ್ನು ಪ್ರಯೋಗಿಸಲಾಗಿದೆ. ದೊಡ್ಡಾಟ, ಬಯಲಾಟ ನಾಟಕಕ್ಕೆ ಮಾತ್ರ ಹೆಚ್ಚಿನ ಒತ್ತನ್ನು ನೀಡಲಾಗಿದೆ.
ಅನನ್ಯತೆ
➣ ಕನ್ನಡ ವಿಶ್ವವಿದ್ಯಾಲಯದಲ್ಲಿ ನಾಟಕ ವಿಭಾಗವನ್ನು ಸ್ಥಾಪನೆ ಮಾಡುವುದರ ಮೂಲಕ ಹಲವಾರು ನಾಟಕ ಕಲಾವಿದರು ರಂಗಕಲಾವಿದರು, ಹವ್ಯಾಸಿ ನಾಟಕ ಕಲಾವಿದರು ಬಂದು ಹೋಗುವ ಒಂದು ಸಂಬಂಧ
ಈ ನಾಟಕ ವಿಭಾಗದಿಂದ ತನ್ನದೇ ಆದಂತ ಅನನ್ಯತೆಯನ್ನು ಪಡೆದುಕೊಂಡಿದೆ.