kannada-translation-studies











ವಿಭಾಗದ ಪರಿಚಯ

ಚರಿತ್ರೆ ವಿಭಾಗವು ಮುಖ್ಯವಾಗಿ ಮೂರು ಪ್ರಮುಖ ಶೈಕ್ಷಣಿಕ ಅಂಶಗಳ ಕುರಿತು ತೊಡಗಿಸಿಕೊಂಡಿದೆ.ಅವು; ೧.ಸಂಶೋಧನೆ ೨.ಬೋಧನಾ ಕಾರ್ಯ ಮತ್ತು ೩.ಪ್ರಚಲಿತದ ಶೈಕ್ಷಣಿಕ ವಿಷಯಗಳನ್ನು ಕುರಿತ ಸಂವಾದ. ಕರ್ನಾಟಕ ಚರಿತ್ರೆ ಬಗೆಗಿನ ವಿವಿಧ ಆಯಾಮಗಳನ್ನು ಕುರಿತು ಚರಿತ್ರೆ ವಿಭಾಗವು ಸಂಶೋಧನೆ ಕೈಗೊಳ್ಳುತ್ತಲಿದೆ.ವಿಭಾಗವು ಹಲವು ಪ್ರಮುಖವಾದ ಪ್ರಕಟಣೆಯ ಕಾರ್ಯಗಳನ್ನು ಪೂರೈಸಿದೆ. ಕರ್ನಾಟಕ ಚರಿತ್ರೆ 7 ಸಂಪುಟಗಳು, ಚರಿತ್ರೆ ವಿಶ್ವಕೋಶ, ಚರಿತ್ರೆ ಸಂಪುಟ ೮ ಸಂಪುಟಗಳು, ಏಕೀಕರಣೋತ್ತರ ಕರ್ನಾಟಕದ ಸಾಮಾಜಿಕ ಚಳವಳಿಗಳು ಎಂಬ ಚರಿತ್ರೆ ಸಂಶೋಧನೆಯ ವಿವಿಧ ವಿಷಯಗಳನ್ನು ಕುರಿತ ಪುಸ್ತಕ ಮಾಲೆ, ಕರ್ನಾಟಕದ ಸಂಸ್ಕೃತಿ ಚರಿತ್ರೆಗೆ ಸಂಬಂಧಿಸಿದ 5 ಕೃತಿಗಳು ಪ್ರಕಟಗೊಂಡಿವೆ. ವಿಭಾಗದ ಪ್ರಾಧ್ಯಾಪಕರು ತಮ್ಮ ಪರಿಣತಿಯ ಕ್ಷೇತ್ರಗಳಾದ ಅಸ್ಮಿತೆ, ಭಾಷೆ, ನಗರೀಕರಣ, ಬುಡಕಟ್ಟು ಮತ್ತು ದಲಿತ ಅಧ್ಯಯನಗಳಿಗೆ ಸಂಬಂಧಿಸಿದಂತೆ 51 ಪುಸ್ತಕಗಳನ್ನು ಪ್ರಕಟಿಸಿರುವರು.ಇದುವರೆಗೆ ವಿಭಾಗದ ವತಿಯಿಂದ 76 ಎಂ.ಫಿಲ್ ಮತ್ತು 56 ಪಿಎಚ್.ಡಿ.ಪದವಿಯನ್ನು ನೀಡಲಾಗಿದೆ. ಅಂತೆಯೇ ವಿಭಾಗವು ಬೋಧನೆ ಮತ್ತು ಸಂಶೋಧನಾ ಕಾರ್ಯಗಳನ್ನು ನಿರ್ವಹಿಸುತ್ತಿದೆ.
ವಿಭಾಗವು ಸಮಕಾಲೀನ ಶೈಕ್ಷಣಿಕ ಸಂವಾದಗಳಲ್ಲಿ ತನ್ನನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದೆ. ಇದನ್ನು ಈಡೇರಿಸುವ ಸಲುವಾಗಿ ಚರಿತ್ರೆ ವಿಧಾನ, ಚರಿತ್ರೆ ರಚನಾಶಾಸ್ತ್ರ, ಸ್ಥಳೀಯ ಮತ್ತು ಮೌಖಿಕ ಚರಿತ್ರೆ ಹಾಗೂ ಕರ್ನಾಟಕ ಇತ್ತೀಚಿನ ಬರವಣಿಗೆಗಳ ಕುರಿತಾದ ಕಾರ್ಯಾಗಾರ, ವಿಚಾರ ಸಂಕಿರಣ ಮತ್ತು ಸಮ್ಮೇಳನಗಳನ್ನು ಏರ್ಪಡಿಸುವುದು ವಿಭಾಗದ ಪ್ರಮುಖ ಉದ್ದೇಶವಾಗಿದೆ.
ವಿಭಾಗವು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪ್ರತಿಷ್ಠಿತ ಸಂಸ್ಥೆಗಳೊಂದಿಗೆ ಸಹಯೋಗವನ್ನು ಹೊಂದಿದೆ. ಅವು; ಭಾರತೀಯ ಇತಿಹಾಸ ಅನುಸಂಧಾನ ಪರಿಷತ್ತು(ಐಸಿಹೆಚ್ಆರ್), ಕಾಮನ್ವೆಲ್ತ್ ಆಯೋಗ ಯು.ಕೆ., ಪಾಂಡಿಚೇರಿಯ ಫ್ರೆಂಚ್ ಇನ್ಸ್ಟಿಟ್ಯೂಟ್, ಮೆಕ್ ಅರ್ಥರ್ ಫೌಂಡೇಶನ್ ಮತ್ತು ಯುನೆಸ್ಕೊ, ಡಿಎಸ್ಇಆರ್ಟಿ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಕರ್ನಾಟಕ ಸರ್ಕಾರ, ಆಡಳಿತ ಸುಧಾರಣಾ ಸಮಿತಿ ಭಾರತ ಸರ್ಕಾರ, ಕರ್ನಾಟಕ ಸರ್ಕಾರದ ಕರ್ನಾಟಕ ರಾಜ್ಯ ಪತ್ರಾಗಾರದ ಎಸ್ಸಿಎಸ್.ಪಿ-ಟಿಎಸ್ಪಿ ಕಾರ್ಯಕ್ರಮಗಳು ಇವೇ ಮುಂತಾದವು.

ದೃಷ್ಟಿಕೋನ(ವಿಶನ್)
➣ ಜ್ಞಾನ ವ್ಯವಸ್ಥೆಯನ್ನು ಅರ್ಥಮಾಡಿಕೊಳ್ಳಲು ಬೇಕಾದ ಸಮಗ್ರ ಜ್ಞಾನಶಾಸ್ತ್ರದ ಅರಿವನ್ನು ಸಂಶೋಧಕ ವಿದ್ಯಾರ್ಥಿಗಳಲ್ಲಿ ಹೆಚ್ಚಿಸಲು ಪ್ರಯತ್ನಿಸುವುದು. ಇದಕ್ಕೆ ದೇಶೀಯ ಮತ್ತು ಸಾಂಪ್ರದಾಯಿಕ ಜ್ಞಾನದ ನೆರವನ್ನು ಪಡೆದುಕೊಳ್ಳುವುದು.

➣ ವಿದ್ಯಾರ್ಥಿಗಳಿಗೆ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಶೋಷಣೆಗೊಳಗಾದ ಗ್ರಾಮೀಣ ಜನತೆ ವಿಶೇಷವಾಗಿ ದಲಿತ, ಬುಡಕಟ್ಟು, ಮಹಿಳೆ, ರೈತರ ಕುರಿತು ಸಂಶೋಧನೆಯನ್ನು ಕೈಗೊಳ್ಳಲು ಸಾಧ್ಯವಾಗುವಂತೆ ಮಾಡುವುದು.

➣ ಚರಿತ್ರೆ ರಚನೆಯ ವಿವಿಧ ಸೈದ್ಧಾಂತಿಕತೆಗಳನ್ನು ಅರ್ಥಮಾಡಿಕೊಳ್ಳಲು ಸಶಕ್ತಗೊಳಿಸುವುದು.
ಚರಿತ್ರೆಯ ಸಂಗತಿಗಳು ಮತ್ತು ಆಧಾರಗಳನ್ನು ವ್ಯಾಖ್ಯಾನಿಸಲು ಬೇಕಾದ ಕೌಶಲ್ಯವನ್ನು ಹೆಚ್ಚಿಸುವುದು. ಇದರಿಂದ ವಿದ್ಯಾರ್ಥಿಗಳು ಸಂಗತಿಗಳು ಮತ್ತು ವ್ಯಾಖ್ಯಾನಗಳ ಬಗ್ಗೆ ವಿಮರ್ಶಾತ್ಮಕ ಅರ್ಥಗ್ರಹಿಕೆಯನ್ನು ರೂಢಿಸಿಕೊಳ್ಳಬಹುದು.

➣ ಜನಚರಿತ್ರೆಯ ಪರಿಕಲ್ಪನೆಗಳಿಗೆ ಒತ್ತುನೀಡುವುದರ ಮೂಲಕ ಪ್ರಬಲ ಚರಿತ್ರೆ ಬರವಣಿಗೆ ಕುರಿತ ಪರಿಕಲ್ಪನೆಗಳನ್ನು ಪ್ರಶ್ನೆಗೊಳಪಡಿಲು ಸಾಧ್ಯವಾಗಿಸುವುದು.
ಸಂಶೋಧನಾ ಯೋಜನೆಯನ್ನು ಕೈಗೊಳ್ಳಲು ಕ್ಷೇತ್ರಕಾರ್ಯ ಮತ್ತು ಪತ್ರಾಗಾರಗಳಿಗೆ ಭೇಟಿ ನೀಡುವಂತೆ ಸಂಶೋಧಕರಿಗೆ ಪ್ರೋತ್ಸಾಹಿಸುವುದು. ಸಂಶೋಧನಾ ಕಾರ್ಯದ ಪ್ರಕಟಣೆಗೆ ವಿಶ್ವವಿದ್ಯಾಲಯದ ಪ್ರಕಾಶನ ವಿಭಾಗವಾದ ಪ್ರಸಾರಾಂಗದ ಮೂಲಕ ಒತ್ತುಕೊಡುವುದು.

ಗುರಿ(ಮಿಶನ್)
➣ ಸಂಶೋಧಕರು ತಮ್ಮ ಪ್ರತಿಭೆ ಮತ್ತು ಸೃಜನಶೀಲತೆಯನ್ನು ತೋರ್ಪಡಿಸಲು ಬೇಕಾದ ಅವಕಾಶವನ್ನು ಒದಗಿಸುವುದು.
➣ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ಉತ್ಕೃಷ್ಟತೆಯನ್ನು ವಿದ್ಯಾರ್ಥಿಗಳಲ್ಲಿ ತರಲು ಪ್ರಯತ್ನಿಸುವುದು ಮತ್ತು ಅವರನ್ನು ಉದ್ಯೋಗಿಗಳನ್ನಾಗಿಸುವುದು.
➣ ಸಂಶೋಧಕರು ಆದರ್ಶಯುತ ಮತ್ತು ನೈತಿಕ ಮೌಲ್ಯಗಳನ್ನು ರೂಢಿಸಿಕೊಳ್ಳಲು ಉತ್ತೇಜಿಸುವುದು.
➣ ಸಾಮಾಜಿಕವಾಗಿ ಹಿಂದುಳಿದ, ಕಲ್ಯಾಣ ಕರ್ನಾಟಕದ ಗ್ರಾಮೀಣ ಸಂಶೋಧಕರನ್ನು ಉನ್ನತೀಕರಿಸುವುದು. ಅದರಲ್ಲೂ ಹೆಣ್ಣುಮಕ್ಕಳಿಗೆ ಆದ್ಯತೆ ನೀಡುವುದು.
➣ ಉದ್ಯೋಗ ಕೌಶಲ್ಯವನ್ನು ರೂಢಿಸಿಕೊಳ್ಳಲು ಮತ್ತು ಸಂಶೋಧನಾ ಚಟುವಟಿಕೆಗಳನ್ನು ಕೈಗೊಳ್ಳಲು ನೆರವಾಗುವುದು.
➣ ಸಮಾಜ ವಿಜ್ಞಾನಗಳ ವಿಷಯದಲ್ಲಿ ಸಂಶೋಧನಾ ಚಟುವಟಿಕೆಗಳನ್ನು ಕೈಗೊಳ್ಳಲು ನೆರವಾಗುವುದು.

ವಿಭಾಗದ ಪ್ರಮುಖ ಶೈಕ್ಷಣಿಕ ಕಾರ್ಯಕ್ರಮಗಳು

* ಚರಿತ್ರೆ ಅಧ್ಯಯನದಲ್ಲಿ ಪಿಎಚ್.ಡಿ.
* ಚರಿತ್ರೆ ಅಧ್ಯಯನದಲ್ಲಿ ಎಂ.ಫಿಲ್

ವಿಭಾಗದ ಪ್ರೊಫೈಲ್

ವಿದ್ಯಾರ್ಥಿಗಳ ವಿವರಗಳು

 

೧. ಚರಿತ್ರೆ ವಿಭಾಗದ ಪಿಎಚ್.ಡಿ., ಎಂ.ಫಿಲ್, ಎಂ.ಎ,ಪಿಎಚ್.ಡಿ, ಸಾಮಾಜಿಕ ವರ್ಗವಾರು ವಿದ್ಯಾರ್ಥಿಗಳ ಸಂಖ್ಯೆ

೨. NETJRF, NFSC, NFST, NFOBC, NF Disability ಇತ್ಯಾದಿ ಫೆಲೋಶಿಪ್‌ ಪಡೆಯುವ ವಿದ್ಯಾರ್ಥಿಗಳ ವಿವರಗಳು

೩. ಹಳೆಯ ವಿದ್ಯಾರ್ಥಿಗಳ ಸಂಘ

ವಿಭಾಗದ ಪ್ರಮುಖ ಕೊಡುಗೆಗಳು

➣ ವಿಭಾಗದ ವತಿಯಿಂದ ೫೧ ಕೃತಿಗಳು ಪ್ರಕಟವಾಗಿವೆ
➣ ವಿಭಾಗವು ೨೮ ವಿಭಾಗೀಯ ಯೋಜನೆಗಳನ್ನು ಮತ್ತು ೧೨ ವೈಯಕ್ತಿಕ ಯೋಜನೆಗಳನ್ನು ಪೂರೈಸಿದೆ.
➣ ವಿಭಾಗದ ಪ್ರಾಧ್ಯಾಪಕ ವರ್ಗವು ನಿರ್ದಿಷ್ಟ ಕ್ಷೇತ್ರ ಪರಿಣತಿಯನ್ನು ಗುರುತಿಸಿಕೊಂಡಿದೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
➣ ಶೈಕ್ಷಣಿಕ ವೈವಿಧ್ಯತೆಯನ್ನು ಸಾಧಿಸಲಾಗಿದೆ.
➣ ವಿಭಾಗವು ತನ್ನ ಪ್ರಕಟಣೆಯ ಮೂಲಕ ಹೊಸ ಚಾರಿತ್ರಿಕ ದೃಷ್ಟಿಕೋನವನ್ನು ಹುಟ್ಟುಹಾಕುವಲ್ಲಿ ಯಶಸ್ವಿಯಾಗಿದೆ

ವಿಭಾಗದ ಚಟುವಟಿಕೆಗಳು

೧. ವಿಭಾಗವು ಆಯೋಜಿಸಿದ ಕಾರ್ಯಾಗಾರ/ಕಮ್ಮಟಗಳ ವಿವರಗಳು/ವಿಚಾರ ಸಂಕಿರಣ/ದತ್ತಿ ಉಪನ್ಯಾಸ

೨. Alumni Meet

೩.MOU ವಿವರ

೪.ಇತರೇ ಚಟುವಟಿಕೆಗಳು

ಪ್ರಮುಖ ಪುಸ್ತಕಗಳು

ಅಧ್ಯಾಪಕರ ವಿವರಗಳು

John

ಡಾ. ಟಿ.ಪಿ.ವಿಜಯ್
ಪ್ರಾಧ್ಯಾಪಕರು
ಮೊಬೈಲ್ : ೯೪೪೮೦೮೩೯೫೫
ಇಮೇಲ್: vijay.thambanda@gmail.com
ವಿದ್ಯಾರ್ಹತೆ: ಎಂ.ಎ., ಪಿಎಚ್.ಡಿ.

ಡಾ. ವಿರೂಪಾಕ್ಷಿ ಪೂಜಾರಹಳ್ಳಿ
ಪ್ರಾಧ್ಯಾಪಕರು
ಮೊಬೈಲ್: ೯೪೪೮೨೨೭೧೫೬
ಇಮೇಲ್: drvphalli@gmail.com
ವಿದ್ಯಾರ್ಹತೆ:ಎಂ.ಎ.,ಎಂ.ಫಿಲ್,ಎಚ್.ಡಿ.
John

ಡಾ. ಎನ್.ಚಿನ್ನಸ್ವಾಮಿ ಸೋಸಲೆ
ಪ್ರಾಧ್ಯಾಪಕರು
ಮೊಬೈಲ್: ೯೪೪೮೩೦೩೮೭೬
ಇಮೇಲ್ :
drsosale@gmail.com
ವಿದ್ಯಾರ್ಹತೆ: ಎಂ.ಎ.,ಬಿ.ಇಡ್‌.,ಪಿಎಚ್.ಡಿ.

ಡಾ. ಕೆ. ಮೋಹನಕೃಷ್ಣ ರೈ
ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರು
ಮೊಬೈಲ್: ೯೪೪೯೯೮೦೯೭೬
ಇಮೇಲ್: mkrai1969@rediffmail.com
ವಿದ್ಯಾರ್ಹತೆ :ಎಂ.ಎ., ಎಚ್.ಡಿ.

 

ನಿವೃತ್ತ ಪ್ರಾಧ್ಯಾಪಕರು
೧. ಡಾ. ಲಕ್ಷ್ಮಣ ತೆಲಗಾವಿ
೨. ಡಾ. ಸಿ.ಆರ್. ಗೋವಿಂದರಾಜು

ಸಂಪರ್ಕ

ಡಾ. ಕೆ. ಮೋಹನಕೃಷ್ಣ ರೈ
ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು
ಚರಿತ್ರೆ ವಿಭಾಗ
ಕನ್ನಡ ವಿಶ್ವವಿದ್ಯಾಲಯ, ಹಂಪಿ
ವಿದ್ಯಾರಣ್ಯ- ೫೮೩೨೭೬
ಮೊಬೈಲ್: ೯೪೪೯೯೮೦೯೭೬
ಇಮೇಲ್ ವಿಳಾಸ : mkrai1969@rediffmail.com