ವಿಭಾಗದ ಪರಿಚಯ
ಹಂಪಿಯ ಕನ್ನಡ ವಿಶ್ವವಿದ್ಯಾಲಯವು ೧೯೯೬ರಲ್ಲಿ ಉಳಿದ ವಿಭಾಗಗಳೊಂದಿಗೆ ದೃಶ್ಯಕಲಾ ವಿಭಾಗವನ್ನು ಪ್ರಾರಂಭಿಸಿತು. ಕ್ರಿಯಾತ್ಮಕ ಆದರ್ಶವು ಜೀವಂತ ಸಾಂಸ್ಕೃತಿಕ ಕೇಂದ್ರವಾಗಿ ರೂಪಿಸುವ ಮಹತ್ವದ ಉದ್ದೇಶವನ್ನು ಹೊಂದಿದ್ದು. ರಾಜ್ಯದಲ್ಲಿ ಇಂತಹದೊಂದು ವಿಶಿಷ್ಟ ಮಾದರಿ ವಿದ್ಯಾಲಯ ಇಲ್ಲದ್ದರಿಂದ ಇದನ್ನು ಸದೃಢವಾಗಿಸಲು ನಾವು ಬಹಳ ಮುತುವರ್ಜಿ ವಹಿಸಬೇಕಾಯಿತು. ದೃಶ್ಯಕಲಾ ವಿಭಾಗವು ವಿಶ್ವವಿದ್ಯಾಲಯದ ಅವಿಭಾಜ್ಯ ಅಂಗವಾಗಿದೆ. ಈ ವಿಭಾಗವು ಮುಖ್ಯವಾಗಿ ದೃಶ್ಯಕಲಾ ಸ್ನಾತಕ ಮತ್ತು ಸ್ನಾತಕೋತ್ತರ ಪದವಿ ಅಧ್ಯಯನ ವಿಭಾಗವನ್ನು ಪ್ರಾರಂಭಿಸಿದೆ. ೧೯೯೭ ರಲ್ಲಿ ಎಂ.ಫಿಲ್ ಮತ್ತು ಪಿಎಚ್.ಡಿ ಕೋರ್ಸ್‌ಗಳನ್ನು ಪರಿಚಯಿಸಿಲಾಯಿತು. ಪದವಿಧರ ವಿದ್ಯಾರ್ಥಿಗಳಿಗಾಗಿ ಎ.ಟಿ.ಸಿ., ಬಿ.ವಿಇಡಿ (ಕಲಾಶಿಕ್ಷಕ) ತರಬೇತಿಯನ್ನು ೨೦೦೪-೨೦೦೯ ರಲ್ಲಿ ಪ್ರಾರಂಭಿಸಿತು. ೨೦೦೩ ರಲ್ಲಿ ಮಾಸ್ಟರ್ ಆಫ್ ವಿಜುವಲ್ ಆರ್ಟ್‌ಗೆ ಅಧ್ಯಯನಕ್ಕೆ ಅವಕಾಶ ಮಾಡಿಕೊಡಲಾಯಿತು.
ಸಂಶೋಧನೆಗಳನ್ನು ಕೈಗೊಳ್ಳಲು ಬೋಧನೆಯನ್ನು ವೃತ್ತಿಪರವಾಗಿಸಲು ಈ ವಿಭಾಗಗಳನ್ನು ತೆರೆಯಲಾಯಿತು. ಇದರೊಂದಿಗೆ ಪಠ್ಯಕ್ರಮವನ್ನು ಆಗಾಗ್ಗೆ ಉನ್ನತೀಕರಿಸಲು ಅಧ್ಯಯನಾಂಗವೂ ಪ್ರಯತ್ನಿಸಿದೆ. ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಗಾಗಿ ಸೆಮಿನಾರ್, ಕಾರ್ಯಗಾರ, ಕಲಾಶಿಬಿರ, ಮತ್ತು ಪ್ರದರ್ಶನಗಳನ್ನು ಏರ್ಪಡಿಸಲಾಗಿದೆ. ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಪಡೆಯಲು ಕೋರ್ಸ್‌ಗಳೂ ಸಹಾಯಕವಾಗುತ್ತವೆ.
ದೃಶ್ಯಕಲಾ ವಿಭಾಗದ ಸೌಲಭ್ಯಗಳು
೧. ವಿಭಾಗದ ಮುಖ್ಯಸ್ಥರಿಗಾಗಿ ಸುಸಜ್ಜಿತ ಕೊಠಡಿ
೨. ಉಪನ್ಯಾಸಕರಿಗೆ ವೃಂದಕ್ಕೆ ಪ್ರತ್ಯೇಕ ಕೊಠಡಿ
೩. ಶಾಸ್ತ್ರಾಧ್ಯಯನ ಮತ್ತು ಪ್ರಾತ್ಯಕ್ಷಿಕೆಗಾಗಿ ಪ್ರತೇಕ ಕೊಠಡಿ
೪. ಪ್ರಾತ್ಯೆಕ್ಷಿಕೆ ವಿಶೇಷ ಕೊಠಡಿ
೫. ಸಭಾಂಗಣ
೬. ಕಂಪ್ಯೂಟರ್ ವಿಭಾಗ
೭. ಗ್ರಂಥಾಲಯ
೮. ಕಲಾ ಗ್ಯಾಲರಿ
೯. ಅ.ಶಾಶ್ವತ ಕಲಾ ಗ್ಯಾಲರಿ (ಕಲಾವಸ್ತು ಸಂಗರಾಹಲಯ)ವಿಭಾದ ಸಂಗ್ರಹಗಳು.
೧೦. ವೃತ್ತಾಕಾರದ ಪ್ರದರ್ಶನದ ಕಲಾ ಗ್ಯಾಲರಿ
೧೧. ಪೇಟಿಂಗ್‌ಗಾಗಿ ಸಂಗ್ರಹದ ಪ್ರತ್ಯೇಕ ಕೊಠಡಿ
೧೨. ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ಕೊಠಡಿ
೧೩. ವಿಶಾಲವಾದ ಹೊರಾಂಗಣ
೧೪. ಕಟ್ಟಡದ ಒಳಭಾಗ ಮತ್ತು ಹೊರ ಭಾಗದಲ್ಲಿ ಉದ್ಯಾನವನ
ನಮ್ಮ ವಿಶಿಷ್ಟತೆ
ಪ್ರಾಚೀನ ಮತ್ತು ಅರ್ವಾಚೀನ ಕಲಾ ಪದ್ಧತಿಯನ್ನು ಅಧ್ಯಯನ ಮಾಡುವುದು ಕಾರ್ಯಗಾರ, ಉಪನ್ಯಾಸ ಸಂಶೋಧನೆ ಮೂಲಕ ಜಗತ್ತಿನ ಉತ್ಕೃಷ್ಟ ಕಲೆಯನ್ನು ಆಸ್ವಾದಿಸಲು ಅವಕಾಶ ವಹಿಸುವುದು. ಟ್ಯುಟೋರಿಯಲ್, ಕಾರ್ಯಾಗಾರ, ಗೃಹಪಾಠ, ಕಿರು ಸಂಶೋಧನಾ ಬರಹ ಮುಖಾಂತರ ನಿರಂತರ ಮೌಲ್ಯಮಾಪನ ಮಾಡುವುದು.
ತುಲನಾತ್ಮಕ ಅಧ್ಯಯನ
ಶ್ರೇಷ್ಠ ಕಲಾವಿದರಿಗೆ ವೇದಿಕೆ ನಿರ್ಮಿಸುವುದು ಬಿ.ವಿ.ಎ., ಎಂ.ವಿ.ಎ., ಎಂ.ಫಿಲ್., ಪಿಹೆಚ್.ಡಿ., ಡಿ.ಲಿಟ್ ವಿದ್ಯಾರ್ಥಿಗಳನ್ನು ಬೋಧನೆ ಮತ್ತು ಸಂಶೋಧನೆಯಲ್ಲಿ ತೊಡಗಿಸುವುದು. ದೃಶ್ಯಕಲಾ ಗ್ರಂಥಗಳನ್ನು ಪ್ರಕಟಿಸುವುದು.
ದೃಶ್ಯಕಲೆಯ ವಿವಿಧ ಜ್ಞಾನವನ್ನು ಪ್ರಾಯೋಗಿಕ ಮತ್ತು ಸಿದ್ಧಾಂತದ ಅಡಿಯಲ್ಲಿ ಸಂಶೋಧನಾತ್ಮಕವಾಗಿ ಅಧ್ಯಯನ ನಡೆಸಿ ವಿಶ್ವವಿದ್ಯಾಲಯದ ದೇಯದಂತೆ ಹೊಸ ಜ್ಞಾನ ಶಾಖೆಯನ್ನು ಸೃಷ್ಠಿಸಲಾಗುವುದು.
ವಿಭಾಗದ ಅಧ್ಯಯನ ಕಾರ್ಯಕ್ರಮಗಳು
ಎಂ.ವಿ.ಎ. (ಮಾಸ್ಟರ್ ಆಫ್ ವಿಜುವಲ್ ಆರ್ಟ್) ಪೇಟಿಂಗ್
ದೃಶ್ಯಕಲೆಯಲ್ಲಿ ಎಂ.ಫಿಲ್.
ದೃಶ್ಯಕಲೆಯಲ್ಲಿ ಪಿಹೆಚ್.ಡಿ.
ದೃಶ್ಯಕಲೆಯಲ್ಲಿ ಡಿ.ಲಿಟ್.
ವಿಭಾಗದ ಪ್ರೊಫೈಲ್
ವಿದ್ಯಾರ್ಥಿಗಳ ವಿವರಗಳು
೧. ಚರಿತ್ರೆ ವಿಭಾಗದ ಪಿಎಚ್.ಡಿ., ಎಂ.ಫಿಲ್, ಎಂ.ಎ,ಪಿಎಚ್.ಡಿ, ಸಾಮಾಜಿಕ ವರ್ಗವಾರು ವಿದ್ಯಾರ್ಥಿಗಳ ಸಂಖ್ಯೆ
೨. NETJRF, NFSC, NFST, NFOBC, NF Disability ಇತ್ಯಾದಿ ಫೆಲೋಶಿಪ್ ಪಡೆಯುವ ವಿದ್ಯಾರ್ಥಿಗಳ ವಿವರಗಳು
೩. ಹಳೆಯ ವಿದ್ಯಾರ್ಥಿಗಳ ಸಂಘ
ವಿಭಾಗದ ಪ್ರಮುಖ ಕೊಡುಗೆಗಳು
ಹಲವು ವಿಶ್ವವಿದ್ಯಾಲಯಗಳು ಮತ್ತು ಚಿತ್ರಕಲಾ ಮಹಾವಿದ್ಯಾಲಯಗಳ ಸಹಯೋಗದೊಂದಿಗೆ ವಿವಿಧ ರೀತಿಯ ಪುನರ್ ಮನನ ಶಿಬಿರ ಮತ್ತು ಅಭಿಶಿಕ್ಷಣ ಕಾರ್ಯಗಾರ, ವಿಚಾರ ಸಂಕಿರಣ, ಸಿಂಪೋಸಿಸಂ, ಚಿತ್ರಕಲಾ ಶಿಬಿರ ಮತ್ತು ಶಿಲ್ಪಕಲಾ ಶಿಬಿರ, ಕಾರ್ಯಗಾರ, ಕಲಾ ಪ್ರಾತ್ಯಕ್ಷಿಕೆ, ಚಿತ್ರ ಸಂತೆ, ಪ್ರತೀಷ್ಠಾಪನ ಕಲೆ, ಭಿತ್ತಿಚಿತ್ರ ರಚನೆ, ಚಿತ್ರಕಲಾ ಮತ್ತು ಶಿಲ್ಪಕಲಾ ಪ್ರದರ್ಶನವನ್ನು ನಡೆಸಲಾಗಿದೆ.
ಕನ್ನಡ ವಿಶ್ವವಿದ್ಯಾಲಯದ ಕಲಾ ಗ್ಯಾಲರಿ ಅಲ್ಲದೇ ಬೆಂಗಳೂರು, ಬೆಳಗಾವಿ, ತುಮಕೂರು, ಮೈಸೂರು, ಬಾದಾಮಿ, ಧಾರವಾಡ, ಕುಪ್ಪಳ್ಳಿ, ಕುಮಟ್ಟ, ಮೂಡಬಿದರೆ, ಇಲ್ಲಕಲ್, ಕಲಬುರ್ಗಿ, ಬೀದರ್ ಇತ್ಯಾದಿ,. ಜಿಲ್ಲೆಗಳು ಹಾಗೂ ದೆಹಲಿ. ಲಕ್ನೋ, ಕಲ್ಕತ, ಮದ್ರಾಸ್, ಪಾಂಡಿಚೇರಿ, ಕೇರಳ, ಚಂಡಿಗಡ್, ಹೈದ್ರಬಾದ್, ಮಧ್ಯಪ್ರದೇಶ, ಪಂಜಾಬ್, ಕರ್ನೂಲ್ ಇತ್ಯಾದಿ,. ರಾಜ್ಯಗಳು
ಅಮೇರಿಕಾ, ದುಬೈ, ಬ್ರೇಜಿಲ್, ನಾರ್ವೆ, ಟರ್‌ಕೀ, ಇಟಲಿ, ಡೇಹ್ರಾಡೂನ್, ಇಂಡೋನ್ಯೇಷಿಯಾ ಇತ್ಯಾದಿ,. ದೇಶಗಳಲ್ಲಿ, ಚಿತ್ರಕಲಾ ಮತ್ತು ಶಿಲ್ಪಕಲಾ ಪ್ರದರ್ಶನವನ್ನು ನಡೆಸಲಾಗಿದೆ
ವಿಭಾಗದ ಚಟುವಟಿಕೆಗಳು
೧. ವಿಭಾಗವು ಆಯೋಜಿಸಿದ ಕಾರ್ಯಾಗಾರ/ಕಮ್ಮಟಗಳ ವಿವರಗಳು/ವಿಚಾರ ಸಂಕಿರಣ/ದತ್ತಿ ಉಪನ್ಯಾಸ
೨. Alumni Meet
೩.MOU ವಿವರ
೪.ಇತರೇ ಚಟುವಟಿಕೆಗಳು
ಪ್ರಮುಖ ಪುಸ್ತಕಗಳು
ಡಾ. ಮೋಹನರಾವ್ ಬಿ. ಪಾಂಚಾಳ ಇವರು ವಜ್ರವಿಜಯ ನೆನಪಿನ ಸಂಚಿಕೆಯ ಸಂಪಾದಕರಾಗಿ, ದೃಶ್ಯಾನುಭವ, ಚಿತ್ರಕಲಾವಿದ ಡಾ.ಎಸ್.ಎಂ. ಪಂಡಿತ್ ಪ್ರದರ್ಶನಾತ್ಮಕ ತೊಗಲು ಗೊಂಬೆ ಚಿತ್ರಪಟ ಮತ್ತು ಡಾ. ಎಸ್. ಎಂ. ಪಂಡಿತ್ (ಲೇಖನಗಳ ಸಂಗ್ರಹ) ಎಂಬ ನಾಲ್ಕು ಪುಸ್ತಕಗಳ ಲೇಖಕರಾಗಿದ್ದಾರೆ. ಇವರ ದೃಶ್ಯಾನುಭವ ಕೃತಿಯು ಕರ್ನಾಟಕ ಸರಕಾರದ ಪುಸ್ತಕ ಪ್ರಾಧಿಕಾರದ ಧನಸಹಾಯದಿಂದ ಪ್ರಕಟಗೊಂಡಿದೆ. FOSSILS, Indian History Congress, ರಾಷ್ಟ್ರೀಯ ದೃಶ್ಯಕಲಾ ಅಕಾಡೆಮಿಯವರು ಆಯೋಜಿಸಿದ ರಾಷ್ಟ್ರೀಯ-ಅಂತರರಾಷ್ಟ್ರೀಯ ವಿಚಾರ ಸಂಕಿರಣ, ಕಮ್ಮಟಗಳಲ್ಲಿ ಭಾಗವಹಿಸಿ ಹದಿನಾರು ಪ್ರಬಂಧಗಳನ್ನು ಮಂಡಿಸಿದ್ದಾರೆ. ಇವರ ಅನೇಕ ಲೇಖನಗಳು ಪತ್ರಿಕೆ, ಸ್ಮರಣ ಸಂಚಿಕೆಗಳಲ್ಲಿ ಪ್ರಕಟಗೊಂಡಿವೆ.
ಅಧ್ಯಾಪಕರ ವಿವರಗಳು
ಸಂಪರ್ಕ
ಡಾ. ಮೋಹನ್‌ರಾವ್ ಬಿ. ಪಂಚಾಳ
ಸಹಾಯಕ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು
ದೃಶ್ಯಕಲಾ ವಿಭಾಗ
ಕನ್ನಡ ವಿಶ್ವವಿದ್ಯಾಲಯ, ಹಂಪಿ
ವಿದ್ಯಾರಣ್ಯ- ೫೮೩೨೭೬
ಮೊಬೈಲ್: ೯೪೪೮೭೩೨೫೬೮
ಇಮೇಲ್ ವಿಳಾಸ : dr.panchalmb@gmail.com