ವಿಭಾಗದ ಪರಿಚಯ
ಜಾಗತಿಕವಾಗಿ ಭಾಷಾಂತರ ಅಧ್ಯಯನವು ಉದಯೋನ್ಮುಖ ಜ್ಞಾನಶಿಸ್ತು. ಭಾರತದಲ್ಲಿ ಇದು ಕಳೆದ ಮೂರು ದಶಕಗಳಲ್ಲಿ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ೧೯೯೨ರಲ್ಲಿ ಕನ್ನಡ ವಿಶ್ವವಿದ್ಯಾಲಯ, ಹಂಪಿಯಲ್ಲಿ ಭಾಷಾಂತರ ಅಧ್ಯಯನ ವಿಭಾಗವನ್ನು ಆರಂಭಿಸಿತು. ವಿಭಾಗವು ತನ್ನ ಶೈಕ್ಷಣಿಕ ಕಾರ್ಯಚಟುವಟಿಕೆಗಳಿಗೆ ಸಂಬಂಧಿಸಿದಂತೆ ಮೂರು ಮುಖ್ಯ ಉದ್ದೇಶಗಳನ್ನು ಇರಿಸಿಕೊಂಡಿದೆ: ಸಂಶೋಧನೆ, ತರಬೇತಿ/ಬೋಧನೆ ಮತ್ತು ಭಾಷಾಂತರ.
ಸಂಶೋಧನೆ
ವಿಭಾಗದ ಮುಖ್ಯ ಲಕ್ಷ್ಯಣವೆಂದರೆ ಭಾಷಾಂತರ ಅಧ್ಯಯನದ ಕ್ಷೇತ್ರದಲ್ಲಿ ಮತ್ತು ಇತರ ಸಂಬಂಧಿತ ಅಧ್ಯಯನ ಕ್ಷೇತ್ರಗಳಲ್ಲಿನ ಸಂಶೋಧನೆ. ವಿಭಾಗದ ಅಧ್ಯಾಪಕರು ವಿಶ್ವವಿದ್ಯಾಲಯ ಆರ್ಥಿಕ ನೆರವಿನಿಂದ ಅಷ್ಟೇ ಅಲ್ಲದೆ ಯು.ಜಿ.ಸಿ, ಸಾಹಿತ್ಯ ಅಕಾಡೆಮಿ, ನವದೆಹಲಿ, ಕುವೆಂಪು ಭಾಷೆ ಭಾರತಿ ಪ್ರಾಧಿಕಾರ ಬೆಂಗಳೂರು, ಕರ್ನಾಟಕ ಸಾಹಿತ್ಯ ಅಕಾಡೆಮಿ ಸಾಹಿತ್ಯ ಅಕಾಡೆಮಿ ಬೆಂಗಳೂರು, ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರಿನಂತಹ ಬಾಹ್ಯ ಸಂಸ್ಥೆಗಳಿಂದ ಧನಸಹಾಯ ಪಡೆದು ಯೋಜನೆಗಳನ್ನು ನಿರ್ವಹಿಸಿದ್ದಾರೆ; ಭಾಷಾಂತರ ಪ್ರಕ್ರಿಯೆ, ಭಾಷಾಂತರ ಮತ್ತು ಸಾಂಸ್ಕೃತಿಕ ರಾಜಕಾರಣ, ತೌಲನಿಕ ಅಧ್ಯಯನಗಳು ಹಾಗೂ ಸಾಂಸ್ಕೃತಿಕ ಅಧ್ಯಯನಗಳಿಗೆ ಸಂಬಂಧಿಸಿದ ಹಲವಾರು ಸಂಶೋಧನಾ ಯೋಜನೆಗಳನ್ನು ಕೈಗೊಳ್ಳಲಾಗಿದೆ. ಹೆಚ್ಚಿನ ಸಂಶೋಧನಾ ಬರಹಗಳನ್ನು ವಿಶ್ವವಿದ್ಯಾಲಯವೇ ಪ್ರಕಟಿಸಿದೆ.
ಅಧ್ಯಾಪಕರ ಹೊರತಾಗಿ, ವಿಭಾಗದಲ್ಲಿ ಸಂಶೋಧನಾ ವಿದ್ಯಾರ್ಥಿಗಳೂ ಸಹ ಸಂಶೋಧನ ಕೆಲಸಗಳಲ್ಲಿ ತೊಡಗಿಸಿಕೊಡಿದ್ದಾರೆ. ಸಂಶೋಧನಾ ವಿದ್ಯಾರ್ಥಿಗಳು ಭಾಷಾಂತರ ಸಾಹಿತ್ಯ, ಇಂಟರ್ ಸೆಮಿಯೋಟಿಕ್ ಅನುವಾದಗಳು, ಭಾಷಾಂತರದ ಸಾಂಸ್ಕೃತಿಕ ರಾಜಕಾರಣ, ತೌಲನಿಕ ಅಧ್ಯಯನಗಳು ಮುಂತಾದ ಕ್ಷೇತ್ರಗಳಲ್ಲಿ ಅಧ್ಯಯನ ಮಾಡುತ್ತಿದ್ದಾರೆ.
ಬೋಧನೆ ಮತ್ತು ತರಬೇತಿ :
ಅದರ ಮುಂದಿನ ಹಂತವಾಗಿ, ವಿದ್ಯಾರ್ಥಿಗಳಿಗೆ ಭಾಷಾಂತರ ಮತ್ತು ಭಾಷಾಂತರ ಅಧ್ಯಯನಗಳ ಜ್ಞಾನವನ್ನು ನೀಡಲು, ವಿಭಾಗವು ಬೋಧನಾ ಕಾರ್ಯಕ್ರಮವನ್ನು ಪ್ರಾರಂಭಿಸಿತು. ಪ್ರಸ್ತುತ ವಿಭಾಗವು ಪಿಎಚ್.ಡಿ., ಎಂ.ಫಿಲ್ ಮತ್ತು ಡಿಪ್ಲೋಮಾ ಇನ್ ಟ್ರಾನ್ಸ್‌ಲೇ?ನ್ ಎಂಬ ಮೂರು ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಈ ಬೋಧನಾ ಕಾರ್ಯಕ್ರಮಗಳ ಜೊತೆಗೆ ವಿಭಾಗವು ದೂರಶಿಕ್ಷಣದ ಮೂಲಕ ಡಿಪ್ಲೊಮಾ ಕಾರ್ಯಕ್ರಮವನ್ನು ನಡೆಸುತ್ತಿದೆ. ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿಗಾಗಿ ಕಲಿಯುವ ವಿದ್ಯಾರ್ಥಿಗಳಿಗೆ ಒಂದು ಹಾರ್ಡ್ ಹಾಗೂ ಎರಡು ಸಾಫ್ಟ್-ಕೋರ್ ಮತ್ತು ಇತರ ಸ್ನಾತಕೋತ್ತರ ಕಾರ್ಯಕ್ರಮಗಳ ವಿದ್ಯಾರ್ಥಿಗಳಿಗೆ ಒಂದು ಓಪನ್ ಚಾಯ್ಸ್ ಕೋರ್ಸ್‌ಗಳನ್ನು ನೀಡುತ್ತಿದೆ. ವಿಭಾಗವು ಯುವ ಭಾಷಾಂತರಕಾರರಿಗೆ ಕಾರ್ಯಾಗಾರದ ರೂಪದಲ್ಲಿ ತರಬೇತಿ ಕಾರ್ಯಕ್ರಮಗಳನ್ನು ಸಹ ನಡೆಸುತ್ತಿದೆ.
ಭಾಷಾಂತರ
ವಿಭಾಗದ ಅಧ್ಯಾಪಕರು ಸಮಾಜ ಮತ್ತು ವಿದ್ವತ್ ಪ್ರಪಂಚದ ಅಗತ್ಯವನ್ನು ಪೂರೈಸಲು ಅನುವಾದ ಯೋಜನೆಗಳನ್ನು ಸಹ ಕೈಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಇಂಗ್ಲಿಷ್, ಹಿಂದಿ, ಮಲಯಾಳಂ ಮತ್ತು ಮರಾಠಿಯಿಂದ ಕನ್ನಡಕ್ಕೆ ಅನುವಾದಗಳಾಗಿವೆ. ಸಾಹಿತ್ಯ, ಸಮಾಜ ವಿಜ್ಞಾನ, ಐತಿಹಾಸಿಕ ದಾಖಲೆಗಳಿಂದ ಹಿಡಿದು ಸ್ತ್ರೀವಾದದವರೆಗಿನ ವಿಷಯಗಳ ಅನುವಾದಗಳು ಅಧ್ಯಾಪಕರು ಕೈಗೊಂಡ ಚಟುವಟಿಕೆಯ ಪ್ರಾಮುಖ್ಯತೆಯನ್ನು ತೋರಿಸುತ್ತದೆ. ಅಧ್ಯಾಪಕರ ಅನುವಾದಗಳ ಹೊರತಾಗಿ, ವಿಭಾಗವು ಭಾಷಾಂತರ ಕಮ್ಮಟಗಳನ್ನು ಆಯೋಜಿಸಿ ರೂಪುಗೊಂಡ ಭಾಷಾಂತರಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಿದೆ.
ವಿಭಾಗದ ದೂರದೃಷ್ಟಿ ಮತ್ತು ಧ್ಯೇಯ
ದಕ್ಷಿಣ ಭಾರತದಲ್ಲಿ ಭಾಷಾಂತರ ಅಧ್ಯಯನ ಸಂಶೋಧನೆಯಲ್ಲಿ ನಿರತವಾದ ಪ್ರಮುಖ ಸಂಸ್ಥೆಯಾಗಿ ಬೆಳೆಸುವುದು .(ಹೈದರಾಬಾದ್ ಹೊರತುಪಡಿಸಿ ಇದು ಇಡೀ ದಕ್ಷಿಣ ಭಾರತದ ಏಕೈಕ ಪೂರ್ಣ ಪ್ರಮಾಣದ ವಿಭಾಗ)
ಭಾಷಾಂತರ ಅಧ್ಯಯನ ನಿರತ ಸಂಶೋಧಕರಿಗೆ ಮೂಲ ಆಕರ ರೂಪಿಸುವುದು.
ವಿವಿಧ ಭಾಗಗಳು ಮತ್ತು ಕನ್ನಡದ ಭಾಷಾಂತರಕಾರರ ನಡುವೆ ಸೌಹಾರ್ದ ಸಂಬಂಧ ಬೆಸೆಯುವುದು.
ವಿವಿಧ ಜ್ಞಾನಶಿಸ್ತುಗಳ ನಡುವಿನ ಸಂಬಂಧಗಳಲ್ಲಿನ ಅಂತರವನ್ನು ಗುರುತಿಸಿ ಅನುವಾದಗಳ ಮೂಲಕ ಅವುಗಳನ್ನು ಕಡಿಮೆ ಮಾಡಲು ಕ್ರಮಗಳನ್ನು ಕೈಗೊಳ್ಳುವುದು.
ವಿಭಾಗದ ಧ್ಯೇಯ
ಕನ್ನಡದಲ್ಲಿರುವ ಮತ್ತು ಕನ್ನಡದಿಂದ ಇತರ ಭಾಷೆಗಳಿಗೆ ಆಗಿರುವ ಎಲ್ಲಾ ಭಾಷಾಂತರ ಕೃತಿಗಳ ’ದತ್ತಕಣಜ’ ರಚಿಸುವುದು.
ತನ್ನದೇ ಆದ ಭಾಷಾಂತರಗಳ ಗ್ರಂಥಾಲಯವನ್ನು ಹೊಂದುವುದು.
ದೂರ ಶಿಕ್ಷಣ ಕಾರ್ಯಕ್ರಮಗಳ ಮೂಲಕ ಮತ್ತು ಕಮ್ಮಟಗಳಮೂಲಕ ಕರ್ನಾಟಕದೆಲ್ಲೆಡೆ ಭಾಷಾಂತರ ತರಬೇತಿ ನೀಡುವುದು;
ವಿವಿಧ ಭಾಷೆಗಳು ಮತ್ತು ಕನ್ನಡದ ನಡುವಿನ ಸಂಬಂಧಗಳನ್ನು ಭಾಷಾಂತರಗಳ ಮೂಲಕ ಶೋಧಿಸುವುದು.
ವಿಭಾಗದ ವೈಶಿಷ್ಟ್ಯ
ವಿಭಾಗದ ಭಾಷಾಂತರ ಅಧ್ಯಯನವು ಸಿದ್ಧಾಂತ ಮತ್ತು ಅನ್ವಯ ಎಂಬ ಎರಡು ವಿಶಿಷ್ಟ ಅಂಶಗಳಿಂದ ಕೂಡಿದೆ. ಭಾಷಾಂತರ ಜ್ಞಾನ ಶಿಸ್ತಿನ ತಜ್ಞರಾಗ ಬಯಸುವವರು ಸೈದ್ಧಾಂತಿಕ ಮತ್ತು ಅನ್ವಯಿಕ ಅಂಶಗಳನ್ನು ಕರಗತ ಮಾಡಿಕೊಂಡಿರಬೇಕು. ವಿಭಾಗದ ಸದಸ್ಯರು ಈ ಎರಡು ವಿಭಿನ್ನ ಅಂಶಗಳನ್ನು ಜೊತೆಯಾಗಿ ನಿರ್ವಹಿಸಲು ಪ್ರಯತ್ನಿಸುತ್ತಿದ್ದಾರೆ. ವಿಭಾಗದಲ್ಲಿರುವ ಎಲ್ಲಾ ಅಧ್ಯಾಪಕರು ಎರಡೂ ಕ್ಷೇತ್ರಗಳಲ್ಲಿ ಪರಿಣತಿಯನ್ನು ಹೊಂದಿದ್ದಾರೆ. ವಿಭಾಗದ ಅಧ್ಯಾಪಕರು ಅನುವಾದ ಕ್ಷೇತ್ರದಲ್ಲಿ ಉತ್ತಮ ಅನುವಾದಕರು ಮತ್ತು ಅನುವಾದ ಅಧ್ಯಯನ ಕ್ಷೇತ್ರದಲ್ಲಿ ಉತ್ತಮ ವಿದ್ವಾಂಸರು ಎಂದು ಗುರುತಿಸಿಕೊಂಡಿದ್ದಾರೆ. ವಿಭಾಗದ ಬೋಧನಾ ಕಾರ್ಯಕ್ರಮಗಳನ್ನು ಈ ದೃಷ್ಟಿಕೋನದಿಂದ ವಿನ್ಯಾಸಗೊಳಿಸಲಾಗಿದೆ. ಈ ಕಾರ್ಯಕ್ರಮಗಳ ಅನುವಾದ ಮತ್ತು ಅನ್ವಯಿಕ ಭಾಗವು ವಿದ್ಯಾರ್ಥಿಗಳಲ್ಲಿ ಭಾಷಾಂತರದ ಕೌಶಲ್ಯವನ್ನು ಹೆಚ್ಚಿಸುತ್ತದೆ. ಈ ಎರಡು ಅಂಶಗಳನ್ನು ಜೊತೆಯಾಗಿ ಕಲಿಯುವುದರಿಂದ ವಿದ್ಯಾರ್ಥಿಗಳ ಭಾಷಾಂತರ ಕೌಶಲ್ಯ ಸುಧಾರಿಸುತ್ತದೆ ಮತ್ತು ಅವರ ಔದ್ಯೋಗಿಕ ಸಾಧ್ಯತೆಯನ್ನು ಹೆಚ್ಚಿಸುತ್ತದೆ
ವಿಭಾಗದ ಪ್ರಮುಖ ಕಾರ್ಯಕ್ರಮಗಳು
* ಭಾಷಾಂತರ ಅಧ್ಯಯನದಲ್ಲಿ ಪಿಎಚ್.ಡಿ.
* ಭಾಷಾಂತರ ಅಧ್ಯಯನದಲ್ಲಿ ಎಂ.ಫಿಲ್
* ದೂರಶಿಕ್ಷಣದ ಮೂಲಕ ಭಾಷಾಂತರ ಅಧ್ಯಯನದಲ್ಲಿ ಡಿಪ್ಲೊಮಾ
* ನೇರ ತರಗತಿ ಬೋಧನ ಕ್ರಮದಲ್ಲಿ ಭಾಷಾಂತರ ಸ್ನಾತಕೋತ್ತರ ಡಿಪ್ಲೊಮಾ
* ಭಾಷಾಂತರ ಸಾಹಿತ್ಯ ಮತ್ತು ಭಾಷಾಂತರ ಅಧ್ಯಯನಗಳ ಕುರಿತು ಸ್ನಾತಕೋತ್ತರ ಪದವಿಗೆ ಕೋರ್ಸ್‌ಗಳನ್ನು ನೀಡುತ್ತಿದೆ.
ವಿಭಾಗದ ಪ್ರೊಫೈಲ್
ಅಧ್ಯಾಪಕರ ವಿವರಗಳು
ಡಾ. ಮೋಹನ ಕುಂಟಾರ
ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರು
ಭಾಷಾಂತರ ಅಧ್ಯಯನ ವಿಭಾಗ,
ಕನ್ನಡ ವಿಶ್ವವಿದ್ಯಾಲಯ, ಹಂಪಿ
ಮೊಬೈಲ್: 94489 97450
ಇಮೇಲ್ : mohanakuntar@gmail.com
ವಿಭಾಗದ ನಿವೃತ್ತ ಪ್ರಾಧ್ಯಾಪಕರು
೧. ಕರೀಗೌಡ ಬೀಚನಹಳ್ಳಿ
೨. ಡಾ. ವಿಠಲರಾವ್ ಗಾಯಕವಾಡ್
೩.ಡಾ. ಎಂ.ಉಷಾ
೪. ಡಾ. ಕೆ.ಸಿ.ಶಿವಾರೆಡ್ಡಿ
ವಿಭಾಗದ ಪ್ರಮುಖ ಕೊಡುಗೆಗಳು
ಕಳೆದ ಎರಡೂವರೆ ದಶಕಗಳಲ್ಲಿ ಇಲಾಖೆ ತನ್ನ ಗುರಿಯತ್ತ ಕ್ಷಿಪ್ರ ದಾಪುಗಾಲು ಹಾಕಿದೆ. ವಿಭಾಗದ ಅಧ್ಯಾಪಕರ ಪ್ರಕಟಣೆಗಳು ಶೈಕ್ಷಣಿಕ ವಲಯದಲ್ಲಿ ಛಾಪು ಮೂಡಿಸಿವೆ. ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು ಮತ್ತು ಮರಾಠಿಗೆ ಸಂಬಂಧಿಸಿದ ಭಾಷಾಂತರ ಮತ್ತು ಭಾಷಾಂತರ ಅಧ್ಯಯನ ಕ್ಷೇತ್ರದಲ್ಲಿ ವಿಭಾಗವು ರೂಪಿಸಿದ ಕೃತಿಗಳು ಈ ವಿಶಿಷ್ಟ ಕ್ಷೇತ್ರದಲ್ಲಿ ಹೆಜ್ಜೆ ಗುರುತುಗಳನ್ನು ಮೂಡಿಸಿವೆ, ಮತ್ತು ವಿಭಾಗದ ಅಸ್ಮಿತೆಯನ್ನು ದಾಖಲಿಸಿವೆ. ವಿಭಾಗವು ನೀಡುವ ಕೋರ್ಸ್‌ಗಳು/ತರಬೇತಿ ಕಾರ್ಯಕ್ರಮಗಳು ಯುವ ಪೀಳಿಗೆಯನ್ನು ಈ ಕ್ಷೇತ್ರಕ್ಕೆ ಆಕರ್ಷಿಸಲು ಸಹಾಯ ಮಾಡುತ್ತಿವೆ. ಪ್ರಕಟಣೆಗಳು, ವಿಚಾರಗೋಷ್ಠಿಗಳು ಮತ್ತು ಸಂಶೋಧನಾ ಯೋಜನೆಗಳು ನಾಡಿನ ಹಿರಿಯ ವಿದ್ವಾಂಸರ ಮೆಚ್ಚುಗೆಗೂ ಪಾತ್ರವಾಗಿವೆ.
ವಿದ್ಯಾರ್ಥಿಗಳ ವಿವರಗಳು
೧. ಭಾಷಾಂತರ ವಿಭಾಗದ ಪಿಎಚ್.ಡಿ., ಎಂ.ಫಿಲ್, ಎಂ.ಎ,ಪಿಎಚ್.ಡಿ, ಸಾಮಾಜಿಕ ವರ್ಗವಾರು ವಿದ್ಯಾರ್ಥಿಗಳ ಸಂಖ್ಯೆ
೨. NETJRF, NFSC, NFST, NFOBC, NFDisability ಇತ್ಯಾದಿ ಫೆಲೋಶಿಪ್ ಪಡೆಯುವ ವಿದ್ಯಾರ್ಥಿಗಳ ವಿವರಗಳು
೩. ಹಳೆಯ ವಿದ್ಯಾರ್ಥಿಗಳ ಸಂಘ
ಕಾರ್ಯಾಗಾರ/ಕಮ್ಮಟ
ಪ್ರಮುಖ ಪುಸ್ತಕಗಳು
ಪ್ರಮುಖ ಸಂಶೋಧನಾ ಯೋಜನೆಗಳು
ಚಿತ್ರಸಂಪುಟ
ಸಂಪರ್ಕ
ಡಾ. ಮೋಹನ ಕುಂಟಾರ
ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು
ಭಾಷಾಂತರ ಅಧ್ಯಯನ ವಿಭಾಗ
ಕನ್ನಡ ವಿಶ್ವವಿದ್ಯಾಲಯ, ಹಂಪಿ
ವಿದ್ಯಾರಣ್ಯ- ೫೮೩೨೭೬
ಮೊಬೈಲ್: 94489 97450
ಇಮೇಲ್ ವಿಳಾಸ : mohanakuntar@gmail.com