three-wings

ಆಡಳಿತ ವಿನ್ಯಾಸ

ವಿಶ್ವವಿದ್ಯಾಲಯ ಕಾರ್ಯಕಲಾಪಗಳು ಸುಸಂಬದ್ಧವಾಗಿ ಮುನ್ನಡೆಯಲು

ಆಡಳಿತಾಂಗ
ಪ್ರಸಾರಾಂಗ
ಅಧ್ಯಯನಾಂಗ
ಎಂಬ ಮೂರು ವಿಭಾಗಗಳನ್ನು ಅಸ್ತಿತ್ವಕ್ಕೆ ತರಲಾಗಿದೆ.

ಆಡಳಿತಾಂಗ

ಆಡಳಿತಾಂಗವು ವಿತ್ತವಿಭಾಗ, ಆಡಳಿತ ವಿಭಾಗ, ಅಭಿವೃದ್ಧಿ ವಿಭಾಗವೆಂಬ ಮೂರು ಶಾಖೆಗಳನ್ನು ಹೊಂದಿದೆ. ಇವುಗಳಲ್ಲಿ ವಿತ್ತವಿಭಾಗವು ಪ್ರಧಾನವಾಗಿ ರಾಜ್ಯ ಸರಕಾರದಿಂದ, ಪರ್ಯಾಯವಾಗಿ ಕೇಂದ್ರ ಸರಕಾರ, ವಿಶ್ವವಿದ್ಯಾಲಯ ಧನಸಹಾಯ ಆಯೋಗ , ಸಾಮಾಜಿಕ ವ್ಯಕ್ತಿ ಸಂಸ್ಥೆ ಹೀಗೆ ಸರ್ವಮೂಲಗಳಿಂದ ಹಣವನ್ನು ಸಂಗ್ರಹಿಸುವ ಮತ್ತು ಶಿಕ್ಷಣದ ಎಲ್ಲ ನೆಲೆಗಳೂ ಸಮನಾಗಿ ಬೆಳೆಯುವಂತೆ ಸರಿಯಾಗಿ ವಿನಿಯೋಗಿಸುವ ಹೊಣೆಯನ್ನು ನಿರ್ವಹಿಸುತ್ತಲಿದೆ.

ಆಡಳಿತ ವಿಭಾಗವು ಸಿಬ್ಬಂದಿಗಳ ಸೇವಾವ್ಯವಸ್ಥೆ , ವೇತನ ಸಾದಿಲ್ವಾರು ಮೊದಲಾದ ಮುಖ್ಯ ಚಟುವಟಿಕೆಗಳನ್ನು ನಿಭಾಯಿಸುತ್ತಿದೆ.

ಅಭಿವೃದ್ಧಿ ವಿಭಾಗವು ಕಟ್ಟಡ, ರಸ್ತೆ, ನೀರು, ದೀಪ, ಉದ್ಯಾನ, ಅರಣ್ಯೀಕರಣ ಮೊದಲಾದ ಅಭಿವೃದ್ಧಿ ಕಾರ್ಯಗಳನ್ನು ನೋಡಿಕೊಳ್ಳುತ್ತಿದೆ. ಇದರ ಅಂಗವಾಗಿ ತಾಂತ್ರಿಕ ವಿಭಾಗ ಮತ್ತು ಉದ್ಯಾನ ವಿಭಾಗಗಳು ಶ್ರಮಿಸುತ್ತಿವೆ.

ಪ್ರಸಾರಾಂಗ

ಕನ್ನಡ ಕನ್ನಡಿಗ ಕರ್ನಾಟಕ ಶೋಧ ಒಂದು ಹಂತವಾದರೆ, ಪ್ರಕಟನೆ ಇಲ್ಲಿಯ ಇನ್ನೊಂದು ಹಂತವಾಗಿದೆ. ವಿಭಾಗಗಳು ಪೂ ರೈಸುವ ‘ಶೋಧಕಾರ್ಯ’ ವನ್ನು ‘ಪ್ರಕಟನಕಾರ್ಯ’ ವನ್ನಾಗಿ ಪರಿವರ್ತಿಸುವುದು ಪ್ರಸಾರಾಂಗ. ಹೀಗಾಗಿ ಈ ವಿಭಾಗಕ್ಕೆ ಕನ್ನಡ ವಿಶ್ವವಿದ್ಯಾಲಯದಲ್ಲಿ ಅಗ್ರಮಾನ್ಯ ಸ್ಥಾನವಿದೆ.

ಪ್ರಸಾರಾಂಗ ಪು ಸ್ತಕ ಪ್ರಕಟಣೆ-ಮಾರಾಟ, ಪತ್ರಿಕೆಗಳ ಪ್ರಕಟಣೆ-ವಿತರಣೆ, ಉಪನ್ಯಾಸಗಳ ನಿರ್ವಹಣೆಯೆಂಬ ಮೂರು ದಾರಿಗಳಲ್ಲಿ ಮುನ್ನಡೆಯುತ್ತಿದೆ. ಈವರೆಗೆ ಇದು ಬೆಳಕಿಗೆ ತಂದ ವಿಶ್ವಕೋಶಗಳು, ಚರಿತ್ರೆಯ ಸಂಪುಟಗಳು, ಬುಡಕಟ್ಟು ಮಹಾಕಾವ್ಯಗಳು ಸಂಪುಟ ಶ್ರೇಣಿಯ ಮಹತ್ವದ ಕೃತಿಗಳೆನಿಸಿವೆ. ಹೊಸತು-ಹೊಸತು, ಚಂದ್ರಕೊಡೆ, ಕರ್ನಾಟಕದ ಕೈಫಿಯತ್ತುಗಳು, ಮಹಾಯಾತ್ರೆ ಕನ್ನಡಕ್ಕೆ ವಿಶಿಷ್ಟ ಕೊಡುಗೆಗಳೆನಿಸಿವೆ. ಇವುಗಳನ್ನು ‘ಪುಸ್ತಕಯಾತ್ರೆ’ ಹೆಸರಿನಲ್ಲಿ ಮಾರಾಟ ಮಾಡುವ ಮೂಲಕ ಕನ್ನಡಿಗರ ಮನೆಮನೆಗೆ ಮುಟ್ಟಿಸುವ ಕೆಲಸವೂ ತುಂಬ ಸಮರ್ಪಕವಾಗಿ ನಡೆದಿದೆ. ಪುಸ್ತಕದಷ್ಟೇ ಮಹತ್ವದ ಕೆಲಸ ಪತ್ರಿಕೆಗಳ ಪ್ರಕಟನೆ. ‘ಮಹಿಳಾ ಅಧ್ಯಯನ’ , ‘ಕನ್ನಡ ಅಧ್ಯಯನ’ , ‘ಚೆಲುವ ಕನ್ನಡ’ , ‘ಪುಸ್ತಕಮಾಹಿತಿ’ , ‘ಜಾನಪದ ಕರ್ನಾಟಕ’ , ‘ಅಭಿವೃದ್ಧಿ ಅಧ್ಯಯನ’ , ‘ದ್ರಾವಿಡ ಅಧ್ಯಯನ’ , ‘ಹಸ್ತಪ್ರತಿ ಅಧ್ಯಯನ’ , ‘ಶಾಸನ ಅಧ್ಯಯನ’ , ‘ಜರ್ನಲ್ ಆಫ್ ಕರ್ನಾಟಕ ಸ್ಟಡೀಸ್’ ಎಂಬ ಪತ್ರಿಕೆಗಳನ್ನು ಪ್ರಕಟಿಸುತ್ತಿದೆ. ಈ ಪತ್ರಿಕೆಗಳನ್ನು ಪ್ರಕಟಿಸುವ ಮೂಲಕ ಜ್ಞಾನಪ್ರಸಾರದೊಂದಿಗೆ ಬರೆಹಗಾರರಿಗೆ ಉತ್ತೇಜನ ನೀಡುತ್ತಲಿದೆ.

ಜನಸಮ್ಮುಖವಾದಷ್ಟು ವಿಶ್ವವಿದ್ಯಾಲಯ ಸಾರ್ಥಕತೆ ಪಡೆಯುತ್ತದೆ. ಈ ಮೇರೆಗೆ ತನ್ನ ವಿಶೇಷೋಪನ್ಯಾಸ, ಪ್ರಚಾರೋಪನ್ಯಾಸಗಳ ಮೂಲಕ ಕನ್ನಡ ವಿಶ್ವವಿದ್ಯಾಲಯವನ್ನು ಜನರ ನಡುವೆ ಕೊಂಡೊಯ್ಯುವ ಕೆಲಸವನ್ನು ಪ್ರಸಾರಾಂಗ ಪೂ ರೈಸುತ್ತಲಿದೆ. ಈ ಹೊಣೆಯ ಅಂಗವೆನಿಸಿದ ‘ಪ್ರಚಾರೋಪನ್ಯಾಸ’ದ ಪುಸ್ತಕಗಳು, ‘ಮಂಟಪಮಾಲೆ’ ಹೆಸರಿನಿಂದ ಈಗಾಗಲೇ ಜನಪ್ರಿಯವೆನಿಸಿವೆ.

ಅಧ್ಯಯನಾಂಗ

ಅಧ್ಯಯನಾಂಗವು ಈ ವಿಶ್ವವಿದ್ಯಾಲಯದ ಹೃದಯಸ್ಥಾನವಾಗಿದ್ದು ಸಂಶೋಧನಾ ಕಾರ್ಯವನ್ನು ಪ್ರಧಾನವಾಗಿ, ಬೋಧನಕಾರ್ಯವನ್ನು ರಕವಾಗಿ ಯೋಜಿಸುತ್ತ , ಯೋಜನೆಗಳನ್ನು ಕಾರ್ಯಗತಗೊಳಿಸುತ್ತದೆ. ಪದವಿ, ಡಿ ಪ್ಲೊ ಮಾ, ಎಂ.ಫಿಲ್, ಪಿಎಚ್.ಡಿ., ಡಿಲಿಟ್, ಸಂಯೋಜಿತ ಸ್ನಾತಕೋತ್ತರ ಪದವಿ ಎಂ.ಎ ಪಿಎಚ್.ಡಿ ಮೊದಲಾದವುಗಳ ಬೋಧನೆ, ಪಠ್ಯಕ್ರಮ, ಕಾರ್ಯಾಗಾರ, ನೋಂದಣಿ, ಪರೀಕ್ಷೆಗಳನ್ನು ಇದು ನೋಡಿಕೊಳ್ಳುತ್ತದೆ. ಜೊತೆಗೆ ರಾಜ್ಯ ಮತ್ತು ರಾಷ್ಟ್ರಮಟ್ಟದ ಶಿಕ್ಷಣ ಇಲಾಖೆ, ಭಾರತೀಯ ವಿಶ್ವವಿದ್ಯಾಲಯ ಸಂಸ್ಥೆ , ವಿಶ್ವವಿದ್ಯಾಲಯದ ಧನಸಹಾಯ ಆಯೋಗಗಳೊಂದಿಗೆ ಸಂಬಂಧವನ್ನು ಬೆಳೆಸಿ, ವಿಶ್ವವಿದ್ಯಾಲಯದ ಶೈಕ್ಷಣಿಕ ಸಂವರ್ಧನೆಗೆ ದುಡಿಯುತ್ತಿದೆ.

ಅಧ್ಯಯನಾಂಗದಲ್ಲಿ ಒಟ್ಟು ಮೂರು ನಿಕಾಯಗಳಿವೆ

1 ಭಾಷಾ ನಿಕಾಯ
2 ಸಮಾಜ ವಿಜ್ಞಾಗಳ ನಿಕಾಯ
3. ಲಲಿತ ಕಲೆಗಳ ನಿಕಾಯ

1. ಭಾಷಾ ನಿಕಾಯ
ಅ.ಕನ್ನಡ ಸಾಹಿತ್ಯ ಅಧ್ಯಯನ ವಿಭಾಗ
ಆ. ಕನ್ನಡ ಭಾಷಾಧ್ಯಯನ ವಿಭಾಗ
ಇ. ಭಾಷಾಂತರ ಅಧ್ಯಯನ ವಿಭಾಗ
ಈ. ದ್ರಾವಿಡ ಸಂಸ್ಕೃತಿ ಅಧ್ಯಯನ ವಿಭಾಗ
ಉ. ಹಸ್ತಪ್ರತಿಶಾಸ್ತ್ರ ವಿಭಾಗ
ಊ. ಮಹಿಳಾ ಅಧ್ಯಯನ ವಿಭಾಗ

2. ಸಮಾಜವಿಜ್ಞಾನಗಳ ನಿಕಾಯ

ಅ. ಚರಿತ್ರೆ ವಿಭಾಗ
ಆ. ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಭಾಗ
ಇ. ಶಾಸನಶಾಸ್ತ್ರ ವಿಭಾಗ
ಈ. ಜಾನಪದ ಅಧ್ಯಯನ ವಿಭಾಗ
ಉ. ಅಭಿವೃದ್ಧಿ ಅಧ್ಯಯನ ವಿಭಾಗ
ಊ.ಬುಡಕಟ್ಟು ಅಧ್ಯಯನ ವಿಭಾಗ
ಋ. ಮಾನವಶಾಸ್ತ್ರ ವಿಭಾಗ

3. ಲಲಿತ ಕಲೆಗಳ ನಿಕಾಯ

ಅ. ಸಂಗೀತ ಮತ್ತು ನೃತ್ಯ ವಿಭಾಗ

ಆ. ದೃಶ್ಯಕಲಾ ವಿಭಾಗ

ಇ. ಶಿಲ್ಪ ಮತ್ತು ವರ್ಣಚಿತ್ರಕಲಾ ವಿಭಾಗ, ಬಾದಾಮಿ

ಈ. ನಾಟಕ ವಿಭಾಗ

4. ವಿಜ್ಞಾನಗಳ ನಿಕಾಯ

 

 ಅಧ್ಯಯನ ಕೇಂದ್ರಗಳು

ಅ. ಕುವೆಂಪು ಕನ್ನಡ ಅಧ್ಯಯನ ಕೇಂದ್ರ,ಕುಪ್ಪಳಿ
ಆ. ವಾಸ್ತುಶಿಲ್ಪ ಮತ್ತು ಪ್ರತಿಮಾ ಶಾಸ್ತ್ರ ವಿಭಾಗ, ಬಾದಾಮಿ
ಇ. ಅಂತರಾಷ್ಟ್ರೀಯ ವಚನ ಅಧ್ಯಯನ ಕೇಂದ್ರ, ಕೂಡಲಸಂಗಮ
ಈ. ದೇಸಿ ಸಂಸ್ಕೃತಿ ಅಧ್ಯಯನ ಕೇಂದ್ರ, ಕುರುಬನಕಟ್ಟೆ
ಉ. ದೇವದುರ್ಗ