ಕನ್ನಡ ವಿಶ್ವವಿದ್ಯಾಲಯವು ಆರಂಭದಿಂದಲೂ ಸಂಶೋಧನೆಗೆ ಹೆಚ್ಚು ಒತ್ತುಕೊಟ್ಟಿದೆ. ವಿವಿಧ ವಿಭಾಗಗಳಲ್ಲಿ ನಡೆಯುವ ಸಂಶೋಧನ ಬರಹಗಳನ್ನು ವಿವಿಧ ನಿಯತಕಾಲಿಕೆಗಳಲ್ಲಿ ನಿರಂತರವಾಗಿ ಪ್ರಕಟಿಸುತ್ತಾ ಬಂದಿದೆ. ಸಂಶೋಧನೆಯ ಫಲಿತಗಳನ್ನು ಆಸಕ್ತ ಓದುಗರಿಗೆ ತಲುಪಿಸುವ ಕಾಯಕವನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದೆ.
ಭಾರತದ ಯಾವ ವಿಶ್ವವಿದ್ಯಾಲಯಗಳೂ ಕನ್ನಡ ವಿಶ್ವವಿದ್ಯಾಲಯಲವು ಪ್ರಕಟಿಸುವಷ್ಟು ನಿಯತಕಾಲಿಕೆಗಳನ್ನು ಪ್ರಕಟಿಸುತ್ತಿಲ್ಲ.

ವಿಜ್ಞಾನ ಸಂಗಾತಿ (ಮಾಸಿಕ)

ಜನಪ್ರಿಯ ವಿಜ್ಞಾನವನ್ನು ವಿದ್ಯಾರ್ಥಿಗಳಿಗೆ ಮತ್ತು ಆಸಕ್ತ ಜನಸಾಮಾನ್ಯರಿಗೆ ತಲುಪಿಸುವ ಉದ್ದೇಶದಿಂದ ವಿಶ್ವವಿದ್ಯಾಲಯವು ‘ವಿಜ್ಞಾನ ಸಂಗಾತಿ’ ಯನ್ನು ಮಾಸಿಕ ಪತ್ರಿಕೆಯಾಗಿ ಪ್ರಕಟಿಸುತ್ತಿದೆ. ವಿಜ್ಞಾನದಲ್ಲಿ ಎಲ್ಲ ವಿಷಯಗಳಿಗೆ ಸಂಬಂಧಿಸಿದ ಅಧ್ಯಯನ ಮತ್ತು ಸಂಶೋಧನೆ ಕುರಿತ ಲೇಖನಗಳು ಈ ನಿಯತಕಾಲಿಕೆಯಲ್ಲಿ ಹೊರಬರುತ್ತಿವೆ. ಸಾಮಾನ್ಯ ಓದುಗರಿಗೂ ಅರ್ಥವಾಗುವಂತಹ ಸರಳಗನ್ನಡದಲ್ಲಿ ವಿಷಯ ವಿವರಣೆಯುಳ್ಳ ಲೇಖನಗಳು ಸಚಿತ್ರವಾಗಿ ರೂಪಿತವಾಗಿರುತ್ತವೆ.
ವೈಜ್ಞಾನಿಕ ಮನೋಭಾವವನ್ನು ಬೆಳೆಸುವಲ್ಲಿ ತೊಡಗಿರುವ ವಿಜ್ಞಾನ ಸಂಗಾತಿಯು ವಿದ್ಯಾರ್ಥಿ ಮತ್ತು ಜನಸಾಮಾನ್ಯರ ಆತ್ಮೀಯ ಸಂಗಾತಿಯೆಂದೇ ಜನಪ್ರಿಯವಾಗಿದೆ.

ಬಿಡಿ ಪ್ರತಿ : 15.00
ವಾರ್ಷಿಕ ಚಂದಾ (ವ್ಯಕ್ತಿಗಳಿಗೆ) : 150.00
ತ್ರೈವಾರ್ಷಿಕ ಚಂದಾ (ವ್ಯಕ್ತಿಗಳಿಗೆ) : 400.00
ವಾರ್ಷಿಕ ಚಂದಾ (ಶಾಲಾಕಾಲೇಜು, ಸಂಸ್ಥೆಗಳು) : 180.00
ತ್ರೈವಾರ್ಷಿಕ ಚಂದಾ (ಶಾಲಾಕಾಲೇಜು, ಸಂಸ್ಥೆಗಳು) : 500.00


ಪುಸ್ತಕ ಮಾಹಿತಿ (ತ್ರೈಮಾಸಿಕ)

ಕನ್ನಡ ಪುಸ್ತಕಲೋಕಕ್ಕೆ ಸಂಬಂಧಿಸಿದ ವಿಪುಲವಾದ ಮಾಹಿತಿಯನ್ನು ನೀಡುವ ವಿಶಿಷ್ಟ ಪತ್ರಿಕೆ. ಕಳೆದ 12 ವರ್ಷಗಳಿಂದ ನಿರಂತರವಾಗಿ ಕನ್ನಡದ ವೈವಿಧ್ಯಮಯ ಪುಸ್ತಕಗಳನ್ನು ಈ ಪತ್ರಿಕೆಯು ಓದುಗರಿಗೆ ಪರಿಚಯಿಸುತ್ತಾ ಬಂದಿದೆ. ಆಯಾ ತಿಂಗಳಲ್ಲಿ ಪ್ರಕಟವಾದ ಪುಸ್ತಕ ಮಾಹಿತಿಯನ್ನು ವರ್ಗೀಕರಿಸಿ ತಿಂಗಳ ಪುಸ್ತಕ, ನಮ್ಮ ಪ್ರಕಟಣೆ, ಪರಿಶೀಲನೆ, ಮೊದಲ ನೋಟ, ನಾವು ನೋಡಿದ ಪುಸ್ತಕ, ಹಳೆಯ ಪುಸ್ತಕ, ಪ್ರಕಾಶ-ಪ್ರಕಾಶನ, ಹೊಸಬೆಳೆ ಮತ್ತು ಪುಸ್ತಕ ಬಿಡುಗಡೆ-ಪ್ರಶಸ್ತಿ ಸುದ್ದಿ ಅಂಕಣಗಳಲ್ಲಿ ವ್ಯವಸ್ಥಿತವಾಗಿ ಸಂಯೋಜಿಸಿ ಕೊಡಲಾಗುತ್ತಿದೆ.
ಓದುಗರಿಗೆ, ಗ್ರಂಥಾಲಯಗಳಿಗೆ, ಪುಸ್ತಕ ಮಾರಾಟಗಾರರಿಗೆ, ಶಾಲಾ ಕಾಲೇಜು, ಸಂಘ-ಸಂಸ್ಥೆಗಳಿಗೆ, ಲೇಖಕರಿಗೆ, ಪ್ರಕಾಶಕರಿಗೆ, ಸಂಶೋಧಕರಿಗೆ ಪುಸ್ತಕ ಮಾಹಿತಿಯ ಅತ್ಯಂತ ಉಪಯುಕ್ತವಾದ ನಿಯತಕಾಲಿಕೆ. ತುಂಬಾ ಕಡಿಮೆ ಬೆಲೆಯಲ್ಲಿ ಪುಸ್ತಕಗಳ ಬಗ್ಗೆ ಸಮೃದ್ಧ ಮಾಹಿತಿಯನ್ನು ನೀಡುವ ಕನ್ನಡದ ಏಕೈಕ ಪತ್ರಿಕೆಯಾಗಿದೆ.

ವಾರ್ಷಿಕ ಚಂದಾ : 50.00
ತ್ರೈವಾರ್ಷಿಕ ಚಂದಾ: 150.00


ಚೆಲುವ ಕನ್ನಡ (ತ್ರೈಮಾಸಿಕ)

ವಿಶ್ವವಿದ್ಯಾಲಯದ ಮುಖವಾಣಿಯಾಗಿರುವ ಈ ಪತ್ರಿಕೆಯು ವಿಶ್ವವಿದ್ಯಾಲಯ ಮತ್ತು ಕನ್ನಡ ಜನತೆಯು ನಡುವಿನ ಸೇತುವೆಯಾಗಿದೆ. ಇದು ನಾಡಿನ ಜನತೆಯ ಅಭಿಪ್ರಾಯಗಳನ್ನು ದಾಖಲಿಸುತ್ತದೆ. ವಿಶ್ವವಿದ್ಯಾಲಯ ಕೈಗೊಂಡಿರುವ ಯೋಜನೆಗಳು, ಪ್ರಸಾರಾಂಗದ ಪ್ರಕಟಣೆಗಳು, ನಿಯತಕಾಲಿಕೆಗಳು, ನುಡಿಹಬ್ಬ, ನಾಡೋಜ ಪದವಿ, ವಿಶ್ವವಿದ್ಯಾಲಯ ನಡೆಸುವ ವಿಚಾರ ಸಂಕಿರಣಗಳು, ಶಿಬಿರಗಳು, ಕಮ್ಮಟಗಳು, ಉಪನ್ಯಾಸ ಮಾಲೆಗಳು ಮತ್ತು ವಿಶ್ವವಿದ್ಯಾಲಯದ ಇತರ ಕಾರ್ಯಚಟುವಟಿಕೆಗಳ ಕುರಿತು ಸಂಕ್ಷಿಪ್ತ ಮಾಹಿತಿಯನ್ನು ನಾಡಿನ ಜನತೆಗೆ ತಿಳಿಸುವುದೇ ಈ ವಾರ್ತಾಪತ್ರದ ಉದ್ದೇಶವಾಗಿದೆ.

ವಾರ್ಷಿಕ ಚಂದಾ : 50.00


ನಮ್ಮ ಕನ್ನಡ (ಮಾಸಿಕ)

ಕನ್ನಡ ದಿನದಿನವೂ ಬದಲಾಗುತ್ತಿರುವ ಭಾಷೆ. ಆಧುನೀಕರಣಗೊಳ್ಳುತ್ತಿರುವ ಕನ್ನಡದ ರಚನೆ ಮತ್ತು ಬಳಕೆಗಳ ನೆಲೆಯಲ್ಲಿ ತೀವ್ರವಾದ ಪರಿವರ್ತನೆಗಳು ನಡೆಯುತ್ತಿವೆ. ಈ ಪ್ರಕ್ರಿಯೆಯನ್ನು ದಾಖಲಿಸುತ್ತಲೇ ಅಧ್ಯಯನ ಮಾಡುವುದು ‘ನಮ್ಮ ಕನ್ನಡ’ ಪತ್ರಿಕೆಯ ಮುಖ್ಯ ಗುರಿ. ಇಲ್ಲಿ ಕನ್ನಡದ ವಿವಿಧ ಪ್ರಭೇದಗಳ ಸ್ವರೂಪವನ್ನು ಗಮನಿಸಲಾಗುತ್ತದೆ. ಭಾಷಾಯೋಜನೆ, ಪರಿಕರ ನಿರ್ಮಾಣ, ಕಲಿಕೆ, ಬೋಧನೆ ಇತ್ಯಾದಿ ವಲಯಗಳ ಸಮಸ್ಯೆಯನ್ನು ಪ್ರಾಸಂಗಿಕವಾಗಿ ಚರ್ಚಿಸಲಾಗುತ್ತಿದೆ.
‘ನಮ್ಮ ಕನ್ನಡ’ ಪತ್ರಿಕೆ ಚಂದಾದಾರರಾಗಬಯಸುವವರು ಕನಿಷ್ಟ 100 ರೂ.ಗಳನ್ನು ‘ನಮ್ಮ ಕನ್ನಡ ಸ್ಥಾಯಿ ನಿಧಿ’ ಗೆ ನೀಡುವ ಮೂಲಕ ಪತ್ರಿಕೆಯನ್ನು ಪಡೆಯಬಹುದು.


ಕನ್ನಡ ಅಧ್ಯಯನ (ಅರ್ಧವಾರ್ಷಿಕ)

ಕನ್ನಡ ವಿಶ್ವವಿದ್ಯಾಲಯವು ತಾನೊಂದು ಸಂಶೋಧನ ಸಂಸ್ಥೆಯಾಗಿ ಪ್ರಕಟಿಸುತ್ತಿರುವ ಒಂದು ವಿದ್ವತ್ ಪತ್ರಿಕೆ. ಇದು ಕರ್ನಾಟಕದ ಅಧ್ಯಯನಗಳಿಗೆ ಮೀಸಲಾಗಿದೆ. ಕರ್ನಾಟಕದ ಜನತೆ, ಸಮಾಜ, ಭಾಷೆ, ಸಾಹಿತ್ಯ, ಸಂಸ್ಕೃತಿ, ಚರಿತ್ರೆ, ಧರ್ಮ, ಆರ್ಥಿಕತೆ, ರಾಜಕಾರಣ, ಪರಿಸರ, ಕಲೆ ಮುಂತಾದ ಕ್ಷೇತ್ರಗಳಲ್ಲಿ ನಡೆಯುವ ಚರ್ಚೆ ಶೋಧಗಳು ಇಲ್ಲಿಯ ಹೂರಣವಾಗಿರುತ್ತವೆ. ಇದು ನಾಡಿನ ಗತದ ತಡಕಾಟವನ್ನು, ವರ್ತಮಾನದ ಮುಖಾಮುಖಿಯನ್ನು, ಭವಿಷ್ಯದ ಕನಸು ಕಟ್ಟುವಿಕೆಯನ್ನು ಏಕಕಾಲದಲ್ಲಿ ಮಾಡಬಯಸುತ್ತದೆ. ಈ ಮೂಲಕ ವಿದ್ವಾಂಸರಿಗೆ ಸಾಂಸ್ಕೃತಿಕ ವೇದಿಕೆಯಾಗಿಯೂ ಓದುಗರಿಗೆ ಬೌದ್ಧಿಕ ಸಂಗಾತಿಯಾಗಿಯೂ ಆಗಬೇಕೆಂಬ ಹಂಬಲವಾಗಿದೆ. ಕನ್ನಡ ಅಧ್ಯಯನ ಪತ್ರಿಕೆಯ ಪ್ರತಿ ಸಂಟದಲ್ಲಿ ಚಳಿ, ಗಾಳಿ, ಮಳೆ, ಬಿಸಿಲು, ಎಂಬ ನಾಲ್ಕು ಸಂಚಿಕೆಗಳು ಇರುತ್ತವೆ.

ಬಿಡಿ ಪ್ರತಿ : 50.00
ವಾರ್ಷಿಕ ಚಂದಾ (ವ್ಯಕ್ತಿಗಳಿಗೆ) : 80.00
ತ್ರೈವಾರ್ಷಿಕ ಚಂದಾ (ವ್ಯಕ್ತಿಗಳಿಗೆ): 200.00
ವಾರ್ಷಿಕ ಚಂದಾ (ಶಾಲಾಕಾಲೇಜು, ಸಂಸ್ಥೆಗಳು) : 100.00
ತ್ರೈವಾರ್ಷಿಕ ಚಂದಾ (ಶಾಲಾಕಾಲೇಜು, ಸಂಸ್ಥೆಗಳು): 250.00


ಮಹಿಳಾ ಅಧ್ಯಯನ (ಅರ್ಧವಾರ್ಷಿಕ)

ಮಹಿಳೆಯು ತನ್ನ ಸ್ವಂತಿಕೆಯನ್ನು ಸ್ಥಾಪಿಸುವ ಹಾದಿಯಲ್ಲಿ ಅನೇಕ ಬಗೆಯ ಎಡರು ತೊಡರುಗಳು ಪುರುಷಪ್ರಧಾನ ಸಮಾಜದಲ್ಲಿ ಸಹಜವಾಗಿ ಎದುರಾಗುತ್ತವೆ. ಅವುಗಳನ್ನು ಎದುರಿಸಿ ತನ್ನತನವನ್ನು ನೆಲೆಗೊಳಿಸುವ ಕಾರ್ಯ ಪರಿಣಾಮಕಾರಿಯಾಗಿ ನಡೆಯಬೇಕಾಗಿದೆ. ತನ್ನ ಆಶಯಕ್ಕೆ ಅನುಗುಣವಾಗಿ ಮಹಿಳೆಯನ್ನು ರೂಪಿಸುವುದರಲ್ಲಿ ಸದಾ ನಿರತರಾಗಿರುವ ಪುರುಷಪ್ರಧಾನ ಸಮಾಜವು ಹೆಣ್ಣಿನ ಅಗತ್ಯಗಳ ಬಗ್ಗೆ ಸದಾಶಯ ಮತ್ತು ಸಹಾನುಭೂತಿಯನ್ನು ಹೊಂದಬೇಕಾದ ಅಗತ್ಯವಿದೆ. ಇಂದಿನ ಎಚ್ಚೆತ್ತ ಮಹಿಳೆ ತನ್ನ ವರ್ತಮಾನ ಮತ್ತು ಭವಿಷ್ಯಗಳನ್ನು ತಿದ್ದಿ ಸರಿಪಡಿಸುವ ಶಕ್ತಿಯನ್ನು ಪಡೆದುಕೊಳ್ಳುತ್ತಿದ್ದಾಳೆ. ಈ ಹಂತದಲ್ಲಿ ಗಂಭೀರವಾದ ಚಿಂತನೆ, ಚರ್ಚೆ, ಸಲಹೆ, ಸೂಚನೆಗಳು ಅವಳ ಪ್ರಯತ್ನಕ್ಕೆ ಅಗತ್ಯವಿದೆ. ಈ ಕಾರ್ಯವನ್ನು ಪೂರೈಸುವ ಪ್ರಯತ್ನವಾಗಿ ಮಹಿಳಾ ಅಧ್ಯಯನ ಕಾರ್ಯನಿರತವಾಗಿದೆ.

ಬಿಡಿ ಪ್ರತಿ : 50.00
ವಾರ್ಷಿಕ ಚಂದಾ (ವ್ಯಕ್ತಿಗಳಿಗೆ) : 80.00
ತ್ರೈವಾರ್ಷಿಕ ಚಂದಾ (ವ್ಯಕ್ತಿಗಳಿಗೆ): 200.00
ವಾರ್ಷಿಕ ಚಂದಾ (ಶಾಲಾಕಾಲೇಜು, ಸಂಸ್ಥೆಗಳು) : 100.00
ತ್ರೈವಾರ್ಷಿಕ ಚಂದಾ (ಶಾಲಾಕಾಲೇಜು, ಸಂಸ್ಥೆಗಳು): 250.00


ಅಭಿವೃದ್ಧಿ ಅಧ್ಯಯನ (ಅರ್ಧವಾರ್ಷಿಕ)

ಸಮಾಜ ವಿಜ್ಞಾನ ಜ್ಞಾನಕ್ಷೇತ್ರಕ್ಕೆ ಸಂಬಂಧಿಸಿದಂತೆ ದೇಶ ಭಾಷೆಗಳಲ್ಲಿ ಪತ್ರಿಕೆಯೊಂದು ಪ್ರಕಟವಾಗುತ್ತಿರುವುದು ಅಪರೂಪವಾಗಿದೆ. ಆದರೆ ಅದರ ಅಗತ್ಯ ಈ ಹಿಂದಿಗಿಂತ ಇಂದು ಅನಿವಾರ್ಯವಾಗಿದೆ. ಆಧುನಿಕ ಸಮಾಜವು ಎದುರಿಸುತ್ತಿರುವ ಅನೇಕ ಬಗೆಯ ಸಮಸ್ಯೆಗಳನ್ನು ಅರ್ಥೈಸಿಕೊಡಲು ಸಮಾಜ ವಿಜ್ಞಾನದಲ್ಲಿನ ಸಂಶೋಧನೆ, ಅಧ್ಯಯನಗಳು ಇಂದು ಕೈದೀವಿಗೆಯಾಗಿವೆ. ಈ ದಿಕ್ಕಿನಲ್ಲಿ ಪ್ರಕಟವಾಗುತ್ತಿರುವ ಅಭಿವೃದ್ಧಿ ಅಧ್ಯಯನ ಪತ್ರಿಕೆಯ ಪಾತ್ರವೂ ಮಹತ್ತರದ್ದಾಗಿದೆ. ಆರ್ಥಿಕ ಸ್ಥಿತಿಗತಿಗಳು, ಸಮಾಜೋ ರಾಜಕೀಯ ಆಯಾಮಗಳು ಪರಸ್ಪರ ಸಂಬಂಧ ಹೊಂದಿದ್ದು ಇವುಗಳ ಅಧ್ಯಯನಗಳಿಗೆ ಈ ನಿಯತಕಾಲಿಕೆಯು ಕನ್ನಡದ ಮುಖವಾಣಿಯಾಗಿದೆ. ಇಂದು ಸಂಸ್ಕೃತಿಯ ಮುಂಚೂಣಿಯ ಸ್ಥಾನವನ್ನು ಕಲೆ ಸಂಸ್ಕೃತಿ ಆವರಿಸಿಕೊಂಡಿದ್ದು ಅವುಗಳೊಂದಿಗೆ ಅಭಿವೃದ್ಧಿಯ ಕಲ್ಪನೆಯೂ ಸೇರಿಕೊಳ್ಳಬೇಕಾದ ಅವಶ್ಯಕತೆಯಿದೆ. ಇದನ್ನು ಸಾಕಾರಗೊಳಿಸುವುದು ಈ ಪತ್ರಿಕೆಯ ಮುಖ್ಯ ಧ್ಯೇಯವಾಗಿದೆ.

ಬಿಡಿ ಪ್ರತಿ : 50.00
ವಾರ್ಷಿಕ ಚಂದಾ (ವ್ಯಕ್ತಿಗಳಿಗೆ) : 80.00
ತ್ರೈವಾರ್ಷಿಕ ಚಂದಾ (ವ್ಯಕ್ತಿಗಳಿಗೆ): 200.00
ವಾರ್ಷಿಕ ಚಂದಾ (ಶಾಲಾಕಾಲೇಜು, ಸಂಸ್ಥೆಗಳು) : 100.00
ತ್ರೈವಾರ್ಷಿಕ ಚಂದಾ (ಶಾಲಾಕಾಲೇಜು, ಸಂಸ್ಥೆಗಳು): 250.00


ದ್ರಾವಿಡ ಅಧ್ಯಯನ (ಅರ್ಧವಾರ್ಷಿಕ)

ದ್ರಾವಿಡ ಸಂಸ್ಕೃತಿಯು ದಕ್ಷಿಣ ಭಾರತದ ಹಲವು ಭಾಷೆಗಳನ್ನಾಡುವ ಜನರ ಜೀವನಾಡಿಯಾಗಿದೆ. ಭಿನ್ನ ಸಾಧ್ಯತೆಗಳನ್ನುಳ್ಳ ದ್ರಾವಿಡ ಸಂಸ್ಕೃತಿಯನ್ನು ಒಂದು ಪರಿಕಲ್ಪನೆಯಾಗಿ ಅಧ್ಯಯನ ಮಾಡಬೇಕಾದ ಅಗತ್ಯವಿದೆ. ವಿಭಿನ್ನ ಬಗೆಯ ಜನ-ಜೀವನ, ಭಾಷೆ, ಸಾಹಿತ್ಯ, ಚರಿತ್ರೆ, ಧರ್ಮ, ಆಕತೆ, ರಾಜಕಾರಣ, ಕಲೆ, ಪರಿಸರ ಮುಂತಾದ ಕ್ಷೇತ್ರಗಳ ಶೋಧ ನಮ್ಮನ್ನು ನಾವು ಅರಿಯುವಲ್ಲಿನ ಹೊಸ ಹೆಜ್ಜೆಯಾಗಿದೆ.
ಈ ಪತ್ರಿಕೆಯ ಮೂಲಕ ನಡೆಸಲಾಗುವ ಚರ್ಚೆ, ಸಂವಾದ ಚಿಂತನೆಗಳು ಈ ಕಾಲದ ತವಕ-ತಲ್ಲಣ, ನಾಳಿನ ಕಲ್ಪಿತ ಸುಂದರ ಬದುಕಿನ ಬಗ್ಗೆ ಹೊಸ ನೋಟ ನೀಡಬೇಕೆಂಬ ಅಪೇಕ್ಷೆಯಾಗಿದೆ. ಈ ಪತ್ರಿಕೆಯು ಕನ್ನಡ ವಿದ್ವತ್ ಲೋಕವನ್ನು ಬೆಳಗಿಸುವ ಆಶಯವನ್ನು ಹೊಂದಿದೆ.

ಬಿಡಿ ಪ್ರತಿ : 50.00
ವಾರ್ಷಿಕ ಚಂದಾ (ವ್ಯಕ್ತಿಗಳಿಗೆ) : 80.00
ತ್ರೈವಾರ್ಷಿಕ ಚಂದಾ (ವ್ಯಕ್ತಿಗಳಿಗೆ): 200.00
ವಾರ್ಷಿಕ ಚಂದಾ (ಶಾಲಾಕಾಲೇಜು, ಸಂಸ್ಥೆಗಳು) : 100.00
ತ್ರೈವಾರ್ಷಿಕ ಚಂದಾ (ಶಾಲಾಕಾಲೇಜು, ಸಂಸ್ಥೆಗಳು): 250.00


ಜಾನಪದ ಕರ್ನಾಟಕ (ಅರ್ಧವಾರ್ಷಿಕ)

ಇಂದು ಶಿಷ್ಟಸಾಹಿತ್ಯದ ಅಧ್ಯಯನವು ವ್ಯಾಪಕ ನೆಲೆಯಲ್ಲಿರುವಷ್ಟು ಪ್ರಮಾಣ ಜಾನಪದ ಕ್ಷೇತ್ರದಲ್ಲಿ ಅಧ್ಯಯನ ನಡೆಯುತ್ತಿಲ್ಲವೆಂಬುದು ಎದ್ದು ಕಾಣುವ ಒಂದು ಕೊರತೆಯಾಗಿದೆ. ಕನ್ನಡ ಸಂಸ್ಕೃತಿಯ ಸಂಶೋಧನೆ ಮತ್ತು ಅಧ್ಯಯನದಲ್ಲಿ ತೊಡಗಿರುವ ಕನ್ನಡ ವಿಶ್ವವಿದ್ಯಾಲಯವು ಈ ಕೊರತೆಯನ್ನು ನೀಗಿಸಲು ‘ಜಾನಪದ ಕರ್ನಾಟಕ’ ಎಂಬ ನಿಯತಕಾಲಿಕೆಯನ್ನು ಹೊರತಂದಿದೆ.
ಇದರಲ್ಲಿ ಕರ್ನಾಟಕ ಜಾನಪದ ವೈವಿಧ್ಯವನ್ನು ಅಧ್ಯಯನಕ್ಕೆ ಒಳಪಡಿಸಿದ ಸಂಶೋಧನ ಲೇಖನಗಳು, ವಿಶೇಷ ವಿಶ್ಲೇಷಣೆಗಳನ್ನೊಳಗೊಂಡ ಬರಹಗಳು ಹೊಸ ಅರಿವನ್ನು ಚೆಲ್ಲುವಂತೆ ಇರುತ್ತವೆ. ಇಂದಿನ ಅಲಕ್ಷಿತ ಸ್ಥಿತಿಯಲ್ಲಿ ಜಾನಪದ ಅಧ್ಯಯನವನ್ನು ಮುಂಚೂಣಿಗೆ ತರುವುದೇ ಈ ಪತ್ರಿಕೆಯ ಮುಖ್ಯ ಧೋರಣೆಯಾಗಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಜಾನಪದ ವಲಯದಲ್ಲಿ ಈ ಪತ್ರಿಕೆ ಮಹತ್ವದ ಪಾತ್ರವಿದೆ.

ಬಿಡಿ ಪ್ರತಿ : 50.00
ವಾರ್ಷಿಕ ಚಂದಾ (ವ್ಯಕ್ತಿಗಳಿಗೆ) : 80.00
ತ್ರೈವಾರ್ಷಿಕ ಚಂದಾ (ವ್ಯಕ್ತಿಗಳಿಗೆ): 200.00
ವಾರ್ಷಿಕ ಚಂದಾ (ಶಾಲಾಕಾಲೇಜು, ಸಂಸ್ಥೆಗಳು) : 100.00
ತ್ರೈವಾರ್ಷಿಕ ಚಂದಾ (ಶಾಲಾಕಾಲೇಜು, ಸಂಸ್ಥೆಗಳು): 250.00


ಹಸ್ತಪ್ರತಿ ಅಧ್ಯಯನ (ಅರ್ಧವಾರ್ಷಿಕ)

ಹಸ್ತಪ್ರತಿ ಅಧ್ಯಯನ ನಿಯತಕಾಲಿಕೆಯು ಹಂಬಲ, ಆಲೇಖ, ವಿಲೋಕನ, ವರಸೆ, ಅವಲೋಕನ, ಹಳೆಯ ಹೊನ್ನು, ಸಂವಾದ ಮತ್ತು ಸಂಚಿ ಎಂಬ ಆರು ಭಾಗಗಳಲ್ಲಿ ಹಲವು ಲೇಖನಗಳನ್ನು ಪ್ರಕಟಿಸುತ್ತಿದೆ. ಹಸ್ತಪ್ರತಿ ಲಿಪಿಕಾರರ ಸಾಂಸ್ಕೃತಿಕ ಕಥನ, ಹಳೆಯ ಕಾವ್ಯ ಹಸ್ತಪ್ರತಿ ಪ್ರತಿಗಳ ವಿಶ್ಲೇಷಣೆ, ಕರ್ನಾಟಕದ ಹಲವು ಹಸ್ತಪ್ರತಿ ಭಂಡಾರದ ವೈಶಿಷ್ಟ್ಯಗಳನ್ನು ಆಲೇಖ ವಿಭಾಗದಲ್ಲಿ ಅಳವಡಿಸಲಾಗಿದೆ. ವಿಲೋಕನ ವಿಭಾಗದಲ್ಲಿ ಅಪ್ರಕಟಿತ ಕೃತಿಗಳನ್ನು ಪರಿಚಯಿಸಲಾಗಿದೆ. ಗ್ರಂಥ ಸಂಪಾದನಾ ಕ್ಷೇತ್ರದ ದಿಗ್ಗಜರ ಜೀವನ ಸಾಧನೆಯನ್ನು ತಿಳಿಸುವ ಲೇಖನವೊಂದು ಇಲ್ಲಿದೆ.
ಹಲವು ಪಾಠಗಳ ಗ್ರಂಥ ಸಂಪಾದನಾ ಪುಸ್ತಕಗಳ ಅವಲೋಕನ, ಷಡಕ್ಷರ ಕವಿಯ ಅಧ್ಯಯನ ಸೂಚಿ – ಈ ಎಲ್ಲ ಲೇಖನಗಳು ಹಸ್ತಪ್ರತಿ ಮತ್ತು ಗ್ರಂಥ ಸಂಪಾದನ ಕ್ಷೇತ್ರದ ಎಲ್ಲೆಯನ್ನು ವಿಸ್ತರಿಸುವಲ್ಲಿ ನೆರವಾಗುತ್ತವೆ. ಕನ್ನಡದ ಹಿರಿಯ ವಿದ್ವಾಂಸರೊಬ್ಬರ ಜೊತೆ ನಡೆಸಿದ ಸಂವಾದವೂ ಇಲ್ಲಿದೆ.

ಬಿಡಿ ಪ್ರತಿ : 50.00
ವಾರ್ಷಿಕ ಚಂದಾ (ವ್ಯಕ್ತಿಗಳಿಗೆ) : 80.00
ತ್ರೈವಾರ್ಷಿಕ ಚಂದಾ (ವ್ಯಕ್ತಿಗಳಿಗೆ): 200.00
ವಾರ್ಷಿಕ ಚಂದಾ (ಶಾಲಾಕಾಲೇಜು, ಸಂಸ್ಥೆಗಳು) : 100.00
ತ್ರೈವಾರ್ಷಿಕ ಚಂದಾ (ಶಾಲಾಕಾಲೇಜು, ಸಂಸ್ಥೆಗಳು): 250.00


ಚರಿತ್ರೆ ಅಧ್ಯಯನ (ಅರ್ಧವಾರ್ಷಿಕ)

ಚರಿತ್ರೆಯ ಜ್ಞಾನಶಾಖೆ ಇತ್ತೀಚೆಗೆ ಹೆಚ್ಚು ಪ್ರಸ್ತುತಗೊಳ್ಳುತ್ತಿದೆ. ಜಗತ್ತಿನಾದ್ಯಂತ ಚರಿತ್ರೆಯ ವಸ್ತು ವಿಷಯಗಳು, ಸಂಗತಿಗಳು ಮೇಲಿಂದ ಮೇಲೆ ಚರ್ಚೆ ಆಗುತ್ತಿರುವ ಸಮಯ ಈ ಹೊತ್ತಿನದು. ಇದಕ್ಕೆ ಕಾರಣ ಮಾನವ ತನ್ನ ಸಮಕಾಲೀನ ಸಮಸ್ಯೆಗಳಿಗೆ ಇತಿಹಾಸದ ಮೂಲಕ ಉತ್ತರಗಳನ್ನು ಹುಡುಕಿಕೊಳ್ಳಲು ಹೊರಟಿರುವುದು. ಇದರ ಜೊತೆಗೆ ಎಲ್ಲಿಲ್ಲದ ಇತಿಹಾಸದ ಬಗೆಗಿನ ಕುತೂಹಲಗಳೂ ಹೌದು. ಆದರೆ ಇಂಥ ಸಮಸ್ಯೆ-ಕುತೂಹಲಗಳಿಗೆ ಉತ್ತರ ನೀಡಲು ಪ್ರಯತ್ನಿಸುತ್ತಿರುವವರು ಯಾರು ಎಂಬುದು ಮುಖ್ಯವಾದ ಪ್ರಶ್ನೆ. ಅಂದರೆ ಚರಿತ್ರೆಕಾರರಲ್ಲದವರ ಬೀಸು ಸಮಜಾಯಿಷಿಗಳ ಭರಾಟೆಯೆ ಹೆಚ್ಚು. ಶಾಸ್ತ್ರೀಯವಾಗಿ ಒಂದು ಅಧ್ಯಯನ ಶಿಸ್ತನ್ನು ಅಭ್ಯಾಸ ಮಾಡಿದವನ ಉತ್ತರ, ವಿಶ್ಲೇಷಣೆಗಳಿಗೆ ಕಾಯುವ ತಾಳ್ಮೆ ಕಾಣುತ್ತಿಲ್ಲ. ಬದಲಾಗಿ ಕೂಡಲೇ ಪ್ರತಿಕ್ರಿಯಿಸುವವರು ಮಾತ್ರ ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳಲು ಸಾಧ್ಯ. ಇದಕ್ಕೆ ಜಾಗತೀಕರಣದ ಪ್ರಚಾರಪ್ರಿಯತೆಯ ಗೀಳು ಸಹ ಕಾರಣ. ಪ್ರತಿಯೊಂದು ಅಧ್ಯಯನ ಶಿಸ್ತು ಸಹ ತನ್ನದೇ ಆದ ವಿಧಿ-ವಿಧಾನ, ಅಧ್ಯಯನ ಕ್ರಮಗಳ ಮುಖೇನ ಅಂತಿಮ ತೀರ್ಮಾನ-ಉತ್ತರಗಳನ್ನು ಕಂಡುಕೊಳ್ಳಲು ಅನುಕೂಲಗಳನ್ನು ಮಾಡಿಕೊಟ್ಟಿರುತ್ತದೆ. ಈ ಅನುಕೂಲಗಳ ಬಳಕೆಯಿಂದ ಮಾತ್ರ ಸರಿಯಾದ ವಿಶ್ಲೇಷಣೆ, ನಿರೂಪಣೆ, ವ್ಯಾಖ್ಯಾನಗಳು ಸಾಧ್ಯವಾಗುತ್ತವೆ. ಈ ಕ್ರಮವನ್ನು ಅಯಾಚಿತವಾಗಿ ಯಾರು ಬೇಕಾದರೂ ದಕ್ಕಿಸಿಕೊಳ್ಳಲು ಸಾಧ್ಯ ಇಲ್ಲ. ಇದಕ್ಕೆ ಸಾಕಷ್ಟು ಅಧ್ಯಯನ, ಅಭ್ಯಾಸ, ಅನುಭವ-ಅನುಭೂತಿಗಳು, ತಾಳ್ಮೆ ಇರುವ ಸಂಶೋಧಕರ ಅಗತ್ಯ ಇದೆ. ಈ ಮಾತು ಚರಿತ್ರೆಕಾರರ ತೀರ್ಮಾನಗಳಿಗೂ ಅನ್ವಯ ಆಗುತ್ತದೆ. ಆಗ ಮಾತ್ರ ಅಂಥ ತೀರ್ಮಾನಗಳನ್ನು ಗಂಭೀರವಾಗಿ ಪರಿಗಣಿಸಲು ಸಾಧ್ಯ.
ಈ ಹೊತ್ತು ಚರಿತ್ರೆ ಎಂದರೆ ಕೇವಲ ಗತವಲ್ಲ, ಸಂಭ್ರಮವಲ್ಲ, ವೈಭವವಲ್ಲ. ಬದಲಾಗಿ ಸಮಕಾಲೀನ ಅನುಸಂಧಾನದ ವಾಸ್ತವತೆ ಎಂಬ ದಿಸೆಯಲ್ಲಿ ಅರಿವು ಮೂಡಿದೆ. ಇಂಥ ಅನೇಕ ವಿಚಾರಗಳು ‘ಚರಿತ್ರೆ ಅಧ್ಯಯನ’ ದಂಥ ನಿಯತಕಾಲಿಕದಲ್ಲಿ ಪ್ರಕಟ ಆಗಿ ಚರ್ಚೆಗೆ ಎಡೆಮಾಡಿಕೊಡಬೇಕು ಎಂಬುದು ಈ ಪತ್ರಿಕೆಯ ಆಶಯವಾಗಿದೆ.

ಬಿಡಿ ಪ್ರತಿ : 50.00
ವಾರ್ಷಿಕ ಚಂದಾ (ವ್ಯಕ್ತಿಗಳಿಗೆ) : 80.00
ತ್ರೈವಾರ್ಷಿಕ ಚಂದಾ (ವ್ಯಕ್ತಿಗಳಿಗೆ): 200.00
ವಾರ್ಷಿಕ ಚಂದಾ (ಶಾಲಾಕಾಲೇಜು, ಸಂಸ್ಥೆಗಳು) : 100.00
ತ್ರೈವಾರ್ಷಿಕ ಚಂದಾ (ಶಾಲಾಕಾಲೇಜು, ಸಂಸ್ಥೆಗಳು): 250.00


ಶಾಸನ ಅಧ್ಯಯನ (ಅರ್ಧವಾರ್ಷಿಕ)

ಕನ್ನಡ ವಿಶ್ವವಿದ್ಯಾಲಯ ಮುಖ್ಯವಾಗಿ ಸಂಶೋಧನಾ ಸಂಸ್ಥೆಯಾಗಿ ಪ್ರಕಟಿಸುತ್ತಿರುವ ಹಲವಾರು ನಿಯತಕಾಲಿಕೆಗಳಲ್ಲಿ ಶಾಸನ ಅಧ್ಯಯನವೂ ಒಂದಾಗಿದೆ. ಕನ್ನಡದಲ್ಲಿ ಶಾಸನ ಅಧ್ಯಯನಕ್ಕೆಂದು ಮೀಸಲಾದ ನಿಯತಕಾಲಿಕೆ ಪತ್ರಿಕೆ ಇದಾಗಿದೆ. ಇದರಲ್ಲಿ ಹೊಸಶೋಧ, ಶಾಸನಾಧ್ಯಯನ, ಶಾಸನ ತಜ್ಞರೊಂದಿಗೆ ಸಂದರ್ಶನ, ಶಾಸನ ನಿಬಂಧಗಳ ಮಾಹಿತಿ, ಶಾಸನ ಕೃತಿನೋಟ, ಶಾಸನದ ಸುತ್ತಮುತ್ತ ಶೀರ್ಷಿಕೆಗಳಲ್ಲಿ ಲೇಖನಗಳನ್ನೊಳಗೊಂಡಿದೆ. ಅಪ್ರಕಟಿತ ಶಾಸನಗಳ ಜೊತೆಗೆ ಪ್ರಕಟಿತ ಶಾಸನಗಳನ್ನಾಧರಿಸಿ ಅಧ್ಯಯನ ಮಾಡಿ ಹೊಸಬೆಳೆಕನ್ನು ಚೆಲ್ಲುವ ವಿಷಯವನ್ನು ಈ ಸಂಚಿಕೆಯಲ್ಲಿ ಅಳವಡಿಸಲಾಗಿದೆ. ಮುಚ್ಚಿರುವ ಬಾಗಿಲನ್ನು ತೆರೆದು ಇತಿಹಾಸ ಮತ್ತು ಸಂಸ್ಕೃತಿ ದರ್ಶನ ಮೂಡಿಸುವುದು ಶಾಸನ ಅಧ್ಯಯನ ನಿಯತಕಾಲಿಕೆಯ ಉದ್ದೇಶವಾಗಿದೆ.

ಬಿಡಿ ಪ್ರತಿ : 50.00
ವಾರ್ಷಿಕ ಚಂದಾ (ವ್ಯಕ್ತಿಗಳಿಗೆ) : 80.00
ತ್ರೈವಾರ್ಷಿಕ ಚಂದಾ (ವ್ಯಕ್ತಿಗಳಿಗೆ): 200.00
ವಾರ್ಷಿಕ ಚಂದಾ (ಶಾಲಾಕಾಲೇಜು, ಸಂಸ್ಥೆಗಳು) : 100.00
ತ್ರೈವಾರ್ಷಿಕ ಚಂದಾ (ಶಾಲಾಕಾಲೇಜು, ಸಂಸ್ಥೆಗಳು): 250.00


Journal of Karnataka Studies(Half Yearly)

Journal of Karnataka Stuides is a forum to enrich interactive research and scholarship among scholars and students of Kannada/Karnataka Studies working in Kannada, English and the other languages; the Journal wishes to orchestrate the variety of notes into a polyphony by addressing issues and debates.
Karnataka Studies is a broad rubric under which we are trying to bring in different disciplinary as well as interdisciplinary studies on issues aspects related of Karnataka. We do not propose it as area studies, though it can serve that purpose too, especially if we are looking at issues related to post-1956 (unification of predominantly Kannada Speaking regions) Scenario. Prior to Unification, the region called Karnataka was Politically, Historically and otherwise a part of many other geo-political entities. The aspects and issues related to this pre-unification regions, as well as comparative analyses of Karnataka and other regions would also be included under this category called Karnataka Studies.

ವಾರ್ಷಿಕ ಚಂದಾ (ವ್ಯಕ್ತಿಗಳಿಗೆ) : 100.00
ತ್ರೈವಾರ್ಷಿಕ ಚಂದಾ (ವ್ಯಕ್ತಿಗಳಿಗೆ): 250.00
ವಾರ್ಷಿಕ ಚಂದಾ (ಶಾಲಾಕಾಲೇಜು, ಸಂಸ್ಥೆಗಳು) : 250.00
ತ್ರೈವಾರ್ಷಿಕ ಚಂದಾ (ಶಾಲಾಕಾಲೇಜು, ಸಂಸ್ಥೆಗಳು): 700.00