ಬೋಧನಾ ವಿಧಾನ
ಕನ್ನಡ ವಿಶ್ವವಿದ್ಯಾಲಯದ ದೂರಶಿಕ್ಷಣ ನಿರ್ದೇಶನಾಲಯದ ಬೋಧನಾ ಪದ್ಧತಿಯು ಇತರ ಪಾರಂಪರಿಕ ವಿಶ್ವವಿದ್ಯಾಲಯಗಳಿಗಿಂತ ಭಿನ್ನವಾಗಿರುತ್ತದೆ. ದೂರಶಿಕ್ಷಣದ ಬೋಧನಾ ಪದ್ಧತಿಯು ಹೆಚ್ಚಾಗಿ ಕಲಿಕಾರ್ಥಿ ಕೇಂದ್ರಿತ ವಾಗಿರುತ್ತದೆ ಮತ್ತು ಬೋಧನಾ ಕಲಿಕಾ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಆಸಕ್ತ ವಿದ್ಯಾರ್ಥಿಗಳನ್ನು ತೊಡಗಿಸುವಂತೆ ಪ್ರೇರೇಪಿಸುತ್ತದೆ. ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ಬಹುಮಾಧ್ಯಮದಲ್ಲಿ ಅಂದರೆ, ಮುದ್ರಿತ ಸಾಮಗ್ರಿಗಳು ಹಾಗೂ ಸಂಪರ್ಕ ಕಾರ್ಯಕ್ರಮವೆಂಬ ಮುಖಾಮುಖಿ ಗುರುಶಿಷ್ಯ ಸಂವಾದ ಇತ್ಯಾದಿ ರೂಪಗಳಲ್ಲಿ ನೀಡಲಾಗುತ್ತದೆ. ದೂರಶಿಕ್ಷಣವು ಈ ಕೆಳಕಂಡ ಬಹುವಾಹಿನಿ ಮಾಧ್ಯಮ ರೂಪಗಳ ಸಮರ್ಪಕ ಸಂಯೋಜಿತ ಶಿಕ್ಷಣ ಪದ್ಧತಿಯನ್ನು ಅನುಸರಿಸುತ್ತದೆ.
* ಮುದ್ರಿತ ಸ್ವಯಂ ಕಲಿಕಾ ಸಾಮಗ್ರಿಗಳು
* ವಿಷಯತಜ್ಞರು/ಅಧ್ಯಾಪಕರಿಂದ ಅಲ್ಪ ಕಾಲಾವಧಿಯ ಸಂಪರ್ಕ ಕಾರ್ಯಕ್ರಮ
* ಮೌಖಿಕ ಪರೀಕ್ಷೆ/ನಿಯೋಜಿತ ನಿಬಂಧಗಳು
ಬೋಧನಾ ಮಾಧ್ಯಮ
ಸ್ನಾತಕೋತ್ತರ, ಸ್ನಾತಕೋತ್ತರ ಡಿಪ್ಲೊಮ ಮತ್ತು ಡಿಪ್ಲೊಮ ಕಾರ್ಯಕ್ರಮಗಳ ಬೋಧನಾ ಮಾಧ್ಯಮ ಕನ್ನಡದಲ್ಲಿರುತ್ತದೆ. ಅಭ್ಯರ್ಥಿಗಳು ವಾರ್ಷಿಕ ಪರೀಕ್ಷೆಯನ್ನು ಕನ್ನಡ ಮಾಧ್ಯಮದಲ್ಲಿ ಬರೆಯಬೇಕು. ಅಧ್ಯಯನ ಸಾಮಗ್ರಿಗಳನ್ನು ಕನ್ನಡದಲ್ಲಿ ಮಾತ್ರ ಈ ಶಿಕ್ಷಣಕ್ರಮಗಳಿಗೆ ಒದಗಿಸಲಾಗುತ್ತದೆ.
ಸ್ವಯಂ ಕಲಿಕಾ ಅಧ್ಯಯನ ಸಾಮಗ್ರಿ
ಸ್ವಯಂ ಕಲಿಕಾ ಸಾಮಗ್ರಿಗಳಲ್ಲಿ ಮುದ್ರಿತ ಸಾಮಗ್ರಿಗಳು ಪ್ರಧಾನ ಕಲಿಕಾ ಸಾಮಗ್ರಿಗಳಾಗಿವೆ. ಹಲವಾರು ಬ್ಲಾಕ್‌ಗಳಲ್ಲಿ ಮುದ್ರಿತ ಕೋರ್ಸಿನ ಸಾiಗ್ರಿಗಳನ್ನು ವಿದ್ಯಾರ್ಥಿಗಳಿಗೆ ಒದಗಿಸಲಾಗುತ್ತದೆ. ಕೆಲವು ಘಟಕಗಳನ್ನು ಒಳಗೊಂಡ ಬ್ಲಾಕ್ ಪುಸ್ತಕ ರೂಪದಲ್ಲಿರುತ್ತದೆ. ಒಂದು ಘಟಕದಲ್ಲಿ ನೀಡಿರುವ ಅಧ್ಯಯನ ಸಾಮಗ್ರಿಯು ೫ ರಿಂದ ೧೦ ಗಂಟೆಗಳ ಅಧ್ಯಯನವನ್ನು ವಿದ್ಯಾರ್ಥಿಯು ಮಾಡುವಂತಿರುತ್ತದೆ. ಕನ್ನಡ ವಿಶ್ವವಿದ್ಯಾಲಯದ ದೂರಶಿಕ್ಷಣ ನಿರ್ದೇಶನಾಲಯವು ಒದಗಿಸಿರುವ ಮುದ್ರಿತ ಕಲಿಕಾ ಸಾಮಗ್ರಿಗಳನ್ನು ಪೂರ್ಣವಾಗಿ ವಿದ್ಯಾರ್ಥಿಯು ಅಧ್ಯಯನ ಮಾಡಬೇಕಾಗುತ್ತದೆ. ವಸ್ತು ವಿಷಯದ ಬಗೆಗಿನ ವಿಸ್ತೃತ ಜ್ಞಾನವನ್ನು ಪಡೆಯಲು ಘಟಕ/ಬ್ಲಾಕ್‌ಗಳಲ್ಲಿ ಸೂಚಿಸಲಾಗಿರುವ ಗ್ರಂಥಗಳನ್ನು ವಿದ್ಯಾರ್ಥಿಗಳು ಪರಾಮರ್ಶಿಸಬೇಕು.
ಅಧ್ಯಯನ ಸಾಮಗ್ರಿಗಳ ವಿತರಣೆ
೧. ದೂರಶಿಕ್ಷಣ ನಿದೇಶನಾಲಯದಲ್ಲಿ ಹಾಗೂ ಮಾನ್ಯತೆ ಪಡೆದ ಅಧ್ಯಯನ ಕೇಂದ್ರಗಳಲ್ಲಿ ವಿದ್ಯಾರ್ಥಿಗಳಿಗೆ ಅಧ್ಯಯನ ಸಾಮಗ್ರಿಗಳನ್ನು ಪ್ರವೇಶಾತಿ ಸಂದರ್ಭದಲ್ಲಿ ವಿತರಿಸಲಾಗುವುದು.
೨. ಪ್ರವೇಶಾತಿ ದಾಖಲೆಯ ಆಧಾರವನ್ನು ಸಲ್ಲಿಸಿ ಅಧ್ಯಯನ ಕೇಂದ್ರಗಳಲ್ಲಿ ಅಧ್ಯಯನ ಸಾಮಗ್ರಿ ಪಡೆಯಬಹುದು.
೩. ದೂರಶಿಕ್ಷಣ ನಿದೇಶನಾಲಯದಲ್ಲಿ ಮತ್ತು ಅಧ್ಯಯನ ಕೇಂದ್ರಗಳಿಂದ ಅಧ್ಯಯನ ಸಾಮಗ್ರಿಗಳನ್ನು ಪಡೆದುಕೊಳ್ಳಲಾಗದ ವಿದ್ಯಾರ್ಥಿಗಳಿಗೆ ಅಂಚೆಯ ಮೂಲಕ ರವಾನಿಸಲಾಗುವುದು.
೪. ಅಧ್ಯಯನ ಸಾಮಗ್ರಿಗಳು ಸಕಾಲದಲ್ಲಿ ತಲುಪದಿದ್ದರೆ ವಿದ್ಯಾರ್ಥಿ ಕೂಡಲೇ ದೂರಶಿಕ್ಷಣ ನಿರ್ದೇಶನಾಲಯ ಅಥವಾ ಸಂಬಂಧಪಟ್ಟ ದೂರಶಿಕ್ಷಣದ ಅಧ್ಯಯನ ಕೇಂದ್ರಗಳ ಸಂಯೋಜಕರಿಗೆ ಸಂಪರ್ಕಿಸಬೇಕು. ಒಂದು ವೇಳೆ ಆಯ್ದುಕೊಂಡಿರುವ ಶಿಕ್ಷಣಕ್ರಮಕ್ಕ್ಕೆ ಸಂಬಂಧಪಟ್ಟ ಅಧ್ಯಯನ ಸಾಮಗ್ರಿಗಳು ಬಾರದೆ ಇದ್ದರೆ ಕೂಡಲೇ (ಎಲ್ಲ ವಿವರಗಳನ್ನೊಳಗೊಂಡ) ಹದಿನೈದು ದಿನಗಳ ಒಳಗೆ ಪತ್ರವನ್ನು ಬರೆದು ತಿಳಿಸಬೇಕು. ಸಂಬಂಧಪಡದ ಅಧ್ಯಯನ ಸಾಮಗ್ರಿಗಳನ್ನು ಇರುವ ಸ್ಥಿತಿಯಲ್ಲಿಯೇ ತಡಮಾಡದೆ ದೂರಶಿಕ್ಷಣ ನಿರ್ದೇಶನಾಲಯ ಅಥವಾ ಸಂಬಂಧಪಟ್ಟ ದೂರಶಿಕ್ಷಣದ ಅಧ್ಯಯನ ಕೇಂದ್ರಗಳ ಸಂಯೋಜಕರಿಗೆ ವಾಪಸ್ಸು ಕಳುಹಿಸಿಕೊಡಬೇಕು. ಮತ್ತು ತನಗೆ ಸಂಬಂಧಪಟ್ಟ ಅಧ್ಯಯನ ಸಾಮಗ್ರಿಯನ್ನು ಪಡೆದುಕೊಂಡು ಹೋಗಬೇಕು.
೫. ಅಂಚೆ ಮೂಲಕ ಪ್ರವೇಶಾತಿ ಪಡೆಯುವ ವಿದ್ಯಾರ್ಥಿಗಳಿಗೆ ನಿರ್ದೇಶಕರ ಅನುಮೋದನೆ ಪಟ್ಟಿಯ ಪ್ರಕಾರ ಅಧ್ಯಯನ ಸಾಮಗ್ರಿಗಳನ್ನು ವಿಪಿಪಿ, ಎಕ್ಸ್‌ಪ್ರೆಸ್ ಪೋಸ್ಟ್ ಪಾರ್ಸಲ್ ಅಥವಾ ಕೋರಿಯರ್ ಮೂಲಕ ಕಳುಹಿಸಲಾಗುತ್ತದೆ. ಹೀಗೆ ಕಳುಹಿಸಲ್ಪಟ್ಟ ಅಧ್ಯಯನ ಸಾಮಗ್ರಿಗಳನ್ನು ವಿದ್ಯಾರ್ಥಿಗಳು ಕಾರಣಾಂತರಗಳಿಂದ ನೇರವಾಗಿ ಸ್ವೀಕರಿಸಲು ಸಾಧ್ಯವಾಗದಿದ್ದಾಗ ಅಧ್ಯಯನ ಸಾಮಗ್ರಿಗಳು ಪುನಃ ಕಚೇರಿಗೆ ವಾಪಸ್ಸಾಗಿ ಬರುತ್ತವೆ. ಅಂಥ ಸಂದರ್ಭದಲ್ಲಿ ಅಧ್ಯಯನ ಸಾಮಗ್ರಿಗಳನ್ನು ಪುನಃ ರವಾನಿಸಲು ತಗಲುವ ಅಂಚೆ ವೆಚ್ಚವನ್ನು ಸಂಬಂಧಪಟ್ಟ ವಿದ್ಯಾರ್ಥಿಯಿಂದ ಭರಿಸಿಕೊಂಡ ನಂತರವೇ ಕಳುಹಿಸಿಕೊಡಲಾಗುವುದು. ನಿಗದಿತ ಅರ್ಜಿ ತುಂಬಿಸಿ ಕಳುಹಿಸಿದ ವಿದ್ಯಾರ್ಥಿಗಳಿಗೆ ವಾಪಸ್ಸಾದ ಅಧ್ಯಯನ ಸಾಮಗ್ರಿಗಳನ್ನು ಪುನಃ ಕಳುಹಿಸಿಕೊಡಲಾಗುತ್ತದೆ. ಈ ಬಗ್ಗೆ ಯಾರಿಗೂ ವೈಯಕ್ತಿಕವಾಗಿ ಪತ್ರ ಬರೆಯಲಾಗುವುದಿಲ್ಲ.
೬. ಅಂಚೆಯಲ್ಲಿ ರವಾನಿಸಿದ ಸ್ವಯಂ ಕಲಿಕಾ ಸಾಮಗ್ರಿ(ಪಾಠ)ಗಳು ಅಭ್ಯರ್ಥಿಗಳಿಗೆ ತಲುಪದಿದ್ದಲ್ಲಿ ದೂರಶಿಕ್ಷಣ ನಿರ್ದೇಶನಾಲಯವು ಜವಾಬ್ದಾರಿಯಲ್ಲ. ಅಂತಹ ಸಂದರ್ಭದಲ್ಲಿ ಹೆಚ್ಚುವರಿ ಪಾಠಗಳನ್ನು ಬಯಸುವವರು ಪ್ರತಿ ಪತ್ರಿಕೆಯಲ್ಲಿ ಸೂಚಿಸಿದ ಬೆಲೆಯ ಶುಲ್ಕ ಪಾವತಿಸಿ ಸ್ವಯಂ ಕಲಿಕಾ ಸಾಮಗ್ರಿ(ಪಾಠ)ಗಳನ್ನು ಪಡೆಯಬಹುದಾಗಿದೆ.
ಸಂಪರ್ಕ ಕಾರ್ಯಕ್ರಮ
ಒಂದು ವಾರದ ಸಂಪರ್ಕ ಕಾರ್ಯಕ್ರಮವನ್ನು ಎಲ್ಲ ಅಧ್ಯಯನ ಕೇಂದ್ರಗಳಲ್ಲಿ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಲಾಗುವುದು. ತಮಗಿಷ್ಟ ಬಂದ ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಸಂಪರ್ಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಅದರ ಉಪಯೋಗವನ್ನು ಪಡೆದುಕೊಳ್ಳಬಹುದು. ಕನ್ನಡ ವಿಶ್ವವಿದ್ಯಾಲಯ ಮತ್ತು ಇತರೆ ವಿಶ್ವವಿದ್ಯಾಲಯಗಳ ಅಧ್ಯಾಪಕರಿಂದ ಉಪನ್ಯಾಸ (ಸಮಾಲೋಚನೆಗಳ) ಗಳನ್ನು ಸಂಪರ್ಕ ಕಾರ್ಯಕ್ರಮದ ಅವಧಿಯಲ್ಲಿ ನೀಡಲಾಗುವುದು. ಆಂತರಿಕ ನಿಬಂಧಗಳ ಭಾಗವಾಗಿ ಪ್ರತಿಯೊಂದು ಕೋರ್ಸ್‌ನಲ್ಲೂ ೧೦ ಅಂಕಗಳಿಗೆ ಮೌಖಿಕ ಪರೀಕ್ಷೆ ಅಥವಾ ಸೂಕ್ತ ಚಟುವಟಿಕೆಗಳನ್ನು ಸಂಪರ್ಕಕಾರ್ಯಕ್ರಮದಲ್ಲಿ ನಡೆಸಲಾಗುವುದು.
ಸಂಪರ್ಕ ಕಾರ್ಯಕ್ರಮ ನಡೆಯುವ ದಿನಾಂಕವನ್ನು ವಿದ್ಯಾರ್ಥಿಗಳಿಗೆ ವೈಯಕ್ತಿಕವಾಗಿ ತಿಳಿಸಲಾಗುವುದು. ಸಂಪರ್ಕ ಕಾರ್ಯಕ್ರಮ ನಡೆಯುವ ಕೇಂದ್ರಗಳಲ್ಲಿಯೂ ಈ ಬಗೆಗೆ ಮಾಹಿತಿ ನೀಡಲಾಗುವುದು. ಅಲ್ಲದೆ ವಿಶ್ವವಿದ್ಯಾಲಯದ ವೆಬ್‌ಸೈಟ್‌ನಲ್ಲಿಯೂ ಮಾಹಿತಿ ಲಭ್ಯವಾಗುವುದು.
ಆಂತರಿಕ ಮೌಲ್ಯಮಾಪನ (INTERNAL ASSESSMENT)
ಆಂತರಿಕ ಮೌಲ್ಯಮಾಪನವು ದೂರಶಿಕ್ಷಣ ಶಿಕ್ಷಣಕ್ರಮದ ಅವಿಭಾಜ್ಯ ಅಂಗವಾಗಿದೆ. ದೂರಶಿಕ್ಷಣ ನಿರ್ದೇಶನಾಲಯದಿಂದ ಪಡೆದ ಸ್ವಯಂ ಕಲಿಕಾ ಸಾಮಗ್ರಿಗಳನ್ನು ಕಲಿಕಾರ್ಥಿಗಳು ಎಷ್ಟರ ಮಟ್ಟಿಗೆ ಗ್ರಹಿಸಿದ್ದಾರೆ ಎಂಬುದನ್ನು ಪರೀಕ್ಷಿಸುವುದು ಇದರ ಉದ್ದೇಶವಾಗಿರುತ್ತದೆ. ಅಲ್ಲದೇ, ಇದು ಕಲಿಕಾರ್ಥಿಯ ಅಧ್ಯಯನದ ಪ್ರಗತಿಗೂ ಸಹಕಾರಿಯಾಗುತ್ತದೆ. ಕಲಿಕಾರ್ಥಿಗಳ ಅನುಕೂಲಕ್ಕಾಗಿ ಆಂತರಿಕ ಮೌಲ್ಯಮಾಪನಕ್ಕೆ ಸಂಬಂಧಿಸಿದಂತೆ ದೂರಶಿಕ್ಷಣವು ಎರಡು ಬಗೆಯ ಪದ್ಧತಿಗಳನ್ನು ಅನುಸರಿಸುತ್ತದೆ.
೧. ಅನಿವಾರ್ಯ ಕಾರಣಗಳಿಂದಾಗಿ ಸಂಪರ್ಕ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗದವರು ಪ್ರತಿ ಕೋರ್ಸಿನಲ್ಲಿ ಎ೪ ಅಳತೆಯ ೧೦ ಪುಟಗಳ ೨ ಸ್ವಲಿಖಿತ ನಿಬಂಧ (ಗೃಹಪತ್ರ)ಗಳನ್ನು ಸಲ್ಲಿಸಬೇಕು.
೨. ಕನ್ನಡ ವಿಶ್ವವಿದ್ಯಾಲಯದ ವೆಬ್‌ಸೈಟ್‌ನಲ್ಲಿ web site: kannadauniversity.org ಮತ್ತು ದೂರಶಿಕ್ಷಣ ನಿರ್ದೇಶನಾಲಯ ಹಾಗೂ ಮಾನ್ಯತೆ ಪಡೆದ ಅಧ್ಯಯನ ಕೇಂದ್ರಗಳಲ್ಲಿ ನಿಬಂಧ(ಗೃಹಪತ್ರ)ಗಳ ಪ್ರಶ್ನೆಗಳು ದೊರಕುತ್ತವೆ. ವೈಯಕ್ತಿಕವಾಗಿ ನಿಬಂಧಗಳ ಪ್ರಶ್ನೆಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕ ಸೂಚನೆಯನ್ನು ಕಳುಹಿಸಲಾಗುವುದಿಲ್ಲ. ನಿಬಂಧಗಳನ್ನು ಸಲ್ಲಿಸುವ ಮುಂಚೆ ಅವುಗಳ ಪ್ರತಿಯನ್ನು ಹಾಗೂ ಸಲ್ಲಿಸಿದುದರ ಬಗೆಗಿನ ಸಾಕ್ಷಿ ಪುರಾವೆಯನ್ನು ತಮ್ಮ ಆಧಾರಕ್ಕಾಗಿ ಇಟ್ಟುಕೊಳ್ಳತಕ್ಕದ್ದು.
೩. ಸ್ವೀಕೃತಿಯೊಂದಿಗೆ ವೈಯಕ್ತಿಕವಾಗಿ ಅಥವಾ ನೋಂದಣಿ ಅಂಚೆ ಮೂಲಕ ಕನ್ನಡ ವಿಶ್ವವಿದ್ಯಾಲಯದ ದೂರಶಿಕ್ಷಣ ನಿರ್ದೇಶನಾಲ ಯದ ನಿರ್ದೇಶಕರಿಗೆ ನಿಬಂಧ(ಗೃಹಪತ್ರ)ಗಳನ್ನು ಕಳುಹಿಸತಕ್ಕದ್ದು.
೪. ವಾರ್ಷಿಕ ಪರೀಕ್ಷಾ ಪೂರ್ವದಲ್ಲಿಯೇ ನಿಬಂಧ(ಗೃಹಪತ್ರ)ಗಳನ್ನು ಮೌಲ್ಯಮಾಪನಕ್ಕಾಗಿ ಸಲ್ಲಿಸಬೇಕು. ಉನ್ನತಿಗೋಸ್ಕರ ಎರಡನೇ ಬಾರಿಗೆ ನಿಬಂಧಗಳನ್ನು ಸಲ್ಲಿssಸುವಂತಿಲ್ಲ.
೫. ಮೌಲ್ಯಮಾಪನದ ನಂತರ ಬಂದ ನಿಬಂಧ(ಗೃಹಪತ್ರ)ಗಳನ್ನು ಮೌಲ್ಯಮಾಪನಕ್ಕಾಗಿ ಸ್ವೀಕರಿಸಲಾಗುವುದಿಲ್ಲ.
೬. ದೂರಶಿಕ್ಷಣ ನಿರ್ದೆಶನಾಲಯದ ಸಂಪರ್ಕ ತರಗತಿಗಳ ಕೋರ್ಸ್‌ವಾರು ವೇಳಾ ಪಟ್ಟಿಯನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು.