ಕ್ರ ಸಂ ಶಿಕ್ಷಣ ಕ್ರಮ ಕೋಡ್ ಸಂಖ್ಯೆ
೧. ಎಂ.ಎ. ಕನ್ನಡ ೧೭
೨. ಎಂ.ಎ. ಚರಿತ್ರೆ ೨೫
೩. ಎಂ.ಎ. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ೨೬
೪. ಎಂ.ಎ. ಸಮಾಜಶಾಸ್ತ್ರ ೨೮
ಶಿಕ್ಷಣದ ಅವಧಿ
ಯಾವುದೇ ಸ್ನಾತಕೋತ್ತರ ಶಿಕ್ಷಣವನ್ನು ಪೂರ್ಣಗೊಳಿಸಲು ಇರುವ ಕನಿಷ್ಠ ಅವಧಿ ಎರಡು ವರ್ಷಗಳು. ಗರಿಷ್ಠ ಅವಧಿ ನಿರ್ದಿಷ್ಟ ಶಿಕ್ಷಣಕ್ಕೆ ಸೇರಿದ ವರ್ಷದಿಂದ ನಾಲ್ಕು ವರ್ಷಗಳು ಮಾತ್ರ. ನಾಲ್ಕು ವರ್ಷಗಳ ಒಳಗೆ ಎಂ.ಎ. ಶಿಕ್ಷಣವನ್ನು ಪೂರ್ಣಗೊಳಿಸದ ಅಭ್ಯರ್ಥಿ ಮತ್ತೆ ಹೊಸದಾಗಿ ಪ್ರವೇಶ ಪಡೆಯಬೇಕಾಗುತ್ತದೆ.
ಪ್ರವೇಶಾರ್ಹತೆ
ಎಂ.ಎ. ಪದವಿ ಶಿಕ್ಷಣಕ್ರಮಕ್ಕೆ ನಿಯಮ-೧ ಮತ್ತು ನಿಯಮ-೨ ಎಂಬ ಎರಡು ನಿಯಮಗಳಡಿಯಲ್ಲಿ ಪ್ರವೇಶಾತಿಯನ್ನು ಮಾಡಿಕೊಳ್ಳ್ಳಲಾಗುತ್ತದೆ.
ನಿಯಮ-೧ ಕನಿಷ್ಠ ಮೂರು ವರ್ಷಗಳ ಅವಧಿಯ ಯಾವುದೇ ಬ್ಯಾಚುಲರ್ ಪದವಿ ಪಡೆದವರು.
ಕನಿಷ್ಠ ಮೂರು ವರ್ಷಗಳ ಅವಧಿಯ ಯಾವುದೇ ಪದವಿ (ಬ್ಯಾಚುಲರ್ ಡಿಗ್ರಿ) ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳು ಎಂ.ಎ. ಶಿಕ್ಷಣಕ್ರಮಕ್ಕೆ ನಿಗದಿಪಡಿಸಿದ ವಿಷಯಗಳನ್ನು (Cognate Subjects) ವ್ಯಾಸಂಗ ಮಾಡದಿದ್ದಲ್ಲಿ ಅಂತಹ ಅಭ್ಯರ್ಥಿಗಳು ನಿಯಮ-೧ರ ಅಡಿಯಲ್ಲಿ, ಯಾವುದೇ ಎಂ.ಎ. ಶಿಕ್ಷಣಕ್ರಮಕ್ಕೆ ಪ್ರವೇಶಾತಿ ಪಡೆಯಬಹುದು. ಆದರೆ, ಇವರು ಕನ್ನಡ ವಿಶ್ವವಿದ್ಯಾಲಯದಲ್ಲಿ ದೂರಶಿಕ್ಷಣ ನಿರ್ದೇಶನಾಲಯವು ನಡೆಸುವ ಸಂಬಂಧಪಟ್ಟ ಶಿಕ್ಷಣಕ್ರಮಗಳ ಸ್ನಾತಕೋತ್ತರ ಪ್ರವೇಶ ಪೂರ್ವಸಿದ್ಧತಾ (Master Ppreparatory Programme) ಪರೀಕ್ಷೆಯಲ್ಲಿ ತೇರ್ಗಡೆ ಹೊಂದಬೇಕು.
ಸ್ನಾತಕೋತ್ತರ ಪ್ರವೇಶ ಪೂರ್ವಸಿದ್ಧತಾ ಪರೀಕ್ಷೆ (Master Ppreparatory Programme)
ಈ ಪರಿಕ್ಷೆಯು ಪದವಿಪೂರ್ವ (PUC) ಶಿಕ್ಷಣ ಪಠ್ಯಕ್ರಮಕ್ಕೆ ಅನುಗುಣವಾಗಿದ್ದು, ಸಾಮಾನ್ಯ ತಿಳುವಳಿಕೆಯ ೧೦೦ ಅಂಕಗಳ ವಸ್ತುನಿಷ್ಠ (Objective type) ಮಾದರಿಯ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. ಈ ಪರೀಕ್ಷೆಗಳು ೨೦೧೫ರ ಅಕ್ಟೋಬರ್ ೧೬ ರಂದು ಕನ್ನಡ ವಿಶ್ವವಿದ್ಯಾಲಯದಲ್ಲಿ ಮಾತ್ರ ಜರುಗುವವು. ಈ ಪರೀಕ್ಷೆಯಲ್ಲಿ ಕನಿಷ್ಠ ೩೫ ಅಂಕಗಳನ್ನು ಪಡೆದು ಉತ್ತೀರ್ಣರಾದವರನ್ನು ಮಾತ್ರ ಖಾಯಂ ಪ್ರವೇಶಾತಿಗೆ ಅವಕಾಶ ನೀಡಲಾಗುವುದು. ಇದು ವಿದ್ಯಾರ್ಥಿಗಳಲ್ಲಿ ಜ್ಞಾನವನ್ನು ಹೆಚ್ಚಿಸುತ್ತದೆ. ದೂರಶಿಕ್ಷಣ ಕಲಿಕಾ ವ್ಯವಸ್ಥೆಯಲ್ಲಿನ ಎಂ.ಎ. ಪದವಿಗಳು ಅಖಿಲ ಭಾರತ ಮಟ್ಟದಲ್ಲಿ ಗುಣಮಟ್ಟವನ್ನು ಕಾಯ್ದುಕೊಳ್ಳುವುದಕ್ಕಾಗಿ ಇದನ್ನು ಪರಿಚಯಿಸಲಾಗಿದೆ.
ನಿಯಮ – ೨ ಸಂಬಂಧಿತ ವಿಷಯಗಳಲ್ಲಿ ಬ್ಯಾಚುಲರ್ಸ್ ಪದವಿ ಪಡೆದವರು
ಈ ಪದ್ಧತಿಯ ಮೂಲಕ ಪ್ರವೇಶ ಬಯಸಿ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಅರ್ಹತಾ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು. ಅಂದರೆ ಎಂ.ಎ. ಶಿಕ್ಷಣಕ್ರಮದ ಪ್ರವೇಶಕ್ಕೆ ಬಿ.ಎ. ಅಥವಾ ತತ್ಸಮಾನ ಪದವಿಯಲ್ಲಿ ಸಂಬಂಧಪಟ್ಟ ವಿಷಯದೊಂದಿಗೆ ತೇರ್ಗಡೆಯಾಗಿರಬೇಕು.
ಎಂ.ಎ. ಕನ್ನಡ ಪ್ರಥಮ ವರ್ಷ : ಕೋರ್ಸ್ಗಳು ಮತ್ತು ಪ್ರವೇಶ ನಿಯಮಗಳು
ಕೋರ್ಸ್ ಕೋರ್ಸಿನ ಶೀರ್ಷಿಕೆ ಅಂಕಗಳು
ಸಂಕೇತ ಶ್ರೇಯಾಂಕ ಲಿಖಿತ ಆಂತರಿಕ ಒಟ್ಟು
೧೭ A ೧. ಚಂಪೂ ಸಾಹಿತ್ಯ ೬ ೯೦ ೧೦ ೧೦೦
೧೭ B ೨. ಭಕ್ತಿ ಸಾಹಿತ್ಯ ೬ ೯೦ ೧೦ ೧೦೦
೧೭ C ೩. ಮಧ್ಯಕಾಲೀನ ಕನ್ನಡ ಸಾಹಿತ್ಯ ೬ ೯೦ ೧೦ ೧೦೦
೧೭ D ೪. ಸಾಹಿತ್ಯ ಅಧ್ಯಯನ ಸಾಮಗ್ರಿ ೬ ೯೦ ೧೦ ೧೦೦
೧೭ E ೫. ಪ್ರಧಾನ ಕೃತಿಗಳು ೬ ೯೦ ೧೦ ೧೦೦
ಒಟ್ಟು ೩೦ ೪೫೦ ೫೦ ೫೦೦
ಪ್ರವೇಶಾರ್ಹತೆ
೧. ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯದ ಮೂರು ವರ್ಷಗಳ ಬಿಎ/ ಬಿಎ ಲಲಿತಕಲೆ ಪರೀಕ್ಷೆಯಲ್ಲಿ ಕನ್ನಡವನ್ನು ಐಚ್ಛಿಕ ವಿಷಯವಾಗಿ ತೆಗೆದುಕೊಂಡು ತೇರ್ಗಡೆಯಾದ ಅಭ್ಯರ್ಥಿಗಳು ಅಥವಾ ತತ್ಸಮಾನವೆಂದು ಪರಿಗಣಿತವಾದ ಪರೀಕ್ಷೆಯಲ್ಲಿ ತೇರ್ಗಡೆಯಾದ ಅಭ್ಯರ್ಥಿಗಳು.
೨. ಕರ್ನಾಟಕ ಸರ್ಕಾರ ನಡೆಸುವ ಕನ್ನಡ ಪಂಡಿತ/ರತ್ನ ಪರೀಕ್ಷೆಯಲ್ಲಿ ತೇರ್ಗಡೆಯಾದ ಅಭ್ಯರ್ಥಿಗಳು.
೩. ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಉತ್ತೀರ್ಣರಾಗಿ, ಮದರಾಸು ವಿಶ್ವವಿದ್ಯಾನಿಲಯದ ಕನ್ನಡ ವಿದ್ವಾನ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿರುವ ಅಥವಾ ಕನ್ನಡ ವಿಷಯದೊಂದಿಗೆ ಯಾವುದೇ ವಿಶ್ವವಿದ್ಯಾನಿಲಯದ ಬಿ ಇಡಿ ಪದವೀಧರ ಅಭ್ಯರ್ಥಿಗಳು.
೪. ಪದವಿ ನಂತರದ ಕನ್ನಡ ಡಿಪ್ಲೊಮ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದು, ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯದ ಪದವೀಧರರು.
೫. ಮೂರು ವರ್ಷಗಳ ಬಿಎ/ ಬಿಎಸ್ಸಿ/ ಬಿಕಾಂ ಪದವಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು ಪ್ರಥಮ/ದ್ವಿತೀಯ ಬಿಎ/ ಬಿಎಸ್ಸಿ/ ಬಿಕಾಂ ತರಗತಿಯಲ್ಲಿ ಕನ್ನಡ ವಿಷಯ ಓದಿಕೊಂಡ ವಿದ್ಯಾರ್ಥಿಗಳು ಪ್ರಥಮ ಎಂಎ ಕನ್ನಡ ತರಗತಿಗೆ ಪ್ರವೇಶಾತಿ ಪಡೆಯಬಹುದು.
ಅಂತಿಮ ವರ್ಷ ಕನ್ನಡ ಎಂ.ಎ.ಗೆ ಪ್ರವೇಶಾತಿ
ಕನ್ನಡ ವಿಶ್ವವಿದ್ಯಾಲಯದ ದೂರಶಿಕ್ಷಣದಲ್ಲಿ ಪ್ರಥಮ ಎಂ.ಎ. ಶಿಕ್ಷಣಕ್ರಮವನ್ನು ಪೂರ್ಣಗೊಳಿಸಿದ ವಿದ್ಯಾರ್ಥಿಗಳು ಅಂತಿಮ ವರ್ಷದ ಎಂ.ಎ. ಶಿಕ್ಷಣಕ್ರಮಕ್ಕೆ ಹೊಸತಾಗಿ ವಿವರಣಾ ಪುಸ್ತಕ ಖರೀದಿಸಿ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ. ಕನ್ನಡ ವಿಶ್ವವಿದ್ಯಾಲಯದ ದೂರಶಿಕ್ಷಣ ಮತ್ತು ಅದರ ಅಧ್ಯಯನ ಕೇಂದ್ರಗಳು ಕಳುಹಿಸುವ ಸುತ್ತೋಲೆ/ ಸೂಚನೆಗಳನ್ನು ಪಡೆದ ಮೇಲೆ ಈಗ್ಗೆ ನಿಗದಿಪಡಿಸಿದ ಶಿಕ್ಷಣಕ್ರಮದ ಶುಲ್ಕವನ್ನು ಪಾವತಿಸುವುದು. ಪ್ರಥಮ ವರ್ಷದ ಪರೀಕ್ಷೆ ತೆಗೆದುಕೊಳ್ಳದಿರಬಹುದು ಅಥವಾ ಪರೀಕ್ಷೆ ತೆಗೆದುಕೊಂಡು ಅನುತ್ತೀರ್ಣರಾಗಿರ ಬಹುದು ಅವರೂ ಅಂತಿಮ ವರ್ಷಕ್ಕೆ ಪ್ರವೇಶ ಪಡೆದು ವ್ಯಾಸಂಗವನ್ನು ಮುಂದುವರಿಸಬಹುದು.
೩.೪.೧ ಎಂ.ಎ. ಕನ್ನಡ ಅಂತಿಮ ವರ್ಷ
೧೭F ೬. ಆಧುನಿಕ ಕನ್ನಡ ಕಾವ್ಯ ೬ ೯೦ ೧೦ ೧೦೦
೧೭G ೭. ಆಧುನಿಕ ಕಥನ ಸಾಹಿತ್ಯ ೬ ೯೦ ೧೦ ೧೦೦
೧೭H ೮. ಆಧುನಿಕ ಕನ್ನಡ ನಾಟಕ ೬ ೯೦ ೧೦ ೧೦೦
೧೭I ೯. ಆಧುನಿಕ ಭಾರತೀಯ ಸಾಹಿತ್ಯ ೬ ೯೦ ೧೦ ೧೦೦
೧೭J ೧೦. ಆಧುನಿಕ ಕನ್ನಡ ಸಾಹಿತ್ಯ: ಆಯ್ದ ಕೃತಿಗಳು ೬ ೯೦ ೧೦ ೧೦೦
ಒಟ್ಟು ೩೦ ೪೫೦ ೫೦ ೫೦೦
೩.೨.೨ ಎಂ.ಎ. ಚರಿತ್ರೆ ಪ್ರಥಮ ವರ್ಷ : ಕೋರ್ಸ್ಗಳು ಮತ್ತು ಪ್ರವೇಶ ನಿಯಮಗಳು
ಪ್ರವೇಶಾರ್ಹತೆ
ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯದ ಮೂರು ವರ್ಷಗಳ ಬಿಎ/ ಬಿಎ ಲಲಿತಕಲೆ ಪದವಿ ಪರೀಕ್ಷೆಯಲ್ಲಿ ಇತಿಹಾಸವನ್ನು ಪ್ರಧಾನ/ಐಚ್ಛಿಕ ವಿಷಯವಾಗಿ ಪದವಿ ಮಟ್ಟದಲ್ಲಿ ತೆಗೆದುಕೊಂಡು ತೇರ್ಗಡೆಯಾದ ಅಭ್ಯರ್ಥಿಗಳು ಅಥವಾ ಇತರ ಯಾವುದೇ ವಿಶ್ವವಿದ್ಯಾಲಯಗಳ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆಯಾದ ಅಭ್ಯರ್ಥಿಗಳು.
ಕೋರ್ಸ್ ಕೋರ್ಸಿನ ಶೀರ್ಷಿಕೆ ಅಂಕಗಳು
ಸಂಕೇತ ಶ್ರೇಯಾಂಕ ಲಿಖಿತ ಆಂತರಿಕ ಒಟ್ಟು
೨೫A ೧. ಚರಿತ್ರೆ ಲೇಖನ ಪರಂಪರೆ ೬ ೯೦ ೧೦ ೧೦೦
೨೫B ೨. ಪಾಶ್ಚಿಮಾತ್ಯ ನಾಗರಿಕತೆ ೬ ೯೦ ೧೦ ೧೦೦
೨೫C ೩. ಭಾರತೀಯ ಚರಿತ್ರೆ- ಆಯ್ದ ವಿಷಯಗಳು ೬ ೯೦ ೧೦ ೧೦೦
೨೫D ೪. ದಕ್ಷಿಣ ಭಾರತದ ಚರಿತ್ರೆ- ಆಯ್ದ ವಿಷಯಗಳು ೬ ೯೦ ೧೦ ೧೦೦
೨೫E ೫. ಕರ್ನಾಟಕ ಚರಿತ್ರೆ-ಆಯ್ದ ವಿಷಯಗಳು ೬ ೯೦ ೧೦ ೧೦೦
ಒಟ್ಟು ೩೦ ೪೫೦ ೫೦ ೫೦೦
ಅಂತಿಮ ಅಂತಿಮ ವರ್ಷ ಎಂ.ಎ. ಚರಿತ್ರೆಗೆ ಪ್ರವೇಶಾತಿ
ಕನ್ನಡ ವಿಶ್ವವಿದ್ಯಾಲಯದ ದೂರಶಿಕ್ಷಣದಲ್ಲಿ ಪ್ರಥಮ ಎಂ.ಎ. ಶಿಕ್ಷಣಕ್ರಮವನ್ನು ಪೂರ್ಣಗೊಳಿಸಿದ ವಿದ್ಯಾರ್ಥಿಗಳು ಅಂತಿಮ ವರ್ಷದ ಎಂ.ಎ. ಶಿಕ್ಷಣಕ್ರಮಕ್ಕೆ ಹೊಸತಾಗಿ ವಿವರಣಾ ಪುಸ್ತಕ ಖರೀದಿಸಿ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ. ಕನ್ನಡ ವಿಶ್ವವಿದ್ಯಾಲಯದ ದೂರಶಿಕ್ಷಣ ಮತ್ತು ಅದರ ಅಧ್ಯಯನ ಕೇಂದ್ರಗಳು ಕಳುಹಿಸುವ ಸುತ್ತೋಲೆ/ ಸೂಚನೆಗಳನ್ನು ಪಡೆದ ಮೇಲೆ ಈಗ್ಗೆ ನಿಗದಿಪಡಿಸಿದ ಶಿಕ್ಷಣಕ್ರಮದ ಶುಲ್ಕವನ್ನು ಪಾವತಿಸುವುದು. ಪ್ರಥಮ ವರ್ಷದ ಪರೀಕ್ಷೆ ತೆಗೆದುಕೊಳ್ಳದಿರಬಹುದು ಅಥವಾ ಪರೀಕ್ಷೆ ತೆಗೆದುಕೊಂಡು ಅನುತ್ತೀರ್ಣರಾಗಿರಬಹುದು ಅವರೂ ಅಂತಿಮ ವರ್ಷಕ್ಕೆ ಪ್ರವೇಶ ಪಡೆದು ವ್ಯಾಸಂಗವನ್ನು ಮುಂದುವರಿಸಬಹುದು.
ಎಂ.ಎ. ಚರಿತ್ರೆ ಅಂತಿಮ ವರ್ಷ
೨೫F ೬. ಚರಿತ್ರೆ ಸಂಶೋಧನಾ ವಿಧಾನಗಳು ೬ ೯೦ ೧೦ ೧೦೦
೨೫G ೭. ಪಾಶ್ಚಿಮಾತ್ಯ ನಾಗರಿಕತೆ – ಆಯ್ದ ವಿಷಯಗಳು ೬ ೯೦ ೧೦ ೧೦೦
೨೫H ೮. ಏಷ್ಯಾ: ವಸಾಹತುಶಾಹಿ ಮತ್ತು ರಾಷ್ಟ್ರೀಯತೆ ೬ ೯೦ ೧೦ ೧೦೦
೨೫I ೯. ಆಧುನಿಕ ಭಾರತ – ಆಯ್ದ ವಿಷಯಗಳು ೬ ೯೦ ೧೦ ೧೦೦
೨೫J ೧೦. ವಿಜಯನಗರ ೬ ೯೦ ೧೦ ೧೦೦
ಒಟ್ಟು ೩೦ ೪೫೦ ೫೦ ೫೦೦
ಎಂ.ಎ. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಪ್ರಥಮ ವರ್ಷ : ಕೋರ್ಸ್ಗಳು ಮತ್ತು ಪ್ರವೇಶ ನಿಯಮಗಳು
ಕೋರ್ಸ್ ಕೋರ್ಸಿನ ಶೀರ್ಷಿಕೆ ಅಂಕಗಳು
ಸಂಕೇತ ಶ್ರೇಯಾಂಕ ಲಿಖಿತ ಆಂತರಿಕ ಒಟ್ಟು
೨೬ A ೧. ಸಮೂಹ ಮಾಧ್ಯಮಗಳ ಪರಿಚಯ ೬ ೯೦ ೧೦ ೧೦೦
೨೬ B ೨. ವರದಿಗಾರಿಕೆ ೬ ೯೦ ೧೦ ೧೦೦
೨೬ C ೩. ಸುದ್ದಿ ಸಂಪಾದನೆ ೬ ೯೦ ೧೦ ೧೦೦
೨೬ D ೪. ಅಭಿವೃದ್ಧಿ ಪತ್ರಿಕೋದ್ಯಮ ೬ ೯೦ ೧೦ ೧೦೦
೨೬ E ೫. ಪ್ರಾಯೋಗಿಕ ೧
ಅ. ಪತ್ರಿಕೆ ಪ್ರಕಟಣೆ ೨ – ೨೫ ೨೫
ಆ. ನಿಯತಕಾಲಿಕೆ ಪ್ರಕಟಣೆ ೨ – ೨೫ ೨೫
ಇ. ಸಂಪಾದನೆ ೧ – ೨೫ ೨೫
ಈ. ಮೌಖಿಕ ಪರೀಕ್ಷೆ ೧ – ೨೫ ೨೫
ಒಟ್ಟು ೩೦ ೩೬೦ ೧೪೦ ೫೦೦
ಪ್ರವೇಶಾರ್ಹತೆ
೧. ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯದ ಮೂರು ವರ್ಷಗಳ ಪದವಿ ಪರೀಕ್ಷೆಯಲ್ಲಿ ಪತ್ರಿಕೋದ್ಯಮ ವಿಷಯವನ್ನು ಪದವಿ ಮಟ್ಟದಲ್ಲಿ ತೆಗೆದುಕೊಂಡು ತೇರ್ಗಡೆಯಾದ ಅಭ್ಯರ್ಥಿಗಳು ಪದವಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಪ್ರಥಮ ವರ್ಷದ ಎಂ.ಎ. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಕಾರ್ಯಕ್ರಮಕ್ಕೆ ಪ್ರವೇಶ ಕೋರಿ ಅರ್ಜಿ ಸಲ್ಲಿಸಬಹುದು.
೨. ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ಅಥವಾ ಕನ್ನಡ ವಿಶ್ವವಿದ್ಯಾಲಯದ ದೂರಶಿಕ್ಷಣದ ಪತ್ರಿಕೋದ್ಯಮ ಅಧ್ಯಯನದಲ್ಲಿ ಸ್ನಾತಕೋತ್ತರ ಡಿಪ್ಲೊಮ ಪಡೆದಿರುವ ಅಭ್ಯರ್ಥಿಗಳು.
ಪ್ರಾಯೋಗಿಕ
೨೬ E ಕೋರ್ಸು(ಪತ್ರಿಕೆ) ಪ್ರಾಯೋಗಿಕವಾಗಿದ್ದು ಇದರಲ್ಲಿ ಪತ್ರಿಕೆ ಪ್ರಕಟಣೆಗಾಗಿ ೨೫ ಅಂಕಗಳನ್ನು, ನಿಯತಕಾಲಿಕೆ ಪ್ರಕಟಣೆಗಾಗಿ ೨೫ ಅಂಕಗಳನ್ನು, ಸಂಪಾದನೆಗಾಗಿ ೨೫ ಅಂಕಗಳನ್ನು ಮತ್ತು ಮೌಖಿಕ ಪರೀಕ್ಷೆಗಾಗಿ ೨೫ ಅಂಕಗಳನ್ನು ಕಾಯ್ದಿರಿಸಲಾಗಿದೆ. ೨೬J ಕೋರ್ಸ್(ಪತ್ರಿಕೆ) ಪ್ರಾಯೋಗಿಕವಾಗಿದ್ದು, ಇದರಲ್ಲಿ ದೂರದರ್ಶನ ಕಾರ್ಯಕ್ಕಾಗಿ ೨೫ ಅಂಕಗಳು, ಆಕಾಶವಾಣಿ ಕಾರ್ಯಕ್ಕಾಗಿ ೨೫ ಅಂಕಗಳು ಮತ್ತು ಸಂಪ್ರಬಂಧಕ್ಕಾಗಿ ೫೦ ಅಂಕಗಳನ್ನು ಕಾಯ್ದಿರಿಸಲಾಗಿದೆ. ಸಂಪರ್ಕ ಕಾರ್ಯಕ್ರಮದ ಸಂದರ್ಭದಲ್ಲಿ ತಜ್ಞ ಮಾರ್ಗದರ್ಶಕರ ನಿರ್ದೇಶನದಲ್ಲಿ ಈ ಎಲ್ಲ ಪ್ರಯೋಗಗಳು ಜರುಗುವವು.
ಎಂ.ಎ. ಸಮಾಜಶಾಸ್ತ್ರ ಪ್ರಥಮ ವರ್ಷ : ಕೋರ್ಸ್ಗಳು ಮತ್ತು ಪ್ರವೇಶ ನಿಯಮಗಳು
ಪ್ರವೇಶಾರ್ಹತೆ
ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯದ ಮೂರು ವರ್ಷಗಳ ಬಿ.ಎ. / ಬಿ.ಎಸ್.ಡಬ್ಲ್ಯು. / ಬಿ.ಎ. ಲಲಿತಕಲೆ ಪದವಿ ಪರೀಕ್ಷೆಯಲ್ಲಿ ಸಮಾಜಶಾಸ್ತ್ರವನ್ನು ಪದವಿ ಮಟ್ಟದಲ್ಲಿ ತೆಗೆದುಕೊಂಡು ತೇರ್ಗಡೆಯಾದ ಅಭ್ಯರ್ಥಿಗಳು ಅಥವಾ ಇತರ ಯಾವುದೇ ವಿಶ್ವವಿದ್ಯಾಲಯಗಳ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆಯಾದ ಅಭ್ಯರ್ಥಿಗಳು.
ಕೋರ್ಸ್ ಕೋರ್ಸಿನ ಶೀರ್ಷಿಕೆ ಅಂಕಗಳು
ಸಂಕೇತ ಶ್ರೇಯಾಂಕ ಲಿಖಿತ ಆಂತರಿಕ ಒಟ್ಟು
೨೮A ೧. ಆರಂಭಿಕ ಸಮಾಜಶಾಸ್ತ್ರದ ಚಿಂತನೆಗಳು ೬ ೯೦ ೧೦ ೧೦೦
೨೮B ೨. ಸಾಮಾಜಿಕ ಸಂಶೋಧನಾ ವಿಧಾನ ೬ ೯೦ ೧೦ ೧೦೦
೨೮C ೩. ಭಾರತೀಯ ಸಮಾಜ ೬ ೯೦ ೧೦ ೧೦೦
೨೮D ೪. ಅಲಕ್ಷಿತರ ಸಮಾಜಶಾಸ್ತ್ರ ೬ ೯೦ ೧೦ ೧೦೦
೨೮E ೫. ಲಿಂಗ ವ್ಯವಸ್ಥೆ ಮತ್ತು ಸಮಾಜ ೬ ೯೦ ೧೦ ೧೦೦
ಒಟ್ಟು ೩೦ ೪೫೦ ೫೦ ೫೦೦
ಎಂ.ಎ. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಅಂತಿಮ ವರ್ಷ
೨೬F ೬. ಸಂವಹನ ಪರಿಚಯ ೬ ೯೦ ೧೦ ೧೦೦
೨೬G ೭. ಜಾಹಿರಾತು ಮತ್ತು ಸಾರ್ವಜನಿಕ ಸಂಪರ್ಕ ೬ ೯೦ ೧೦ ೧೦೦
೨೬H ೮. ಸಂವಹನ ಸಂಶೋಧನಾ ವಿಧಾನಗಳು ೬ ೯೦ ೧೦ ೧೦೦
೨೬I ೯. ಮಾಧ್ಯಮ ನಿರ್ವಹಣೆ ೬ ೯೦ ೧೦ ೧೦೦
೨೬J ೧೦. ಪ್ರಾಯೋಗಿಕ ೨
ಅ. ಪತ್ರಿಕೆ ಪ್ರಕಟಣೆ ೨ – ೨೫ ೨೫
ಆ. ನಿಯತಕಾಲಿಕೆ ಪ್ರಕಟಣೆ ೨ – ೨೫ ೨೫
ಇ. ಸಂಪಾದನೆ ೨ – ೫೦ ೫೦
ಒಟ್ಟು ೩೦ ೩೬೦ ೧೪೦ ೫೦೦